For Quick Alerts
  ALLOW NOTIFICATIONS  
  For Daily Alerts

  ಐವರು ನಿರ್ದೇಶಕರ ಒಂದು ಸಿನಿಮಾ 'ಆದ್ದರಿಂದ'

  |

  ಒಟಿಟಿ ಸಮಯದಲ್ಲಿ ಅಂಥಾಲಜಿ ಸಿನಿಮಾಗಳು ಜನಪ್ರಿಯಗೊಳ್ಳುತ್ತಿವೆ. ಯಾವುದಾದರೂ ಒಂದು ವಿಷಯ ಆಧರಿಸಿ ಕೆಲವು ನಿರ್ದೇಶಕರು ಸೇರಿ ಅರ್ಧ ಗಂಟೆಯ ಸಿನಿಮಾ ಮಾಡುತ್ತಾರೆ. ಅದನ್ನು ಒಂದರಹಿಂದೊಂದರಂತೆ ಜೋಡಿಸಿ 2 ಅಥವಾ ಮೂರು ಗಂಟೆಯ ಸಿನಿಮಾ ರೀತಿಯಲ್ಲಿ ಬಿಡುಗಡೆ ಮಾಡಲಾಗುತ್ತದೆ.

  ಕನ್ನಡದಲ್ಲಿಯೂ ಈ ರೀತಿಯ ಪ್ರಯತ್ನಗಳು ಈಗಾಗಲೇ ಆಗಿವೆ. ಇದೀಗ ಇಂಥಹುದೇ ಮತ್ತೊಂದು ಪ್ರಯತ್ನ ಸದ್ದಿಲ್ಲದೆ ನಡೆಯುತ್ತಿದೆ. ಅದುವೇ 'ಆದ್ದರಿಂದ'.

  ಐದು ಜನ ಕನ್ನಡದ ಪ್ರತಿಭಾವಂತ ಸಿನಿಮಾ ನಿರ್ದೇಶಕರು ಒಟ್ಟಾಗಿ ಸಿನಿಮಾ ನಿರ್ದೇಶಕನ ಮಾಡುತ್ತಿದ್ದು ಸಿನಿಮಾಕ್ಕೆ 'ಆದ್ದರಿಂದ' ಎಂದು ಹೆಸರಿಡಲಾಗಿದೆ. ಯೋಗರಾಜ ಭಟ್, ಪವನ್ ಕುಮಾರ್, ಶಶಾಂಕ್, ಕೆ.ಎಂ.ಚೈತನ್ಯ, ಜಯತೀರ್ಥ ಅವರುಗಳು 'ಆದ್ದರಿಂದ' ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

  ಈಗಾಲಗೇ ನಿರ್ದೇಶಕ ಶಶಾಂಕ್, ಜಯತೀರ್ಥ, ಚೈತನ್ಯ, ಯೋಗರಾಜ್ ಭಟ್ ಅವರುಗಳು ತಮ್ಮ ಸಿನಿಮಾಗಳನ್ನು ಮುಗಿಸಿದ್ದಾರೆ. ಈ ನಾಲ್ಕು ಕತೆಗಳಿಗೆ ಹೊಂದಾಣಿಕೆ ಆಗುವಂಥಹಾ ಕತೆ ಹೆಣೆದು ಪವನ್ ಕುಮಾರ್ ತಮ್ಮ ಸಿನಿಮಾ ಮಾಡಲಿದ್ದಾರೆ. ಕೊನೆಗೆ ಐವರ ಸಿನಿಮಾವನ್ನು ಒಟ್ಟಿಗೆ ತೆರೆಗೆ ತರಲಾಗುತ್ತದೆ.

  ಯೋಗರಾಜ್ ಭಟ್ ಅವರು ಇತ್ತೀಚೆಗಷ್ಟೆ ತಮ್ಮ ಸಿನಿಮಾದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಯೋಗರಾಜ್ ಭಟ್ಟರ ಸಿನಿಮಾದಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇಗೌಡ ಮತ್ತು ದಿವ್ಯಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚೈತನ್ಯ ನಿರ್ದೇಶಿಸಿರುವ ಸಿನಿಮಾದಲ್ಲಿ 'ಆಪರೇಷನ್ ಅಲಮೇಲಮ್ಮ' ಖ್ಯಾತಿಯ ರಿಷಿ, ವಂಶೀಧರ್, ಜೊತೆಗೆ ಹೊಸಬರಾದ ಪುನೀತ್, ಧನರಾಜ್ ಇನ್ನೂ ಕೆಲವರು ಇದ್ದಾರೆ.

  Five Directors Directing Anthology Movie Addarinda

  ಎಲ್ಲ ಕತೆಗಳಿಗೂ ಒಂದು ಕಾರಣವಿರುತ್ತದೆ ಹಾಗಾಗಿ ನಮ್ಮೆಲ್ಲರ ಸಿನಿಮಾಕ್ಕೆ 'ಆದ್ದರಿಂದ' ಹೆಸರು ಚೆನ್ನಾಗಿ ಒಪ್ಪಿದ ಕಾರಣದಿಂದ ಸಿನಿಮಾಕ್ಕೆ ಇದೇ ಹೆಸರಿರಲಿ ಎಂದು ಎಲ್ಲರೂ ಒಪ್ಪಿಕೊಂಡೆವು ಎಂದಿದ್ದಾರೆ ಜಯತೀರ್ಥ.

  ಸಿನಿಮಾವು ಎಫ್‌ಯುಸಿ ವೆಬ್‌ಸೈಟ್‌ನಲ್ಲಿ ಬಿಡುಗಡೆ ಆಗುತ್ತದೆಯೋ ಅಥವಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತದೆಯೋ ಕಾದು ನೋಡಬೇಕಿದೆ.

  English summary
  Five Kannada directors directing anthology movie 'Addarinda'. Yogaraja Bhat, Pawan Kumar, Jayatheertha, Chaithanya directing this movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X