»   » 'ದೊಡ್ಮನೆ' ಮದುವೆಯ ಭಕ್ಷ್ಯ ಭೋಜನದ ಕಂಪ್ಲೀಟ್ ಮೆನ್ಯೂ

'ದೊಡ್ಮನೆ' ಮದುವೆಯ ಭಕ್ಷ್ಯ ಭೋಜನದ ಕಂಪ್ಲೀಟ್ ಮೆನ್ಯೂ

Posted By:
Subscribe to Filmibeat Kannada

ನಟ ಸಾರ್ವಭೌಮನ ಮುದ್ದಿನ ಮೊಮ್ಮಗಳು, ನಾಟ್ಯ ಸಾರ್ವಭೌಮನ ಮಗಳು ಡಾ.ನಿರುಪಮ ವಿವಾಹ ಮಹೋತ್ಸವ ನಾಳೆ (ಆಗಸ್ಟ್ 31) ರಂದು ಬೆಂಗಳೂರಿನ ಅರಮನೆ ಮೈದಾನ 'ತ್ರಿಪುರ ವಾಸಿನಿ'ಯಲ್ಲಿ ಅದ್ದೂರಿಯಾಗಿ ನೆರವೇರಲಿದೆ.

ವಿವಾಹಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. 30 ಸಾವಿರಕ್ಕೂ ಹೆಚ್ಚು ಜನರು ಡಾ.ನಿರುಪಮ-ಡಾ.ದಿಲೀಪ್ ಅವರ ಮದುವೆಗೆ ಆಗಮಿಸುವ ನಿರೀಕ್ಷೆ ಇದೆ. ಸ್ಯಾಂಡಲ್ ವುಡ್ ನ ಸ್ಟಾರ್ ಕಲಾವಿದರು, ಕಾಲಿವುಡ್, ಟಾಲಿವುಡ್, ಬಾಲಿವುಡ್ ಸೂಪರ್ ಸ್ಟಾರ್ಸ್ ಮದುವೆಗೆ ಹಾಜರಾಗುವ ಸಾಧ್ಯತೆಗಳಿವೆ. [ದೊಡ್ಮನೆ ಮೊಮ್ಮಗಳ ಮದುವೆಯ ಸಂಭ್ರಮದ ಝಲಕ್]

Shivannamagalamadhuve

ವೈಭವೋಪೇತವಾಗಿ ನಡೆಯುತ್ತಿರುವ ಈ ಮದುವೆಗೆ ಭಕ್ಷ್ಯ ಭೋಜನ ಸಿದ್ದವಾಗಲಿದೆ. ಶಿವರಾಜ್ ಕುಮಾರ್ ಅವರ ಮದುವೆಗೆ ಅಡುಗೆ ಮಾಡಿದ್ದ ಬಳೇಪೇಟೆ ಫ್ಲವರ್ ವೆಂಕಟೇಶ್, ಶಿವಣ್ಣನ ಮಗಳ ಮದುವೆಯ ಅಡುಗೆ ವ್ಯವಸ್ಥೆಯ ಉಸ್ತುವಾರಿ ಹೊತ್ತಿದ್ದಾರೆ. [ಶಿವಣ್ಣ ಮಗಳ ಮದುವೆಗೆ ವಿಶೇಷ ವೆಬ್ ಸೈಟ್ ಆರಂಭ]

ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಕುಟುಂಬಕ್ಕೆ ಹತ್ತಿರವಾಗಿರುವ ಫ್ಲವರ್ ವೆಂಕಟೇಶ್, ಡಾ.ನಿರುಪಮಾ ಮದುವೆಗಾಗಿ ಎಲ್ಲರ ಬಾಯಲ್ಲಿ ನೀರೂರಿಸುವ ಸ್ಪೆಷಲ್ ಮೆನ್ಯೂ ತಯಾರಿಸಿದ್ದಾರೆ.

ಹಾಗಾದ್ರೆ, ಇಂದು ವರಪೂಜೆ ಮತ್ತು ನಾಳೆ ಮುಹೂರ್ತ ಹಾಗು ಆರತಕ್ಷತೆಗೆ ರೆಡಿಯಾಗಲಿರುವ ಭೋಜನದ ಮೆನ್ಯುವಿನಲ್ಲಿ ಏನೇನಿವೆ ಅಂತ ತಿಳಿದುಕೊಳ್ಳುವ ಕುತೂಹಲ ನಿಮಗೆ ಇದ್ಯಾ? 'ದೊಡ್ಮನೆ ಮದುವೆ'ಯ ಊಟದ ಮೆನ್ಯೂ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಲಭ್ಯವಾಗಿದೆ. [ಮಗಳ ಮದುವೆಗೆ ಶಿವಣ್ಣ ಭರ್ಜರಿ ಶಾಪಿಂಗ್.!]

