ಮಂಚದ ಮೇಲೇರಿದ ನಿವೇದಿತಾ ಗೌಡ, ಫೋಟೋಗ್ರಾಫರ್ ಯಾರು ಎನ್ನುವುದೇ ಪ್ರಶ್ನೆ...!

ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಆಗಲು ಏನೆಲ್ಲ ಮಾಡಬಾರದೋ ಅದೆಲ್ಲವನ್ನು ಚಾಚು ತಪ್ಪದೇ ಪಾಲಿಸಿಕೊಂಡು ಬರುತ್ತಿರುವವರು ನಿವೇದಿತಾ ಗೌಡ. ಅದರಲ್ಲಿಯೂ ಕಳೆದ ಮೂರು ನಾಲ್ಕು ವಾರಗಳಿಂದ ನಿವೇದಿತಾ ಗೌಡ ಟ್ರೋಲಿಗರ ಪಾಲಿಗೆ ತಾಂಬೂಲವೇ ಆಗಿದ್ದಾರೆ.

ಹೊರ ದೇಶದಲ್ಲಿ ತಮ್ಮ ಪಾಡಿಗೆ ತಾವು ನಿವೇದಿತಾ ಮಸ್ತ್ ಮಜಾ ಮಾಡುತ್ತಿದ್ದರೆ ಇಲ್ಲಿ ಅನೇಕರ ಕಣ್ಣು ಕೆಂಪಾಗುತ್ತಿದೆ. ಇನ್ನೂ ಹಲವರ ಹೊಟ್ಟೆ ಧಗಧಗ ಎಂದು ಉರಿಯುತ್ತಿದೆ. ಇದಕ್ಕೆ ಇನ್ನೊಂದು ಉದಾಹರಣೆಯೆನ್ನುವಂತೆ ನಿವೇದಿತಾ ಗೌಡ ಹಂಚಿಕೊಂಡ ಕೆಲ ಫೋಟೊಗಳು ಕ್ಷಣಾರ್ಧದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

Former Bigg Boss contestant Niveditha Gowda strikes a pose on the bed netizens react

ಹೌದು, ಕಳೆದ ಹತ್ತು ಹದಿನೈದು ದಿನಗಳಿಂದ ಪಡ್ಡೆ ಹುಡುಗರನ್ನು ಕೆಣಕುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಾ ಬರುತ್ತಿರುವ ನಿವೇದಿತಾ ಗೌಡ ಒಂದಾದ ಮೇಲೊಂದು ವಿಡಿಯೋಗಳನ್ನು ಹಂಚಿಕೊಂಡು ಸೋಶಿಯಲ್ ಮೀಡಿಯಾ ಪ್ರಪಂಚದಲ್ಲಿ ಟ್ರೆಂಡಿಂಗ್‌ನಲ್ಲಿದ್ದಾರೆ. ಇವರ ಹಾವ ಭಾವ ಬದಲಾದ ಜೀವನ ಶೈಲಿ ಹಾಕಿಕೊಳ್ಳುತ್ತಿರುವ ಬಟ್ಟೆಗಳನ್ನು ಕಂಡು ಅನೇಕರು ಬೆಕ್ಕಸ ಬೆರಗಾಗಿದ್ದಾರೆ.

ಇಂಥಾ ನಿವೇದಿತಾ ಗೌಡ ಮೊನ್ನೆ ಮೊನ್ನೆಯಷ್ಟೇ ಟೂ ಪೀಸ್‌ನಲ್ಲಿ ಕಾಣಿಸಿಕೊಂಡಿದ್ದರು. ತಮ್ಮ ಸಪೂರವಾದ ಸೊಂಟವನ್ನು ಬಳುಕಿಸಿ ಕಚಗುಳಿ ಇಟ್ಟಿದ್ದರು. ಈಗ ನಿವೇದಿತಾ ಗೌಡ ಮಂಚದ ಮೇಲೆ ಏರಿದ್ದಾರೆ. ಎರಡು ಮೂರು ಭಂಗಿಯಲ್ಲಿ ಫೋಸ್ ನೀಡಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಆ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಎಂದಿನಂತೆ ನಿವೇದಿತಾ ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಈ ಫೋಟೊಗಳು ಕೂಡ ವೈರಲ್ ಆಗಿವೆ. ಹತ್ತು ಹಲವು ರೀತಿಯ ಅಭಿಪ್ರಾಯಗಳು ವ್ಯಕ್ತವಾಗಿವೆ.

Former Bigg Boss contestant Niveditha Gowda strikes a pose on the bed netizens react

ಕೆಲವರು ನಿವೇದಿತಾ ಗೌಡ ಅವರನ್ನು ಬಾಲಿವುಡ್‌ನ ಉರ್ಫಿ ಜಾವೇದ್‌ಗೆ ಹೋಲಿಸಿದರೆ ಇನ್ನೂ ಕೆಲವರಿಗೆ ನಿವೇದಿತಾ ಗೌಡ ಅವರ ಈ ಫೋಟೊಗಳನ್ನು ನೋಡಿದ ನಂತರ ಮಿಯಾ ಖಲೀಫಾ ನೆನಪಾಗಿದ್ದಾರೆ. ಎಂದಿನಂತೆ ಇನ್ನು ಹಲವರು ಚಂದನ್ ಶೆಟ್ಟಿ ಅವರ ಹೆಸರನ್ನು ಪ್ರಸ್ತಾಪಿಸುತ್ತಿದ್ದಾರೆ. ಕೆಟ್ಟ ಕಾಮೆಂಟ್‌ಗಳನ್ನು ಮಾಡುವ ಮೂಲಕ ನಿವೇದಿತಾ ಗೌಡ ಅವರನ್ನು ನಿಂದಿಸುತ್ತಿದ್ದಾರೆ.

