ನಿದ್ದೆ ಎಂದು 'ನಿದ್ದೆ'ಗೆ ಜಾರಬೇಡಿ, ಹಾಟ್ ಅವತಾರದಲ್ಲಿ ಹಾಸಿಗೆ ಮೇಲೆ ಅತ್ತಿಂದಿತ್ತ ಹೊರಳಾಡಿದ ನಿವೇದಿತಾ ಗೌಡ..!
ಸಾಮಾಜಿಕ ಜಾಲತಾಣದಲ್ಲಿ ದಿನಾ ಬೆಳಗಾದರೆ ಸಾಕು ಆ ಸ್ಟಾರ್ ಹಂಗೆ, ಈ ಸ್ಟಾರ್ ಹಿಂಗೇ ಎನ್ನುವಂತಹ ಬರಹಗಳು, ಸ್ಟಾರ್ ಸೆಲೆಬ್ರೆಟಿಗಳ ಕುರಿತಾದ ಟ್ರೋಲುಗಳು, ಕಿಂಡಲ್ಲುಗಳು ಬರುವುದು ಸರ್ವೇ ಸಾಮಾನ್ಯ. ಚಿತ್ರರಂಗದ ತಾರೆಯರನ್ನು ಅಷ್ಟೂ ಕಾಡದೇ ಇದ್ದರೆ ಹೇಗೆ ? ಎನ್ನುವುದು ಅನೇಕರ ಆಲೋಚನೆ.
ಇನ್ನು ಇಂತಹ ಸಾಕಷ್ಟು ವಿಚಾರಗಳು ಕಣ್ಣಿಗೆ ಕಂಡಾಗ ತಮ್ಮ ಕುರಿತು ವಿವಾದಾತ್ಮಕವಾದ ಟ್ರೋಲ್ ಮಾಡಿದಾಗ ಅಥವಾ ತಮ್ಮನ್ನು ಹೀಯಾಳಿಸಿದಾಗ ಅನೇಕ ತಾರೆಯರು ಉರಿದು ಬೀಳುತ್ತಾರೆ. ಟ್ರೋಲ್ ಮಾಡಿದವರ ವಿರುದ್ದ, ಕಾಲೆಳದೆವರ ವಿರುದ್ದ, ಮನಸೋ ಇಚ್ಚೆ ಕಾಮೆಂಟ್ ಮಾಡಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುವುದಲ್ಲದೇ ಕೆಲವರು ಕಾನೂನಿನ ಮೊರೆ ಹೋಗುತ್ತಾರೆ. ಸೈಬರ್ ಕ್ರೈಮ್ ಅಡಿ ಪ್ರಕರಣವನ್ನು ಕೂಡ ದಾಖಲಿಸುತ್ತಾರೆ. ಆದರೆ ಇನ್ನೂ ಕೆಲವರು ಇಂತಹ ಯಾವ ಅನಗತ್ಯ ವಿಚಾರಕ್ಕೆ ತಲೆ ಕೆಡಿಸಿಕೊಳ್ಳದೇ ತಮ್ಮದೇ ಕೆಲಸಗಳಲ್ಲಿ ಬ್ಯುಸಿಯಾಗಿರುತ್ತಾರೆ.ಉದಾಹರಣೆಗೆ ನಿವೇದಿತಾ ಗೌಡ.

ಹೌದು, ಕ್ರಿಸ್ಮಸ್ ಮತ್ತು ಹೊಸ ವರ್ಷವನ್ನು ಬರಮಾಡಿಕೊಳ್ಳುವ ನೆಪದಲ್ಲಿ ಸಪ್ತಸಾಗರದಾಚೆ ಹೋಗಿ ತಮ್ಮ ಸೌಂದರ್ಯವನ್ನು ಧಾರಾಳವಾಗಿ ಪ್ರದರ್ಶನ ಮಾಡುತ್ತಲೇ ಸುದ್ದಿಯಾಗುತ್ತಾ ಅನೇಕರ ಕೆಂಗಣ್ಣಿಗೆ ಗುರಿಯಾಗುತ್ತಾ ಬರುತ್ತಿರುವ ನಿವೇದಿತಾ ಗೌಡ ಸದ್ಯ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದಾರೆ. ಈ ಬಾರಿ ಕಡಲ ಕಿನಾರೆಯ ಬಳಿ ನಿಲ್ಲದೇ ಯಾವುದೋ ಇಂಗ್ಲೀಷ್ ಹಾಡಿಗೆ ಹೆಜ್ಜೆ ಹಾಕದೇ ಮಂಚದ ಮೇಲೆ ಅತ್ತಿಂದಿತ್ತ ಹೊರಳಾಡಿದ್ದಾರೆ.
