twitter
    For Quick Alerts
    ALLOW NOTIFICATIONS  
    For Daily Alerts

    ಬೆರಗುಗಣ್ಣಿನಿಂದ ಮೊದಲ ಬಾರಿ ಬೆಳ್ಳಿ ಪರದೆ ನೋಡಿದ ಕ್ಷಣ

    By ನಾಗೇಶ್ ಶೆಣೈ ಪರ್ಕಳ
    |

    'ನಾ ನೋಡಿದ ಮೊದಲ ಸಿನಿಮಾ' ಲೇಖನ ಸರಣಿಯ ಮೂರನೇ ಲೇಖನ ಇದಾಗಿದೆ. ಇದನ್ನು ಉಡುಪಿಯ ನಾಗೇಶ್ ಶೆಣೈ ಪರ್ಕಳ ಎಂಬುವವರು ಬರೆದಿದ್ದಾರೆ.

    ನಾಗೇಶ್ ಶೆಣೈ ಪರ್ಕಳ ನೋಡಿದ ಮೊದಲ ಸಿನಿಮಾ ಶಿವರಾಜ್ ಕುಮಾರ್, ರಮೇಶ್ ಹಾಗೂ ಪ್ರೇಮ ನಟನೆಯ, ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ, ಇಳಯರಾಜ ಸಂಗೀತದ ಸೂಪರ್ ಹಿಟ್ ಸಿನಿಮಾ 'ನಮ್ಮೂರ ಮಂದಾರ ಹೂವೆ' ಸಿನಿಮಾ.

    'ಶ್' ಸಿನಿಮಾ ನೋಡಿ ಒಂದು ವಾರ ಜ್ವರ ಬಂದಿತ್ತು 'ಶ್' ಸಿನಿಮಾ ನೋಡಿ ಒಂದು ವಾರ ಜ್ವರ ಬಂದಿತ್ತು

    ಶಾಲಾ ದಿನದಲ್ಲಿ ಅಪ್ಪ ಅಮ್ಮನ ಜೊತೆಗೆ ಹೋಗಿ ನಾಗೇಶ್ ನೋಡಿದ ಮೊದಲ ಸಿನಿಮಾ ಇದು. ಕ್ಯೂ ನಲ್ಲಿ ನಿಂತು ಟಿಕೆಟ್ ಪಡೆದು, ಸೀಟ್ ಹಿಡಿದು ಮೊದಲ ಬಾರಿಗೆ ಬೆಳ್ಳಿ ಪರದೆ ಮೇಲೆ ಸಿನಿಮಾ ಬಂದಾಗ ನಾಗೇಶ್ ಗೆ ಅದ್ಬುತ ಅನಿಸಿತ್ತು.

    ಉಡುಪಿಯ ಡಯಾನ ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ ಅನುಭವನ್ನು ಸುಂದರವಾಗಿ ನಾಗೇಶ್ ಈ ರೀತಿ ಹೇಳಿಕೊಂಡಿದ್ದಾರೆ. ಮುಂದೆ ಓದಿ...

    ಅಪ್ಪ ಸಿನಿಮಾಗೆ ಕರೆದುಕೊಂಡು ಹೋದರು

    ಅಪ್ಪ ಸಿನಿಮಾಗೆ ಕರೆದುಕೊಂಡು ಹೋದರು

    ''ನನಗಾಗ 9 ವರ್ಷ ವಯಸ್ಸು, 1997ರ ಇಸವಿ ನನಗೆ ನೆನಪಿದೆ ಅಂದು ಭಾನುವಾರ ಮೊದಲೇ ನಾನು ನನ್ನ ಗೆಳೆಯರೊಂದಿಗೆ ಆಟವಾಡಿ ಸುಸ್ತಾಗಿ ಮಲಗಿದ್ದೆ. ಅಪ್ಪ ನನ್ನ ಅಮ್ಮನ ಹತ್ತಿರ ಬೇಗ ಮಕ್ಕಳನೆಲ್ಲ ರೆಡಿ ಮಾಡ್ಸು ಸಿನಿಮಾ ನೋಡಲಿಕ್ಕೆ ಹೋಗುವ ಅಂದ್ರು ನಾನು ನಿದ್ದೆ ಕಣ್ಣಿನಲ್ಲೇ ಎದ್ದು ಅಮ್ಮ ಹಾಗೂ ತಮ್ಮನ ಜೊತೆ ಹೊರಟೆ ಸ್ಕೂಟರಿನಲ್ಲಿ.''

