twitter
    For Quick Alerts
    ALLOW NOTIFICATIONS  
    For Daily Alerts

    'ಶ್' ಸಿನಿಮಾ ನೋಡಿ ಒಂದು ವಾರ ಜ್ವರ ಬಂದಿತ್ತು

    By ಸೈಫ್
    |

    'ನಾ ನೋಡಿದ ಮೊದಲ ಸಿನಿಮಾ ಲೇಖನ ಸರಣಿಯ ಎರಡನೇ ಲೇಖನ ಇದಾಗಿದೆ. ಇದನ್ನು ಸೈಫ್ ಎಂಬುವವರು ಬರೆದಿದ್ದಾರೆ. ಭದ್ರಾವತಿ ಮೂಲದ ಸೈಫ್ ಸದ್ಯ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

    ಸಿನಿಮಾಗಳ ಬಗ್ಗೆ ಆಸಕ್ತಿ ಇರುವ ಸೈಫ್ ಭಾಷೆಯ ಭೇದ ಇಲ್ಲದೆ ಹೆಚ್ಚು ಹೆಚ್ಚು ಸಿನಿಮಾಗಳನ್ನು ನೋಡುತ್ತಾರಂತೆ. ಹೀಗಿರುವಾಗ, ಸೈಫ್ ಮೊದಲು ನೋಡಿದ್ದು ಉಪೇಂದ್ರ ನಿರ್ದೇಶನದ 'ಶ್' ಸಿನಿಮಾವನ್ನು.

    ಜಾತ್ರೆಯಲ್ಲಿ ದರ್ಶನ್ ಸಿನಿಮಾ : ಮಾಸ್ಟರ್ ಮೇಲೆ ಸ್ಕೂಲ್ ಹುಡುಗನ ಕೋಪ ಜಾತ್ರೆಯಲ್ಲಿ ದರ್ಶನ್ ಸಿನಿಮಾ : ಮಾಸ್ಟರ್ ಮೇಲೆ ಸ್ಕೂಲ್ ಹುಡುಗನ ಕೋಪ

    'ಶ್' ಪಕ್ಕಾ ಹಾರರ್ ಸಿನಿಮಾ. ಇಂದಿಗೂ ಕನ್ನಡದ ಬೆಸ್ಟ್ ಹಾರರ್ ಚಿತ್ರಗಳಲ್ಲಿ ಈ ಸಿನಿಮಾ ಅಗ್ರ ಸ್ಥಾನದಲ್ಲಿ ಇದೆ. ಮೊದಲ ಬಾರಿಗೆ ಚಿತ್ರಮಂದಿರಲ್ಲಿ ಈ ಚಿತ್ರವನ್ನು ನೋಡಿದ ಸೈಫ್ ತಮ್ಮ ಅನುಭವನ್ನು ಈ ಲೇಖನದ ಮೂಲಕ ಹಂಚಿಕೊಂಡಿದ್ದಾರೆ. ಮುಂದೆ ಓದಿ...

    'ಶ್' ಚಿತ್ರ ನೋಡಿ ಒಂದು ವಾರ ಜ್ವರ ಬಂದಿತ್ತು

    'ಶ್' ಚಿತ್ರ ನೋಡಿ ಒಂದು ವಾರ ಜ್ವರ ಬಂದಿತ್ತು

    ನಾನು ಕಂಡ ಮೊದಲ ಚಿತ್ರವೆಂದರೆ ಉಪೇಂದ್ರ ನಿರ್ದೇಶನದ 'ಶ್'. ಆ ಚಿತ್ರವನ್ನು ನಾನು ಇಂದಿಗೂ ಮರೆಯಲು ಸಾಧ್ಯವಿಲ್ಲ. ಏಕೆಂದರೆ ನನಗೆ ಭಯ ಮೂಡಿಸಿದ ಮೊದಲ ಚಿತ್ರ ಇದಾಗಿತ್ತು. ಆ ಚಿತ್ರದಲ್ಲಿ ಬರುವ ವಿಕೃತ ರೂಪದ ಮನುಷ್ಯ ಮತ್ತು ದೆವ್ವದ ಗೊಂಬೆಯನ್ನು ನೋಡಿ ಒಂದು ವಾರ ಜ್ವರ ಬಂದಿತ್ತು ಹಾಗೂ ಆ ನೆನಪು ಮರೆಯಲು ನನ್ನಿಂದ ತುಂಬಾ ಸಮಯ ಬೇಕಾಗಿತ್ತು.

    ಚಿತ್ರಮಂದಿರದಲ್ಲಿ ಕಣ್ಣುಮುಚ್ಚಿ ಕೊಳ್ಳುತ್ತಿದ್ದೆ

    ಚಿತ್ರಮಂದಿರದಲ್ಲಿ ಕಣ್ಣುಮುಚ್ಚಿ ಕೊಳ್ಳುತ್ತಿದ್ದೆ

    ಮೊದಲ ಬಾರಿಗೆ ಈ ಚಿತ್ರವನ್ನು ನೋಡುವಾಗ ದೆವ್ವದ ಗೊಂಬೆ ಬಂದರೆ ಸಾಕು ನಾನು ಕಣ್ಣುಮುಚ್ಚಿ ಕೊಳ್ಳುತ್ತಿದ್ದೆ. ಸ್ವಲ್ಪ ಕ್ಷಣದ ನಂತರ ಆ ಗೊಂಬೆ ಪರದೆ ಮೇಲಿನಿಂದ ಹೋಯಿತಾ.. ಇಲ್ಲವೆಂದು ನೋಡಿಕೊಳ್ಳುತ್ತಿದೆ. ಈ ಚಿತ್ರದಲ್ಲಿ ಬರುವ ನಾಯಿಯ ಶಬ್ದ ದನಿ ಕೂಡ ತುಂಬಾ ಭಯವನ್ನು ಮೂಡಿಸುತ್ತಿತ್ತು.