ಸದ್ಯ ಈ ವಿಡಿಯೋ ಅನೇಕರು ಬೆಚ್ಚಿ ಬಿದ್ದಿದ್ದಾರೆ. ಈ ಹುಡುಗಿಯನ್ನೇ ಚಂದನ್ ಶೆಟ್ಟಿ ಮದ್ವೆಯಾಗಿದ್ದಾ ? ಎನ್ನುವ ಅನುಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಎಂದಿನಂತೆ ನಿವೇದಿತಾ ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಈ ವಿಡಿಯೋ ವೈರಲ್ ಆಗಿದೆ. ತರಹೇವಾರಿ ಅಭಿಪ್ರಾಯಗಳು ವ್ಯಕ್ತವಾಗಿವೆ. ಕೆಲವರು ನಿವೇದಿತಾ ಗೌಡ ಅವರನ್ನು ಬಾಲಿವುಡ್‌ನ ಉರ್ಫಿ ಜಾವೇದ್‌ಗೆ ಹೋಲಿಸಿದರೆ ಇನ್ನೂ ಕೆಲವರಿಗೆ ನಿವೇದಿತಾ ಗೌಡ ಅವರ ಈ ಫೋಟೊಗಳನ್ನು ನೋಡಿದ ನಂತರ ಮಿಯಾ ಖಲೀಫಾ ನೆನಪಾಗಿದ್ದಾರೆ. ಎಂದಿನಂತೆ ಇನ್ನು ಹಲವರು ಚಂದನ್ ಶೆಟ್ಟಿ ಅವರ ಹೆಸರನ್ನು ಪ್ರಸ್ತಾಪಿಸುತ್ತಿದ್ದಾರೆ. ಕೆಟ್ಟ ಕಾಮೆಂಟ್‌ಗಳನ್ನು ಮಾಡುವ ಮೂಲಕ ನಿವೇದಿತಾ ಗೌಡ ಅವರನ್ನು ನಿಂದಿಸುತ್ತಿದ್ದಾರೆ. ಇನ್ನೂ ಈ ಕಣ್ಣಲ್ಲಿ ಏನೇನ್ ನೋಡಬೇಕೋ ಎಂದು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಅಂದ್ಹಾಗೇ ನಿವೇದಿತಾ ಗೌಡ ಸಪ್ತಸಾಗರದಾಚೆ ತಾವೊಬ್ಬರೇ ಪ್ರವಾಸಕ್ಕೆ ತೆರಳಿರುವುದಾಗಿ ಹೇಳಿದ್ದರು. ಆದರೆ, ತಮ್ಮ ಈ ಸೋಲೋ ಟ್ರಿಪ್‌ನ ಇಂಚಿಂಚೂ ವಿವರಗಳನ್ನು ಫೋಟೊ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಅನೇಕರಿಗೆ ಈಗ ನಿವೇದಿತಾ ಗೌಡ ಅವರ ಫೋಟೊ ತೆಗೆಯುತ್ತಿರುವ ವ್ಯಕ್ತಿಯಾದರೂ ಯಾರು ಎನ್ನುವ ಪ್ರಶ್ನೆ ಕಾಡುತ್ತಿದೆ. ಯಾರು ಗುರು ಫೋಟೊಗ್ರಾಫರ್ ಎನ್ನುವ ಕಾಮೆಂಟ್ ಜೊತೆ ಕೊಳಕು ಅಸಹ್ಯ ಅಭಿಪ್ರಾಯಗಳು ಕಣ್ಣಿಗೆ ರಾಚುತ್ತಿವೆ.
ಇನ್ನು , ಕ್ರಿಸ್ಮಸ್ ಹಬ್ಬದ ಸುತ್ತ ಮುತ್ತ ನಿವೇದಿತಾ ಗೌಡ ಕಟ್ಟು ಮಸ್ತಾದ ಯುವಕನೊಬ್ಬನ ಜೊತೆ ಬಾನಂಗಳದಲ್ಲಿ ಆಕಾಶಬುಟ್ಟಿಯ ಉಡಾವಣೆಯನ್ನು ಮಾಡಿದ್ದರು. ತಮ್ಮ ಮನದ ಆಸೆ-ಆಕಾಂಕ್ಷೆಗಳೆಲ್ಲ ಈಡೇರಲಿ ಎಂಬ ಪ್ರಾರ್ಥನೆಯನ್ನು ಮಾಡಿದ್ದರು. ಹೀಗಾಗಿ ಬಹುಶಃ ಆ ಸಿಕ್ಸ್ ಪ್ಯಾಕ್ ಸುಂದರನೇ ನಿವೇದಿತಾ ಅವರ ಈ ವಿಡಿಯೋಗಳನ್ನೆಲ್ಲ ಚಿತ್ರೀಕರಿಸುತ್ತಿರಬಹುದಾ ಎನ್ನುವ ಅನುಮಾನ ಅನೇಕರದ್ದು. ವೃತ್ತಿಯಲ್ಲಿ ಫೋಟೊಗ್ರಫರ್ ಕೂಡ ಆ ವ್ಯಕ್ತಿಯಾಗಿರುವ ಹಿನ್ನೆಲೆ ಈ ಸಾಧ್ಯತೆಯನ್ನು ಅಲ್ಲಗೆಳೆಯುವಂತೆ ಇಲ್ಲ ಎನ್ನುತ್ತಿದ್ದಾರೆ ಅನೇಕರು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನಾಲ್ಕು ಘಂಟೆಗಳಲ್ಲಿ ನಲವತ್ತು ಸಾವಿರಕ್ಕೂ ಅಧಿಕ ಜನ ಈ ವಿಡಿಯೋವನ್ನು ಮೆಚ್ಚಿಕೊಂಡಿದ್ದಾರೆ.


Click it and Unblock the Notifications











