ಹೇಗಿದ್ದೀಯ ಚಿನ್ನ, ಜೈಲಿಂದ ದರ್ಶನ್ ವಿಡಿಯೋ ಕಾಲ್. ಪರಪ್ಪನ ಅಗ್ರಹಾರದಲ್ಲಿ ಪೊರ್ಕಿಯ ಬಿಂದಾಸ್ ಲೈಫ್..!

By ಫಿಲ್ಮಿಬೀಟ್ ಡೆಸ್ಕ್

ಕನ್ನಡ ಚಿತ್ರರಂಗದ ಒಬ್ಬ ಸ್ಟಾರ್, ಅಸಂಖ್ಯಾತ, ಅಗಣಿತ ಅಭಿಮಾನಿಗಳನ್ನೊಂದಿರುವ ನಾಯಕ, ಜನಪ್ರಿಯತೆಯ ಅಮಲಿನಲ್ಲಿ ಮೈ ಮರೆತು ಜೈಲು ಪಾಲಾಗಿರುವುದಕ್ಕೆ ಅವರದ್ದೇ ಅದೆಷ್ಟೋ ಅಭಿಮಾನಿಗಳು ನೊಂದುಕೊಂಡಿದ್ದಾರೆ. ದರ್ಶನ್ ದರ್ಶನ ಪಡೆಯಲು ಹಾತೊರೆಯುತ್ತಿದ್ದಾರೆ.

ಇನ್ನೂ ಕೆಲವರು ದೇವರಲ್ಲಿ ಹರಕೆಯನ್ನು ಕಟ್ಟಿಕೊಂಡಿದ್ದಾರೆ. ಮತ್ತೂ ಹಲವರು ಅಭಿಮಾನದ ಹೆಸರಿನಲ್ಲಿ ವಿವೇಚನೆಯನ್ನು ಕಳೆದುಕೊಂಡು, ಮಾನವೀಯತೆಯನ್ನು ಮರೆತವರಂತೆ ವರ್ತಿಸುತ್ತಿದ್ದಾರೆ. ತಮ್ಮ ನೆಚ್ಚಿನ ನಾಯಕನಿಗೆ ಜೈಲಿನಲ್ಲಿ ನೀಡಿದ ಖೈದಿ ನಂಬರ್ 6106 ಎನ್ನುವ ನಂಬರನ್ನು ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಹಚ್ಚೆ ಹಾಕಿಸಿಕೊಳ್ಳುತ್ತಿದ್ದಾರೆ.

Following Viral Jail Photo Video Clip of Kannada Actor Darshan on a Call Emerges


ಆದರೆ, ಇದ್ಯಾವುದರ ಪರಿವೆ ಇಲ್ಲದೆ.. ದರ್ಶನ್ ತಮ್ಮ ಪಾಡಿಗೆ ತಾವು ಜೈಲಿನಲ್ಲಿ ನೆಮ್ಮದಿಯಿಂದ ಇದ್ದಾರೆ. ಸಿಗರೇಟ್ ಸೇದುತ್ತಾ ಜೈಲು ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಇಷ್ಟೇ ಅಲ್ಲ ದರ್ಶನ್ ಅವರಿಗೆ ವಿಡಿಯೋ ಕಾಲ್ ಸೌಲಭ್ಯವನ್ನು ಕೂಡ ಜೈಲಿನಲ್ಲಿ ಕಲ್ಪಿಸಲಾಗಿದೆ ಎಂದರೆ ದರ್ಶನ್ ಅವರ ಜೀವನ ಎಷ್ಟು ಹಾಯಾಗಿದೆ ಎಂದು ನೀವೆ ಊಹಿಸಿ

ಹೌದು, ಹೊರಗಿದ್ದಾಗ ಅಯ್ಯೋ ತಗಡೆ, ಪುಡಾಂಗಾ, ಎಂದೆಲ್ಲ ಮಾತನಾಡುತ್ತಾ ಓಡಾಡುತ್ತಿದ್ದ ದರ್ಶನ್, ಜೈಲಿನಲ್ಲಿ ರೌಡಿಗಳ ಜೊತೆ ಸಹವಾಸ ಮಾಡಿದ್ದಾರೆ. ವಿಲ್ಸನ್ ಗಾರ್ಡನ್ ನಾಗನ ಪಕ್ಕ ಕುಂತು ಸಿಗರೇಟ್ ಸೇದುವುದಲ್ಲದೇ ದರ್ಶನ್ ಜೈಲಿನಲ್ಲಿದ್ದುಕೊಂಡೆ ವಿಡಿಯೋ ಕಾಲ್ ಮಾಡಿದ್ದಾರೆ. ನಸು ನಗುತ್ತಾ ಕಷ್ಟ ಸುಖ ಹಂಚಿಕೊಂಡಿದ್ದಾರೆ. ಅದು ಕೂಡ ರೌಡಿಗಳ ಜೊತೆಯೇ ಅನ್ನುವುದು ಇವರ ನಿಜವಾದ ಅಭಿಮಾನಿಗಳ ದೌರ್ಭಾಗ್ಯ.