Shivannamagalamadhuve

ದಿನಾಂಕ : 30-08-15

SNACKS : ತಾಜಾ ಸ್ವಾಗತ ಪಾನೀಯ, ಸ್ಪೆಷಲ್ ರವಾ ಇಡ್ಲಿ, ಮಂಗಳೂರು ಬಜ್ಜಿ, ಚಟ್ನಿ, ಚಿಲ್ಲಿ ಮತ್ತು ಮೊಸರು ಸಹಿತ ವಡಾ ಪಾವ್, ಬನ್ ನಿಪ್ಪಟ್ ಮಸಾಲ, ಸಮೋಸಾ, ಜಿಲೇಬಿ, ಕಾಫೀ/ಟೀ/ಬಾದಾಮಿ ಹಾಲು.

DINNER : ಮಟ್ಕ ಡ್ರೈ ಫ್ರೂಟ್ ಪಾಯಸಂ, ತುಪ್ಪದ ಸಹಿತ ಬಾದಾಮಿ ಹೋಳಿಗೆ, ಮಟ್ಕ ರಬ್ಬಡಿ ಮಲೈ, ಚಿಕ್ಕೂ ಆಪಲ್ ಹಲ್ವಾ, ರಾಜಸ್ತಾನಿ ಬೆಂಡಿ, ಆಲೂ ಫಿಂಗರ್ಸ್, ಫ್ರೂಟ್ ಕೋಸಂಬರಿ, ಪತ್ರ ವಡಾ, ಮೇತಿ ಚಪಾತಿ, ಆಲೂ ಗೋಬಿ, ಲೆಮೆನ್ ರೈಸ್, ಮಟ್ಕ ಅವರೆಕಾಯಿ ಕಾಜು ಪಲಾವ್, ರಾಯ್ತ, ವೈಟ್ ರೈಸ್, ತರಕಾರಿ ಸಾಂಬಾರ್, ಮದ್ರಾಸ್ ರಸಂ, ಮಟ್ಕ ಮೊಸರು, ಉಪ್ಪು, ಉಪ್ಪಿನಕಾಯಿ/ಗೊಂಗುರ, ಅಕ್ಕಿ ಸಂಡಿಗೆ

DESSRETS : ಅಸೋರ್ಟೆಡ್ ಐಸ್ ಕ್ರೀಮ್, ಕೇಕ್, ಕಟ್ ಫ್ರೂಟ್ಸ್

MOUTH FRESHNERS : ಸ್ವೀಟ್ ಪಾನ್, ಸಾದಾ ಪಾನ್, ಮಗೈ ಪಾನ್, ಕುಲ್ಫಿ ಪಾನ್, ಅಸೋರ್ಟೆಡ್ ಸೌನ್, ಪಾನ್ ಜ್ಯೂಸ್ ['ದೊಡ್ಮನೆ ಅಳಿಯ'ನಿಗೆ ಶಿವಣ್ಣ ಬಂಪರ್ ಉಡುಗೊರೆ]

Shivannamagalamadhuve

ದಿನಾಂಕ : 31-08-15

BREAKFAST : ಕೊಟ್ಟೆ ಇಡ್ಲಿ, ವಡಾ, ಸಾಂಬಾರ್, ಸ್ವೀಟ್ ಚಟ್ನಿ, ಟಮೋಟೋ ಚಟ್ನಿ, ಮಸಾಲಾ ಉಪ್ಪಿಟ್ಟು, ಆಲೂ ಕುರ್ಮಾ, ಪಡ್ಡು, ರವಾ ವಾಂಗಿ ಬಾತ್, ಕಾಫಿ/ಟೀ

LUNCH : ಸಬ್ಬಕ್ಕಿ ಶಾವಿಗೆ ಪಾಯಸಂ, ಮೋತಿಚೂರ್ ಲಡ್ಡು ಮತ್ತು ಹಾಲು ಸಹಿತ ಚಿರೋಟಿ, ಮಿಲ್ಡ್ ಮೈಸೂರು ಪಾಕ್, ರಸ್ ಕಡಂ, ಪೀಸ್ ಮತ್ತು ಕಾಜೂ ಸಹಿತ ಆಲೂ ಫ್ರೈ, ಯಮ್ ಚಾಪ್ಸ್, ದಾಳಿಂಬೆ ಹಣ್ಣಿನ ಸಹಿತ ಸ್ಪ್ರೌಟ್ಸ್, ಸೌತೇಕಾಯಿ ಕೋಸಂಬರಿ, ರವಾ ಪಕೋಡ, ಅಕ್ಕಿ ರೋಟಿ, ಯಂಗೈ, ಹಿತುಕಿದ ಬೇಳೆ, ಪೂರಿ, ಕೆಂಪು ಚಟ್ನಿ, ಪೈನಾಪಲ್ ಗೊಚ್ಚು, ಪುಳಿಯೋಗರೆ, ಕೋಕೋನಟ್ ರೈಸ್, ಮುಗ್ಲೈ ದಮ್ ಬಿರಿಯಾನಿ, ರಾಯ್ತ, ವೈಟ್ ರೈಸ್, ಆಂಧ್ರ ಪಪ್ಪು, ಮಂಗಳೂರು ತಿಳಿ ಸಾರು, ಮೊಸರು, ಉಪ್ಪು, ಉಪ್ಪಿನಕಾಯಿ, ಹಪ್ಪಳ, ಮೊಸರು ಮೆಣಸಿನಕಾಯಿ

