For Quick Alerts
  ALLOW NOTIFICATIONS  
  For Daily Alerts

  2020 ಮುಕ್ತಾಯ: ಮೊದಲ ಹಾಗೂ ಕೊನೆಯ ಕನ್ನಡ ಸಿನಿಮಾ ಯಾವುದು?

  |

  ಸ್ಯಾಂಡಲ್‌ವುಡ್ ಪಾಲಿಗೆ ಕೊನೆಗೂ 2020ನೇ ವರ್ಷ ಮುಕ್ತಾಯವಾಗಿದೆ. ಡಿಸೆಂಬರ್ 25ನೇ ತಾರೀಖು ಈ ವರ್ಷದ ಕೊನೆಯ ಕನ್ನಡ ಸಿನಿಮಾ ತೆರೆಗೆ ಬಂದಿದೆ. ಈ ಮೂಲಕ ಕೊರೊನಾ ವರ್ಷಕ್ಕೆ ಕನ್ನಡ ಚಿತ್ರರಂಗ ಅಧಿಕೃತವಾಗಿ ಗುಡ್ ಬೈ ಹೇಳಿದೆ.

  ರಿಲೀಸ್ ಆಯ್ತು ಇಂದ್ರಜಿತ್ ಲಂಕೇಶ್ Shakeela ಟ್ರೈಲರ್ | Filmebeat Kannada

  ಪ್ರತಿವರ್ಷದಂತೆ ಈ ವರ್ಷ ಸ್ಯಾಂಡಲ್‌ವುಡ್‌ನಲ್ಲಿ ಹೆಚ್ಚು ಸಿನಿಮಾಗಳು ಬಿಡುಗಡೆಯಾಗಿಲ್ಲ. ಬಹುಶಃ ದಶಕಗಳ ನಂತರ ವರ್ಷವೊಂದರಲ್ಲಿ ಅತಿ ಕಡಿಮೆ ಸಿನಿಮಾಗಳು ಬಿಡುಗಡೆಯಾಗಿದೆ. ಸದ್ಯದ ಲೆಕ್ಕಾಚಾರದ ಪ್ರಕಾರ ಈ ವರ್ಷ ಕನ್ನಡದಲ್ಲಿ 70 ರಿಂದ 76 ಸಿನಿಮಾಗಳು ಪ್ರೇಕ್ಷಕರ ಮುಂದೆ ಬಂದಿದೆ. ಹಾಗಾದ್ರೆ, ಈ ವರ್ಷದ ಮೊದಲ ಹಾಗೂ ಕೊನೆಯ ಕನ್ನಡ ಸಿನಿಮಾ ಯಾವುದು? ಮುಂದೆ ಓದಿ...

  ಶಕೀಲಾ ಕೊನೆಯ ಚಿತ್ರ

  ಶಕೀಲಾ ಕೊನೆಯ ಚಿತ್ರ

  ಇಂದ್ರಜಿತ್ ಲಂಕೇಶ್ ನಿರ್ದೇಶನದ ಶಕೀಲಾ ಸಿನಿಮಾ ಈ ವರ್ಷ ಬಿಡುಗಡೆಯಾದ ಕನ್ನಡದ ಕೊನೆಯ ಸಿನಿಮಾ. ಸೌತ್ ಇಂಡಸ್ಟ್ರಿಯ ನೀಲಿ ತಾರೆ ಶಕೀಲಾ ಅವರ ಬಯೋಪಿಕ್ ಚಿತ್ರ ಇದಾಗಿದ್ದು, ರಿಚಾ ಚಡ್ಡಾ ಶಕೀಲಾ ಅವರ ಪಾತ್ರದಲ್ಲಿ ನಟಿಸಿದ್ದರು. ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ಶಕೀಲಾ ತೆರೆಕಂಡಿದೆ.

