»   » ಸಂತೋಷದಲ್ಲಿದ್ದ ನಾಗ್ ಕುಟುಂಬಕ್ಕೆ ದುಃಖ; ಹೊತ್ತಿ ಉರಿದ ಸ್ಟುಡಿಯೋ.!

ಸಂತೋಷದಲ್ಲಿದ್ದ ನಾಗ್ ಕುಟುಂಬಕ್ಕೆ ದುಃಖ; ಹೊತ್ತಿ ಉರಿದ ಸ್ಟುಡಿಯೋ.!

Posted By:
Subscribe to Filmibeat Kannada

ನಟ ನಾಗಚೈತನ್ಯ ಮತ್ತು ಸಮಂತಾ ಮದುವೆಯ ನಂತರ ಹೈದರಾಬಾದ್ ನಲ್ಲಿ ಸಿನಿಮಾ ಕಲಾವಿದರಿಗಾಗಿ ಆರತಕ್ಷತೆ ಅಯೋಜಿಸಲಾಗಿತ್ತು. ಈ ಸಂತೋಷದಲ್ಲಿದ್ದ ಅಕ್ಕಿನೇನಿ ಕುಟುಂಬಕ್ಕೆ ಮರುದಿನವೇ ದೊಡ್ಡ ಶಾಕ್ ಎದುರಾಗಿದೆ.

ನಾಗಾರ್ಜುನ ಮಾಲಿಕತ್ವದ ಅನ್ನಪೂರ್ಣ ಸ್ಟುಡಿಯೋದಲ್ಲಿ ಬೆಂಕಿ ಅಪಘಾತ ಸಂಭವಿಸಿದ್ದು, ಇಡೀ ಸ್ಟುಡಿಯೋ ಸುಟ್ಟು ಭಸ್ಮವಾಗಿದೆ. ಇದರಿಂದ ಅಕ್ಕಿನೇನಿ ಕುಟುಂಬಕ್ಕೆ ದೊಡ್ಡ ನಷ್ಟವಾಗಿದೆ.

ಯಾವಾಗ ಈ ಅನಾಹುತ ನಡೆಯಿತು? ಎಷ್ಟು ಕೋಟಿ ನಷ್ಟವಾಯಿತು ಎಂಬ ಮಾಹಿತಿ ತಿಳಿಯಲು ಮುಂದೆ ಓದಿ.....

ಸಂಜೆ 6 ಗಂಟಗೆ ಘಟನೆ

ಸೋಮವಾರ ಸಂಜೆ 6.15 ಗಂಟೆಗೆ ಈ ಅವಘಡ ಸಂಭವಿಸಿದೆ. ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂಧಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಪ್ರಯತ್ನ ಪಟ್ಟರು. ಆದ್ರೆ, ದಟ್ಟವಾಗಿ ಹಬ್ಬಿದ ಬೆಂಕಿಯಿಂದ ಇಡೀ ಸ್ಟುಡಿಯೋ ಸುಟ್ಟು ಕರಕಲಾಗಿದೆ.

ಮದುವೆ ಬಳಿಕ ಹೆಸರು ಬದಲಿಸಿಕೊಂಡ 'ಅಕ್ಕಿನೇನಿ' ಸೊಸೆ ಸಮಂತಾ.!

ಅನಾಹುತಕ್ಕೆ ಕಾರಣವೇನು?

ಮೂಲಗಳ ಪ್ರಕಾರ ಶಾರ್ಟ್ ಸರ್ಕ್ಯೂಟ್ ನಿಂದ ಈ ಅನಾಹುತ ಸಂಭವಿಸಿದೆ ಎನ್ನಲಾಗಿದೆ. ಆದ್ರೆ, ನಿಖರವಾದ ಮಾಹಿತಿ ಹೊರಬಿದ್ದಿಲ್ಲ. ಇನ್ನು ಈ ಅವಘಡದಿಂದ ಎಷ್ಟು ನಷ್ಟವಾಗಿದೆ ಎಂಬುದರ ಬಗ್ಗೆ ಕೂಡ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.

ಬೇಸರ ವ್ಯಕ್ತಪಡಿಸಿದ ನಾಗಾರ್ಜುನ ಕುಟುಂಬ

ಇತ್ತೀಚೆಗಷ್ಟೇ ನಾಗಚೈತನ್ಯ ಮತ್ತು ಸಮಂತಾ ಮದುವೆ ಮಾಡಿ ಮುಗಿಸಿದ್ದ ನಾಗಾರ್ಜುನ ಕುಟುಂಬಕ್ಕೆ ಈ ಅವಘಡ ಬೇಸರ ತರಿಸಿದೆ. ಆರತಕ್ಷತೆ ಸಂಭ್ರಮದಲ್ಲಿದ್ದ ನಾಗ್ ಫ್ಯಾಮಿಲಿಗೆ ಶಾಕ್ ನೀಡಿದೆ.

ಚಿತ್ರಗಳು: ನೂತನ ಬಾಳಿಗೆ ಕಾಲಿಟ್ಟ ಸಮಂತಾ ಮತ್ತು ನಾಗಚೈತನ್ಯ

1975ರಲ್ಲಿ ಸ್ಥಾಪಿಸಿದ್ದ ಸ್ಟುಡಿಯೋ

ಅನ್ನಪೂರ್ಣ ಸ್ಟುಡಿಯೋ ದಕ್ಷಿಣ ಭಾರತದ ಹಳೆಯ ಸ್ಟುಡಿಯೋಗಳಲ್ಲಿ ಒಂದು. ಅಕ್ಕಿನೇನಿ ನಾಗೇಶ್ವರ್ ರಾವ್ ಅವರು 1975ರಲ್ಲಿ ಸ್ಥಾಪಸಿದ್ದರು. ಚಿತ್ರರಂಗಕ್ಕೆ ಸಂಬಂಧಿಸಿದಂತೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಇಲ್ಲಿ ನಡೆಯುತ್ತಿತ್ತು.

English summary
A fire broke out on a film set at Tollywood's famous Annapurna Studios in Banjara Hills here on Monday evening. ತೆಲುಗು ನಟ ನಾಗಾರ್ಜುನ ಮಾಲಿಕತ್ವದ ಅನ್ನಪೂರ್ಣ ಸ್ಟುಡಿಯೋದಲ್ಲಿ ಬೆಂಕಿ ಅಪಘಾತ ಸಂಭವಿಸಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada