»   » ಸಿನಿಮಾ ಮೈ ಡಾರ್ಲಿಂಗ್ ಗೆ ಟ್ಯಾಲೆಂಟ್ ಹುಡುಕಾಟ

ಸಿನಿಮಾ ಮೈ ಡಾರ್ಲಿಂಗ್ ಗೆ ಟ್ಯಾಲೆಂಟ್ ಹುಡುಕಾಟ

Posted By:
Subscribe to Filmibeat Kannada

ಕನ್ನಡ ಸುದ್ದಿ ವಾಹಿನಿಗಳ ಜನತೆಗೆ ಚಿರಪರಿಚಿತರಾಗಿರುವ ಗೌರೀಶ್ ಅಕ್ಕಿ ಅವರು ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ಆಗಾಗ ಕೆಲ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡುತ್ತಿದ್ದ ಅಕ್ಕಿ ಅವರು ಈಗ ಫುಲ್ ಟೈಂ ಸಿನಿಮಾ ಜಪ ಮಾಡುತ್ತಿದ್ದಾರೆ. ಸದ್ಯಕ್ಕೆ 'ಉಳಿದವರು ಕಂಡಂತೆ' ಚಿತ್ರದಲ್ಲಿ ಒಂದು ಪಾತ್ರ ಮಾಡಿದ್ದಾರೆ.

ಈಟಿವಿ ಕನ್ನಡ, ಟಿವಿ 9 ಕನ್ನಡ ಹಾಗೂ ಸುವರ್ಣ ವಾಹಿನಿ ಇಲ್ಲಿದ್ದ ಗೌರೀಶ್ ಅಕ್ಕಿ ಅವರು ಸಿನಿಮಾ ಮೈ ಡಾರ್ಲಿಂಗ್ ಎನ್ನುತ್ತಿದ್ದಾರೆ. ಈ ಚಿತ್ರಕ್ಕಾಗಿ ಟ್ಯಾಲೆಂಟ್ ಹಂಟ್ ಶುರು ಮಾಡಿದ್ದಾರೆ. ಯುವ ಪತಿಭೆಗಳ ಆಯ್ಕೆಗೆ ಆಡಿಷನ್ ಶುರುವಾಗಿದ್ದು, ಆಡಿಷನ್ ವಿವರ ಅವರ ಫೇಸ್ ಬುಕ್ ವಾಲ್ ನಲ್ಲಿ ಸಿಕ್ಕಿದೆ.. ಹೀಗಿದೆ ನೋಡಿ:

ನಮ್ಮ ತಂಡದ ಚೊಚ್ಚಲ ಕಾಣಿಕೆ "ಸಿನೆಮಾ ಮೈ ಡಾರ್ಲಿಂಗ್" ಚಿತ್ರದ ಮೂರು ನಾಯಕಿಯರ ಪಾತ್ರಕ್ಕೆ ...ಮೂರು ಕನ್ನಡದ ಹುಡುಗಿಯರಿಗಾಗಿ ಆಡಿಷನ್ ನಡೆಯಲಿದೆ.

Former Anchor Gaurish Akki starts Talent hunt for Cinema My Darling Movie

ಮೂರು ಪಾತ್ರಗಳು ಹೀಗೆ:

ದೇವಯಾನಿ : ವೃತ್ತಿಯಲ್ಲಿ ಡ್ಯಾನ್ಸರ್ ,, ಬಹಳವೆ Glamorous ಆದರು personally ತುಂಬಾ ಡೀಸೆಂಟ್ ಹುಡುಗಿ.

ಪಲ್ಲವಿ : ಇವಳಿಗೆ ಸಿನೆಮಾ ಮಾಡುವವನ ಮೇಲೆ ಪ್ರೀತಿ ಆದರೆ ಸಿನೇಮಾ ಗಂಧ-ಗಾಳಿ ಏನೂ ಅರಿಯದ ಹುಡುಗಿ...ಜೀವನದಲ್ಲಿ ಬೇಗನೆ ಸೆಟ್ಲ್ ಆಗಬೇಕೆಂಬ ಆಸೆ ಹೊತ್ತ Typical caring ಹುಡುಗಿ.

ಸವಿತ ಲಕ್ಷ್ಮಿ : ಯಾರಿಗು ಅಂಜದ ...ಯಾರಿಗೂ ಜಗ್ಗದ.. ಸ್ವಭಾವವುಳ್ಳ ...ಎಲ್ಲವನ್ನು Cool ಆಗಿ ತೆಗೆದುಕೊಳ್ಳುವ ಹುಡುಗಿ.

ಈ ಮೂವರು ಪಾತ್ರಗಳಿಗೆ ನೀವು Suitable ಅಂತ ನಿಮಗೆ ಅನಿಸಿದಲ್ಲಿ ...ನಿಮ್ಮ ವಿವಿಧ ರೀತಿಯ ಮೂರು ಫೋಟೊಗಳನ್ನು heroinesforcinemamydarling@gmail.com ಗೆ ಕಳುಹಿಸಿ ಕೊಡಿ.

Auditions at : Gaurda Mall
Timings : 10.00 AM to 6.00 PM
Last date to send your photographs : 20-Dec-2013

ಹೆಚ್ಚಿನ ಮಾಹಿತಿಗಾಗಿ ...
ಸಂಪರ್ಕಿಸಿ : ಸುಹಾಸ್ ಸುಯಮೀಂದ್ರ . ಫೋನ್ : 99865 58383
ಇಂತಿ ನಿಮ್ಮ ಗೌರೀಶ್ ಅಕ್ಕಿ

English summary
Former TV anchor Gaurish Akki ventured in to Kannada Film industry has started Talent hunt for 3 characters for Cinema My Darling Movie. Interested youths can apply offer closes by Dec.20
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada