For Quick Alerts
  ALLOW NOTIFICATIONS  
  For Daily Alerts

  ರಜನಿ ಮೊದಲ ಟ್ವೀಟ್ ಓದಿ, ಹಿಂಬಾಲಕರನ್ನು ಊಹಿಸಿ!

  By ಜೇಮ್ಸ್ ಮಾರ್ಟಿನ್
  |

  ಸೂಪರ್ ಸ್ಟಾರ್ ರಜನಿಕಾಂತ್ ಮೊದಲ ಬಾರಿಗೆ ಟ್ವೀಟ್ ಮಾಡಿದ್ದಾರೆ. ಮಂಡ್ಯದಲ್ಲಿ ಹೊಸ ಚಿತ್ರ ಲಿಂಗಾ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ರಜನಿಕಾಂತ್ ಅವರು ಸಾಮಾಜಿಕ ಜಾಲ ತಾಣಕ್ಕೆ ಲೇಟ್ ಆಗಿ ಕಾಲಿಟ್ಟರೂ ಲೇಟೆಸ್ಟ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಒಂದೇ ಒಂದು ಟ್ವೀಟ್ ಮಾಡದೆ ಲಕ್ಷಾಂತರ ಹಿಂಬಾಲಕರನ್ನು ಗಳಿಸಿ ಹೊಸ ದಾಖಲೆ ಬರೆದಿದ್ದ ಸೂಪರ್ ಸ್ಟಾರ್ ಕೊನೆಗೂ ಟ್ವೀಟ್ ಮಾಡಿದ್ದಾರೆ.

  ಟ್ವೀಟರ್ ಸೇರಿದ ಒಂದು ಗಂಟೆಯಲ್ಲೇ 50 ಸಾವಿರ ಹಿಂಬಾಲಕರನ್ನು ಪಡೆದ ರಜನಿಕಾಂತ್ ಅವರು ಮೊದಲಿಗೆ ಯಾರನ್ನು ಹಿಂಬಾಲಿಸುತ್ತಾರೆ ಎಂಬ ಕುತೂಹಲ ಇದ್ದೇ ಇದೆ.

  <blockquote class="twitter-tweet blockquote" lang="en"><p>Salutation to the Lord. Vaṇakkam aṉaivarukkum !! A big thank you to all my fans. Excited on this digital journey <a href="http://t.co/79ea6MrDe3">http://t.co/79ea6MrDe3</a></p>— Rajinikanth (@superstarrajini) <a href="https://twitter.com/superstarrajini/statuses/463263835227684864">May 5, 2014</a></blockquote> <script async src="//platform.twitter.com/widgets.js" charset="utf-8"></script>

  ದೇವರಿಗೆ, ಅಭಿಮಾನಿಗಳಿಗೆ ನನ್ನ ನಮನ, ಈ ಡಿಜಿಟಲ್ ಪ್ರಯಾಣದಿಂದ ಥ್ರಿಲ್ ಆಗಿದ್ದೇನೆ ಎಂಬರ್ಥದಲ್ಲಿ ಟ್ವೀಟ್ ಮಾಡಿರುವ ರಜನಿಕಾಂತ್ ಅವರನ್ನು ಎಲ್ಲಾ ಸ್ತರದ ಜನತೆ ಸ್ವಾಗತಿಸಿದ್ದಾರೆ. ಗಾಯಕ ಸೋನು ನಿಗಮ್ ಅವರು ರಜನಿಗೆ ಸ್ವಾಗತ ಕೋರಿ ಮಾಡಿರುವ ಟ್ವೀಟ್ ಪೋಸ್ಟ್ ಸಾವಿರಾರು ಬಾರಿ ರೀಟ್ವೀಟ್ ಆಗಿದೆ. ರಜನಿಕಾಂತ್ ಅವರ ಟ್ಟೀಟ್ ಲೋಕದ ಎಂಟ್ರಿ ಹಾಗೂ ಅವರು ಯಾರನ್ನು ಮೊದಲಿಗೆ ಹಿಂಬಾಲಿಸಬಹುದು ಎಂಬ ಕುತೂಹಲ ಉಳಿದಿದ್ದು, ಈ ಬಗ್ಗೆ ಮುಂದೆ ಓದಿ..

  ಆದರೆ, ರಜನಿ ಅಸಲಿಗೆ ಟ್ವೀಟ್ ಲೋಕಕ್ಕೆ ಎಂಟ್ರಿ ಕೊಟ್ಟೇ ಇಲ್ಲ. ರಜನಿ ಚಿತ್ರ ಪ್ರಚಾರಕ್ಕಾಗಿ ಫ್ಲೂಯೆನ್ಸ್ ಕಂಪನಿ ಅವರ ಹೆಸರಿನ ಖಾತೆ ನಿರ್ವಹಿಸುತ್ತಿದೆ ಎಂಬ ಕಥೆ ಇದೆ.. ಈ ಬಗ್ಗೆ ವಿವರಲ್ಲಿದೆ.

