ಟ್ರೋಲ್, ನೆಗೆಟಿವ್ ಕಾಮೆಂಟ್ಸ್ ಎದುರಿಸೋಕೆ ಸೋನು ಗೌಡಾಗೆ ಸ್ಪೂರ್ತಿ ಈ 'ಟಾಪ್' ನಟಿ?

By ಫಿಲ್ಮಿಬೀಟ್ ಡೆಸ್ಕ್

ಟಿಕ್ ಟಾಕ್‌ನಿಂದ ಜನರಿಗೆ ಪರಿಚಿತರಾಗಿ ಬಳಿಕ ಇನ್‌ಸ್ಟಾಗ್ರಾಮ್ ಮೂಲಕ ಮತ್ತಷ್ಟು ಟ್ರೋಲ್, ನೆಗೆಟಿವ್ ಕಾಮೆಂಟ್‌ಗಳಿಂದ ಎಲ್ಲೆಡೆ ಕಾಣಿಸಿಕೊಂಡವರು ಸೋನುಗೌಡ. ಯಾರು ಎಷ್ಟೇ ಟ್ರೋಲ್ ಮಾಡಿದರೂ ತಲೆ ಕೆಡಿಸಿಕೊಳ್ಳದ ಇವರಿಗೆ ಒಬ್ಬ ನಟಿ ಇನ್ಸ್ಪಿರೇಷನ್ ಅಂತೆ. ಅವರು ಕೂಡ ಹೆಚ್ಚು ಟ್ರೋಲ್‌ಗೆ ಒಳಗಾದವರೇ.

ಕನ್ನಡ ಸಿನಿಮಾದಿಂದ ತಮ್ಮ ವೃತ್ತಿಜೀವನ ಆರಂಭಿಸಿದ ನಟಿ ರಶ್ಮಿಕಾ ಮಂದಣ್ಣ ಇಂದು ಹಲವು ಭಾಷೆಗಳ ಸಿನಿಮಾಗಳಲ್ಲಿ ಟಾಪ್ ನಟಿಯಾಗಿ ಮಿಂಚುತ್ತಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾದಿಂದ ಚಿತ್ರರಂಗದ ನಂಟು ಬೆಳೆಸಿಕೊಂಡ ಇವರು ಕನ್ನಡ, ತಮಿಳುಮ ತೆಲುಗು ಸೇರಿದಂತೆ ಈಗ ಹಿಂದಿಯಲ್ಲೂ ಕಮಾಲ್ ಮಾಡುತ್ತಿದ್ದಾರೆ. ಇವರೇ ಸೋನು ಶ್ರೀನಿವಾಸ್ ಗೌಡ ಅವರಿಗೂ ಸ್ಪೂರ್ತಿ ಅಂತೆ!.

sonu-gowda

ರಶ್ಮಿಕಾ ಅವರೇ ನನಗೆ ಇನ್ಸ್ಪಿರೇಷನ್ ಎಂದ ಸೋನು ಗೌಡ!

ಕನ್ನಡದ ಮ್ಯೂಸಿಕ್ ಚಾನೆಲ್ 'ಪಬ್ಲಿಕ್ ಮ್ಯೂಸಿಕ್‌'ನಲ್ಲಿ ಮಾತನಾಡಿರುವ ನಟಿ ಸೋನು ಗೌಡ, ತಾನು ರಶ್ಮಿಕಾ ಮಂದಣ್ಣ ಅವರ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಟ್ರೋಲ್‌ಗಳು, ನೆಗೆಟಿವಿಟಿಯಿಂದ ಹೇಗೆ ಹೊರಬರುವುದು ಎಂಬುದನ್ನು ರಶ್ಮಿಕಾ ಅವರನ್ನು ನೋಡಿ ಕಲಿತಿದ್ದೇನೆ ಎಂದಿದ್ದಾರೆ.

"ನಾನು ರಶ್ಮಿಕಾ ಮಂದಣ್ಣ ಅವರಿಂದ ತುಂಬಾ ಕಲಿತಿದ್ದಿನಿ. ಅವರನ್ನು ಹೇಟ್ ಮಾಡುವವರು ಇದ್ದಾರೆ ಇರಲಿ... ಆದರೆ ನಾನು ಅವರನ್ನು ನೋಡಿನೇ ಹೇಗೆ ಕೆಟ್ಟ ಕಾಮೆಂಟ್, ಟ್ರೋಲ್‌ಗಳನ್ನು ಇಗ್ನೋರ್ ಮಾಡುವುದು ಅನ್ನೋದನ್ನ ಕಲಿತಿದ್ದಿನಿ. ಅವರು ಹೆಂಗೆ ಇಗ್ನೋರ್ ಮಾಡ್ತಾರೆ ಅನ್ನೋದನ್ನ ನೋಡಿದ್ದಿನಿ. ಜನ ಅಷ್ಟು ಟ್ರೋಲ್ ಮಾಡ್ತಾರೆ ಅಂದರೆ, ಅವರಿಗೆ ನಮ್ಮ ಸಾಧನೆಯಿಂದ ಉತ್ತರ ಕೊಡಬೇಕು" ಎಂದು ಸೋನು ಗೌಡ ಹೇಳಿದ್ದಾರೆ.