    ಜನರ ನಡುವೆ ನುಗ್ಗಿ ಟಿಕೆಟ್ ಪಡೆದೆವು

    ಜನರ ನಡುವೆ ನುಗ್ಗಿ ಟಿಕೆಟ್ ಪಡೆದೆವು

    ''ನಾವು ಚಿತ್ರಮಂದಿರ ತಲುಪುವಾಗಲೇ ಹೊರಗೆ ಫುಲ್ ಜನ ತುಂಬಿದ್ರು. ಜನರ ನಡುವೆ ನುಗ್ಗಿ ಅಪ್ಪ ಹೋಗಿ ಟಿಕೆಟ್ ತೆಗೆದುಕೊಂಡು ಬಂದ್ರು. ನಮನೆಲ್ಲ ಕರೆದುಕೊಂಡು ಚಿತ್ರಮಂದಿರದ ಮೊದಲನೇ ಮಹಡಿ ಹತ್ತಿದ್ರು. ಆ ಜನಜಂಗುಳಿ ಮಧ್ಯೆ ಒಬ್ಬ ಟಿಕೆಟ್ ಹರಿದು ಕೊಟ್ಟ ನಾವೆಲ್ಲ ಒಟ್ಟಿಗೆ ಕೊನೆಯ ಪಂಕ್ತಿಯ ಆಸನದಲ್ಲಿ ಆಸೀನರಾದ್ವಿ. ಚಿತ್ರಮಂದಿರ ಅದಾಗಲೇ ತುಂಬಿರುವಂತೆ ಅನಿಸ್ತಿತ್ತು ಆದ್ರೆ ಸುತ್ತಲೂ ಕತ್ತಲು ಆವರಿಸಿತ್ತು.''

    ಜಾತ್ರೆಯಲ್ಲಿ ದರ್ಶನ್ ಸಿನಿಮಾ : ಮಾಸ್ಟರ್ ಮೇಲೆ ಸ್ಕೂಲ್ ಹುಡುಗನ ಕೋಪ ಜಾತ್ರೆಯಲ್ಲಿ ದರ್ಶನ್ ಸಿನಿಮಾ : ಮಾಸ್ಟರ್ ಮೇಲೆ ಸ್ಕೂಲ್ ಹುಡುಗನ ಕೋಪ

    ಮೊದಲ ಬಾರಿ ಬೆಳ್ಳಿ ಪರದೆ ನೋಡಿದ ಕ್ಷಣ

    ಮೊದಲ ಬಾರಿ ಬೆಳ್ಳಿ ಪರದೆ ನೋಡಿದ ಕ್ಷಣ

    ''ಚಿತ್ರಮಂದಿದ ಕುರ್ಚಿ ಮೇಲೆ ಕೂತಿನ ನಮಗೆ ಒಮ್ಮೆಲೇ ಕಿವಿ ತಮಟೆ ಹೊಡೆದು ಹೋಗೋ ಹಾಗೆ ಶಬ್ದದೊಂದಿಗೆ ಎದುರು ಬೆಳಕು ಹರಿಯಿತು. ನಾನೊಮ್ಮೆ ಹೆದರಿದೆ ಏನಾಗ್ತಿದೆ ಅಂತ ಮತ್ತೆ ಅಮ್ಮ ಹೇಳಿದ ಮೇಲೆ ಅರ್ಥವಾಯಿತು ಬೆಳಕು ಹರಿದ ವಿಶಾಲವಾದ ಜಾಗ ಬೆಳ್ಳಿಪರದೆ ಅಂತ ಅಲ್ಲಿ ತನಕ ನಾನು ನಮ್ಮ ಮನೇಲಿ ನಾನು ನೋಡ್ತಿದ್ದ ಟಿವಿ ಪರದೇನೆ ದೊಡ್ಡದು ಅಂದುಕೊಂಡಿದ್ದೆ. ನೋಡು ನೋಡುತ್ತಿದಂತೆ ಪರದೆ ಮೇಲೆ "ನಮ್ಮೂರ ಮಂದಾರ ಹೂವೆ" ಅಂತ ಬಂತು ಆಗಲೇ ನಾನು ಯಾವ ಚಿತ್ರ ನೋಡಲಿಕ್ಕೆ ಬಂದದ್ದು ಅಂತ ಗೊತ್ತಾದದು.''

