twitter
    For Quick Alerts
    ALLOW NOTIFICATIONS  
    For Daily Alerts

    ಜಾತ್ರೆಯಲ್ಲಿ ದರ್ಶನ್ ಸಿನಿಮಾ : ಮಾಸ್ಟರ್ ಮೇಲೆ ಸ್ಕೂಲ್ ಹುಡುಗನ ಕೋಪ

    By ಶ್ರೀಶೈಲ್ ಮುಳವಾಡ
    |

    'ನಾ ನೋಡಿದ ಮೊದಲ ಸಿನ್ಮಾ' ಲೇಖನ ಸರಣಿಯ ಮೊದಲ ಲೇಖನ ಇದು. ಶ್ರೀಶೈಲ್ ಮುಳವಾಡ ಇದನ್ನು ಬರೆದಿದ್ದಾರೆ. ಆರನೇ ತರಗತಿಯಲ್ಲಿ ಇದ್ದಾಗ 'ಅಯ್ಯ' ಸಿನಿಮಾ ನೋಡಿದ್ದ ಅವರ ಅನುಭವ ಬಲು ಸೊಗಸಾಗಿದೆ. ಇಲ್ಲಿಂದ ಅವರ ಮಾತುಗಳು ಪ್ರಾರಂಭ.

    'ಅಯ್ಯ'ನಿಗೆ ರವಿಚಂದ್ರನ್‌ ರಾಗ

    ನಮಸ್ತೇ..ನಾನು ಸಿನಿಮಾ ಟಾಕೀಸ್‌ನಲ್ಲಿ ನೋಡಿದ ಮೊದಲ ಸಿನಿಮಾ ಚಾಲೆಜಿಂಗ್ ಸ್ಟಾರ್ ದರ್ಶನ್ರ ಅಯ್ಯ'. ಆಗ ನಮೆಗೆಲ್ಲಾ ದರ್ಶನ್ ಮತ್ತು ರಕ್ಷಿತಾ ಅಂದ್ರೆ ತುಂಬಾ ಕ್ರೇಜ್. ನಾನಾಗ ಆರನೇ ತರಗತಿಯಲ್ಲಿ ಓದುತ್ತಿದ್ದೆ. ನಮ್ಮ ಊರು ಬಸವನ ಬಾಗೇವಾಡಿ ತಾಲೂಕಿನ ಹತ್ತಿರವಿರುವ ಒಂದು ಚಿಕ್ಕ ಹಳ್ಳಿ ನಾಗೂರು ಅಂತ. ನಮ್ಮ ಊರಿನ ಬಹುತೇಕ ಜನ ಕಾಲ ಕಳೆಯುವುದು ಮತ್ತು ಜೀವನೋಪಾಯ ಕಂಡುಕೊಳ್ಳುವುದು ಪಕ್ಕದ ಬಾಗೇವಾಡಿಯಲ್ಲಿಯೇ. ಮುಂದೆ ಓದಿ...

    ಟಾಕೀಸ್ ಮುಂದೆ ದರ್ಶನ್ ಪೋಸ್ಟರ್

    ಟಾಕೀಸ್ ಮುಂದೆ ದರ್ಶನ್ ಪೋಸ್ಟರ್

    ನಮ್ಮ ಶಾಲೆಯಲ್ಲಿ ಬಾಗೇವಾಡಿ ಬಸವೇಶ್ವರ ಜಾತ್ರಾ ನಿಮಿತ್ತ ಎಲ್ಲ ಮಕ್ಕಳನ್ನು ಚಿತ್ರ ತೋರಿಸಲು ಕರೆದುಕೊಂಡು ಹೋಗಲು ನಿರ್ಧಾರ ಮಾಡಿದಾಗ ನಾವೆಲ್ಲ ಕುಣಿದು ಕುಪ್ಪಳಿಸಿದ್ದೆವು. ಒಂದು ವಾರದ ಹಿಂದಷ್ಟೇ ಬಾಗೇವಾಡಿಗೆ ಹೋದಾಗ ಟಾಕೀಸ್ ಮುಂದೆ ದರ್ಶನ್ ರ `ಅಯ್ಯ' ಚಿತ್ರದ ದೊಡ್ಡ ಪೋಸ್ಟರ್ ನೋಡಿ ಬಂದಿದ್ದೆ. ಇಷ್ಟು ದಿನ ಟಿವಿಯಲ್ಲಿ ನೋಡುತ್ತಿದ್ದ ದರ್ಶನ್ ರನ್ನು ಟಾಕೀಸ್‌ನಲ್ಲಿ ನೋಡುಬಹುದು ಎಂದು ನಾವೆಲ್ಲ ಸಂಭ್ರಮಿಸಿದೆವು.

