For Quick Alerts
  ALLOW NOTIFICATIONS  
  For Daily Alerts

  ದಿವ್ಯಾ ಉರುಡುಗ ಚಿತ್ರಕ್ಕೆ ಅರವಿಂದ್ ಕೆ.ಪಿ ಅವರೇ ಯಾಕೆ..? : ನಿರ್ದೇಶಕರ ಇಂಟ್ರಸ್ಟಿಂಗ್‌ ಉತ್ತರ

  |

  ಬೈಕರ್‌ ಆಗಿ ದೇಶವನ್ನು ಪ್ರತಿನಿಧಿಸಿದ್ದ ಅರವಿಂದ್‌ ಕೆ.ಪಿ ಬಿಗ್‌ ಬಾಸ್‌ ಸೀಸನ್‌ ೮ರ ಮೂಲಕ ಕಿರುತೆರೆಗೆ ಕಾಲಿಟ್ಟರು. ಬಿಗ್‌ ಬಾಸ್‌ನಲ್ಲಿ ಅತ್ಯುತ್ತಮವಾಗಿ ಆಟವಾಡಿದ ಅರವಿಂದ್‌ ಕೆ.ಪಿ ಬಿಗ್‌ ಬಾಸ್‌ ಸೀಸನ್‌ ೮ರ ರನ್ನರ್‌ಅಪ್ ಆಗಿ ಹೊರಹೊಮ್ಮಿದ್ದರು. ಬಿಗ್‌ಬಾಸ್‌ ಅರವಿಂದ್‌ ಅವರಿಗೆ ಸಾಕಷ್ಟು ಜನಪ್ರಿಯತೆ ತಂದು ಕೊಟ್ಟಿದೆ.

  ಬಿಗ್‌ ಬಾಸ್‌ನಲ್ಲಿ ಕೇವಲ ಆಟ ಅಷ್ಟೇ ಅಲ್ಲ, ಅರವಿಂದ್‌ ತಮ್ಮ ಸರಳ ವ್ಯಕ್ತಿತ್ವದೊಂದಿಗೆ ಎಲ್ಲರ ಮನಗೆದ್ದಿದ್ದರು. ಬಿಗ್‌ ಬಾಸ್‌ನಲ್ಲಿ ಇರುವುದಾಗಲೇ ಅರವಿಂದ್‌ ಅವರ ಖ್ಯಾತಿ ಹೆಚ್ಚಾಗಿದ್ದು, ಅವರ ಫ್ಯಾನ್‌ ಪಾಲೋರ್ವರ್ಸ್‌ ಕೂಡ ಹೆಚ್ಚಾಗಿತ್ತು. ಬಿಗ್‌ ಬಾಸ್‌ ಬಳಿಕ ಅರವಿಂದ್‌ ಕೆಪಿ ಆಗೊಮ್ಮೆ ಈಗೊಮ್ಮೆ ಕಿರುತೆರೆಯ ಕಾರ್ಯಕ್ರಮಲ್ಲಿ ಕಾಣಿಸಿಕೊಳ್ಳುತ್ತಿದ್ದರು.

  ಮಿಸ್ಟರ್ ರಿಷಬ್ ಶೆಟ್ಟಿ ಅವರೇ ಇಂಥ ಶಿಕ್ಷಣ ಬೇಕು ಅಂತಿದ್ದೀರಲ್ಲ ಸರಿನಾ? ನೆಟ್ಟಿಗನ ಪ್ರಶ್ನೆಗೆ ರಿಷಬ್ ಕೊಟ್ಟ ಉತ್ತರವೇನು?ಮಿಸ್ಟರ್ ರಿಷಬ್ ಶೆಟ್ಟಿ ಅವರೇ ಇಂಥ ಶಿಕ್ಷಣ ಬೇಕು ಅಂತಿದ್ದೀರಲ್ಲ ಸರಿನಾ? ನೆಟ್ಟಿಗನ ಪ್ರಶ್ನೆಗೆ ರಿಷಬ್ ಕೊಟ್ಟ ಉತ್ತರವೇನು?

  ಬಿಗ್‌ ಬಾಸ್‌ ಶೋನಲ್ಲಿ ಅರವಿಂದ್‌ ಕೆ.ಪಿ ಅವರ ಹೆಸರು ನಟಿ ದಿವ್ಯಾ ಉರುಡುಗ ಅವರ ಜೊತೆ ತಳುಕು ಹಾಕೊಕೊಂಡಿತ್ತು. ಇವರಿಬ್ಬರ ಮಧ್ಯೆ ಪ್ರೀತಿ ಪ್ರೇಮ ಇದೆ ಎನ್ನುವ ಗುಸು-ಗುಸು ಇದ್ದು, ಈ ಬಗ್ಗೆ ಈವರೆಗೆ ದಿವ್ಯಾ ಉರುಡುಗ ಹಾಗೂ ಅರವಿಂದ್‌ ಕೆ.ಪಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ಬಿಗ್‌ ಬಾಸ್‌ ಬಳಿಕವೂ ಇವರಿಬ್ಬರು ಆಗಾಗ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದು,ಸೋಶಿಯಲ್‌ ಮೀಡಿಯಾದಲ್ಲಿ ಆಗಾಗ ಪೋಸ್ಟ್‌ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಅರವಿಂದ್‌ ಅವರ ಬಗ್ಗೆ ಮತ್ತೊಂದು ಪ್ರಮುಖ ವಿಚಾರ ಹೊರಬಿದ್ದಿದೆ.

