ಮತ್ತೆ ಬಾತ್‌ರೂಮ್ ಸೇರಿಕೊಂಡು ಐ ಮಿಸ್ ಯೂ ಎಂದ ನಿವೇದಿತಾ ಗೌಡ,ಯಾರು ಆ ಸುರಸುಂದರಾಂಗ ಎನ್ನುವುದೇ ಪ್ರಶ್ನೆ..!

By ಫಿಲ್ಮಿಬೀಟ್ ಡೆಸ್ಕ್

ಚಿತ್ರರಂಗದಲ್ಲಿರುವ ಅನೇಕರು ಏನೇ ಮಾಡಿದರು ನೋಡುಗರಿಗದು ಎಲೆ ಅಡಿಕೆಯೇ. ಕೆಮ್ಮಿದರೂ ಸುದ್ದಿ, ಪಾರ್ಟಿ ಮಾಡಿದರೂ ಸುದ್ದಿ, ಬಿಕಿನಿ ಹಾಕಿಕೊಂಡರು ಸುದ್ದಿ, ಅಷ್ಟರ ಮಟ್ಟಿಗೆ ಸೆಲೆಬ್ರೆಟಿಗಳ ವ್ಯೆಯಕ್ತಿಕ ಬದುಕು ಮೂರಾ ಬಟ್ಟೆಯಾಗಿರುತ್ತೆ. ಇನ್ನು ಮದುವೆ ಆಗಿ ಆ ನಂತರ ವಿಚ್ಛೇದನವಾಗಿದ್ದರಂತೂ ಮುಗೀತು. ಕಾಲೆಳೆಯಲು ಅಂತಾನೇ ಇರುವ ಒಂದು ಗುಂಪು ಇವರ ಮೇಲೆ ನಿಗಾ ವಹಿಸಿರುತ್ತೆ. ಚೂರು ಎಲ್ಲಾದರೂ ಎಡವಿದರೂ ಸಾಕು ಟ್ರೋಲ್ ಮಾಡುತ್ತೆ. ಹೀಗೆ ಟ್ರೋಲ್ ಆದಾಗೆಲ್ಲ ಕೆಲವರು ತಲೆ ಕೆಡಿಸಿಕೊಳ್ಳುತ್ತಾರೆ. ಇನ್ನು ಹಲವರು ಚಲ್ತಾ ಹೈ ಎಂದು ಮುನ್ನಡೆಯುತ್ತಾರೆ. ಉದಾಹರಣೆಗೆ ನಿವೇದಿತಾ ಗೌಡ.

ಹೌದು, ಇಲ್ಲಿಯವರೆಗೆ ನಿವೇದಿತಾ ಗೌಡ ಅವರ ಮೇಲೆ ಅನೇಕರು ಕೆಂಡ ಕಾರಿದ್ದಾರೆ. ಚಂದನ್ ಶೆಟ್ಟಿ ಜೊತೆ ಇದ್ದಾಗಲೂ ಇವರನ್ನು ಬ್ಯೆಯುತ್ತಿದ್ದ ಅನೇಕರು, ಈಗ ಚಂದನ್ ಶೆಟ್ಟಿ ಅವರಿಂದ ನಿವೇದಿತಾ ದೂರವಾದ ನಂತರವೂ ಕೂಡ ತೆಗಳುವ ಕಾರ್ಯಕ್ರಮವನ್ನು ಮುಂದುವರೆಸಿದ್ದಾರೆ. ಇದಕ್ಕೆ ನಿವೇದಿತಾ ಗೌಡ ಅವರ ರೀಲ್ಸ್ ಹವ್ಯಾಸ ಪ್ರಮುಖ ಕಾರಣ ಅನ್ನುವುದು ಮತ್ತೆ ಪ್ರತೈಕವಾಗಿ ಹೇಳಬೇಕಿಲ್ಲ. ಆದರೂ ನಿವೇದಿತಾ ಗೌಡ ತಲೆ ಕೆಡಿಸಿಕೊಂಡಿಲ್ಲ. ರೀಲ್ಸ್ ಮಾಡುವುದನ್ನು ಕಡಿಮೆ ಮಾಡಿಲ್ಲ. ಬದಲಿಗೆ ಇನ್ನೂ ಹೆಚ್ಚೆಚ್ಚು ರೀಲ್ಸ್ ಮಾಡುತ್ತಿದ್ದಾರೆ. ರೀಲ್ಸ್ ಮಾಡಲೆಂದೇ ತಮ್ಮ ಮನೆಯ ಬಾತ್‌ರೂಮ್‌ದಿಂದ ಹೊರ ಬಂದು ಸಪ್ತಸಾಗರದಾಚೆ ಪ್ರವಾಸವನ್ನು ಕೈಗೊಂಡು ಫುಲ್ ಜಾಲಿ ಮಾಡುತ್ತಿದ್ದಾರೆ. ಮತ್ತೊಂದು ವಿಡಿಯೋವನ್ನು ಬಾತ್‌ರೂಮ್‌ದಿಂದ ಹಂಚಿಕೊಂಡಿದ್ದಾರೆ

