Kirik Keerthi: ಗೊತ್ತಿಲ್ದೇ ಬಿಗ್ ಬಾಸ್ ಬಗ್ಗೆ ಮಾತಾಡೋದ್ರಲ್ಲಿ ಅರ್ಥ ಇಲ್ಲ..!; ಹಿಂಗಂದ್ರು ಕಿರಿಕ್ ಕೀರ್ತಿ!

ಬಿಗ್ ಬಾಸ್ ಕನ್ನಡ ಸೀಸನ್ ಹತ್ತು ಈ ಬಾರಿ ವೀಕ್ಷಕರಿಂದ ತುಂಬಾನೇ ಬೈಸಿಕೊಳ್ಳುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಜನ ಕೆಟ್ಟದಾಗಿ ಟ್ರೋಲ್ ಮಾಡುತ್ತಿದ್ದಾರೆ. ಬಾಯಿಗೆ ಬಂದಂತೆ ಮಾತನಾಡುವ, ಹೆಣ್ಣು ಮಕ್ಕಳಿಗೆ ಗೌರವ ಕೊಡದಿರುವುದು, ಜಡೆ ಜಗಳ ನೋಡಿ ಜನ ಸಕತ್ ಟೀಕೆ ಮಾಡಿದ್ದಾರೆ. ಇದರ ನಡುವೆ ಕೆಲವು ಬಿಗ್ ಬಾಸ್ ಮಾಜಿ ಸ್ಪರ್ಧಿಗಳು ಕೂಡ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

ನಿನ್ನೆಯಷ್ಟೇ ನಟಿ, ಮಾಜಿ ಬಿಗ್ ಬಾಸ್ ಸ್ಪರ್ಧಿ ಕಾವ್ಯಾ ಶಾಸ್ತ್ರಿ, ಈ ಬಾರಿಯ ಬಿಗ್ ಬಾಸ್‌ನಿಂದ ಮಕ್ಕಳನ್ನು ದೂರವಿಡಿ ಎಂದು ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಬಿಗ್ ಬಾಸ್ ಸೀಸನ್ ನಾಲ್ಕರ ರನ್ನರ್ ಅಪ್ ಆಗಿದ್ದ ಕಿರಿಕ್ ಕೀರ್ತಿ ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಿಗ್ ಬಾಸ್ ಸ್ಕ್ರೀಪ್ಟೆಡ್‌ ಹೌದೋ, ಅಲ್ಲವೋ... ಅಲ್ಲಿರುವ ಸ್ಪರ್ಧಿಗಳು ನಟಿಸುತ್ತಿದ್ದಾರಾ..? ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

Former Bigg boss 4 Runner Kirik Keerthi reaction on bigg boss season 10

ಬಿಗ್ ಬಾಸ್ ಸ್ಕ್ರೀಪ್ಟೆಡ್!: ಕಿರಿಕ್ ಕೀರ್ತಿ ಹೇಳಿದ್ದು ಹೀಗೆ

ಬಿಗ್ ಬಾಸ್ ರಿಯಾಲಿಟಿ ಶೋ ಬಗ್ಗೆ ಸಾಕಷ್ಟು ಅಸಮಾಧಾನ ಹೊರ ಬರುತ್ತಿರುವ ಬೆನ್ನಲ್ಲೇ ವಿಡಿಯೋ ಒಂದನ್ನು ಬಿಡುಗಡೆ ಮಾಡಿರುವ ಕಿತಿಕ್ ಕೀರ್ತಿ ಅದರಲ್ಲಿ ಗೊತ್ತಿಲ್ದೇ ಬಿಗ್ ಬಾಸ್ ಬಗ್ಗೆ ಮಾತಾಡೋದ್ರಲ್ಲಿ ಅರ್ಥ ಇಲ್ಲ..ಬಿಗ್ ಬಾಸ್ ಈಸ್ ಬಿಗ್‌ ಎಂದಿದ್ದಾರೆ. ಹಾಗಾದರೆ ಅವರು ವಿಡಿಯೋದಲ್ಲಿ ಹೇಳಿದ್ದು ಏನು ಎನ್ನುವುದನ್ನು ಮುಂದೆ ಓದೋಣ.

"ಈ ಸಲದ ಬಿಗ್‌ ಬಾಸ್‌ನಲ್ಲಿ ಸಿಕ್ಕಪಟ್ಟೆ ಜಗಳ, ಸೌಂಡು , ಅಬ್ಬರ ಎಲ್ಲಾ ಜೋರು ಜೋರಾಗೆ ಇದೆ. ಕೆಲವರಿಗೆ ಕೆಲವರು ಇಷ್ಟ ಆಗ್ತಿದ್ದಾರೆ. ಮತ್ತೆ ಕೆಲವರಿಗೆ ಇಷ್ಟ ಆಗುತ್ತಿಲ್ಲ. ಕೆಲವು ಕಾರಣಕ್ಕೆ ಇಷ್ಟ ಆಗಬಹುದು, ಕೆಲವೊಮ್ಮೆ ಇಷ್ಟ ಆಗದೆಯೂ ಇರಬಹದು. ಇದು ಸಹಜ. ಆದರೆ, ಈಗ ಹುಟ್ಟಿರುವ ಪ್ರಶ್ನೆ, ಈ ಬಿಗ್ ಬಾಸ್ ಸ್ಕ್ರೀಪ್ಟೆಡ್‌ಹಾ..? ಎಂಬುದು. ಅದಕ್ಕೆ ನನ್ನ ಉತ್ತರ ಹೌದು ಇದು ಸ್ಕ್ರೀಪ್ಟೆಡ್" ಎಂದಿದ್ದಾರೆ.

