twitter
    For Quick Alerts
    ALLOW NOTIFICATIONS  
    For Daily Alerts

    'ಸುಂಟರಗಾಳಿ' ಸಿನಿಮಾ ಈ ಹುಡುಗನ ಲೈಫ್ ಬದಲಿಸಿತಂತೆ

    By ಗಿರೀಶ್ ಸಿ ಸಾಲಿಮಠ
    |

    'ನಾ ನೋಡಿದ ಮೊದಲ ಸಿನಿಮಾ' ಲೇಖನ ಸರಣಿಯ ನಾಲ್ಕನೇ ಲೇಖನ ಇದಾಗಿದೆ. ದರ್ಶನ್ ಅಭಿಮಾನಿ ಗಿರೀಶ್ ಈ ಲೇಖನವನ್ನು ಬರೆದಿದ್ದು, 'ಸುಂಟರಗಾಳಿ' ಸಿನಿಮಾ ನೋಡಿದ ಅನುಭವನ್ನು ಹಂಚಿಕೊಂಡಿದ್ದಾರೆ.

    ಗಿರೀಶ್ ಗೆ ಸಿನಿಮಾದ ಮೇಲೆ ಪ್ರೀತಿ ಮೂಡಲು ಕಾರಣ ಆಗಿದ್ದು, 'ಸುಂಟರಗಾಳಿ' ಸಿನಿಮಾವಂತೆ. ದರ್ಶನ್ ಅವರ ಅಭಿಮಾನಿಯಾಗಿರುವ ಗಿರೀಶ್ ಸುಂಟರಗಾಳಿ ಸಿನಿಮಾ ನೋಡಿದ ಅನುಭವ ಎಂದು ಮರೆಯಲು ಆಗಲ್ಲ ಎಂದಿದ್ದಾರೆ. ಏಕೆಂದರೆ, ದರ್ಶನ್ ಅವರ ಈ ಸಿನಿಮಾ ಇವರ ಜೀವನದ ಬದಲಾವಣೆಗೂ ಕಾರಣ ಆಗಿದೆಯಂತೆ

    'ಶ್' ಸಿನಿಮಾ ನೋಡಿ ಒಂದು ವಾರ ಜ್ವರ ಬಂದಿತ್ತು 'ಶ್' ಸಿನಿಮಾ ನೋಡಿ ಒಂದು ವಾರ ಜ್ವರ ಬಂದಿತ್ತು

    ಅಂದಹಾಗೆ, 'ಸುಂಟರಗಾಳಿ' ಸಿನಿಮಾ ವೀಕ್ಷಿಸಿದ ತಮ್ಮ ಅನುಭವವನ್ನು ಗಿರೀಶ್ ಈ ರೀತಿ ಹಂಚಿಕೊಂಡಿದ್ದಾರೆ. ಮುಂದೆ ಓದಿ...

    ಚಿಕ್ಕ ವಯಸ್ಸಿನಲ್ಲಿ ನೋಡಿದ ಸಿನಿಮಾ

    ಚಿಕ್ಕ ವಯಸ್ಸಿನಲ್ಲಿ ನೋಡಿದ ಸಿನಿಮಾ

    ''ನಾನು ಗಿರೀಶ್ ಸಾಲಿಮಠ ಮೂಲತಃ ಶಿವಮೊಗ್ಗದವನು. ಚಿಕ್ಕ ವಯಸ್ಸಿನಿಂದಲೂ ನನಗೆ ಸಿನಿಮಾ ಹಾಡು ನೃತ್ಯ ಗಳಲ್ಲಿ ಬಹಳ ಆಸಕ್ತಿ. ಸಿನಿಮಾ ನನ್ನ ಜೀವನದ ಅವಿಭಾಜ್ಯ ಅಂಗ ಎಂದರು ತಪ್ಪಾಗಲಾರದು. ಇತ್ತೀಚೆಗೆ ನನ್ನದೇ ಆದ ಬರವಣಿಗೆ ನಿರ್ದೇಶನ ಹಾಗೂ ಕಿರುಚಿತ್ರ ಮುಂತಾದ ಕೆಲಸಗಳಲ್ಲಿ ನನ್ನನ್ನು ಖುಷಿಯಿಂದ ತೊಡಗಿಸಿಕೊಂಡಿದ್ದೇನೆ. ಆದರೆ ಇದಕೆಲ್ಲ ಕಾರಣ ಈ ಸಿನಿಮಾ.''

