ಬೆಳ್ಳಿ ಮೋಡ ತೋರಿಸುವ ಮಿಂಚು ಬಳ್ಳಿಯಾದ ನಿವೇದಿತಾ ಗೌಡ...!

By ಫಿಲ್ಮಿಬೀಟ್ ಡೆಸ್ಕ್

ಚಂದನ್ ಶೆಟ್ಟಿ ಅವರಿಂದ ದೂರವಾದ ನಂತರ ಟ್ರೋಲಿಗರ ಪಾಲಿಗೆ ತಾಂಬೂಲವಾಗಿರುವರು ನಿವೇದಿತಾ ಗೌಡ. ಆದರೂ ಕೂಡ ನಿವೇದಿತಾ ಗೌಡ ಅವರದ್ದು ಡೋಂಟ್ ಕೇರ್ ವ್ಯಕ್ತಿತ್ವ. ಯಾರೇ ಕೂಗಾಡಲಿ, ಸೋಶಿಯಲ್ ಮೀಡಿಯಾನೇ ಅಲ್ಲಾಡಲಿ, ನನ್ನ ನೆಮ್ಮದಿಗೆ ಭಂಗ ಇಲ್ಲವೆಂಬಂತೆ ನಿವೇದಿತಾ ಗೌಡ ತಮ್ಮ ಪಾಡಿಗೆ ರೀಲ್ಸ್‌ಗಳನ್ನು ಮಾಡುತ್ತಲೇ ಇದ್ದಾರೆ. ಈ ಮೂಲಕ ನಿರಂತರವಾಗಿ ಸುದ್ದಿಯಲ್ಲಿ ಇರುತ್ತಿದ್ದಾರೆ.

ಇನ್ನು, ನಿವೇದಿತಾ ಗೌಡ ಇಲ್ಲಿಯವರೆಗೆ ಹೆಚ್ಚಾಗಿ ಹೆಜ್ಜೆ ಹಾಕುತ್ತಿದ್ದಿದ್ದು ಇಂಗ್ಲೀಷ್ ಹಾಡುಗಳಿಗೆ. ಇಲ್ಲವಾದಲ್ಲಿ ಹಿಂದಿ ಹಾಡುಗಳಿಗೆ ಹೆಜ್ಜೆ ಹಾಕುತ್ತಿದ್ದರು. ಆದರೆ ಹೀಗೆ ನಿವೇದಿತಾ ಗೌಡ ಸೊಂಟ ಬಳುಕಿಸಿದಾಗೆಲ್ಲ ಅನೇಕರು ಬೇಸರ ಮಾಡಿಕೊಳ್ಳುತ್ತಿದ್ದರು. ಕನ್ನಡದ ಹಾಡುಗಳಿಗೆ ಕುಣಿಯಲು ನಿಮಗೇನು ಕಷ್ಟ ? ಎಂಬ ಪ್ರಶ್ನೆಯನ್ನು ಮಾಡುತ್ತಿದ್ದರು.

former-bigg-boss-contestant-niveditha-gowda-grooves-to-a-kannada-track-watch-the-video

ಆದರೆ ಈಗ ಈ ಪ್ರಶ್ನೆಯನ್ನು ಕೇಳುವಂತೆ ಇಲ್ಲ. ಯಾಕೆಂದರೆ ಜನಾಭಿಪ್ರಾಯದ ಮೇರೆಗೆ ನಿವೇದಿತಾ ಗೌಡ 'ಪರಿಚಯ' ಚಿತ್ರದ ನಡೆದಾಡುವ ಕಾಮನ ಬಿಲ್ಲು ಹಾಡಿಗೆ ನಾಲ್ಕು ಸ್ಪೆಪ್ಸ್ ಹಾಕಿದ್ದಾರೆ. ಬ್ಲ್ಯಾಕ್ ಮಿನಿ ಸ್ಕರ್ಟ್ ಮತ್ತು ಬ್ಲೂ ಟಾಪ್ ಧರಿಸಿ 'ಬೆಳ್ಳಿಮೋಡ ಇವಳ ಮನಸು ಮನಸು, ಮಿಂಚು ಬಳ್ಳಿ ಅಂದದ ಮುನಿಸು' ಸಾಲುಗಳಿಗೆ ವಯ್ಯಾರದಿಂದ ಕುಣಿದಿದ್ದಾರೆ.

