ಮೊಟ್ಟ ಮೊದಲ ಸಲ ಆಂಧ್ರದ ಈ ಚಿತ್ರಮಂದಿರದಲ್ಲಿ ಕನ್ನಡ ಸಿನಿಮಾ ತೆರೆಕಾಣ್ತಿದೆ.!

Recommended Video

Yajamana Movie: ದರ್ಶನ್ ಆಯ್ಕೆ ಕೆಜಿಎಫ್ ಯಾಕೆ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾ ಮಾರ್ಚ್ 1 ರಂದು ವರ್ಲ್ಡ್ ವೈಡ್ ತೆರೆಕಾಣುತ್ತಿದೆ. ಸುಮಾರು 850ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಕನ್ನಡ ಸಿನಿಮಾ ಬಿಡುಗಡೆಯಾಗುತ್ತಿರುವುದು ವಿಶೇಷ.

ಈಗಾಗಲೇ ಯಜಮಾನ ಚಿತ್ರದ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದ್ದು, ಮೊದಲ ದಿನ ಶೋಗಳು ಬಹುತೇಕ ಸೋಲ್ಡ್ ಆಗಿದೆ. ಕರ್ನಾಟಕದಲ್ಲಿ ಭಾರಿ ಕ್ರೇಜ್ ಹೊಂದಿರುವ ಯಜಮಾನ ಚಿತ್ರಕ್ಕೆ ಈಗ ಹೊರರಾಜ್ಯಗಳಲ್ಲೂ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ.

ಹೌದು, ಇದೇ ಮೊದಲ ಭಾರಿಗೆ ಆಂಧ್ರಪ್ರದೇಶದ ಚಿತ್ರಮಂದಿರದಲ್ಲಿ ಕನ್ನಡ ಸಿನಿಮಾವೊಂದನ್ನ ಪ್ರದರ್ಶನ ಮಾಡಲು ಸಿದ್ಧವಾಗಿದ್ದು, ಅದು ಯಜಮಾನ ಸಿನಿಮಾ ಆಗ್ತಿರುವುದು ಹೆಮ್ಮೆಯ ವಿಷ್ಯ. ಅಷ್ಟಕ್ಕೂ ಯಾವ ಚಿತ್ರಮಂದಿರ? ಮುಂದೆ ಓದಿ.....

ಆಂಧ್ರದ ಅನಂತಪುರದಲ್ಲಿ ಯಜಮಾನ

ಆಂಧ್ರದ ಅನಂತಪುರದಲ್ಲಿ ಯಜಮಾನ

ಆಂಧ್ರ ಪ್ರದೇಶದ ಅನಂತಪುರದಲ್ಲಿರುವ ಎಸ್ ವಿ ಸಿನಿಮ್ಯಾಕ್ಸ್ (ಶ್ರೀ ವೆಂಕಟೇಶ್ವರ ಥಿಯೇಟರ್) ನಲ್ಲಿ ಇದೇ ಮೊದಲ ಸಲ ಕನ್ನಡ ಸಿನಿಮಾ ರಿಲೀಸ್ ಆಗ್ತಿದೆ. ಈ ವಿಷ್ಯವನ್ನ ಖುದ್ದು ಚಿತ್ರಮಂದಿರದವರೇ ತಮ್ಮ ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಪ್ರಕಟಿಸಿಕೊಂಡಿದ್ದಾರೆ.

ಫೆಬ್ರವರಿ 27ಕ್ಕೆ ಬುಕ್ಕಿಂಗ್.!

ಫೆಬ್ರವರಿ 27ಕ್ಕೆ ಬುಕ್ಕಿಂಗ್.!

ಕರ್ನಾಟಕದಲ್ಲಿ ಈಗಾಗಲೇ ಆನ್ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. ಆದ್ರೆ, ಅನಂತಪುರ ಎಸ್ ವಿ ಸಿನಿಮ್ಯಾಕ್ಸ್ ಚಿತ್ರಮಂದಿರದಲ್ಲಿ ಫೆಬ್ರವರಿ 27 ರಂದು ಯಜಮಾನ ಟಿಕೆಟ್ ಸಿಗಲಿದೆ. ಅನಂತಪುರದಲ್ಲಿ ಕನ್ನಡ ಸಿನಿಮಾ ಬಿಡುಗಡೆಯಾಗುತ್ತಿರುವುದಕ್ಕೆ ಸಹಜವಾಗಿ ಕನ್ನಡ ಸಿನಿಮಾ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ಕನ್ನಡ ಸಿನಿಮಾ ಎಂಬುದೇ ವಿಶೇಷ

ಕನ್ನಡ ಸಿನಿಮಾ ಎಂಬುದೇ ವಿಶೇಷ

ಆಂಧ್ರಪ್ರದೇಶದಲ್ಲಿ ಕನ್ನಡ ಸಿನಿಮಾ ರಿಲೀಸ್ ಆಗ್ತಿದೆ. ಇದು ಡಬ್ಬಿಂಗ್ ಚಿತ್ರವಲ್ಲ. ನೇರವಾಗಿ ಕನ್ನಡದಲ್ಲಿ ತಯಾರಾಗಿರುವ ಸಿನಿಮಾ ಎಂಬುದು ಗಮನಿಸಬೇಕಾದ ವಿಚಾರ. ಹೀಗಾಗಿ, ಕನ್ನಡ ಚಿತ್ರಗಳಿಗೆ ಹೊರರಾಜ್ಯಗಳಲ್ಲಿ ಪ್ರೇಕ್ಷಕರಿದ್ದಾರೆ ಎಂಬುದಕ್ಕೆ ಇದು ಕೂಡ ಉದಾಹರಣೆಯಾಗಿದೆ.

ಉತ್ತರ ಭಾರದಲ್ಲೂ ಕನ್ನಡದ ಯಜಮಾನ

ಉತ್ತರ ಭಾರದಲ್ಲೂ ಕನ್ನಡದ ಯಜಮಾನ

ಅಂದ್ಹಾಗೆ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಮಾತ್ರವಲ್ಲ ಉತ್ತರ ಭಾರತದ ಹಲವು ಕಡೆ ಹಾಗೂ ವಿದೇಶದಲ್ಲೂ ಕೂಡ ಕನ್ನಡ ಭಾಷೆಯಲ್ಲೇ ಯಜಮಾನ ರಿಲೀಸ್ ಮಾಡುತ್ತೇವೆ ನಿರ್ಮಾಪಕಿ ಶೈಲಜಾ ನಾಗ್ ಹೇಳಿದ್ದರು. ಅದರಂತೆ ಕನ್ನಡ ಸಿನಿಮಾವೊಂದು ದೇಶಾದ್ಯಂತೆ ಸದ್ದು ಮಾಡ್ತಿದೆ.

More from Filmibeat

English summary
First time in Anantapur's SV Cinemax theater are planning to screen a Kannada movie Yajamaana starring Darshan and Rashmika, which will be releasing this March 1st.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X