  ರಜನಿಕಾಂತ್ ಮೊದಲ ಟ್ವೀಟ್ ನಲ್ಲೇನಿದೆ?

  ರಜನಿಕಾಂತ್ ಮೊದಲ ಟ್ವೀಟ್ ನಲ್ಲೇನಿದೆ?

  ಸೂಪರ್ ಸ್ಟಾರ್ ರಜನಿ ಮೊದಲ ಟ್ವೀಟ್ ನಲ್ಲಿ ದೇವರು, ಅಭಿಮಾನಿಗಳಿಗೆ ಅಭಿನಂದನೆ ಜತೆಗೆ ಫ್ಲೂಯೆನ್ಸ್ ಸಂಸ್ಥೆ ಸಾದಾರ ಪಡಿಸುವ ವಿಡೀಯೋ ತುಣುಕು ಇದೆ. ಇದರಲ್ಲಿ ರಜನಿ ಅವರು ಸಾಮಾಜಿಕ ಜಾಲ ತಾಣಗಳ ಮೂಲಕ ಅಭಿಮಾನಿಗಳನ್ನು ಸಂಪರ್ಕಿಸುತ್ತಿರುವುದಕ್ಕೆ ಸಂತಸವಾಗುತ್ತಿದೆ ಎಂದಿದ್ದಾರೆ.

  ಯಾರನ್ನು ರಜನಿ ಮೊದಲು ಹಿಂಬಾಲಿಸಬಹುದು?

  ಯಾರನ್ನು ರಜನಿ ಮೊದಲು ಹಿಂಬಾಲಿಸಬಹುದು?

  ಮೊದಲಿಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ(@narendramodi) ಅವರನ್ನು ರಜನಿ ಹಿಂಬಾಲಿಸಬಹುದು. ಇತ್ತೀಚೆಗೆ ಚೆನ್ನೈನಲ್ಲಿ ರಜನಿ ಅವರನ್ನು ಮೋದಿ ಭೇಟಿ ಮಾಡಿದ್ದು ದೊಡ್ದ ಸಂಚಲನ ಸೃಷ್ಟಿಸಿತ್ತು. ಟ್ವೀಟ್ ಲೋಕಕ್ಕೆ ರಜನಿ ಎಂಟ್ರಿಯನ್ನು ಮೋದಿ ಕೂಡಾ ಸ್ವಾಗತಿಸಿ ಟ್ವೀಟ್ ಮಾಡಿದ್ದಾರೆ

  ರಜನಿ ಸ್ವಾಗತಿಸಿದ ನರೇಂದ್ರ ಮೋದಿ

  ರಜನಿ ಸ್ವಾಗತಿಸಿದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಚೆನ್ನೈನಲ್ಲಿ ಭೇಟಿ ಸಂದರ್ಭದ ಚಿತ್ರವನ್ನು ಮತ್ತೊಮ್ಮೆ ಪೋಸ್ಟ್ ಮಾಡಿದ್ದಾರೆ. ರಜನಿ ಅವರನ್ನು ಹಿಂಬಾಲಿಸುತ್ತಿದ್ದೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

  ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್

  ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್

  ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್ ಅವರು ಟ್ವಿಟ್ಟರ್ ನಲ್ಲಿ ಸಕ್ರಿಯವಾಗಿದ್ದು, ರಜನಿಕಾಂತ್ ಅವರ ದೀರ್ಘಕಾಲಿಕ ಗೆಳೆಯರಾಗಿ ಗುರುತಿಸಿಕೊಂಡಿದ್ದಾರೆ. ಬಿಗ್ ಬಿ ಅಮಿತಾಬ್(@SrBachchan) ಗೆ ರಜನಿ ಮೊದಲ ಹಿಂಬಾಲಕರಾಗುವ ಅದೃಷ್ಟ ಸಿಗುವುದೆ ಕಾದು ನೋಡಬೇಕಿದೆ.

  ಕಿಂಗ್ ಖಾನ್ ಶಾರುಖ್ ಗೆ ಅದೃಷ್ಟವಿದೆಯೆ?

  ಕಿಂಗ್ ಖಾನ್ ಶಾರುಖ್ ಗೆ ಅದೃಷ್ಟವಿದೆಯೆ?

  ನರೇಂದ್ರ ಮೋದಿ, ಅಮಿತಾಬ್ ಬಚ್ಚನ್ ಅವರಿಗೆ ಸಿಗದ ಅದೃಷ್ಟ ಕಿಂಗ್ ಖಾನ್ ಶಾರುಖ್ ಗೆ ಸಿಗುತ್ತದೆಯೇ? ಗೊತ್ತಿಲ್ಲ, ಶಾರುಖ್(@iamsrk) ಕೂಡಾ ಇನ್ನೂ ಸೂಪರ್ ಸ್ಟಾರ್ ರಜನಿ ಫಾಲೋ ಮಾಡುತ್ತಿಲ್ಲ.

  ಹಿರಿಯ ರಾಜಕಾರಣಿ ಎಂ ಕರುಣಾನಿಧಿ?