ಅಂದ್ಹಾಗೇ ನಿವೇದಿತಾ ಗೌಡ ಸಪ್ತಸಾಗರದಾಚೆ ತಾವೊಬ್ಬರೇ ಪ್ರವಾಸಕ್ಕೆ ತೆರಳಿರುವುದಾಗಿ ಹೇಳಿದ್ದರು. ಆದರೆ, ತಮ್ಮ ಈ ಸೋಲೋ ಟ್ರಿಪ್‌ನ ಇಂಚಿಂಚೂ ವಿವರಗಳನ್ನು ಫೋಟೊ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಅನೇಕರಿಗೆ ಈಗ ನಿವೇದಿತಾ ಗೌಡ ಅವರ ಫೋಟೊ ತೆಗೆಯುತ್ತಿರುವ ವ್ಯಕ್ತಿಯಾದರೂ ಯಾರು ಎನ್ನುವ ಪ್ರಶ್ನೆ ಕಾಡುತ್ತಿದೆ.

ಇನ್ನು, ಕ್ರಿಸ್ಮಸ್ ಹಬ್ಬದ ಸುತ್ತ ಮುತ್ತ ನಿವೇದಿತಾ ಗೌಡ ಕಟ್ಟು ಮಸ್ತಾದ ಯುವಕನೊಬ್ಬನ ಜೊತೆ ಬಾನಂಗಳದಲ್ಲಿ ಆಕಾಶಬುಟ್ಟಿಯ ಉಡಾವಣೆಯನ್ನು ಮಾಡಿದ್ದರು. ತಮ್ಮ ಮನದ ಆಸೆ-ಆಕಾಂಕ್ಷೆಗಳೆಲ್ಲ ಈಡೇರಲಿ ಎಂಬ ಪ್ರಾರ್ಥನೆಯನ್ನು ಮಾಡಿದ್ದರು. ಹೀಗಾಗಿ ಬಹುಶಃ ಆ ಸಿಕ್ಸ್ ಪ್ಯಾಕ್‌ ಸುಂದರನೇ ನಿವೇದಿತಾ ಅವರ ಈ ಫೋಟೊಗಳನ್ನೆಲ್ಲ ತೆಗೆಯುತ್ತಿರಬಹುದು ಎನ್ನುವ ಅನುಮಾನ ಅನೇಕರದ್ದು. ವೃತ್ತಿಯಲ್ಲಿ ಫೋಟೊಗ್ರಫರ್ ಕೂಡ ಆ ವ್ಯಕ್ತಿಯಾಗಿರುವ ಹಿನ್ನೆಲೆ ಈ ಸಾಧ್ಯತೆಯನ್ನು ಅಲ್ಲಗೆಳೆಯುವಂತೆ ಇಲ್ಲ ಎನ್ನುತ್ತಿದ್ದಾರೆ ಅನೇಕರು.

ಇನ್ನುಳಿದಂತೆ 'ವಾಲು ಕಳ್ಳತಾ' ಹಾಡಿನ ಮೂಲಕ ತೆಲುಗು ಚಿತ್ರರಂಗವನ್ನು ಪ್ರವೇಶಿಸಿರುವ ನಿವೇದಿತಾ ಗೌಡ ಸದ್ಯ ಕನ್ನಡ ಮತ್ತು ತೆಲುಗಿನಲ್ಲಿ ಒಳ್ಳೆಯ ಅವಕಾಶಗಳನ್ನು ಎದುರು ನೋಡುತ್ತಿದ್ದಾರೆ. ಇನ್ನು ಮಾಜಿ ಪತಿ ಚಂದನ್ ಶೆಟ್ಟಿ ಜೊತೆ ನಿವೇದಿತಾ ಗೌಡ 'ಮುದ್ದು ರಾಕ್ಷಸಿ' ಎಂಬ ಚಿತ್ರದಲ್ಲಿ ಕೂಡ ಆಕ್ಟ್ ಮಾಡಿದ್ದಾರೆ. ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಪುನೀತ್ ಶ್ರೀನಿವಾಸ್ ಈ ಚಿತ್ರದ ಕಥೆ ಚಿತ್ರಕಥೆಯನ್ನು ಬರೆದು ನಿರ್ದೇಶಿಸಿದ್ದಾರೆ. ಮೋಹನ್ ಕುಮಾರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇನ್ನೂ ಸೈಕೋ ಥ್ರಿಲ್ಲರ್ ಕಥಾಹಂದರ ಈ ಚಿತ್ರದ ಚಿತ್ರೀಕರಣ ಬಹುತೇಕ ಬೆಂಗಳೂರಿನಲ್ಲಿಯೇ ನಡೆದಿದೆ. ಎಂ ಎಸ್ ತ್ಯಾಗರಾಜ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಎ ಕರುಣಾಕರ್ ಚಿತ್ರದ ಛಾಯಾಗ್ರಹಣ ಮಾಡಿದ್ದಾರೆ. ಈ ಚಿತ್ರ ಈ ವರ್ಷ ತೆರೆಗೆ ಬರಲಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X