following-viral-jail-photo-video-clip-of-kannada-actor-darshan-on-a-call-emerges

ಜೈಲಿನಲ್ಲಿದ್ದುಕೊಂಡೇ ವ್ಯಕ್ತಿಯೊಬ್ಬರ ಜೊತೆ ವಿಡಿಯೋ ಕಾಲ್ ಮೂಲಕ ಮಾತನಾಡಿರುವ ದರ್ಶನ್, ಊಟ ಆಯ್ತಾ..? ನಾನು ಆರಾಮಾಗಿದ್ದೀನಿ ಎಂದೆಲ್ಲ ಮಾತನಾಡಿದ್ದಾರೆ. ಇನ್ನೂ..ಜೈಲಿನಲ್ಲಿರುವ ಬೇರೊಬ್ಬ ಖೈದಿಯ ಮೊಬೈಲ್ ಬಳಸಿ ವಿಡಿಯೋ ಕಾಲ್ ಮಾಡಿರುವ ಸಾಧ್ಯತೆ ಇದ್ದು, ಬಾಣಸವಾಡಿಯ ರೌಡಿ ಶೀಟರ್ ಕಾರ್ತಿಕೇಯ ಕೊಲೆಯ ಆರೋಪವನ್ನೊತ್ತು ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ಮಾರ್ಕೆಟ್ ಧರ್ಮ ಕೂಡ ವಿಡಿಯೋ ಕಾಲ್ ಸಮಯದಲ್ಲಿ ದರ್ಶನ್ ಜೊತೆ ಇದ್ದ ಎಂಬ ಮಾತು ಸದ್ಯಕ್ಕೆ ಕೇಳಿ ಬರುತ್ತಿದೆ.

ಇನ್ನೂ.. ಬ್ಯಾಡರಹಳ್ಳಿ ರೌಡಿಶೀಟರ್ ಜಾನಿ ಅಲಿಯಾಸ್ ಜನಾರ್ಧನ್ ಮಗ ಸತ್ಯನ ಜೊತೆ ದರ್ಶನ್ ಈ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದಾರೆ ಎಂದು ನ್ಯೂಸ್ 18 ಕನ್ನಡ ವರದಿ ಮಾಡಿದೆ. ಇತ್ತೀಚಿಗಷ್ಟೇ ಕೆ.ಎಲ್.ಇ ಕಾಲೇಜ್ ವಿದ್ಯಾರ್ಥಿಗಳಿಗೆ ಉಲ್ಟಾ ಮಚ್ಚಲ್ಲಿ ಹೊಡೆದು ಜೈಲಿಗೆ ಹೋಗಿ ಆ ನಂತರ ಜಾಮೀನು ಪಡೆದು ಸತ್ಯನ ಜೊತೆ ದರ್ಶನ್‌ಗೆ ಇರುವ ಸಂಬಂಧವೇನು ಅನ್ನುವುದು ಸದ್ಯಕ್ಕೆ ಅನೇಕರಿಗೆ ಕಾಡುತ್ತಿರುವ ಯಕ್ಷ ಪ್ರಶ್ನೆ.

following-viral-jail-photo-video-clip-of-kannada-actor-darshan-on-a-call-emerges

ಅಂದ್ಹಾಗೇ ಮಾರ್ಕೆಟ್ ಧರ್ಮ ಜೈಲಿನಲ್ಲಿದ್ದುಕೊಂಡು ಈ ಸತ್ಯಗೆ ಫೋನ್ ಮಾಡಿದ್ದ ಇದೇ ಸಮಯದಲ್ಲಿ ದರ್ಶನ್ ನಮ್ ಸೆಲ್‌ನ ಪಕ್ಕದಲ್ಲೇ ಇರೋದು ತೋರಿಸ್ತೀನಿ ಎಂದು ಹೇಳಿ, ದರ್ಶನ್ ಅವರಿಂದ ಸತ್ಯಗೆ ಹಾಯ್ ಹೇಳಿಸಿದ್ದ. ಆದರೆ ಇದನ್ನು ರೆಕಾರ್ಡ್ ಮಾಡ್ಕೊಂಡ ಸತ್ಯ ಕಲಾಸಿಪಾಳ್ಯದ ತುಂಬೆಲ್ಲ ಈ ವಿಡಿಯೋವನ್ನು ಹಂಚಿದ್ದ, ಬಿಲ್ಡಪ್ ತಗೊಂಡಿದ್ದ ಅನ್ನುವ ಮಾತು ಕೂಡ ಸದ್ಯಕ್ಕೆ ಪರಪ್ಪನ ಅಗ್ರಹಾರದ ಸುತ್ತ ಮುತ್ತ ಕೇಳಿ ಬರುತ್ತಿದೆ.

More from Filmibeat

Read more about: darshan sandalwood jail
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X