    ಟಿಕೇಟ್ ದರ 12 ರೂಪಾಯಿ

    ಟಿಕೇಟ್ ದರ 12 ರೂಪಾಯಿ

    ಅಂತೂ ಜಾತ್ರೆ ದಿನ ಸಿನಿಮಾ ತೋರಿಸಲು ನಮ್ಮ ಶಿಕ್ಷಕರು ರೆಡಿಯಾದರು. ನಮ್ಮೂರಿಂದ ನಾಲ್ಕು ಕಿಲೋಮೀಟರ್ ದೂರವಿರುವ ಬಾಗೇವಾಡಿಗೆ ನೂರಾರು ವಿದ್ಯಾರ್ಥಿ ಗಳು ನೆಡೆದುಕೊಂಡೆ ಹೋದೆವು. ಆಗ ಆ ಚಿತ್ರಮಂದಿರದಲ್ಲಿ ಒಂದು ಟಿಕೇಟ್ ದರ 12 ರೂಪಾಯಿ. ಸಿನಿಮಾಕ್ಕಾಗಿ ನಮ್ಮಿಂದ ಕೇವಲ ಮೂರು ರೂಪಾಯಿ ತೆಗೆದುಕೊಂಡಾಗ ಹಿರಿಹಿರಿ ಹಿಗ್ಗಿದೆವು.

    ದರ್ಶನ್ ರ ದರ್ಶನವಾಗಲೇ ಇಲ್ಲ

    ದರ್ಶನ್ ರ ದರ್ಶನವಾಗಲೇ ಇಲ್ಲ

    ಆಯ್ತು ..ಚಿತ್ರ ಶುರುವಾಯಿತು..ಚಿತ್ರದಲ್ಲಿ ನಮ್ಮ ವಯಸ್ಸಿನ ಹುಡುಗ ಬಂದ, ಇಂಗ್ಲೀಷ್‌ನಲ್ಲಿ ಏನೇನೂ ಮಾತಾನಾಡತೊಡಗಿದ. ನಂತರ ಹುಡಗನ ತಂದೆ ತಾಯಿ ಬಂದರು, ಅವರು ಏನೇನೋ ಮಾತನಾಡಿದರು. ಆಗ ತಾನೇ ಇಂಗ್ಲೀಷ್‌ನಲ್ಲಿ ಎಬಿಸಿಡಿ ಕಲಿಯುತ್ತಿದ್ದ ನಮಗೆ ಏನು ಅರ್ಥವಾಗಲಿಲ್ಲ. ಅರ್ಧ ಗಂಟೆ, ಒಂದು ಗಂಟೆ ಆದರೂ ನಮಗೆ ದರ್ಶನ್ ರ ದರ್ಶನವಾಗಲೇ ಇಲ್ಲ. ಚಿತ್ರ ಶುರುವಾದಾಗಿನಿಂದ ನೋಡಿದ್ದು ಕೇವಲ ಆ ಹುಡಗ ಓಡಾಡುವುದು, ಊಟ ಮಾಡುವುದು, ಶಾಲೆಗೆ ಹೋಗುವುದು, ಕೊನೆಗೆ ಯಾವುದೋ ಒಂದು ಕ್ವೀಜ್ ನಲ್ಲಿ ಗೆಲ್ಲುವುದು.

    ಆದು 'ಅಯ್ಯ' ಸಿನಿಮಾ ಆಗಿರಲಿಲ್ಲ

    ಆದು 'ಅಯ್ಯ' ಸಿನಿಮಾ ಆಗಿರಲಿಲ್ಲ

    ಚಿತ್ರ ಶುರುವಾಗಿ ಅರ್ಧ ಗಂಟೆ ಆಗುವುದರಲ್ಲಿ ಎಲ್ಲರ ಮುಖದಲ್ಲಿ ಪ್ರೇತಕಳೆ. ತಿಳಿಯದ ಭಾಷೆಯಲ್ಲಿ ಸುಮಾರು ಒಂದುವರೆ ಗಂಟೆ ಕಾಲ ತೆಲೆ ಕೊರೆದ ಆ ಹುಡಗನ ಮೇಲೆ ನಮಗೆ ಭಯಂಕರ ಕೋಪ. ಹೊರಗೆ ಹೋಗಬೇಕೆಂದರೆ ಬಾಗಿಲಲ್ಲಿ ಭದ್ರವಾಗಿ ನಿಂತ ಭೀಮಕಾಯದ ಶಿಕ್ಷಕರು. ಆಮೇಲೆ ಗೊತ್ತಾಗಿದ್ದು ಅದು ಮಕ್ಕಳಿಗಾಗಿ ತಯಾರಿಸಿದ ಒಂದು ಇಂಗ್ಲೀಷ್ ಚಿತ್ರ, ಅದಕ್ಕಾಗಿ ಟಾಕೀಸ್‌ನ ಒಂದು ವಿಶೇಷ ಶೋ ಬುಕ್ ಮಾಡಿದ್ದರು ಅಂತ.