DESSRETS : ಅಸೋರ್ಟೆಡ್ ಐಸ್ ಕ್ರೀಮ್, ಕೇಕ್, ಕಟ್ ಫ್ರೂಟ್ಸ್

MOUTH FRESHNERS : ಸ್ವೀಟ್ ಪಾನ್, ಸಾದಾ ಪಾನ್, ಮಗೈ ಪಾನ್

Shivannamagalamadhuve

DINNER :
MOCKTAIL COUNTER :
ಬ್ಲೂ ಲಗೂನ್, ಸ್ಟ್ರಾಬರಿ ಪಂಚ್, ಫ್ರೂಟ್ ಪಂಚ್, ಲಿಚ್ಚಿ ಬ್ಲಾಸಂ

STARTERS : ಕಾಕ್ ಟೈಲ್ ಸಮೋಸಾ, ಚೀಸ್ ಬಾಲ್ಸ್

CHAAT COUNTER : ಕ್ಯಾಪ್ಸಿಕಮ್ ಚಾಟ್, ಬೇಬಿ ನಿಪ್ಪಟ್ ಮಸಾಲ, ದಾಯ್ ಪಲ್ಲ, ಮಸಾಲ ಪೂರಿ, ಫ್ಲೋಟಿಂಗ್ ಪಾನಿ ಪೂರಿ

SALAD COUNTER : ಲೈವ್ ತಂಡೂರಿ ಸಲಾಡ್ (ಪನ್ನೀರ್, ಬೇಬಿ ಕಾರ್ನ್, ಗೋಬಿ, ಆಲೂ), ಕಾಬೂಲ್ ಚನ್ನ ಚಾಟ್ ಸಲಾಡ್, ಪೈನಾಪಲ್ ಕುಕುಂಬರ್ ಸಲಾಡ್, ತ್ರೀ ಬೀನ್ಸ್ ಸಲಾಡ್, ಮಿಕ್ಸೆಡ್ ವೆಜಿಟೇಬಲ್ಸ್

RICE COUNTER : ಕಾರ್ನ್ ದಮ್ ಬಿರಿಯಾನಿ, ಬಾದಾಮಿ ರೈಸ್, ಪ್ಲೈನ್ ಗ್ರೇವಿ, ರಾಯ್ತ, ವೈಟ್ ರೈಸ್, ಮದ್ರಾಸ್ ರಸಂ, ಕರ್ಡ್ ರೈಸ್, ಅಸೋರ್ಟೆಡ್ ಪಾಪಡ್, ಅಸೋರ್ಟೆಡ್ ಉಪ್ಪಿನಕಾಯಿ

DESSRETS : ಅಸೋರ್ಟೆಡ್ ಐಸ್ ಕ್ರೀಮ್, ತವಾ ಜಾಮೂನ್, ಕಟ್ ಫ್ರೂಟ್ಸ್

MOUTH FRESHNERS : ಸ್ವೀಟ್ ಪಾನ್, ಸಾದಾ ಪಾನ್, ಮಗೈ ಪಾನ್, ಪಾನ್ ಜ್ಯೂಸ್

SWEET COUNTER : ಚಾಕಲೇಟ್ ಲಾಲಿ ಪಾಪ್, ಚೇನಾ ಮಾಲ್ ಪೂವಾ, ಕಾಜೂ ಪೈನಾಪಲ್ ಕಟ್ಲಿ, ಫ್ರೆಷ್ ಮ್ಯಾಂಗೋ ಮಲೈ, ಅಂಜೀರ್ ಬಾದಾಮ್ ಬರ್ಫಿ

DOSA COUNTER : ಟಮೋಟೋ ದೋಸಾ, ಮಿನಿ ಮಸಾಲಾ ದೋಸಾ, ಗ್ರೌಂಡ್ ನಟ್ ಚಟ್ನಿ, ಪುದೀನಾ ಚಟ್ನಿ

ROTI COUNTER : ಫುಲ್ಕ, ಕುಲ್ಚಾ, ತಂದೂರಿ ರೋಟಿ

VEGETABLE COUNTER : ಪಾಲಾಕ್ ಕಾರ್ನ್ ಕಾಜೂ ಕರಿ, ಪನ್ನೀರ್ ಪೇಶಾವರಿ, ವೆಜ್ ಕೋಲಾಪುರಿ, ದಾಲ್ ತಡ್ಕ (PHOTO COURTESY : shivannamagalamadhuve.com)

    English summary
    Kannada Actor Shivarajkumar's Daughter Dr.Nirupama Wedding is happening tomorrow (August 31st). Here is the complete Menu of Lunch, Dinner and Snacks which will be prepared for the Wedding.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada