For Quick Alerts
  ALLOW NOTIFICATIONS  
  For Daily Alerts

  ಜೇಮ್ಸ್ ಬಾಂಡ್ ಜೊತೆ ನಟಿಸಿದ್ದ ಕಿರಣ್ ಬೇಡಿ ಸ್ಯಾಂಡಲ್‌ವುಡ್ ಎಂಟ್ರಿ!

  |

  ಒಂದು ಕಾಲದಲ್ಲಿ ಬಾಲಿವುಡ್‌ನ ಹ್ಯಾಂಡ್ಸಮ್ ಹೀರೊ ಲಿಸ್ಟ್‌ನಲ್ಲಿ ಇದ್ದವರು ಕಿರಣ್ ಬೇಡಿ. ಈಗಲೂ ಈ ನಟಿನಿಗೆ ಬೇಡಿಕೆ ಏನೂ ಕಮ್ಮಿಯಾಗಿಲ್ಲ. ಬಾಲಿವುಡ್ ಅಷ್ಟೇ ಅಲ್ಲ ಹಾಲಿವುಡ್‌ ದಿಗ್ಗಜರೊಂದಿಗೆ ನಟಿಸಿರೋ ಕಿರಣ್ ಬೇಡಿ ಈಗ ಕನ್ನಡಕ್ಕೂ ಎಂಟ್ರಿ ಕೊಡುತ್ತಿದ್ದಾರೆ.

  ಕಿರಣ್ ಬೇಡಿ ಈಗಾಗಲೇ ಹಾಲಿವುಡ್‌ನ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಜೇಮ್ಸ್ ಬಾಂಡ್' ಸಿನಿಮಾದಲ್ಲೂ ಕಾಣಿಸಿಕೊಂಡಿದ್ದರು. ಮೈಕಲ್ ಕೇನ್ ಅಂತ ದಿಗ್ಗಜರೊಂದಿಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದರು. ಅದೇ ನಟ ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  ಬಿ. ಸರೋಜಾ ದೇವಿ, ಭಾರತಿ ವಿಷ್ಣುವರ್ಧನ್‌ಗೆ ದಾದಾ ಸಾಹೇಬ್ ಫಾಲ್ಕೆ ಯಾಕಿಲ್ಲ? ರಾಜೇಂದ್ರ ಸಿಂಗ್ ಬಾಬು ಆಕ್ರೋಶ!ಬಿ. ಸರೋಜಾ ದೇವಿ, ಭಾರತಿ ವಿಷ್ಣುವರ್ಧನ್‌ಗೆ ದಾದಾ ಸಾಹೇಬ್ ಫಾಲ್ಕೆ ಯಾಕಿಲ್ಲ? ರಾಜೇಂದ್ರ ಸಿಂಗ್ ಬಾಬು ಆಕ್ರೋಶ!

  ಅಂದ್ಹಾಗೆ ಕಿರಣ್ ಬೇಡಿ ಎರಡು ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ನಿರ್ಮಾಪಕ ತ್ರಿವಿಕ್ರಮ ಸಪಲ್ಯ ನಿರ್ಮಿಸುತ್ತಿರುವ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದರಲ್ಲೊಂದು ಸಿನಿಮಾ 'ಹಂಟರ್'. ವಿನಯ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.

  ಅಂದ್ಹಾಗೆ 'ಹಂಟರ್' ಪ್ಯಾನ್ ಇಂಡಿಯಾ ಶೈಲಿಯ ಸಿನಿಮಾ. ಇದರಲ್ಲಿ ನಿರಂಜನ್ ಮತ್ತು ಸೌಮ್ಯ ಮೆನನ್ ನಾಯಕ-ನಾಯಕಿಯರಾಗಿದ್ದು, ಪ್ರಕಾಶ್ ರಾಜ್, ನಾಝರ್ ಮತ್ತು ಸುಮನ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ..

  'ಉಳಿದವರು ಕಂಡಂತೆ' ಮುನ್ನ ರೋಲ್ ರಿಷಬ್‌ ಕೈ ತಪ್ಪಿ ಕಿಶೋರ್‌ಗೆ ಹೋಗಿದ್ದೇಗೆ?'ಉಳಿದವರು ಕಂಡಂತೆ' ಮುನ್ನ ರೋಲ್ ರಿಷಬ್‌ ಕೈ ತಪ್ಪಿ ಕಿಶೋರ್‌ಗೆ ಹೋಗಿದ್ದೇಗೆ?

  ಇತ್ತೀಚೆಗೆ 'ಸಂದೋಕನ್' ಅನ್ನೋ ಟಿವಿ ಸೀರಿಸ್ ಯುರೋಪ್‌ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು. ಈ ಸೀರಿಸ್‌ನಲ್ಲಿ ಕಿರಣ್ ಬೇಡಿ ನಟಿಸಿದ್ದರು. ಇವರ ನಟನೆಯನ್ನು ಮೆಚ್ಚಿ ಯುರೋಪಿನ ಜನರು ಹೊಗಳಿ ಕೊಂಡಾಡಿದ್ದರು. ಇದೇ ವೇಳೆ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಇಟೆಲಿಯ ವೆನಿಸ್‌ನಲ್ಲಿ ಇವರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈ ಪ್ರಶಸ್ತಿ ಬಳಿಕ ಇದೇ ಮೊದಲ ಬಾರಿಗೆ ಸಿನಿಮಾವೊಂದರಲ್ಲಿ ನಟಿಸುತ್ತಿತ್ತಾರೆ. ಅದೂ ನಮ್ಮ ಕನ್ನಡ ಭಾಷೆಯ ಚಿತ್ರ ಅನ್ನೋ ಖುಷಿ ವಿಷಯ.

  First Time Bollywood Senior Actor Kiran Bedi Acting in Kannada Movie Hunter

  'ಹಂಟರ್' ಅಷ್ಟೇ ಅಲ್ಲದೆ ಕಬೀರ್ ಬೇಡಿ ತ್ರಿವಿಕ್ರಮ ಸಾಪಲ್ಯ ನಿರ್ಮಾಣದ ಮತ್ತೊಂದು ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಅಕ್ಟೋಬರ್ 7 ರಿಂದ ಚಿತ್ರೀಕರಣ ಆರಂಭಗೊಳ್ಳಲಿದ್ದು, ಸುಮಾರು 800 ವರ್ಷಗಳ ಹಿಂದಿನ ಕಥೆಯನ್ನು ಆಧರಿಸಿದ ಪಿರಿಯಾಡಿಕ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಬೆಂಗಾಲಿ ನಟ ಸೌಮಿಕ್ ಚಟರ್ಜಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕನ್ನಡದ ಖ್ಯಾತ ಹಿರಿಯ ನಟಿಯರಾದ ಶ್ರುತಿ ಹಾಗೂ ಭವ್ಯ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ತ್ರಿವಿಕ್ರಮ್ ಈ ಎರಡು ಸಿನಿಮಾಗಳನ್ನು ಜಂಟಿಯಾಗಿ ಚಿತ್ರೀಕರಿಸುತ್ತಿದ್ದಾರೆ. ಈ ಎರಡೂ ಸಿನಿಮಾದಲ್ಲೂ ಕಬೀರ್ ಬೇಡಿಯಂತಹ ಹೆಸರಾಂತ ನಟನನ್ನು ಕರೆದುಕೊಂಡು ಬರುತ್ತಿದ್ದಾರೆ. ಇದು ಚಿತ್ರರಂಗದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದೆ.

  English summary
  First Time Bollywood Senior Actor Kiran Bedi Acting in Kannada Movie Hunter, Know More.
  Wednesday, September 28, 2022, 22:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X