Former Bigg Boss contestant Niveditha Gowda shared a new video in a bathing gown

ಬಾತ್ ರೂಮ್‌ ಡ್ರೆಸ್‌ ಹಾಕಿಕೊಂಡು ನಿವೇದಿತಾ ಗೌಡ ಮಾದಕವಾಗಿ ತಮ್ಮ ಮೈಮಾಟದ ಪ್ರದರ್ಶನವನ್ನು ಮಾಡಿದ್ದಾರೆ. ಹಿನ್ನೆಲೆಯಲ್ಲಿ ಐ ಮಿಸ್ ಯೂ ಎಂಬ ಮ್ಯೂಸಿಕ್ಕು ನಿವೇದಿತಾ ಗೌಡ ಅವರ ಲುಕ್ಕಿನ ಕಿಕ್ಕೇರಿಸುತ್ತೆ. ಒಂದೇ ವಿಡಿಯೋದಲ್ಲಿ ಎರಡು ಬಟ್ಟೆಯಲ್ಲಿ ನಿವೇದಿತಾ ಗೌಡ ದರ್ಶನ ನೀಡಿದ್ದು ಸದ್ಯ ನಿವೇದಿತಾ ಗೌಡ ಅವರನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುವ ಅನೇಕರು ಈ ವಿಡಿಯೋ ಕಂಡು ಕಣ್ಣರಳಿಸಿದ್ದಾರೆ.

ಇನ್ನು ಯಾರೇ ಹೋರಾಡಲಿ, ಬಾತ್‌ ರೂಮ್ ಅಲ್ಲಾಡಲಿ ಅನ್ನುವ ಮನಸ್ಥಿತಿ ನಿವೇದಿತಾ ಗೌಡ ಅವರದ್ದು. ಮನೆಯ ಲಿವಿಂಗ್ ರೂಮ್‌ಗಿಂತ ನಿವೇದಿತಾ ಬಾತ್ ರೂಮ್‌ನಲ್ಲಿಯೇ ಹೆಚ್ಚಿರುತ್ತಾರೆ. ಇದಕ್ಕೆ ಇನ್ನೊಂದು ಕೈಗನ್ನಡಿ ಎಂಬಂತೆ ಇರುವ ಈ ವಿಡಿಯೋ ಸದ್ಯ ಹಲವಾರು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದೆ. ಎಂದಿನಂತೆ ನಿವೇದಿತಾ ಗೌಡ ಅವರ ಮೇಲೆ ಕೆಂಡ ಕಾರುತ್ತಿರುವ ಅನೇಕರು ಬೇಕು ಬೇಕಂತಲೇ ಈ ತರಹದ ವಿಡಿಯೋಗಳನ್ನು ಮಾಡುವುದಾ ನೀವು ಎನ್ನುವ ಪ್ರಶ್ನೆ ಮಾಡುತ್ತಿದ್ದಾರೆ. ಬಯ್ಯೋಣ ಎಂದುಕೊಂಡರೆ ಇವರಿಗೆ ಕನ್ನಡ ಬೇರೆ ಬರಲ್ಲ ಎಂದು ತಮ್ಮ ಅಸಹಾಯಕತೆಯ ಪ್ರದರ್ಶನ ಮಾಡುತ್ತಿದ್ದಾರೆ.ಇನ್ನು ಹಲವರು ಚಂದನ್ ಶೆಟ್ಟಿ ಅವರ ಹೆಸರನ್ನು ಪ್ರಸ್ತಾಪಿಸುತ್ತಿದ್ದಾರೆ. ಕೆಟ್ಟ ಕಾಮೆಂಟ್‌ಗಳನ್ನು ಮಾಡುವ ಮೂಲಕ ನಿವೇದಿತಾ ಗೌಡ ಅವರನ್ನು ನಿಂದಿಸುತ್ತಿದ್ದಾರೆ.