  ದಿವ್ಯಾ ಉರುಡುಗ ಚಿತ್ರದಲ್ಲಿ ಅರವಿಂದ್ ಹೀರೋ

  ದಿವ್ಯಾ ಉರುಡುಗ ಚಿತ್ರದಲ್ಲಿ ಅರವಿಂದ್ ಹೀರೋ

  ಅಂತಾರಾಷ್ಟ್ರೀಯ ಬೈಕ್ ರೇಸರ್ ಅರವಿಂದ್ ಈಗ ಸಿನಿಮಾ ಲೋಕಕ್ಕೂ ಪದಾರ್ಪಣೆ ಮಾಡುತ್ತಿದ್ದಾರೆ. ಅದು ಕೂಡ ದಿವ್ಯಾ ಉರುಡುಗ ನಾಯಕಿಯಾಗಿರುವ ಸಿನಿಮಾದಲ್ಲೇ ಅರವಿಂದ್ ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ. ಅರವಿಂದ್‌ ಕಶ್ಯಪ್ ನಿರ್ದೇಶನ 'ಅರ್ಧಂಬರ್ಧ ಪ್ರೇಮಕಥೆ' ಸಿನಿಮಾಗೆ ದಿವ್ಯಾ ಉರುಡುಗ ನಾಯಕಿ ಎನ್ನುವ ವಿಚಾರ ಈ ಹಿಂದೆಯೇ ತಿಳಿದು ಬಂದಿತ್ತು. ಆದರೆ ನಾಯಕ ಯಾರು ಎನ್ನುವ ಕುತೂಹಲಕ್ಕೆ ಈಗ ತೆರೆಬಿದ್ದಿದ್ದು, ಕೆಪಿ ಅರವಿಂದ್ ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.

  BBK9: ಸಾನ್ಯಾ-ರೂಪೇಶ್‌ ಜೋಡಿಗೆ ಒಟಿಟಿಯಲ್ಲಿ ಫ್ರೆಂಡ್‌ಶಿಪ್, ಟಿವಿಯಲ್ಲಿ ಲವ್!BBK9: ಸಾನ್ಯಾ-ರೂಪೇಶ್‌ ಜೋಡಿಗೆ ಒಟಿಟಿಯಲ್ಲಿ ಫ್ರೆಂಡ್‌ಶಿಪ್, ಟಿವಿಯಲ್ಲಿ ಲವ್!

  ದಿವ್ಯಾ ಉರುಡುಗ ಚಿತ್ರಕ್ಕೆ ಅರವಿಂದ್ ಕೆ.ಪಿ ಅವರೇ ಯಾಕೆ..?

  ದಿವ್ಯಾ ಉರುಡುಗ ಚಿತ್ರಕ್ಕೆ ಅರವಿಂದ್ ಕೆ.ಪಿ ಅವರೇ ಯಾಕೆ..?

  ದಿವ್ಯಾ ಉರುಡುಗ ಚಿತ್ರಕ್ಕೆ ಅರವಿಂದ್ ಕೆ.ಪಿ ಅವರೇ ಯಾಕೆ ನಾಯಕ ಎನ್ನುವುದಕ್ಕೆ ನಿರ್ದೇಶಕ ಅರವಿಂದ್‌ ಕಶ್ಯಪ್ ಉತ್ತರ ನೀಡಿದ್ದಾರೆ. ನಾನು ಈ ಕಥೆಯನ್ನು ಮಾಡಿಕೊಂಡಾಗ ಯಾರನ್ನೂ ಹೀರೋ ಮಾಡಬೇಕು ಎನ್ನುವುದಕ್ಕೆ ಪಟ್ಟಿ ಮಾಡಿಕೊಂಡಿದ್ದೆ. ಒಂದಿಷ್ಟು ಹೀರೋಗಳ ಹೆಸರನ್ನು ತೆಗೆದುಕೊಂಡಿದ್ದೆ. ನನ್ನ ಪ್ರಕಾರ ಈಗಾಗಲೇ ಆತ ಹೀರೋ ಆಗಿರಬೇಕು. ಆದರೆ ನನ್ನ ಸಿನಿಮಾ ಮೂಲಕ ಮತ್ತೆ ನಿಜವಾದ ಹೀರೋ ಆಗಬೇಕು ಅಂಥ ವ್ಯಕ್ತಿಯನ್ನು ಹುಡುಕುತ್ತಿದ್ದೆ. ಹೀರೋಯಿನ್ ಪಾತ್ರಕ್ಕೆ ಮೊದಲ ಆಯ್ಕೆಯೇ ದಿವ್ಯಾ ಉರುಡುಗ. ಅವರು ನನ್ನ ಹುಲಿರಾಯ ಸಿನಿಮಾದಲ್ಲಿ ನಟಿಸಿದ್ದರು ಹೀಗಾಗಿ ಮೊದಲೇ ಅವರನ್ನು ಆಯ್ಕೆ ಮಾಡಿದ್ದೆ ಎಂದರು.