    ಅಂತು 'ಅಯ್ಯ' ಸಿನಿಮಾ ನೋಡಿದ್ವಿ

    ಅಂತು 'ಅಯ್ಯ' ಸಿನಿಮಾ ನೋಡಿದ್ವಿ

    ಕೊನೆಗೂ ಚಿತ್ರ ಮುಗಿಯಿತು. ಹೊರಗಡೆ ಬಂದ ತೃಪ್ತಿಯಿಂದ ನಿಟ್ಟುಸಿರು ಬಿಟ್ಟೆವು. ಹೋಗಲಿ ಬಿಡು ಪರ್ವಾಗಿಲ್ಲ ಅಂತ ಈಗ ಮುಂದಿನ ಶೋದಲ್ಲಿ 12 ರೂಪಾಯಿ ಕೊಟ್ಟಾದರೂ ಸರಿ `ಅಯ್ಯ' ನೋಡಬೇಕೆಂದರೆ, ಅಲ್ಲಿಯೂ ನಮ್ಮ ಭೀಭತ್ಸ ಶಿಕ್ಷಕರು ಬಂದು ತೆಡೆದು, ನಿಮ್ಮನೆಲ್ಲ ಊರಿಗೆ ತಲುಪಿಸುವುದು ನಮ್ಮ ಜವಾಬ್ದಾರಿಯೆಂದು ಚಿತ್ರ ನೋಡಲು ಬಿಡದೇ ಮತ್ತೆ ನಾಲ್ಕು ಕಿಲೋಮೀಟರ್ ನಡೆಸಿ ಊರಿಗೆ ಕರೆದುಕೊಂಡು ಬಂದರು. ಶೋಚನೀಯ ಸ್ಥಿತಿ. ಊರು ತಲುಪಿದ ಮೇಲೆ ಹತಾಷೆ, ಕೋಪ ಎರಡು ಉಂಟಾದರೂ, ಜೇಬಲ್ಲಿ ಜಾತ್ರೆಗೆ ಕೊಟ್ಟ ದುಡ್ಡು ನೋಡಿ ಮತ್ತೆ ಮುಖ ಅರಳಿತು. ಹೇಗಾದರೂ ಮಾಡಿ ಇವತ್ತು ಚಿತ್ರ ನೋಡಲೆಬೇಕೆಂದು ಪಣತೊಟ್ಟಿದ್ದ ನಾನು ನನ್ನ ನಾಲ್ಕು ಜನ ಸ್ನೇಹಿತರ ಜೊತೆ ಸೇರಿ ಊರಿನಲ್ಲಿದ್ದ ಒಂದು ಅಟೋದಲ್ಲಿ ಮತ್ತೆ ಬಾಗೇವಾಡಿಗೆ ಹೋದೆವು. ನಂತರ ಮುಂದಿನ ಶೋದ ಟಿಕೆಟ್ ಪಡೆದು ಚಿತ್ರ ನೋಡಿದೆವು.

    ಪ್ರತಿವರ್ಷ ಜಾತ್ರೆಗೆ ದರ್ಶನ್ ಸಿನಿಮಾ

    ಪ್ರತಿವರ್ಷ ಜಾತ್ರೆಗೆ ದರ್ಶನ್ ಸಿನಿಮಾ

    ದಾಸನ ಪ್ರತಿ ಡೈಲಾಗ್‌ಗೆ ಚಪ್ಪಾಳೆ ಹೊಡೆದು. ರಕ್ಷಿತಾರ ಮೋಹಕ ನಟನೆಗೆ ಮನಸೋತು, ಸಾಧು ಮಹಾರಾಜರ ಕಾಮಿಡಿಗೆ ಹೊಟ್ಟೆ ಹುಣ್ಣಾಗುವಷ್ಟು ನಕ್ಕು ಮನೆಗೆ ಬಂದೆವು. ಅಲ್ಲಿಂದ ಪ್ರತಿವರ್ಷ ಜಾತ್ರೆಗೆ ಯಾವುದಾದರೂ ಒಂದು ದರ್ಶನ್ ಚಿತ್ರವಿರುತ್ತಿತ್ತು. ನಾವು ಮಿಸ್ ಮಾಡದೇ ನೊಡುತ್ತಿದ್ದೆವು..

    English summary
    'Na Nodida Modala Cinema' : Shrishail Mulawad wrote his first movie watching experience. He watched Darshan 'Ayya' when he was in 6th class.
    Thursday, April 4, 2019, 17:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X