For Quick Alerts
  ALLOW NOTIFICATIONS  
  For Daily Alerts

  ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ 'ಬಿಗ್ ಬಾಸ್' ಚೈತ್ರಾ ಕೊಟೂರು

  By ಕೋಲಾರ ಪ್ರತಿನಿಧಿ
  |

  ಬಿಗ್ ಬಾಸ್ ಸೀಸನ್ 7ರ ಸ್ಪರ್ದಿ ಚೈತ್ರಾ ಕೊಟೂರು ವಿಷ ಸೇವೆನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಇಂದು (ಏಪ್ರಿಲ್ 7) ಬೆಳಗ್ಗೆ 5 ಗಂಟೆಗೆ ವಿಷ ಸೇವಿಸಿರುವ ಚೈತ್ರಾ ಕೊಟೂರು ಅವರನ್ನು ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

  ಮದುವೆಯಾದ ಬೆನ್ನಲ್ಲೆ ಆತ್ಮಹತ್ಯೆಗೆ ಯತ್ನಿಸಿದ ಚೈತ್ರ ಕೋಟೂರ್ | Filmibeat Kannada

  ಮದುವೆ ವಿಚಾರಕ್ಕೆ ತೀವ್ರವಾಗಿ ಮನನೊಂದಿದ್ದ ಚೈತ್ರಾ ಪಿನಾಯಿಲ್ ಸೇವಿಸಿ ಸಾಯಲು ಯತ್ನಿಸಿದರು ಎಂದು ತಂದೆ ನಾರಾಯಣಪ್ಪ ಸ್ಪಷ್ಟನೆ ನೀಡಿದ್ದಾರೆ. ಕೂಡಲೇ ಚೈತ್ರಾ ಅವರನ್ನು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿರುವ ಚೈತ್ರಾ ಕೊಟೂರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮುಂದೆ ಓದಿ...

  ಎರಡು ಬಾರಿ ಆತ್ಮಹತ್ಯಗೆ ಯತ್ನಿಸಿದ್ದರು

  ಎರಡು ಬಾರಿ ಆತ್ಮಹತ್ಯಗೆ ಯತ್ನಿಸಿದ್ದರು

  ನಾಗಾರ್ಜುನ್ ಜೊತೆಗಿನ ವಿವಾಹಕ್ಕೆ ಸಂಬಂಧಿಸಿದಂತೆ ಮನನೊಂದ ಚೈತ್ರಾ ಕೊಟೂರು ಅದಾಗಲೇ ಎರಡು ಸಲ ಆತ್ಮಹತ್ಯಗೆ ಯತ್ನಿಸಿದ್ದರು ಎಂದು ತಿಳಿದು ಬಂದಿದೆ. ಈಗ ಮೂರನೇ ಬಾರಿ ವಿಷ ಸೇವಿಸಿ ಆಸ್ಪತ್ರೆ ಸೇರಿದ್ದಾರೆ ಎಂದು ತಂದೆ ನಾರಾಯಣಪ್ಪ ಕಣ್ಣೀರು ಹಾಕಿದ್ದಾರೆ.

  Exclusive: ನಡತೆಗೆಟ್ಟವಳು ಎಂದಿದ್ದಾರೆ, ಕೊಲೆ ಬೆದರಿಕೆ ಹಾಕಿದ್ದಾರೆ: ವಿವಾದದ ಬಗ್ಗೆ ಚೈತ್ರಾ ಪ್ರತಿಕ್ರಿಯೆExclusive: ನಡತೆಗೆಟ್ಟವಳು ಎಂದಿದ್ದಾರೆ, ಕೊಲೆ ಬೆದರಿಕೆ ಹಾಕಿದ್ದಾರೆ: ವಿವಾದದ ಬಗ್ಗೆ ಚೈತ್ರಾ ಪ್ರತಿಕ್ರಿಯೆ

  ಮಾರ್ಚ್ 28ಕ್ಕೆ ನಡೆದಿದ್ದ ವಿವಾಹ

  ಮಾರ್ಚ್ 28ಕ್ಕೆ ನಡೆದಿದ್ದ ವಿವಾಹ

  ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಮಾರ್ಚ್ 28 ರಂದು ನಾಗಾರ್ಜುನ್ ಎನ್ನುವವರ ಚೈತ್ರಾ ಕೊಟೂರು ವಿವಾಹವಾಗಿದ್ದರು. ಮಂಡ್ಯ ಮೂಲದ ಉದ್ಯಮಿ ನಾಗರಾರ್ಜುನ್ ಜೊತೆ ಕೆಲವು ಸಂಘಟನೆಗಳ ಸಮ್ಮುಖದಲ್ಲಿ ಖಾಸಗಿಯಾಗಿ ಮದುವೆಯಾಗಿದ್ದರು. ಮದುವೆಯಾದ ದಿನವೇ 'ಚೈತ್ರಾ ಅಂದ್ರೆ ಇಷ್ಟವಿಲ್ಲ, ಇದು ಬಲವಂತದ ಮದುವೆ' ಎಂದು ನಾಗಾರ್ಜುನ್ ಹಾಗೂ ಅವರ ಕುಟುಂಬದವರು ತಿರುಗಿಬಿದ್ದರು.

  ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಘಟನೆ

  ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಘಟನೆ

  ಈ ಸಂಬಂಧ ಕೋಲಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಚೈತ್ರಾ ಕೊಟೂರು ಮತ್ತು ನಾಗಾರ್ಜುನ್ ಕುಟುಂಬಗಳು ಕೂತು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಿ ಎಂದು ಪೊಲೀಸರು ಸೂಚಿಸಿದ್ದರು. ಅದಕ್ಕಾಗಿ ಸಮಯ ನೀಡಿದ್ದರು.

  ಬೆಳಿಗ್ಗೆ ಹಸೆಮಣೆ ಏರಿದ್ದ ಮಾಜಿ ಬಿಗ್‌ಬಾಸ್ ಸ್ಪರ್ಧಿ ಸಂಜೆ ವೇಳೆಗೆ ಪೊಲೀಸ್ ಠಾಣೆಯಲ್ಲಿ!ಬೆಳಿಗ್ಗೆ ಹಸೆಮಣೆ ಏರಿದ್ದ ಮಾಜಿ ಬಿಗ್‌ಬಾಸ್ ಸ್ಪರ್ಧಿ ಸಂಜೆ ವೇಳೆಗೆ ಪೊಲೀಸ್ ಠಾಣೆಯಲ್ಲಿ!

  ಮಾತುಕತೆಗೆ ನಿರ್ಲಕ್ಷ್ಯ

  ಮಾತುಕತೆಗೆ ನಿರ್ಲಕ್ಷ್ಯ

  ಪೊಲೀಸರ ಸೂಚನೆ ಹಿನ್ನೆಲೆ ನಾಗಾರ್ಜುನ್ ಕುಟುಂಬದವರು ಮತ್ತು ಚೈತ್ರಾ ಕೊಟೂರು ನಡುವೆ ಮಾತುಕತೆ ಆಗಬೇಕಿತ್ತು. ಆದರೆ, ಮದುವೆ ವಿಚಾರವಾಗಿ ಮಾತುಕತೆಗೆ ನಾಗಾರ್ಜುನ್ ಕಡೆಯವರು ಬರಲಿಲ್ಲ, ಮಾತುಕತೆಗೆ ನಿರ್ಲಕ್ಷ್ಯ ಮಾಡಿದ್ದಕ್ಕೆ ಚೈತ್ರಾ ವಿಷಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.

  English summary
  Former Bigg Boss contestant Chaitra Kotoor attempts suicide and now she admitted in private hospital.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X