ರಶ್ಮಿಕಾ ಮಂದಣ್ಣರಂತೆ ನಾನು ಬೆಳೆಯಬೇಕು, ನಾನು ಅವರ ಬಿಂಬ ಎಂದ ಸೋನು!

ಕನ್ನಡ ಸಿನಿಮಾ ಕಿರಿಕ್ ಪಾರ್ಟಿಯಿಂದ ತಮ್ಮ ಸಿನಿ ಪ್ರಯಾಣ ಆರಂಭಿಸಿ ಈಗ ಟಾಲಿವುಡ್, ಬಾಲಿವುಡ್ ರೇಂಜ್‌ಗೆ ಬೆಳೆದಿರುವ ರಶ್ಮಿಕಾ ಮಂದಣ್ಣ ಅವರಂತೆಯೇ ಸೋನು ಗೌಡ ಕೂಡ ಬೆಳೆಯಬೇಕಂತೆ. "ನಾನು ರಶ್ಮಿಕಾ ಅವರಂತೆಯೇ ಬೆಳೆಯಬೇಕು. ಕನ್ನಡದಲ್ಲೂ ಸಿನಿಮಾ ಮಾಡುತ್ತಾ.... ಅವರು ಹೇಗೆ ಬೇರೆ ಭಾಷೆಗಳಲ್ಲಿ ಬೆಳೆಯುತ್ತಾರೋ ಹಾಗೆ" ಎಂದು ತಮ್ಮ ಮನದಾಸೆ ಹೊರಹಾಕಿದ್ದಾರೆ,.

sonu-gowda

"ಅವರು ಈಗ ದೊಡ್ಡ ದೊಡ್ಡ ಸ್ಟಾರ್‌ಗಳ ಜೊತೆಗೆ ಕೆಲಸ ಮಾಡಿದ್ದಾರೆ. ಅಮಿತಾಬ್ ಬಚ್ಚನ್ ಅವರೊಂದಿಗೆ ಕೆಲಸ ಮಾಡಿದ್ದಾರೆ. ಅದೆಲ್ಲಾ ಅಷ್ಟು ಸುಲಭವಲ್ಲ. ನಿಜ ಹೇಳಬೇಕೆಂದರೆ ನಾನು ರಶ್ಮಿಕಾ ಅವರ್ ಬಿಂಬ" ಎಂದು ಸೋನು ತಮ್ಮನ್ನು ತಾವು ರಶ್ಮಿಕಾ ಮಂದಣ್ಣ ಅವರಿಗೆ ಹೋಲಿಸಿಕೊಂಡಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಮಾಡಿದ್ದು ಮಾತ್ರವಲ್ಲ ಕನ್ನಡದಲ್ಲೂ ಕಿರಿಕ್ ಮಾಡಿಕೊಂಡಿದ್ದಾರೆ ಎಂದು ಅವರನ್ನು ಟ್ರೋಲ್ ಮಾಡುವವರು ಆಡಿಕೊಳ್ಳುತ್ತಾರೆ. ಹಲವು ಬಾರಿ ಕನ್ನಡ, ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡದ ಅವರನ್ನು ಟ್ರೋಲ್ ಮತ್ತು ನೆಗೆಟಿವ್ ಕಾಮೆಂಟ್‌ಗಳು ಸುತ್ತಿಕೊಂಡಿವೆ. ನಟ ರಕ್ಷಿತ್ ಶೆಟ್ಟಿ ಜೊತೆಗಿನ ನಿಶ್ಚಿತಾರ್ಥ ಮುರಿದುಕೊಂಡ ಕಾರಣಕ್ಕೂ ಅವರನ್ನು ಮತ್ತಷ್ಟು ಹೇಟ್ ಮಾಡಲಾಗುತ್ತದೆ. ಆದರೆ, ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಅವರು ತೆಲುಗು, ತಮಿಳು ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.

ಇತ್ತ, ಸೋನುಗೌಡ ತನ್ನನ್ನು ಟ್ರೋಲ್ ಮಾಡಬೇಡಿ ಎಂದು ಕಣ್ಣೀರು ಹಾಕಿ ವಿಡಿಯೋ ಮಾಡಿ ಮತ್ತೆರಡು ದಿನಗಳಲ್ಲಿಯೇ ಮಾಲ್ಡಿವ್ಸ್ ಟ್ರಿಪ್ ಹೋಗಿ ಫೋಟೋ, ವಿಡಿಯೋಗಳ ಮೂಲಕ ಟ್ರೋಲರ್ಸ್‌ಗೆ ಮತ್ತಷ್ಟು ಅವಕಾಶ ನೀಡಿದ್ದರು. ಈಗ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳುತ್ತಿರುವ ಅವರಿಗೆ ಸಿನಿರಂಗದಲ್ಲಿ ಮಿಂಚುವ ಆಸೆಯಿದೆ.

More from Filmibeat

English summary
Former Bigg Boss contestant Sonu Gowda says that Rashmika Mandanna is an inspiration to her.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X