    ವಯಸ್ಸಿಗೆ ಬಂದ ನಂತರ

    ವಯಸ್ಸಿಗೆ ಬಂದ ನಂತರ

    ನಾನು ಇಂದು ಧೈರ್ಯದಿಂದ ಇರಲು ಮೊದಲ ಕಾರಣವೂ ಕೂಡ ಆ ಚಿತ್ರವೇ. ಸಿನಿಮಾದಲ್ಲಿ ಬರುವ ಭಯಂಕರ ದೃಶ್ಯಗಳನ್ನು ನೋಡಿ ನಾನು ನನ್ನಲ್ಲಿ ಧೈರ್ಯ ತುಂಬಿಕೊಂಡೆ. ಆ ಕಾರಣ ಅಂದು ಇಂದು ಎಂದೆಂದೂ 'ಶ್' ನನಗೆ ಇಷ್ಟವಾದ ಚಿತ್ರ. ಇವೆಲ್ಲವೂ ನಾನು ಕಂಡ ಬಾಲ್ಯದ ಅಭಿಪ್ರಾಯ. ಆದರೆ, ಆನಂತರ ವಯಸ್ಸಿಗೆ ಬಂದ ನಂತರ ''ಅವನಲ್ಲಿ ಇವಳಿಲ್ಲಿ..ಮಾತಿಲ್ಲ ಕಥೆಯಿಲ್ಲ.. ಎದುರೆದುರು ಬಂದಾಗ ಹೆದರಿ ಹೆದರಿ ನಿಂತಾಗ.. ಅಲ್ಲೇ ಆರಂಭ ಪ್ರೇಮ..'' ಎಂಬ ಹಾಡಿನ ಅರ್ಥ ತಿಳಿಯಿತು. ಆ ಹಾಡಿನ ಅರ್ಥ ನಿಜಕ್ಕೂ ಅದ್ಬುತ.

    ಪ್ರತಿ ಪಾತ್ರದಲ್ಲಿಯೂ ವಿಶಿಷ್ಟತೆ

    ಪ್ರತಿ ಪಾತ್ರದಲ್ಲಿಯೂ ವಿಶಿಷ್ಟತೆ

    ಈ ಚಿತ್ರದಲ್ಲಿ ಬರುವ ಪ್ರತಿಯೊಂದು ಪಾತ್ರವೂ ಅದರದ್ದೇ ಆದ ವಿಶಿಷ್ಟತೆಯನ್ನು ಪಡೆದುಕೊಂಡಿದೆ. ಈ ಚಿತ್ರದಲ್ಲಿ ಬರುವ ಪ್ರತಿಯೊಂದು ಹಾಡುಗಳು ತುಂಬಾ ಮನಮುಟ್ಟುವಂತಿದೆ. ಜೀವನದಲ್ಲಿ ಹಣಕ್ಕಾಗಿ ಮೋಹಕ್ಕಾಗಿ ಆಸೆಪಟ್ಟರೆ ಏನಾಗುವುದೆಂದು ಈ ಚಿತ್ರದ ಮೂಲಕ ಉಪೇಂದ್ರರವರು ತುಂಬಾ ಒಳ್ಳೆಯ ಉದ್ದೇಶವನ್ನು ತಿಳಿಸಿದ್ದಾರೆ.

    ಈಗಲೂ ಕಿವಿಯಲ್ಲಿ ಕೇಳಿಸುವ ಶಬ್ಧ 'ಶ್'

    ಈಗಲೂ ಕಿವಿಯಲ್ಲಿ ಕೇಳಿಸುವ ಶಬ್ಧ 'ಶ್'

    ಈ ಚಿತ್ರವನ್ನು ಉಪೇಂದ್ರರವರು ಊಹೆಗೆ ಮೀರಿದ ರೂಪವನ್ನು ತೋರಿಸಿದ್ದಾರೆ. ಕಾಸಿಗಾಗಿ, ಆಸೆಗಾಗಿ ಮತ್ತು ಮೋಹದ ಹಿಂದೆ ಹೋದರೆ ಏನೆಲ್ಲಾ ಆಗುವುದು ಎಂದು ತುಂಬಾ ಅದ್ಭುತವಾಗಿ ಸಿನಿಮಾ ಮಾಡಿದ್ದಾರೆ. ಈ ಚಿತ್ರದ ಬಗ್ಗೆ ಮಾತನಾಡಲು ಹೋದಾಗ ನನಗೆ ಒಂದೇ ಒಂದು ಧ್ವನಿ ಕಿವಿಗೆ ಕೇಳಿಸುತ್ತದೆ ಅದೇ ಅದೇ ''ಶ್''.

    English summary
    What is the first Kannada movie watched? Saif has written that his first Kannada cinema was Shh. The movie is directed by Upendra.
    Sunday, April 7, 2019, 14:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X