Former Bigg boss 4 Runner Kirik Keerthi reaction on bigg boss season 10

ಮುಂದುವರಿದು ಮಾತನಾಡಿರುವ ಅವರು, "ಯಾವ ತರ ಸ್ಕ್ರೀಪ್ಟೆಡ್ ಎಂದರೆ, ಸ್ಪರ್ಧಿಗಳಿ ಏನು ಮಾಡಬೇಕು ಎಂದು ಟಾಸ್ಕ್ ನೀಡಿರುತ್ತಾರೆ. ಅದು ಸ್ಕ್ರೀಪ್ಟ್. ಆದರೆ, ಹೇಗೆ ಮಾಡಬೇಕು ಎಂಬುದು ಇರುವುದಿಲ್ಲ. ಹೇಗೆ ಮಾಡುವುದು ಎಂಬುದು ಸ್ಪರ್ಧಿಗಳ ಟ್ಯಾಲೆಂಟ್‌ಗೆ ಬಿಟ್ಟ ವಿಚಾರ. ಇದೊಂದೆ ಸ್ಕ್ರೀಪ್ಟ್. ಅದು ಬಿಟ್ಟು ಯಾವ ಸ್ಕ್ರೀಪ್ಟ್ ಕೂಡ ಇರಲ್ಲ. ಹಾಗಿದ್ದಿದ್ದರೇ ಯಾಕೆ ಎಲ್ಲರು ಅಲ್ಲಿ ಹೋಗಿ ಮರ್ಯಾದೆ ತೆಗೆಸಿಕೊಂಡು ಬರುತ್ತಿದ್ದರು..? ಎಂದು ಪ್ರಶ್ನೆ ಹಾಕಿದ್ದಾರೆ.

ಸುದೀಪ್ ಪಂಚಾಯಿತಿ ಬಗ್ಗೆ ಕಿರಿಕ್ ಕೀರ್ತಿ ಮಾತು

"ಈ ಸೀಸನ್‌ನಲ್ಲಿ ಇರುವ ದೊಡ್ಡ ಪ್ರಶ್ನೆ ಸುದೀಪ್ ಸರ್ ಎಲ್ಲರನ್ನು ಏಕೆ ಪ್ರಶ್ನೆ ಮಾಡುವುದಿಲ್ಲ ಎಂಬುದು. ಆದರೆ ನಿಮ್ಮ ಗ್ರಹಿಕೆ ತಪ್ಪು. ಅದು ಬಿಗ್ ಬಾಸ್ ಮನೆ. ಅಲ್ಲಿರುವ ಸದಸ್ಯರು ಜೇನಿನ ಗೂಡಿನ ರೀತಿಯಲ್ಲಿ ಇರಲು ಸಾಧ್ಯವಿಲ್ಲ. ಈಗ ಏನು ನಡೆಯುತ್ತಿದೆಯೋ ಅದೇ ನಡೆಯಬೇಕು. ಜನಕ್ಕೂ ಅದೇ ಇಷ್ಟ" ಎಂದು ಹೇಳಿದ್ದಾರೆ.

"ನಮ್ಮ ಸೀಸನ್‌ನಲ್ಲಿ ಪ್ರಥಮ್ ಇಲ್ಲದೇ ಇದ್ದಿದ್ದರೇ ಅಷ್ಟು ಮನರಂಜನೆ ಸಿಗಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲಿ ಜಗಳ ಬೇಕು. ಮನರಂಜನೆ ಬೇಕು. ಹೀಗಾಗಿ ಸುದೀಪ್ ಸರ್ ಕೆಲವರನ್ನು ಬಿಟ್ಟುಬಿಡುತ್ತಾರೆ. ಸುದೀಪ್ ಸರ್ ಜಾಣತನದಿಂದ ಬಿಟ್ಟುಬಿಡ್ತಾರೆ. ಈಗ ಇದೇ ಈ ಸೀಸನ್‌ನಲ್ಲಿ ಎಲ್ಲರೂ ಆನೆಯಂತೆ ಆಡುತ್ತಿದ್ದಾರೆ. ಕೋಟ್ಯಾಂತರ ರೂಪಾಯಿ ಖರ್ಚು ಮಾಡುವ ಶೋ ಅದು. ಅಲ್ಲಿ ನಿಮಗೆ ಮನರಂಜನೆ,ಮಜಾ ಸಿಗಬೇಕು ಅಂದ್ರೆ ಈಗ ನಡೆಯುತ್ತಿರುವುದೇ ನಡೆಯಬೇಕು. ಇಲ್ಲದಿದ್ದರೇ ನೀವು ನೋಡಲ್ಲ. ಟಿಆರ್‌ಪಿ ಬರಲ್ಲ" ಎಂದು ಕಿರಿಕ್ ಕೀರ್ತಿ ಮಾತನಾಡಿದ್ದಾರೆ.

More from Filmibeat

English summary
Kirik Keerthi reaction on bigg boss kannada season 10.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X