twitter
    For Quick Alerts
    ALLOW NOTIFICATIONS  
    For Daily Alerts

    ದರ್ಶನ್ ಫಾರ್ಮ್‌ಹೌಸ್ ಮೇಲೆ ಅರಣಾಧಿಕಾರಿಗಳ ರೇಡ್: ವನ್ಯ ಪಕ್ಷಿಗಳು ವಶ

    |

    ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕ್ರಾಂತಿ' ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೇನು ಮುಂದಿನ ಸಿನಿಮಾ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಇದೇ ಸಂದರ್ಭದಲ್ಲಿ ದರ್ಶನ್ ಫಾರ್ಮ್‌ಹೌಸ್‌ ಮೇಲೆ ಅರಣ್ಯಾಧಿಕಾರಿಗಳು ದಾಳಿ ಮಾಡಿದ್ದಾರೆ.

    ಮೈಸೂರಿನ ಟಿ. ನರಸಿಪುರದ ಸಮೀಪ ನಟ ದರ್ಶನ್ ಫಾರ್ಮ್ ಹೌಸ್ ಇದೆ. ಇದೇ ಫಾರ್ಮ್‌ಹೌಸ್‌ಗೆ ನಿನ್ನೆ(ಜನವರಿ 20) ರಾತ್ರಿ ಹೊತ್ತಲ್ಲಿ ಅರಣ್ಯ ಅಧಿಕಾರಿಗಳ ತಂಡ ದಾಳಿ ಮಾಡಿದೆ. ಜೊತೆಗೆ ಕೆಲವು ಪಕ್ಷಿಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ ಅವುಗಳನ್ನು ನ್ಯಾಯಾಲಕ್ಕೆ ನೀಡಲಾಗಿದೆ.

    ಬುಲೆಟ್ ಏರಿ 30 ಜಿಲ್ಲೆ ಸುತ್ತಿದ ದರ್ಶನ್ ಫ್ಯಾನ್:ಉಪ್ಪಿ,ಶರಣ್,ಸೃಜನ್,ಅಭಿ ಮನೆಯಲ್ಲಿ'ಕ್ರಾಂತಿ'ಬುಲೆಟ್ ಏರಿ 30 ಜಿಲ್ಲೆ ಸುತ್ತಿದ ದರ್ಶನ್ ಫ್ಯಾನ್:ಉಪ್ಪಿ,ಶರಣ್,ಸೃಜನ್,ಅಭಿ ಮನೆಯಲ್ಲಿ'ಕ್ರಾಂತಿ'

    ಕೆಂಪಯ್ಯನಹುಂಡಿಯ ತೋಟದ ಮನೆಯಲ್ಲಿ ದರ್ಶನ್ ಕೆಲವು ವಿದೇಶಿ ತಳಿಯ ಪಕ್ಷಿಗಳನ್ನು ಸಾಕುತ್ತಿದ್ದರು. ಅವುಗಳನ್ನು ಸಾಕಲು ಪರವಾನಿಗಿ ಪಡೆಯದೆ ಇರೋದ್ರಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    4 ವನ್ಯ ಪಕ್ಷಿಗಳು ವಶಕ್ಕೆ

    4 ವನ್ಯ ಪಕ್ಷಿಗಳು ವಶಕ್ಕೆ

    ದರ್ಶನ್ ಫಾರ್ಮ್ ಹೌಸ್‌ನಲ್ಲಿ ನಾಲ್ಕು ವಿಶಿಷ್ಟ ಪ್ರಭೇದದ ಬಾತುಕೋಳಿಗಳನ್ನು ವಶಕ್ಕೆ ಪಡೆಯಲಾಗಿದೆ. ಇವುಗಳನ್ನು ಬಾರ್‌ಹೆಡಡ್ ಗೂಸ್ ಅಂತಲೂ ಕರೆಯುತ್ತಾರೆ. ಇವುಗಳನ್ನು ಮನೆಗಳಲ್ಲಿ, ಫಾರ್ಮ್‌ಹೌಸ್‌ಗಳಲ್ಲಿ ಸಾಕುವುದು ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಅಪರಾಧ ಆಗಿದ್ದು, ಈ ಕಾರಣಕ್ಕೆ ವನ್ಯ ಪಕ್ಷಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಹದಿನಾರು ಕೆರೆಗೆ ಬಿಡಲು ತೀರ್ಮಾನ

    ಹದಿನಾರು ಕೆರೆಗೆ ಬಿಡಲು ತೀರ್ಮಾನ

    ಸಾಕಲು ಅನುಮತಿ ಇಲ್ಲದ ವನ್ಯ ಪಕ್ಷಿಗಳನ್ನು ಸಾಕಣೆ ಮಾಡಿದ್ದಕ್ಕೆ ಪ್ರಕರಣವನ್ನು ದಾಖಲಿಸಲಾಗಿದೆ. ವಶಕ್ಕೆ ಪಡೆದ ವನ್ಯ ಪಕ್ಷಿಗಳನ್ನು ಅವುಗಳೇ ಜೀವಿಸುವ ಅರಣ್ಯ ಪ್ರದೇಶಕ್ಕೆ ಬಿಡಲು ನ್ಯಾಯಾಲಯದ ಅನುಮತಿಯನ್ನು ಪಡೆಯಲು ಅರಣ್ಯ ಇಲಾಖೆ ಮುಂದಾಗಿದೆ.ನ್ಯಾಯಾಲಯದ ಅನುಮತಿ ಸಿಕ್ಕಿದ ಕೂಡಲೇ ಟಿ.ನರಸೀಪುರದ ಸಮೀಪವಿರುವ ಹದಿನಾರು ಕೆರೆಯಲ್ಲಿ ಅವುಗಳನ್ನು ಬಿಡುವುದಕ್ಕೆ ಅಧಿಕಾರಿಗಳು ನಿರ್ಧರಿಸಿದ್ದಾರೆ.

    ಮಾಲೀಕತ್ವಕ್ಕೆ ಪತ್ರ ಕೇಳಿದ ಅರಣ್ಯ ಇಲಾಖೆ

    ಮಾಲೀಕತ್ವಕ್ಕೆ ಪತ್ರ ಕೇಳಿದ ಅರಣ್ಯ ಇಲಾಖೆ

    ದರ್ಶನ್ ಫಾರ್ಮ್‌ಹೌಸ್‌ನಲ್ಲಿ ವಿದೇಶಿ ಪಕ್ಷಿಗಳನ್ನು ಸಾಕುತ್ತಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ವನ್ಯಜೀವಿ ಕಾಯ್ದೆಯಡಿ ಅನುಮತಿ ಹಾಗೂ ಮಾಲೀಕತ್ವದ ಪತ್ರವನ್ನು ಹಾಜರು ಪಡಿಸಲು ಅರಣ್ಯಾಧಿಕಾರಿಗಳು ಸೂಚನೆ ನೀಡಿದ್ದಾರೆ. ಫಾರ್ಮ್ ಹೌಸ್‌ನಲ್ಲಿ ಕೋಳಿ ಜಾತಿಗೆ ಸೇರಿದ ಮೆಕಾಸೆ,ಗಿಳಿ ಪ್ರಭೇದ ಸನ್‌ಕಾಯ್ನ್,ಪುಕಾಟೋ, ಕಪ್ಪು ಹಂಸ ಸೇರಿದಂತೆ ಹಲವು ಪಕ್ಷಿಗಳಿವೆ ಇವುಗಳನ್ನು ಸಾಕಲು ಅವಕಾಶವಿದೆ. ಆದರೆ, ಅದಕ್ಕೆ ಮಾಲೀಕತ್ವ ಪತ್ರದ ಸೇರಿದಂತೆ ಹಲವು ದಾಖಲಾತಿಗಳು ಬೇಕಿವೆ.

    ಯೂಟ್ಯೂಬ್ ಸಂದರ್ಶನದ ಬಳಿಕ ರೇಡ್

    ಯೂಟ್ಯೂಬ್ ಸಂದರ್ಶನದ ಬಳಿಕ ರೇಡ್

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗೆ ಯೂಟ್ಯೂನ್‌ ಸಂದರ್ಶನವನ್ನು ನೀಡಿದ್ದರು. ಈ ವೇಳೆ ತಮ್ಮ ತೋಟದಲ್ಲಿ ಸಾಕಿರುವ ವಿಶಿಷ್ಟ ಪ್ರಭೇದದ ಪಕ್ಷಿಗಳ ಪರಿಚಯವನ್ನು ಮಾಡಿಕೊಟ್ಟಿದ್ದರು. ಆ ಬಳಿ ಅರಣ್ಯಾಧಿಕಾರಿಗಳು ರೇಡ್ ಮಾಡಿದ್ದಾರೆ. ಮುಂದೆ ಈ ಪ್ರಕರಣಕ್ಕೆ ದರ್ಶನ್ ಯಾವ ರೀತಿ ಪ್ರತಿಕ್ರಿಯೆ ನೀಡಬಹುದು ಅನ್ನೋ ಕುತೂಹಲ ಅವರ ಅಭಿಮಾನಿಗಳಲ್ಲಿ ಇದೆ.

    English summary
    Forest Officers Raid On Actor Darshan Farmhouse Recovered Foreign Birds, Know More.
    Saturday, January 21, 2023, 18:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X