ಅಂದ್ಹಾಗೇ ನಿವೇದಿತಾ ಗೌಡ ಹಂಚಿಕೊಂಡ ಈ ಹೊಸ ವಿಡಿಯೋದಲ್ಲಿನ ಹಿನ್ನೆಲೆಯಲ್ಲಿ ಕೇಳಿ ಬರುವ ಐ ಮಿಸ್ ಯೂ ಎಂಬ ಸಾಲು ಅನೇಕರಲ್ಲಿ ಪ್ರಶ್ನೆ ಹುಟ್ಟುಹಾಕಿದೆ. ನಿವೇದಿತಾ ಯಾರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಪ್ರಶ್ನೆ ಅದು. ಕೆಲವರ ಪ್ರಕಾರ ನಿವೇದಿತಾ ಗೌಡ ಚಂದನ್ ಶೆಟ್ಟಿ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿಯೇ ಚಂದನ್ ಶೆಟ್ಟಿ ನಿಮ್ಮ ಫೋನ್ ರಿಸೀವ್ ಮಾಡಲ್ಲ ಬಿಡಿ ಎನ್ನುವ ಕಾಮೆಂಟ್‌ ಹಾಕುತ್ತಿದ್ದಾರೆ ಕೆಲವರು. ಇನ್ನು ನಿವೇದಿತಾ ಗೌಡ ಹೊರ ದೇಶಕ್ಕೆ ಪ್ರವಾಸಕ್ಕೆ ಹೋದಾಗ ನಿವೇದಿತಾ ಗೌಡ ಕಟ್ಟು ಮಸ್ತಾದ ಯುವಕನೊಬ್ಬನ ಜೊತೆ ಬಾನಂಗಳದಲ್ಲಿ ಆಕಾಶಬುಟ್ಟಿಯ ಉಡಾವಣೆಯನ್ನು ಮಾಡಿದ್ದರು. ತಮ್ಮ ಮನದ ಆಸೆ-ಆಕಾಂಕ್ಷೆಗಳೆಲ್ಲ ಈಡೇರಲಿ ಎಂಬ ಪ್ರಾರ್ಥನೆಯನ್ನು ಮಾಡಿದ್ದರು. ಹೀಗಾಗಿ ಬಹುಶಃ ಆ ಸಿಕ್ಸ್ ಪ್ಯಾಕ್‌ ಸುಂದರನನ್ನೇ ನಿವೇದಿತಾ ಗೌಡ ಮಿಸ್ ಮಾಡಿಕೊಳ್ಳುತ್ತಿರಬಹುದಾ ಎನ್ನುವ ಅನುಮಾನ ಅನೇಕರದ್ದು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X