  ಹಿರಿಯ ರಾಜಕಾರಣಿ ಎಂ ಕರುಣಾನಿಧಿ?

  ಒಂದು ಕಾಲದ ಚಿತ್ರರಂಗದ ಹಿರಿಯ ಸಾಹಿತಿ, ಡಿಎಂಕೆ ಪಕ್ಷದ ಹಿರಿಯ ಮುಖಂಡ, ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರನ್ನು ಫಾಲೋ ಮಾಡುವ ಮೂಲಕ ರಜನಿ ಅವರು ರಾಜಕೀಯ ಲೆಕ್ಕಾಚಾರ ಉಲ್ಟಾ ಪಲ್ಟಾ ಮಾಡುತ್ತಾರಾ?

  ಹಿರಿಯ ಪುತ್ರಿ ಸೌಂದರ್ಯ ಅಶ್ವಿನ್

  ಹಿರಿಯ ಪುತ್ರಿ ಸೌಂದರ್ಯ ಅಶ್ವಿನ್

  ರಜನಿ ಕಾಂತ್ ಅವರನ್ನು ಟ್ವಿಟ್ಟರ್ ಲೋಕಕ್ಕೆ ಪರಿಚಯಿಸಿದ್ದ ಕೀರ್ತಿ ಅವರ ಮಗಳು ಸೌಂದರ್ಯ ಅಶ್ವಿನ್(@sound_a_rajini) ಗೆ ಸಲ್ಲಬೇಕಾಗುತ್ತದೆ. ಕೊಚಾಡಿಯನ್ ಚಿತ್ರದ ಪ್ರಚಾರಕ್ಕೆ ಟ್ವಿಟ್ಟರ್ ಬಳಕೆ ಮಾಡುವುದಾಗಿ ರಜನಿ ಕೂಡಾ ಹೇಳಿದ್ದಾರೆ. ಕೊಚಾಡಿಯನ್ ಚಿತ್ರದ ಮೊದಲ ಲುಕ್, ಪೋಸ್ಟರ್, ಟೀಸರ್, ಪ್ರೊಮೊಗಳೆಲ್ಲ ಟ್ವಿಟ್ಟರ್ ಮೂಲಕವೇ ಅನಾವರಣಗೊಂಡಿದ್ದ್ದು ಅಭಿಮಾನಿಗಳಿಗೆ ಗೊತ್ತಿದೆ. ಹೀಗಾಗಿ ಮಗಳನ್ನು ಮೊದಲು ರಜನಿ ಫಾಲೋ ಮಾಡುತ್ತಾರಾ?

  ಅಳಿಯ ನಟ, ಧನುಷ್ ಫಾಲೋ ಮಾಡ್ತಾರಾ?

  ಅಳಿಯ ನಟ, ಧನುಷ್ ಫಾಲೋ ಮಾಡ್ತಾರಾ?

  ನಟ, ಅಳಿಯ ಧನುಷ್(@dhanushkraja) ಅವರ ಬಗ್ಗೆ ರಜನಿಕಾಂತ್ ಗೆ ಹೆಮ್ಮೆ ಯಿದೆ, ಕಿರಿಯ ನಟನನ್ನು ಫಾಲೋ ಮಾಡುವ ಮೂಲಕ ರಜನಿ ಹೊಸ ದಿಕ್ಕು ತೋರಿಸುತ್ತಾರಾ?

  ಟ್ವಿಟ್ಟರ್ ರಜನಿಕಾಂತ್ ಫಾಲೋ ಮಾಡುತ್ತಿದೆ

  ಟ್ವಿಟ್ಟರ್ ರಜನಿಕಾಂತ್ ಫಾಲೋ ಮಾಡುತ್ತಿದೆ

  ಟ್ವಿಟ್ಟರ್ ರಜನಿಕಾಂತ್ ಫಾಲೋ ಮಾಡುತ್ತಿದೆ ಎಂದು ಪೋಸ್ಟ್ ಹಾಕಿರುವ ರಜನಿಕಾಂತ್ ಫ್ಯಾನ್ ಕ್ಲಬ್ (@RajnikanthJokes) ಗೆ ಅದೃಷ್ಟ ಒಲಿಯುವುದೇ? ಸ್ಟಾರ್ ಗಳು, ಸಂಬಂಧಗಳಿಗಿಂತ ಅಭಿಮಾನಿಗಳು ಮುಖ್ಯ ಎಂದು ರಜನಿ ಅಭಿಮಾನಿಗಳ ಅಥವಾ ಜನ ಸಾಮಾನ್ಯರೊಬ್ಬರನ್ನು ಹಿಂಬಾಲಿಸುತ್ತಾರೆಯೆ? ಕಾದು ನೋಡೋಣ.

  English summary
  Superstar Rajinikanth has joined Twitter. Here is the first tweet from Superstar Rajinikanth. The actor is currently shooting in Mandya for his new film Lingaa. Even before he posted in first and the only tweet (till now) Rajinikanth managed 202K followers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X