    2006 ಫೆಬ್ರವರಿಯಲ್ಲಿ

    2006 ಫೆಬ್ರವರಿಯಲ್ಲಿ

    ''ಹೀಗೆ ನನ್ನ ಸಿನಿಮಾ ಬಗ್ಗೆ ಹೆಚ್ಚು ಆಸಕ್ತಿಗೆ ಹಾಗೂ ಸಿನಿಮಾ ಕ್ಷೇತ್ರದ ಒಲವು ಹೆಚ್ಚಾಗಲು ಕಾರಣ ಚಾಲೆಂಜಿಂಗ್ ಸ್ಟಾರ್ ದರ್ಶನ್. ನಾನು ಅಪ್ಪನ ಜೊತೆ ಚಿಕ್ಕ ವಯಸ್ಸಿನಲ್ಲಿ ಸಾಕಷ್ಟು ಚಿತ್ರಗಳನ್ನು ನೋಡಿದ್ದೇನೆ. ಅವು ಯಾವುದು ನನ್ನ ನೆನಪಿನಲ್ಲಿ ಇಲ್ಲ. ನನಗೆ ನೆನಪಿರುವ ಹಾಗೂ ನನ್ನನ್ನು ಸಿನಿಮಾ ಕ್ಷೇತ್ರದ ಕಡೆಗೆ ಒಲವು ಮೂಡಿಸಿದ ಚಿತ್ರ 'ಸುಂಟರಗಾಳಿ' ಇದು 2006 ಫೆಬ್ರವರಿ ಯಲ್ಲಿ ತೆರೆಕಂಡಿತ್ತು.''

    ಜಾತ್ರೆಯಲ್ಲಿ ದರ್ಶನ್ ಸಿನಿಮಾ : ಮಾಸ್ಟರ್ ಮೇಲೆ ಸ್ಕೂಲ್ ಹುಡುಗನ ಕೋಪ ಜಾತ್ರೆಯಲ್ಲಿ ದರ್ಶನ್ ಸಿನಿಮಾ : ಮಾಸ್ಟರ್ ಮೇಲೆ ಸ್ಕೂಲ್ ಹುಡುಗನ ಕೋಪ

    ಲಕ್ಷ್ಮಿ ಚಿತ್ರಮಂದಿರದಲ್ಲಿ ನೋಡಿದ್ದೆ

    ಲಕ್ಷ್ಮಿ ಚಿತ್ರಮಂದಿರದಲ್ಲಿ ನೋಡಿದ್ದೆ

    ''ನಾನು 'ಸುಂಟರಗಾಳಿ' ಸಿನಿಮಾವನ್ನು ಶಿವಮೊಗ್ಗದ ಲಕ್ಷ್ಮಿ ಚಿತ್ರಮಂದಿರದಲ್ಲಿ ನೋಡಿದ್ದೆ. ಆಗ ಟಿಕೆಟ್ ಬೆಲೆ ಎಷ್ಟು ಇತ್ತು ಎನ್ನುವುದು ನೆನೆಪಿಲ್ಲ. ಆದರೆ, ಸಿನಿಮಾದ ಪ್ರತಿ ದೃಶ್ಯ ಕೂಡ ನನ್ನ ನೆನಪಿನಲ್ಲಿ ಈಗಲೂ ಇದೆ. ಸುಂಟರಗಾಳಿ ಒಂದು ಪಕ್ಕ ಕಮರ್ಷಿಯಲ್ ಜೊತೆಗೆ ಮಾಸ್ ಬೇಸ್ ಸಬ್ಜೆಕ್ಟ್ ಸಿನಿಮಾ ಇದರ ನಿರ್ದೇಶಕರು ಸಾಧು ಕೋಕಿಲ. ಈ ಚಿತ್ರದಲ್ಲಿ ಬರುವ ಮಾಸ್ ಡೈಲಾಗ್ಸ್, ದರ್ಶನ್ ಅವರ ಮಾಸ್ ಅಪಿಯರೆನ್ಸ್ ನನಗೆ ಬಹಳ ಖುಷಿ ನೀಡಿತ್ತು.''