ಎಂದಿನಂತೆ ನಿವೇದಿತಾ ಗೌಡ ಅವರ ಈ ವಿಡಿಯೋ ಕೂಡ ವೈರಲ್ ಆಗಿದೆ. ಕಾಮೆಂಟ್‌ಗಳ ಮಹಾಪೂರ ಹರಿದು ಬಂದಿದೆ. ಕೆಲವರು ನಿವೇದಿತಾ ಗೌಡ ಕನ್ನಡದ ಹಾಡಿಗೆ ರೀಲ್ಸ್ ಮಾಡಿರುವುದಕ್ಕೆ ಖುಷಿ ವ್ಯಕ್ತಪಡಿಸಿದರೆ, ಇನ್ನು ಕೆಲವರು ಅಷ್ಟೊಂದು ಒಳ್ಳೆಯ ಹಾಡನ್ನು ಡ್ಯಾನ್ಸ್ ಮಾಡುವ ಮೂಲಕ ಹಾಳು ಮಾಡಿದ್ಯಲ್ಲಮ್ಮಾ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು, ಕಾಲೆಳೆಯುವರು, ಕೆಟ್ಟಾ ಕೊಳಕು ಕಾಮೆಂಟ್‌ಗಳನ್ನು ಮಾಡುವರು, ತಮ್ಮ ಕೆಲಸವನ್ನು ಮುಂದುವರೆಸಿದ್ದಾರೆ. ನಿವೇದಿತಾ ಗೌಡ ಅವರನ್ನು ನಿಂದಿಸಿದ್ದಾರೆ. ನಿವೇದಿತಾ ಗೌಡ ಕಾಮೆಂಟ್ ಸೆಕ್ಷನ್‌ಗೆ ಬಂದು ಅನ್ನಬಾರದ್ದನ್ನೆಲ್ಲ ಅಂದಿದ್ದಾರೆ. ಮತ್ತೂ ಹಲವರು ಬೇಕು ಬೇಕಂತಲೇ ಈ ತರಹದ ವಿಡಿಯೋಗಳನ್ನು ಮಾಡುವುದಾ ನೀವು ಎನ್ನುವ ಪ್ರಶ್ನೆ ಮಾಡುತ್ತಿದ್ದಾರೆ.

ಇನ್ನು ನಿವೇದಿತಾ ಗೌಡ ಮನೆಯ ಲಿವಿಂಗ್ ರೂಮ್‌ನಲ್ಲಿರುವುದಕ್ಕಿಂತ ಬಾತ್‌ ರೂಮ್‌ನಲ್ಲಿ ಇರುವುದೇ ಹೆಚ್ಚು. ಸದಾ ಕಾಲ್ ಬಾತ್ ರೂಮ್‌ದಿಂದನೇ ನಿವೇದಿತಾ ವಿಡಿಯೋ ಹಂಚಿಕೊಳ್ಳುತ್ತಾರೆ. ಸದ್ಯ ಶೇರ್ ಮಾಡಿರುವ ವಿಡಿಯೋ ಕೂಡ ಬಾತ್ ರೂಮ್‌ನಿಂದನೇ. ಹೀಗಾಗಿಯೇ ತಲೆ ಕೆಡಿಸಿಕೊಂಡಿರುವ ಇನ್ನು ಕೆಲವರು ನಿಮ್ಮ ಮನೆಯ ಬಾತ್ ರೂಮ್‌ ಮೇಲೆ ನಿಮಗ್ಯಾಕೇ ಇಷ್ಟು ವ್ಯಾಮೋಹ ಎಂಬ ಪ್ರಶ್ನೆಯನ್ನು ಕೂಡ ಮಾಡಿದ್ದಾರೆ. ಆದರೆ, ನಿವೇದಿತಾ ಗೌಡ ಯಾವ ಕಾಮೆಂಟ್‌ಗಳಿಗೆ ತಲೆ ಕೆಡಿಸಿಕೊಂಡಿಲ್ಲ. ಉತ್ತರವನ್ನು ನೀಡಿಲ್ಲ.

ಇನ್ನುಳಿದಂತೆ ನಿವೇದಿತಾ ಗೌಡ ಕಳೆದ ವರ್ಷ ಕ್ರಿಸ್ಮಸ್ ಹಬ್ಬದ ಆಚೀಚೆ ಫಾರಿನ್ ಪ್ರವಾಸಕ್ಕೆ ತೆರಳಿದ್ದರು. ಹೆಚ್ಚು ಕಡಿಮೆ ಒಂದೂವರೆ ತಿಂಗಳು ಮೋಜು ಮಸ್ತಿಯನ್ನು ಮಾಡಿ ಅಲ್ಲಿಂದನೇ ರೀಲ್ಸ್‌ಗಳನ್ನು ತಮ್ಮ ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಿದ್ದರು.30 ದಿನದ ಪ್ರವಾಸದಲ್ಲಿ 200 ಬಟ್ಟೆ ತಗೊಂಡು ಬಂದಿದ್ದೆ ಹಾಕಿಕೊಂಡಿದ್ದೇನೆ ಆದರೂ ನಾಳೆ ಉಡಲು ಏನೂ ಇಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದರು.
ನಿರಂತರವಾಗಿ ಟ್ರೋಲ್ ಕೂಡ ಆದರು. ಇನ್ನು ರೀಲ್ಸ್ ಮಾಡುವ ಅಭ್ಯಾಸ ಹೊರತು ಪಡಿಸಿದರೆ ನಿವೇದಿತಾ ಗೌಡ ಬಾಯ್ಸ್ ವರ್ಸಸ್ ಗರ್ಲ್ಸ್ ಕಾರ್ಯಕ್ರಮ ಸೇರಿ ಕೆಲ ಚಿತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆ ಪೈಕಿ ಮುದ್ದು ರಾಕ್ಷಸಿ ಕೂಡ ಒಂದು. ಈ ಚಿತ್ರದಲ್ಲಿ ಮಾಜಿ ಪತಿ ಚಂದನ್ ಶೆಟ್ಟಿ ಜೊತೆ ನಿವೇದಿತಾ ಗೌಡ ತೆರೆಹಂಚಿಕೊಂಡಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X