    ಮಲೆನಾಡಿನ ಮಳೆ, ಸುಂದರ ಹಸಿರು

    ಮಲೆನಾಡಿನ ಮಳೆ, ಸುಂದರ ಹಸಿರು

    ''ಶಾಲೆಯಲ್ಲಿ ನನ್ನ ಗೆಳೆಯರು ಎರಡು ದಿನಗಳ ಹಿಂದೆ ಚಿತ್ರದ ಬಗ್ಗೆ ಮಾತಾಡ್ತಿಡ್ತು ಆದ್ರೆ ನಾನು ನನ್ನ ಕನಸಲ್ಲೂ ಚಿತ್ರಮಂದಿರದಲ್ಲಿ ನೋಡ್ತೇನೆ ಅಂದ್ಕೊಂಡಿರಲಿಲ್ಲ. ನನಗೆ ಅಮ್ಮ ಹಾಗು ತಮ್ಮನಿಗೂ ಮೂವರಿಗೂ ಇದು ಚಿತ್ರಮಂದಿರದಲ್ಲಿ ಮೊದಲ ಕನ್ನಡ ಸಿನಿಮಾ ಅನುಭವವಾಗಿದದ್ದು ವಿಶೇಷ. ದೊಡ್ಡ ಪರದೆಯಲ್ಲಿ ಕುತೂಹಲ ತುಂಬಿದ ಕಣ್ಣುಗಳಿಂದ ಮಲೆನಾಡಿನ ಸುಂದರ ಮಳೆ ಹಸಿರು ತುಂಬಿಕೊಂಡ ಚಿತ್ರ ನೋಡುತ್ತಾ ನೋಡುತ್ತಾ ನನಗೆ ನಿದ್ದೆ ಹಾರಿಹೋದದ್ದೇ ಗೊತಾಗ್ಲಿಲ್ಲ''.

    ನನ್ನ ಕಣ್ಣು ದೊಡ್ಡ ಪೋಸ್ಟರನ್ನೇ ದಿಟ್ಟಿಸುತ್ತಿತ್ತು

    ನನ್ನ ಕಣ್ಣು ದೊಡ್ಡ ಪೋಸ್ಟರನ್ನೇ ದಿಟ್ಟಿಸುತ್ತಿತ್ತು

    ''ಆ ಚಿತ್ರದ ಸಂಗೀತ ತುಂಬಾ ಇಷ್ಟ ಆಯಿತು. ಚಿತ್ರಮಂದಿರದ ಒಳಗೆ ಬರುವಾಗ ವ್ಯಕ್ತಿ ಹರೆದುಕೊಟ್ಟ ಕೊಟ್ಟ ಕಾಗದದ ಚೂರಿನ ಬಗ್ಗೆ ಇದ್ದ ಕುತೂಹಲವನ್ನು ಇಂಟರ್ವಲ್ ನಲ್ಲಿ ನೋಡಿದಾಗ ಗೊತ್ತಾಯಿತು ಅದು ಟಿಕೆಟ್ ಅಂತ. ನಾವು ಆಸೀನರಾಗಿದ್ದದ್ದು ಬಾಲ್ಕನಿಯಲ್ಲಿ ಅಂತ. ಅಂತೂ ಇಂತೂ ಚಿತ್ರ ಮುಗಿಯುವಾಗ 10 ಘಂಟೆ ದಾಟಿತ್ತು ಹರಸಾಹಸ ಮಾಡಿ ಜನಸಂದಣಿ ದಾಟಿ ಸ್ಕೂಟರ್ ಹತ್ತಿ ಮನೆಗೆ ಹೊರಡುವಾಗ ನನ್ನ ಕಣ್ಣು ಡಯಾನಾ ಚಿತ್ರಮಂದಿರದ ಮುಂಭಾಗದಲ್ಲಿ ಹಾಕಿದ್ದ ಚಿತ್ರದ ದೊಡ್ಡ ಪೋಸ್ಟರನ್ನೇ ದಿಟ್ಟಿಸುತ್ತಿತ್ತು. ಏನೋ ಒಂದು ಸಾಧನೆ ಮಾಡಿದ ಖುಷಿ ಮನಸೆಲ್ಲ ಆವರಿಸಿತ್ತು.''

    English summary
    Nagesh Shenoy Parakala has written that his first Kannada cinema was Nammura Mandara Hoove . the movie starring Shivaraj Kumar, Ramesh Aravind and Prema.
    Thursday, April 11, 2019, 13:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X