    ದರ್ಶನ್ ಅವರ ಪಕ್ಕ ಅಭಿಮಾನಿಯಾದೆ

    ದರ್ಶನ್ ಅವರ ಪಕ್ಕ ಅಭಿಮಾನಿಯಾದೆ

    ''ಸಾಧು ಕೋಕಿಲ ಬುಲೆಟ್ ಪ್ರಕಾಶ್ ರಂಗಾಯಣ ರಘು ಮುಂತಾದವರ ಕಾಮಿಡಿ, ದರ್ಶನ್ ರಕ್ಷಿತಾ ಜೋಡಿ, ತಾಯಿ ಮಗನ ಸೆಂಟಿಮೆಂಟ್ ಹಾಗೂ ನನ್ನ ಫೇವರೆಟ್ ಉಮಾಶ್ರೀ ಅವರ ಮನೋಜ್ಞ ಅಭಿನಯ ಹಾಡುಗಳು ಒಳ್ಳೆಯ ಕಥೆ ಉತ್ತಮ ಚಿತ್ರಕಥೆ ಒಬ್ಬ ಸಾಮಾನ್ಯ ಪ್ರೇಕ್ಷಕನಿಗೆ ಬೇಕಾದ ಎಲ್ಲ ರೀತಿಯ ರಸದೌತಣವನ್ನು ಈ ಸಿನಿಮಾ ನೀಡುತ್ತೆ. ಈ ಸಿನಿಮಾದ ಮೂಲಕ ನಾನು ದರ್ಶನ್ ಅವರ ಪಕ್ಕ ಅಭಿಮಾನಿಯಾದೆ.''

    ಬೆರಗುಗಣ್ಣಿನಿಂದ ಮೊದಲ ಬಾರಿ ಬೆಳ್ಳಿ ಪರದೆ ನೋಡಿದ ಕ್ಷಣ ಬೆರಗುಗಣ್ಣಿನಿಂದ ಮೊದಲ ಬಾರಿ ಬೆಳ್ಳಿ ಪರದೆ ನೋಡಿದ ಕ್ಷಣ

    ಸುಮಾರು ದಿನಗಳ ಕಾಲ ಅದರ ಗುಂಗು

    ಸುಮಾರು ದಿನಗಳ ಕಾಲ ಅದರ ಗುಂಗು

    ''ದರ್ಶನ್ ಅವರು ಡೈಲಾಗ್ ಹೇಳುವ ರೀತಿ ಮಾಸ್ ಅಪಿಯರೆನ್ಸ್ ಫೈಟ್ಸ್ ಕಾಮಿಡಿ ಎಲ್ಲವೂ ನನ್ನನ್ನು ಹುಚ್ಚು ಹಿಡಿಸಿತ್ತು. ಚಿತ್ರ ನೋಡಿದ ನಂತರವೂ ಸುಮಾರು ದಿನಗಳ ಕಾಲ ಅದರ ಗುಂಗು ಕಮ್ಮಿ ಆಗಲಿಲ್ಲ. ಅದರಲ್ಲೂ ಆ ಚಿತ್ರದ ಕೆಲವು ಡೈಲಾಗ್ಸ್ ಅಂದರೆ, ''ಎತ್ತಿದರೆ ಗದೆ ಇಳಿಸಿದರೆ ಒದೆ.. ಜಗ್ಗು ಬರಿ ಗಾಳಿಯಲ್ಲ ಸುಂಟರಗಾಳಿ..'' ಇವುಇನ್ನು ನನಗೆ ನೆನಪಿದೆ. ಅದರಲ್ಲೂ ದರ್ಶನ್ ಅವರು ಓಡಿಸುವ ಆ ಕರಿಷ್ಮಾ ಬೈಕ್ ನನ್ನ ಫೇವರೆಟ್. ಒಟ್ಟಿನಲ್ಲಿ ಆ ಸಿನಿಮಾ ನನ್ನ ಲೈಫ್ ನ ಒಂದು ಮಟ್ಟಿಗೆ ಬದಲಾಯಿಸಿದ್ದು ನಿಜ ಐ ಲವ್ ಯು ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್''

    English summary
    What is the first Kannada movie watched? Girish has written that his first Kannada cinema was Suntaragali. the movie starring Darshan and Rakshitha.
    Thursday, April 18, 2019, 16:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X