  2020; ಕೊರೊನಾ ವರ್ಷದಲ್ಲೂ ಗಮನ ಸೆಳೆದ ಕನ್ನಡದ ಸಿನಿಮಾಗಳಿವು2020; ಕೊರೊನಾ ವರ್ಷದಲ್ಲೂ ಗಮನ ಸೆಳೆದ ಕನ್ನಡದ ಸಿನಿಮಾಗಳಿವು

  ರಾಜೀವ ಐಎಎಸ್ ಮೊದಲ ಸಿನಿಮಾ

  ರಾಜೀವ ಐಎಎಸ್ ಮೊದಲ ಸಿನಿಮಾ

  2020ರ ಮೊದಲ ಸಿನಿಮಾ ರಾಜೀವ ಐಎಎಸ್. ಜನವರಿ 3 ರಂದು ಮೂರು ಕನ್ನಡ ಸಿನಿಮಾಗಳು ಬಿಡುಗಡೆಯಾಗಿದ್ದವು. ರಾಜೀವ ಐಎಎಸ್, ವೇಷಧಾರಿ, ಗುಡಮನ ಅವಾಂತರ ಸಿನಿಮಾಗಳು ತೆರೆಕಂಡಿದ್ದವು. ರಾಜೀವ ಐಎಎಸ್ ಚಿತ್ರದಲ್ಲಿ ಮಯೂರ್ ಪಾಟೀಲ್ ನಾಯಕನಟರಾಗಿದ್ದರು.

  ವರ್ಷದಲ್ಲಿ ಗಮನ ಸೆಳೆದ ಚಿತ್ರಗಳು

  ವರ್ಷದಲ್ಲಿ ಗಮನ ಸೆಳೆದ ಚಿತ್ರಗಳು

  ಇಂಡಿಯಾ vs ಇಂಗ್ಲೆಂಡ್, ಖಾಕಿ, ಕಾಣದಂತೆ ಮಾಯವಾದನು, ಮಾಲ್ಗುಡಿ ಡೇಸ್, ಲವ್ ಮಾಕ್ಟಲ್, ಜಂಟಲ್ ಮನ್, ದಿಯಾ, ಮಾಯಾ ಬಜಾರ್, ಪಾಪ್‌ಕಾರ್ನ್ ಮಂಕಿ ಟೈಗರ್, ಶಿವಾಜಿ ಸುರತ್ಕಲ್, ಫ್ರೆಂಚ್ ಬಿರಿಯಾನಿ, ಆಕ್ಟ್ 1978, ಅರಿಷಡ್ವರ್ಗ ಸೇರಿದಂತೆ ಹಲವು ಚಿತ್ರಗಳು ಈ ವರ್ಷ ಗಮನ ಸೆಳೆದವು.

  2020: ಒಟಿಟಿಯಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದ ಭಾರತದ 'ಟಾಪ್ 10' ಸಿನಿಮಾಗಳಿವು2020: ಒಟಿಟಿಯಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದ ಭಾರತದ 'ಟಾಪ್ 10' ಸಿನಿಮಾಗಳಿವು

  ಒಟಿಟಿಯಲ್ಲಿ ತೆರೆಕಂಡ ಚಿತ್ರಗಳು

  ಒಟಿಟಿಯಲ್ಲಿ ತೆರೆಕಂಡ ಚಿತ್ರಗಳು

  ಅಂದ್ಹಾಗೆ, ಈ ವರ್ಷ ಕೆಲವು ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದ್ರನ್ ನಟನೆಯ 'ಲಾ', ದ್ಯಾನಿಶ್ ಸೇಠ್ ಅಭಿನಯದ ಫ್ರೆಂಚ್ ಬಿರಿಯಾನಿ, ಭೀಮಸೇನ ನಳಮಹಾರಾಜ ಸಿನಿಮಾಗಳು ಆನ್‌ಲೈನ್‌ನಲ್ಲಿ ಪ್ರದರ್ಶನ ಕಂಡಿತ್ತು.

  English summary
  Best of 2020: First released and last released kannada movie In 2020.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X