Just In
Don't Miss!
- News
ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ವ್ಯಕ್ತಿಚಿತ್ರ
- Automobiles
ಮಕ್ಕಳಿಗಾಗಿ 60-70 ಕಿ.ಮೀ ಮೈಲೇಜ್ ನೀಡುವ ಮಿನಿ ಎಲೆಕ್ಟ್ರಿಕ್ ಜೀಪ್ ತಯಾರಿಸಿದ ತಂದೆ
- Sports
ಐಪಿಎಲ್ : ಈ ದಾಖಲೆ ಮಾಡಿದ್ದು ಕೊಹ್ಲಿ ಬಿಟ್ರೆ ಸಂಜು ಸ್ಯಾಮ್ಸನ್
- Lifestyle
ಅಧ್ಯಯನ: ಸ್ಥೂಲಕಾಯದವರ ಸ್ಮರಣಾ ಶಕ್ತಿ ಕಾಪಾಡುತ್ತೆ ಬೆಣ್ಣೆಹಣ್ಣು
- Finance
ಏಪ್ರಿಲ್ 13ರ ಬಿಟ್ಕಾಯಿನ್ ರೇಟ್ ಎಷ್ಟಿದೆ?
- Education
WCL Recruitment 2021: 44 ಮೆಡಿಕಲ್ ಸ್ಪೆಷಲಿಸ್ಟ್ ಮತ್ತು ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಅಂಬಿ ನಿಂಗ್ ವಯಸ್ಸಾಯ್ತೋ' ಫಸ್ಟ್ ಲುಕ್ ಔಟ್: ವಯಸ್ಸಾದ ಅಂಬಿ ಹೇಗ್ ಕಾಣ್ತಾರೆ?

ಇನ್ನೇನು ವಿಧಾನ ಸಭೆ ಎಲೆಕ್ಷನ್ ಬರುತ್ತಿದೆ. ರಾಜಕೀಯ ಜೀವನದಲ್ಲಿ ಬಿಜಿ ಆಗಿದ್ದರೂ, ಕಾಂಗ್ರೆಸ್ ಶಾಸಕ, ರೆಬೆಲ್ ಸ್ಟಾರ್ ಅಂಬರೀಶ್ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ.
ರೆಬೆಲ್ ಸ್ಟಾರ್ ಅಂಬರೀಶ್ ಪೂರ್ಣ ಪ್ರಮಾಣದ ನಾಯಕರಾಗಿ ಅಭಿನಯಿಸುತ್ತಿರುವ ಸಿನಿಮಾ 'ಅಂಬಿ ನಿಂಗ್ ವಯಸ್ಸಾಯ್ತೋ'. ಈ ಚಿತ್ರದಲ್ಲಿ ಅಂಬರೀಶ್ ಮಾತ್ರ ಅಲ್ಲ, ಕಿಚ್ಚ ಸುದೀಪ್ ಕೂಡ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಕಿಚ್ಚ ಕ್ರಿಯೇಷನ್ಸ್ ಅರ್ಪಿಸುವ ಕೆ.ಎಸ್.ಕೆ ಶೋ ರೀಲ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ಆಗುತ್ತಿರುವ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದಲ್ಲಿನ ಅಂಬರೀಶ್ ಅವರ ಫಸ್ಟ್ ಲುಕ್ ಬಿಡುಗಡೆ ಆಗಿದೆ.
'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದಲ್ಲಿ ವಯಸ್ಸಾದ ಅಂಬರೀಶ್ ಹೇಗೆ ಕಾಣ್ಬಹುದು ಎಂಬ ಕುತೂಹಲ ಇದ್ರೆ ಈ ಫೋಟೋಗಳನ್ನ ಒಮ್ಮೆ ನೋಡ್ಬಿಡಿ.
'ಅಂಬಿ ನಿಂಗ್ ವಯಸ್ಸಾಯ್ತೋ' ಈ ಟೈಟಲ್ ಕೊಟ್ಟಿದ್ದು ಯಾರು?
ಗ್ಯಾರೇಜ್ ನಲ್ಲಿ ಬುಲೆಟ್ ಗಾಡಿ ಪಕ್ಕದಲ್ಲಿ ಕುಳಿತಿರುವ ಅಂಬರೀಶ್ ಅವರ ಫೋಟೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಿಳಿ ಗಡ್ಡ ಬಿಟ್ಟಿರುವ ಅಂಬರೀಶ್ ಅವರನ್ನ ನೋಡಿ ರೆಬೆಲ್ ಸ್ಟಾರ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ವಯಸ್ಸಾದರೂ ಅಂಬರೀಶ್ ಚಾರ್ಮ್ ಮಾತ್ರ ಇನ್ನು ಕಮ್ಮಿ ಆಗಿಲ್ಲ ಅನ್ನೋದಕ್ಕೆ ಈ ಫೋಟೋಗಳೇ ಸಾಕ್ಷಿ. ಅಂದ್ಹಾಗೆ, 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾ ತಮಿಳಿನ 'ಪವರ್ ಪಾಂಡಿ' ಚಿತ್ರದ ರೀಮೇಕ್. ತಮಿಳಿನಲ್ಲಿ ರಾಜ್ ಕಿರಣ್ ಮಾಡಿದ್ದ ಪಾತ್ರಕ್ಕೆ ಕನ್ನಡದಲ್ಲಿ ಅಂಬರೀಶ್ ಬಣ್ಣ ಹಚ್ಚಿದ್ದಾರೆ.
ವಯಸ್ಸಾಗಿರೋ ಅಂಬಿ ಪ್ರೇಕ್ಷಕರಿಗೆ ಬರೆದ ಪತ್ರದಲ್ಲೇನಿದೆ ?
ಅನೇಕ ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ದುಡಿದಿರುವ ಗುರುದತ್ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿರುವುದು 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದಲ್ಲಿಯೇ. ಕಿಚ್ಚ ಸುದೀಪ್ ಅವರ ಸಹೋದರ ಸಂಬಂಧಿ ಆಗಿರುವ ಸಂಚಿತ್ ಸಂಜೀವ್ ಸಹ ನಿರ್ದೇಶಕರಾಗಿ ಈ ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆ.
ಅಂಬರೀಶ್ ಜೊತೆಗೆ ತಾರಾಬಳಗದಲ್ಲಿ ಸುದೀಪ್, ಸುಹಾಸಿನಿ, ಶ್ರುತಿ ಹರಿಹರನ್ ಸೇರಿದಂತೆ ಮುಂತಾದವರಿದ್ದಾರೆ. ಕಳೆದ ವರ್ಷ ಸೆಟ್ಟೇರಿದ್ದ ಈ ಸಿನಿಮಾ ಇನ್ನೂ ಚಿತ್ರೀಕರಣದ ಹಂತದಲ್ಲಿದೆ.