For Quick Alerts
  ALLOW NOTIFICATIONS  
  For Daily Alerts

  ನರ್ತಕಿ ಚಿತ್ರಮಂದಿರದ ಯಶ್ ಕಟೌಟ್ ಗೆ ಹೆಲಿಕಾಪ್ಟರ್ ನಿಂದ ಹೂವಿನ ಅಭಿಶೇಕ.!

  |
  KGF Kannada Movie : ನರ್ತಕಿ ಥಿಯೇಟರ್ ನಲ್ಲಿ 72 ಅಡಿ ಕಟ್ಔಟ್ ಗೆ ಹೆಲಿಕಾಪ್ಟರ್ ನಿಂದ ಪುಷ್ಪಾರ್ಚನೆ

  ಕ್ರೇಜ್ ಅಂದ್ರೆ ಇದು... ಮಾಸ್ ಮೇನಿಯಾ, ಮಾಸ್ ಹಿಸ್ಟೀರಿಯಾ ಅಂತಾರಲ್ಲ.. ಅದು ಇದಕ್ಕೆ ಇರಬೇಕು.!

  ಎರಡು ವರ್ಷಗಳಿಂದ ತೆರೆಮೇಲೆ ರಾಕಿಂಗ್ ಸ್ಟಾರ್ ಯಶ್ ರವರನ್ನ ಮಿಸ್ ಮಾಡಿಕೊಂಡಿದ್ದ ಅಭಿಮಾನಿಗಳಿಗೆ ಇಂದು ಭರ್ಜರಿ ರಸದೌತಣವೇ ಸಿಕ್ಕಿದೆ. ದೇಶದಾದ್ಯಂತ ಥಿಯೇಟರ್ ಗಳಲ್ಲಿ 'ಕೆ.ಜಿ.ಎಫ್' ರಾರಾಜಿಸುತ್ತಿದೆ. ಎಲ್ಲೆಡೆ 'ಕೆ.ಜಿ.ಎಫ್'ಗೆ ಹೌಸ್ ಫುಲ್ ಬೋರ್ಡ್ ಬಿದ್ದಿದೆ.

  ಅಬ್ಬರದಿಂದ ತೆರೆಗೆ ಬಂತು ಕೆ.ಜಿ.ಎಫ್: ಯಶ್ ಚಿತ್ರಕ್ಕೆ ಭರ್ಜರಿ ಓಪನಿಂಗ್.!

  ಇಂದು ಅಕ್ಷರಶಃ 'ಕೆ.ಜಿ.ಎಫ್' ಹಬ್ಬವಾಗಿರುವ ಕಾರಣ, ಅದರ ಸಂಭ್ರಮ ಮತ್ತು ಸಡಗರವನ್ನು ದುಪ್ಪಟ್ಟು ಮಾಡಲು ಯಶ್ ಅಭಿಮಾನಿಗಳು ಹೊಸ ಪ್ಲಾನ್ ಮಾಡಿದ್ದರು. ಆ ಪ್ಲಾನ್ ಪ್ರಕಾರ, ಇಂದು ಯಶ್ ಕಟೌಟ್ ಗೆ ಹೆಲಿಕಾಫ್ಟರ್ ನಿಂದ ಪುಷ್ಪವೃಷ್ಟಿಯಾಗಿದೆ.

  ಬೆಳ್ಳಂಬೆಳಗ್ಗೆ 'ಕೆ.ಜಿ.ಎಫ್' ವೀಕ್ಷಿಸಿದ ಅಭಿಮಾನಿಗಳಿಗೆ ಅಭಿಮಾನಿಗಳಿಂದ ಅನ್ನದಾನ.!

  ಹೌದು, ಕೆ.ಜಿ.ರೋಡ್ ನಲ್ಲಿರುವ 'ಕೆ.ಜಿ.ಎಫ್' ಚಿತ್ರದ ಮುಖ್ಯ ಚಿತ್ರಮಂದಿರವಾದ ನರ್ತಕಿಯಲ್ಲಿ 72 ಅಡಿ ಎತ್ತರದ ಯಶ್ ಕಟೌಟ್ ನಿಲ್ಲಿಸಿರುವುದು ನಿಮಗೆಲ್ಲಾ ಗೊತ್ತೇ ಇದೆ.

  'ಕೆ.ಜಿ.ಎಫ್' ಫಸ್ಟ್ ಹಾಫ್ ವಿಮರ್ಶೆ: ಇಂಟರ್ವೆಲ್ ವರೆಗೂ ಚಿಂದಿ ಗುರು.!

  ಈ ಕಟೌಟ್ ಗೆ ಇಂದು ಬೆಳಗ್ಗೆ 9.30 ರ ಸುಮಾರಿಗೆ ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘ ಮತ್ತು ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಯುವ ಅಭಿಮಾನಿಗಳ ಸಂಘದ ವತಿಯಿಂದ ಹೆಲಿಕಾಫ್ಟರ್ ಮೂಲಕ ಹೂವಿನ ಅಭಿಶೇಕ ಮಾಡಲಾಯಿತು.

  ಫಸ್ಟ್ ಶೋ ಮುಗೀತು, ಫಸ್ಟ್ ರಿವ್ಯೂ ಹೊರಬಿತ್ತು: ರಾಕಿ ಭಾಯ್ ಗೆ ಪ್ರೇಕ್ಷಕರ ಸಲಾಂ.!

  ಥಿಯೇಟರ್ ಬಳಿ ಹೆಲಿಕಾಫ್ಟರ್ ಆಗಮಿಸುತ್ತಿದ್ದಂತೆಯೇ, ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಇನ್ನೂ ಕಟೌಟ್ ಗೆ ಹೂವಿನ ಅಭಿಶೇಕ ಮಾಡುತ್ತಿರುವಾಗ ''ರಾಕಿಂಗ್ ಸ್ಟಾರ್''ಗೆ ಜಯ ಘೋಷ ಕೇಳಿಬಂತು. ಒಟ್ನಲ್ಲಿ, 'ಕೆ.ಜಿ.ಎಫ್' ಚಿತ್ರಕ್ಕೆ ಅಭಿಮಾನಿಗಳು ಮತ್ತು ಪ್ರೇಕ್ಷಕರು ಭರಪೂರ ಸ್ವಾಗತ ನೀಡಿದ್ದಾರೆ.

  English summary
  Rocking Star Yash starrer Kannada Movie KGF gets grand opening all over Karnataka. Yash cutout gets Flower Abhisheka through Helicopter in Narthaki Theatre.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X