twitter
    For Quick Alerts
    ALLOW NOTIFICATIONS  
    For Daily Alerts

    ಫೋರ್ಬ್ಸ್ ಪಟ್ಟಿ: ಭಾರತದ ಸೆಲೆಬ್ರಿಟಿಗಳ ಸಂಭಾವನೆ ಇಷ್ಟೊಂದಾ?

    |

    ನಾಲ್ಕೈದು ಕೋಟಿ ಕಲೆಕ್ಷನ್ ದಾಟೋದೇ ಕಷ್ಟ ಇದ್ದ ಕನ್ನಡ ಸಿನಿಮಾಗಳು ಇಂದು ಬಿಡುಗಡೆಯಾದ ಮೂರೇ ದಿನಗಳಲ್ಲಿ ಹತ್ತು ಕೋಟಿ ಕ್ಲಬ್ ದಾಟುತ್ತಿರುವ ಉದಾಹರಣೆಗಳಿವೆ.

    ಇನ್ನು ಬಾಲಿವುಡ್ ಸಿನಿಮಾಂದ್ರೆ ಕೇಳಬೇಕಾ, ಮಾತೆತ್ತಿದರೆ ನೂರು ಕೋಟಿ. ವಿಶ್ವಾದ್ಯಂತ ಹಿಂದಿ ಚಿತ್ರಕ್ಕೆ ಇರುವ ಮಾರುಕಟ್ಟೆ ಲೆಕ್ಕಚಾರದಲ್ಲಿ ಸಿನಿಮಾಗೆ ಇನ್ವೆಸ್ಟ್ ಮಾಡೋದು ಸೇಫ್ ಅನ್ನೋ ಮಟ್ಟಕ್ಕಿದೆ ಬಾಲಿವುಡ್ ಸಿನಿಮಾಗಳ ಟ್ರೆಂಡ್.

    ಭೂಮಿ ಮೇಲೆ ದುಡ್ಡು ಸುರಿಯುತ್ತಿದ್ದವರು ಇಂದು ಸಿನಿಮಾದ ಮೇಲೆ ದುಡ್ಡು ಸುರಿಯುತ್ತಿದ್ದಾರೆ. ಒಂದು ವೇಳೆ ನಿರ್ಮಾಪಕ ಮತ್ತು ಹಂಚಿಕೆದಾರ ಸೇಫ್ ಆಗದಿದ್ದರೂ, ಲೀಡ್ ನಟರಿಗೆ ಸಲ್ಲಬೇಕಾಗಿರುವ ಸಂಭಾವನೆಗೆ ಏನೂ ತೊಂದರೆಯಿರುವುದಿಲ್ಲ.

    ಫೋರ್ಬ್ಸ್ ಅತ್ಯಂತ ದುಬಾರಿ ಸೆಲೆಬ್ರಿಟಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಹಾಲಿವುಡ್ ಸೆಲೆಬ್ರಿಟಿಗಳದ್ದೇ ಮೇಲುಗೈ. ಇದರ ಜೊತೆಗೆ ನಮ್ಮ ಬಾಲಿವುಡ್ ನಟರೂ, ಸೆಲೆಬ್ರಿಟಿಗಳೂ ಈ ಪಟ್ಟಿಯಲ್ಲಿ ಇದ್ದಾರೆ ಅನ್ನೋದೇ ವಿಶೇಷ.

    ಆದರೆ ಈ ಪಟ್ಟಿಯಲ್ಲಿ ನಮ್ಮ ಸ್ಯಾಂಡಲ್ ವುಡ್ ನಟರು ಸದ್ಯಕ್ಕಂತೂ ಯಾರೂ ಇಲ್ಲ ಬಿಡಿ, ಮುಂದೊಂದು ದಿನ ಬಂದರೂ ಬರಬಹುದು. ಜೊತೆಗೆ ಪಕ್ಕದ ಕಾಲಿವುಡ್, ಟಾಲಿವುಡ್ ಸೆಲೆಬ್ರಿಟಿಗಳೂ ಇಲ್ಲ.

    ಫೋರ್ಬ್ಸ್ ಪ್ರಕಾರ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ನಮ್ಮ ದೇಶದ ಅತ್ಯಂತ ಗರಿಷ್ಠ ಸಂಭಾವನೆ ಪಡೆಯುವವರು ಯಾರು? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

    ನೂರು ದುಬಾರಿಗಳ ಪಟ್ಟಿ

    ನೂರು ದುಬಾರಿಗಳ ಪಟ್ಟಿ

    ಫೋರ್ಬ್ಸ್ ಬಿಡುಗಡೆ ಮಾಡಿದ ವಾರ್ಷಿಕ ವಿಶ್ವದ ನೂರು ಅತಿದುಬಾರಿ ಸಂಭಾವನೆ ಪಡೆಯುವ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಅಮೆರಿಕಾದ ಬಾಕ್ಸರ್ ಫ್ಲಾಯ್ಡ್ ಮೇವೆದರ್ ಪಾಲಾಗಿದೆ. ಇವರ ವಾರ್ಷಿಕ ಆದಾಯ ಮುನ್ನೂರು ಮಿಲಿಯನ್ ಡಾಲರ್.

    ಅಮಿತಾಬ್ ಬಚ್ಚನ್

    ಅಮಿತಾಬ್ ಬಚ್ಚನ್

    72 ವರ್ಷದ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಈ ಪಟ್ಟಿಯಲ್ಲಿ 71ನೇ ಸ್ಥಾನ ಪಡೆದಿದ್ದಾರೆ. ಇವರ ವಾರ್ಷಿಕ ಆದಾಯ 33.5 ಮಿಲಿಯನ್ ಡಾಲರ್.

    ಸಲ್ಲು ಮಿಯಾ

    ಸಲ್ಲು ಮಿಯಾ

    ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್, ಸೀನಿಯರ್ ಬಚ್ಚನ್ ಜೊತೆ 71ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಇವರ ವಾರ್ಷಿಕ ಆದಾಯವೂ 33.5 ಮಿಲಿಯನ್ ಡಾಲರ್.

    ಅಕ್ಷಯ್ ಕುಮಾರ್

    ಅಕ್ಷಯ್ ಕುಮಾರ್

    ಬಚ್ಚನ್, ಸಲ್ಮಾನ್ ನಂತರದ ಸ್ಥಾನ ಮತ್ತೊಬ್ಬ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರದ್ದು. ಇವರ ವಾರ್ಷಿಕ ಆದಾಯ 32.5 ಮಿಲಿಯನ್ ಡಾಲರ್, ಇವರು 76ನೇ ಸ್ಥಾನದಲ್ಲಿದ್ದಾರೆ.

    ಮಹೇಂದ್ರ ಸಿಂಗ್ ಧೋನಿ

    ಮಹೇಂದ್ರ ಸಿಂಗ್ ಧೋನಿ

    ಭಾರತೀಯ ಕ್ರಿಕೆಟ್ ತಂಡದ ನಾಯಕ ಧೋನಿ ವಾರ್ಷಿಕ ಆದಾಯ 31 ಮಿಲಿಯನ್ ಡಾಲರ್, ಇವರು 82ನೇ ಸ್ಥಾನದಲ್ಲಿದ್ದಾರೆ.

    English summary
    Bollywood stars Amitabh Bachchan, Salman Khan and Akshay Kumar, as well as India cricketer Mahendra Singh Dhoni have made it to the Forbes annual Celebrity 100 rankings of the world's highest-paid celebrities.
    Wednesday, July 1, 2015, 10:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X