twitter
    For Quick Alerts
    ALLOW NOTIFICATIONS  
    For Daily Alerts

    ಲಾಕ್‌ಡೌನ್ ಬಳಿಕ ಮೊದಲ ಚಿತ್ರ ಬಿಡುಗಡೆ: ಇಂಡಸ್ಟ್ರಿಯಲ್ಲಿ ಸಿಕ್ತು ಅದ್ಧೂರಿ ಸ್ವಾಗತ

    |

    ಏಂಟು ತಿಂಗಳಿಂದ ಹೊಸ ಸಿನಿಮಾಗಳಿಲ್ಲದೇ ಚಿತ್ರಮಂದಿರಗಳು ಬಿಕೋ ಎನ್ನುತ್ತಿದ್ದವು. ಕನ್ನಡ ಸಿನಿ ಪ್ರೇಕ್ಷಕರು ಮನರಂಜನೆ ಇಲ್ಲದೇ ನಿರಾಸೆಯಾಗಿದ್ದರು. ಚಿತ್ರಮಂದಿರ ಸಿಬ್ಬಂದಿಗಳು ಕೆಲಸ ಇಲ್ಲದೇ ಸಂಕಷ್ಟದಲ್ಲಿದ್ದರು. ಈ ಎಲ್ಲದಕ್ಕೂ ಅಂತ್ಯ ಕಂಡಿದೆ.

    ಏಂಟು ತಿಂಗಳ ಬಳಿಕ ಮೊದಲ ಕನ್ನಡ ಸಿನಿಮಾ ಚಿತ್ರಮಂದಿರಕ್ಕೆ ಬಂದಿದೆ. ಮಂಸೋರೆ ನಿರ್ದೇಶನದ 'ಆಕ್ಟ್ 1978' ಸಿನಿಮಾ ಇಂದಿನಿಂದ ರಾಜ್ಯಾದ್ಯಂತ ತೆರೆಕಾಣುತ್ತಿದೆ. ನೂರಕ್ಕೂ ಹೆಚ್ಚು ಥಿಯೇಟರ್‌ನಲ್ಲಿ ಈ ಚಿತ್ರ ಪ್ರದರ್ಶನವಾಗುತ್ತಿದೆ.

    Act-1978 Review: ಹಲವು ಭಾವಗಳ ಹೋರಾಟದ ಕಥನAct-1978 Review: ಹಲವು ಭಾವಗಳ ಹೋರಾಟದ ಕಥನ

    ಸುದೀರ್ಘ ವನವಾಸದ ನಂತರ ಮೊದಲ ಸಿನಿಮಾ ತೆರೆಕಂಡ ಹಿನ್ನೆಲೆ ಇಡೀ ಚಿತ್ರರಂಗ ಸಂಭ್ರಮಿಸಿದೆ. ಹಲವು ನಿರ್ದೇಶಕರು, ನಟರು ಚಿತ್ರತಂಡಕ್ಕೆ ಶುಭಾಶಯ ಕೋರಿದ್ದು, ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಬನ್ನಿ ಎಂದು ಮನವಿ ಮಾಡಿದ್ದಾರೆ.

    First Kannada Movie Released After 8 Month

    ಒಂದು ದಿನಕ್ಕೂ ಮುಂಚೆ ಬೆಂಗಳೂರಿನ ವಿರೇಶ್ ಚಿತ್ರಮಂದಿರದಲ್ಲಿ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು. ಖ್ಯಾತ ನಟ-ನಟಿಯರು ಹಾಗೂ ನಿರ್ದೇಶಕರು, ತಂತ್ರಜ್ಞರು ಮೊದಲ ಶೋ ನೋಡಿ ಸ್ವಾಗತ ಕೋರಿದರು.

    ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಸಿನಿಮಾಗಳು ತೆರೆಕಾಣಬೇಕು. ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಬೇಕು ಎಂದು ಮನವಿ ಮಾಡಿದರು.

    Recommended Video

    ಇವರ ಧೈರ್ಯವನ್ನು ನಾವು ಮೆಚ್ಚಲೇ ಬೇಕು | Neethu Shetty | Filmibeat Kannada

    ಮೊಕ್ಕಾಲು ವರ್ಷದ ನಂತರ ಪ್ರದರ್ಶನ ಆರಂಭಿಸಿರುವ ಚಿತ್ರಮಂದಿರದಲ್ಲೂ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಚಿತ್ರಮಂದಿರದಲ್ಲಿ ಒಂದು ಸೀಟಿನ ಅಂತರ, ಮಾಸ್ಕ್ ಧರಿಸುವಿಕೆ, ಸ್ಯಾನಿಸೈಸರ್ ಬಳಕೆ, ಥರ್ಮಲ್ ಸ್ಕ್ರೀನಿಂಗ್ ಮತ್ತು ದೈಹಿಕ ಅಂತರ ಕಾಪಾಡಿಕೊಳ್ಳುವಿಕೆಯ ಕಡ್ಡಾಯ ನಿಯಮಗಳ ಪಾಲನೆ ಮಾಡಲಾಗುತ್ತಿದೆ.

    English summary
    National Award Winner Mansoori Directional ACT 1978 released today. its is the first kannada movie released after 8 month.
    Friday, November 20, 2020, 11:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X