  ಅರವಿಂದ್‌ ಬಿಗ್‌ ಬಾಸ್‌ನಲ್ಲಿ ನನ್ನ ಫೇವರೇಟ್‌

  ಅರವಿಂದ್‌ ಬಿಗ್‌ ಬಾಸ್‌ನಲ್ಲಿ ನನ್ನ ಫೇವರೇಟ್‌

  ಇನ್ನು ಮಾತು ಮುಂದುವರಿಸಿದ ಅವರು, ಹೀರೋಗಾಗಿ ತನ್ನ ಹೆಂಡತಿ ಜೊತೆ ಚರ್ಚೆ ಮಾಡುತ್ತಿದ್ದೆ, ಆಗ ನನ್ನ ಪತ್ನಿ ಅರವಿಂದ್‌ ಅವರ ಹೆಸರನ್ನು ಸೂಚಿಸಿದರು. ನಾವು ಯಾಕೆ ಅವರನ್ನು ಹೀರೋ ಮಾಡಬಾರದು ಎಂದು ಕೇಳಿದರು. ಅರವಿಂದ್‌ ಬಿಗ್‌ ಬಾಸ್‌ನಲ್ಲಿ ನನ್ನ ಫೇವರೇಟ್‌ ಸ್ಫರ್ಧಿಯಾಗಿದ್ದರು. ಸಿನಿಮಾದಲ್ಲಿ ಅರವಿಂದ್ ಅವರ ನಟನೆ ನೋಡಿದರೆ ಅವರು ಮೊದಲ ಬಾರಿ ನಟಿಸುತ್ತಿದ್ದಾರೆ ಎಂದು ಯಾರಿಗೂ ಅನಿಸುವುದಿಲ್ಲ. ಅಷ್ಟು ಅದ್ಭುತವಾಗಿ, ಡ್ಯಾಶಿಂಗ್‌ ಆ್ಯಂಡ್‌ ಡೈನಾಮಿಕ್‌ ಆಗಿ ನಮ್ಮ ಚಿತ್ರದ ನಾಯಕ ನಟಿಸಿದ್ದಾರೆ ಎಂದು ಅರವಿಂದ್‌ ಕೆ.ಪಿ ಅವರನ್ನು ಅರವಿಂದ್‌ ಕಶ್ಯಪ್ ಹೊಳಿದ್ದಾರೆ.

  ದಿವ್ಯಾ ಜೊತೆ ನಟಿಸಿದ್ದರಿಂದ ಸುಲಭ ಆಯ್ತು

  ದಿವ್ಯಾ ಜೊತೆ ನಟಿಸಿದ್ದರಿಂದ ಸುಲಭ ಆಯ್ತು

  ಇನ್ನು ತಮ್ಮ ಮೊದಲ ಚಿತ್ರ ಬಗ್ಗೆ ಅರವಿಂದ್‌ ಕೆ.ಪಿ ಕೂಡ ಮಾತನಾಡಿದ್ದು, ಹೀರೋ ಆಗಿ ಇದು ನನ್ನ ಮೊದಲ ಸಿನಿಮಾ. ಅರ್ಧಂಬರ್ಧ ಪ್ರೇಮಕಥೆ' ಸಿನಿಮಾ ನನಗೆ ಇಂಟ್ರಸ್ಟಿಂಗ್‌ ಅನಿಸಿತು. ನನಗೆ ಚಿತ್ರರಂಗ ಹೊಸತು.ಏನು ಮಾಡಬೇಕು ಎಂದು ನಿರ್ದೇಶಕರು ತೋರಿಸುತ್ತಿದ್ದರು. ನಾನು ಅದನ್ನು ಕಾಪಿ ಪೇಸ್ಟ್ ಮಾಡುತ್ತಿದ್ದೆ. ಈ ಸಿನಿಮಾ ತುಂಬ ಚೆನ್ನಾಗಿ ಮೂಡಿಬಂದಿದೆ. ದಿವ್ಯಾ ಜೊತೆ ನಟಿಸಿದ್ದರಿಂದ ನನಗೆ ಸಿನಿಮಾದಲ್ಲಿ ಸುಲಭ ಆಯ್ತು. ನಿರ್ದೇಶಕರು ಕೂಡ ಸಾಕಷ್ಟು ಸಹಾಯ ಮಾಡಿದರು. ಕಷ್ಟವಾದದ್ದನ್ನು ಕೂಡ ಸುಲಭವಾಗಿ ಮಾಡುವಂತೆ ಅವರು ಹೇಳಿಕೊಡುತ್ತಿದ್ದರು ಎಂದರು.

  English summary
  Bike racer, former Bigg Boss contestant Aravind KP entered sandalwood with his girl friend Divya Uruduga.
  Thursday, October 6, 2022, 15:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X