ರಚಿತಾ ರಾಮ್ ವಾಸಿಸುವ ಅಪಾರ್ಟ್‌ಮೆಂಟ್‌ನಲ್ಲಿ ಕೆಲವರು ಹೌಸ್ ಕ್ವಾರೆಂಟೈನ್‌ನಲ್ಲಿ
ಕರ್ನಾಟಕದಾದ್ಯಂತ ಮಾರ್ಚ್ 25 ರವರೆಗೆ 51 ಕೊರೊನಾ ಪ್ರಕರಣಗಳು ಪತ್ತೆಯಾಗಿದೆ. ಬೆಂಗಳೂರು ಕೊರೊನಾ ಪ್ರಕರಣಗಳಲ್ಲೂ ರಾಜ್ಯದ ರಾಜಧಾನಿಯೇ ಆಗಿದೆ.
ಬೆಂಗಳೂರಿನಲ್ಲಿ ಮಾರ್ಚ್ 25 ರ ವರೆಗೆ 35 ಕೊರೊನಾ ಪ್ರಕರಣಗಳು ಧೃಡವಾಗಿವೆ. ಇನ್ನೂ ಶಂಕಿತ ಪ್ರಕರಣಗಳಂತೂ ಹೆಚ್ಚಿಗೇ ಇವೆ. ಸಾವಿರಾರು ಮಂದಿ ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ.
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೊರೊನಾ ಭೀತಿ ಸ್ಟಾರ್ ನಟರುಗಳಿಗೂ ಆವರಿಸಿದೆ. ರಚಿತಾ ರಾಮ್ ವಾಸವಿರುವ ಬನಶಂಕರಿಯ ಅಪಾರ್ಟ್‌ಮೆಂಟ್‌ನಲ್ಲಿ ಐವರನ್ನು ಹೋಂ ಕ್ವಾರಂಟೈನ್‌ಗೆ ಇರಿಸಲಾಗಿದೆ.

ಬನಶಂಕರಿಯ ಅಂಚೆಕಚೇರಿ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ಐದು ಮಂದಿ ವಿದೇಶದಿಂದ ಬಂದವರನ್ನು ಹೋಮ್ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು. ಆದರೆ ಅವರು ಮೈಸೂರಿಗೆ ತೆರಳಿದ್ದಾರೆ ಎನ್ನಲಾಗಿದೆ. ಅವರು ಮೈಸೂರಿನಲ್ಲಿ ಹೋಮ್ ಕ್ವಾರಂಟೈನ್‌ನಲ್ಲಿದ್ದಾರೋ ಅಥವಾ ಆಸ್ಪತ್ರೆಗೆ ದಾಖಲಾಗಿದ್ದಾರೋ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.
ಬೆಂಗಳೂರಿಗೆ ಎಷ್ಟು ಮಂದಿ ವಿದೇಶದಿಂದ ಬಂದಿದ್ದಾರೆ. ಯಾವ ದೇಶಗಳಿಂದ ಅವರು ಬಂದಿದ್ದಾರೆ ಎಂಬ ಬಗ್ಗೆ ಸರ್ಕಾರ ಮಾಹಿತಿಯನ್ನು ವೆಬ್‌ಸೈಟ್ ಗೆ ಬಿಡುಗಡೆ ಮಾಡಿದೆ.


Click it and Unblock the Notifications











