'ಕಲಾವಿದರನ್ನು ಚಪ್ಪಾಳೆಗಾಗಿ 2 ಗಂಟೆ ಬಳಸಿ ಆನಂದಿಸಿ ಮರೆತುಬಿಡಿ'- ಜಗ್ಗೇಶ್
ಸಿನಿಮಾ ಕಲಾವಿದರನ್ನು ದೇವರ ರೀತಿ ಆರಾಧಿಸುವುದು, ಅಮ್ಮ-ಅಪ್ಪನಿಗಿಂತ ಹೆಚ್ಚು ಪ್ರೀತಿಸುವುದು ಹಾಗೂ ಅವರ ಮೇಲಿನ ಅಭಿಮಾನಕ್ಕಾಗಿ ಟ್ಯಾಟೋ ಹಾಕಿಸುವುದು, ವಾಹನಗಳ ಮೇಲೆ ಫೋಟೋ ಹೆಸರು ಹಾಕುವುದು ಮತ್ತು ಮನೆಗಳಿಗೆ ಅವರ ಹೆಸರು ಇಡುವುದು ಬಹಳ ಘಟನೆಗಳು ವರದಿಯಾಗಿದೆ.
Recommended Video
ಇನ್ನು ಕೆಲವು ತಮ್ಮ ನೆಚ್ಚಿನ ನಟರನ್ನು ಬಹಳ ಸೂಕ್ಷ್ಮವಾಗಿ ಅನುಸರಿವುದು ಕಾಣಬಹುದು. ಅವರು ಧರಿಸುವ ಬಟ್ಟೆಗಳು, ಅವರು ಬಳಸುವಂತಹ ವಾಹನಗಳು, ಚಿತ್ರಗಳಲ್ಲಿ ಅವರು ಮಾಡಿಸುವ ಹೇರ್‌ಸ್ಟೈಲ್ ಹೀಗೆ ಹಲವು ವಿಚಾರದಲ್ಲಿ ಅವರನ್ನು ಸ್ಫೂರ್ತಿಯಾಗಿರಿಸುವುದನ್ನು ನೋಡಬಹುದು.
ಇದೀಗ, ಕಲೆ-ಕಲಾವಿದರನ್ನು ಚಪ್ಪಾಳೆಗಾಗಿ 2 ಗಂಟೆ ಬಳಸಿ ಆನಂದಿಸಿ ಮರೆತುಬಿಡಿ ಎಂದು ಹಿರಿಯ ನಟ ಜಗ್ಗೇಶ್ ಹೇಳಿದ್ದಾರೆ. ಮುಂದೆ ಓದಿ...

2 ಘಂಟೆ ಬಳಸಿ ಆನಂದಿಸಿ ಮರೆತು ಬಿಡಿ
'ಸಿನಿಮಾ ನಟರನ್ನು ಅನುಸರಿಸುವುದು ಅಂದರೆ ಅವರನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳುವುದು ಸರೀನಾ..? ತಪ್ಪಾ..? ದಯವಿಟ್ಟು ಪ್ರತಿಕ್ರಿಯೆ ನೀಡಿ ತುಂಬಾನೇ ಗೊಂದಲದಲ್ಲಿ ಇದ್ದೀನಿ' ಎಂದು ವ್ಯಕ್ತಿಯೊಬ್ಬ ಟ್ವಿಟ್ಟರ್ ಮೂಲಕ ಜಗ್ಗೇಶ್ ಅವರನ್ನು ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಜಗ್ಗೇಶ್ 'ಕಲೆ-ಕಲಾವಿದರನ್ನು ಚಪ್ಪಾಳೆಗಾಗಿ 2 ಘಂಟೆ ಬಳಸಿ ಆನಂದಿಸಿ ಮರೆತುಬಿಡಿ' ಎಂದಿದ್ದಾರೆ.

ನೀವು ಅನುಸರಿಸಬೇಕಾಗಿರುವುದು ತಂದೆ-ತಾಯಿ ಶ್ರಮ
''ಸಹೋದರ ಕಲೆ ಕಲಾವಿದರ ಚಪ್ಪಾಳೆಗಾಗಿ 2 ಘಂಟೆ ಬಳಸಿ ಆನಂದಿಸಿ ಮರೆತುಬಿಡಿ! ನಿಜವಾಗಿ ನೀವು ಅನುಸರಿಸ ಬೇಕಿರುವುದು ನಿಮ್ಮ ವಂಶದ ಹಿರಿಯರ ಹಾಗು ತಂದೆ-ತಾಯಿ ಶ್ರಮವ! ನಿಮ್ಮ ಮುಂದಿನ ಬದುಕಿನ ಗೆಲುವಿಗೆ ಬೇಕಿರುವ ಜ್ಞಾನವ'' ಎಂದು ಬುದ್ದಿ ಮಾತು ಹೇಳಿದ್ದಾರೆ.

ನಿಮ್ಮ ಕಷ್ಟಕ್ಕೆ ಯಾವ ಕಲಾವಿದರು ಭುಜಕೊಡರು
''ನಿಮ್ಮ ವೈಯಕ್ತಿಕ ಕಷ್ಟಕ್ಕೆ ಯಾವ ಕಲಾವಿದರು ನನ್ನನ್ನು ಸೇರಿ ಬಂದು ಭುಜಕೊಡರು! ಕಾರಣ ಅವರವರ ಬದುಕಿನ ಮೇಲೆ ಅವರ ಗಮನವಿರುತ್ತದೆ!'' ಎಂದು ವಾಸ್ತವವನ್ನು ನೇರವಾಗಿ ಹೇಳಿದ್ದಾರೆ ಜಗ್ಗೇಶ್.

ಜಗ್ಗೇಶ್ ಹೇಳಿಕೆಗೆ ನೆಟ್ಟಿಗರು ಬೆಂಬಲ
ಜಗ್ಗೇಶ್ ಅವರ ಈ ಮಾತಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಈ ತರ ನೇರವಾಗಿ ಹೇಳೋದು ಬಹಳ ಕಡಿಮೆ. ಈ ತರಹದ ಉತ್ತರ ಬಹಳಷ್ಟು ಜನರಿಗೆ ಅರ್ಥವಾಗಲಿ' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಜಗ್ಗೇಶ್ ಅವರ ಮಾತು ಸತ್ಯ ಎಂದು ಹಲವರು ಅಭಿಪ್ರಾಯ ಹೊರಹಾಕಿದ್ದಾರೆ.


Click it and Unblock the Notifications











