»   » ಬ್ಯಾಕ್ ಟು ಬ್ಯಾಕ್ ಹಿಟ್ ನೀಡಲು ರವಿಮಾಮ ಸಜ್ಜು

ಬ್ಯಾಕ್ ಟು ಬ್ಯಾಕ್ ಹಿಟ್ ನೀಡಲು ರವಿಮಾಮ ಸಜ್ಜು

Posted By:
Subscribe to Filmibeat Kannada

ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ಹೊಸ ಸಿನಿಮಾಗಳು ಯಾವುದು ಬಿಡುಗಡೆ ಆಗಿಲ್ಲ. ರವಿಮಾಮ ಅಭಿನಯ ಮಾಡುವುದಕ್ಕಿಂತಲೂ ನಿರ್ದೇಶನ ಮಾಡಿದ ಚಿತ್ರವನ್ನ ನೋಡಲು ಅಭಿಮಾನಿಗಳು ಕಾತುರದಿಂದ ಕಾದಿರುತ್ತಾರೆ. ಕಿಚ್ಚನ ಜೊತೆ ಹೆಬ್ಬುಲಿ ಸಿನಿಮಾದಲ್ಲಿ ಕಾಣಿಸಿಕೊಂಡ ನಂತರ ರವಿಚಂದ್ರನ್ ಅಭಿನಯದ ಯಾವುದೇ ಸಿನಿಮಾ ಬಿಡುಗಡೆ ಆಗಿಲ್ಲ.

ಆದರೆ ಈ ವರ್ಷದ ಅಂತ್ಯಕ್ಕೆ ಕ್ರೇಜಿ ಸ್ಟಾರ್ ಅಭಿನಯದ ಐದು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗಲು ತಯಾರಾಗಿವೆ. ರವಿಚಂದ್ರನ್ ಸಿನಿಮಾನೇ ಮಾಡಿಲ್ಲ ಅಂತ ಯೋಚನೆ ಮಾಡುತ್ತಿದ್ದ ಅಭಿಮಾನಿಗಳಿಗೆ ಈ ಮೂಲಕ ಸಂತಸ ಸಿಗಲಿದೆ. ಈಗಾಗಲೇ ಚಿತ್ರೀಕರಣ ಮಾಡಿ ಮುಗಿಸಿರುವ ರವಿಚಂದ್ರನ್ ಅವರ ಎರಡು ಸಿನಿಮಾಗಳು ತೆರೆಗೆ ಬರಲು ಸಿದ್ದವಾಗಿದೆ.

Five films of Ravichandran will be releasing this year

'ಕುರುಕ್ಷೇತ್ರ'ದಿಂದ ಹೊರಬಿದ್ದಿರುವ ಎಕ್ಸ್ ಕ್ಲೂಸಿವ್ ಫೋಟೋ ಇದು!

ನವನೀತ್ ನಿರ್ದೇಶನದ ಬಕಾಸುರ ಸಿನಿಮಾದಲ್ಲಿ ರವಿಚಂದ್ರನ್ ವಿಶೇಷವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನವ ನಿರ್ದೇಶಕ ವಿನಯ್ ಕೃಷ್ಣ ನಿರ್ದೇಶನದ ಸೀಜರ್ ಚಿತ್ರದಲ್ಲಿಯೂ ಕ್ರೇಜಿಸ್ಟಾರ್ ಆಕ್ಟ್ ಮಾಡಿದ್ದು ಎರಡು ಸಿನಿಮಾಗಳ ಚಿತ್ರೀಕರಣ ಮುಗಿದು ತೆರೆಗೆ ಬರಲು ಸಿದ್ದವಾಗಿದೆ.

ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗಿನ 'ಕುರುಕ್ಷೇತ್ರ' ಹಾಗೂ ರವಿಚಂದ್ರನ್ ಅವರೇ ನಿರ್ದೇಶನ ಮಾಡುತ್ತಿರುವ 'ರಾಜೇಂದ್ರ ಪೊನ್ನಪ್ಪ' ಸಿನಿಮಾ ಕೂಡ ಆದಷ್ಟು ಬೇಗ ಬಿಡುಗಡೆ ಆಗಲಿದೆ. ಇವುಗಳ ಜೊತೆಯಲ್ಲಿ 'ದಶರಥ' ಸಿನಿಮಾ ಕೂಡ ವರ್ಷದ ಅಂತ್ಯಕ್ಕೆ ಬಿಡುಗಡೆ ಆಗುವ ಸಾಧ್ಯತೆಗಳು ಹೆಚ್ಚಾಗಿವೆ. ಒಟ್ಟಾರೆ ಈ ವರ್ಷ ಕ್ರೇಜಿಸ್ಟಾರ್ ಅಭಿಮಾನಿಗಳಿಗಂತು ಬ್ಯಾಕ್ ಟು ಬ್ಯಾಕ್ ಸಿನಿಮಾ ನೋಡಿ ಎಂಜಾಯ್ ಮಾಡುವ ಚಾನ್ಸ್ ಹೆಚ್ಚಾಗಿದೆ.

'ಕುರುಕ್ಷೇತ್ರ' ಬಗ್ಗೆ ಕಾಡುತ್ತಿರುವ ಮಿಲಿಯನ್ ಡಾಲರ್ ಪ್ರಶ್ನೆ.?

English summary
Kannada Actor Ravichandran starrer Kurukshetra, Bakasura, Seizer, Rajendra Ponnappa and Dasharatha movies are releasing this year.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X