For Quick Alerts
  ALLOW NOTIFICATIONS  
  For Daily Alerts

  ಕಿಡ್ನ್ಯಾಪ್ ಪ್ರಕರಣದಲ್ಲಿ ಬಂಧನವಾಗಿದ್ದ ಸುನಾಮಿ ಕಿಟ್ಟಿಗೆ ಜಾಮೀನು

  By Bharath Kumar
  |
  ಬಿಗ್ ಬಾಸ್ ಸುನಾಮಿ ಕಿಟ್ಟಿ ಕಿಡ್ನಾಪ್ ಕಥೆ ಎಲ್ಲಿಗೆ ಬಂದಿದೆ ? | Filmibeat Kannada

  'ಬಿಗ್ ಬಾಸ್' ಸೇರಿದಂತೆ ಕನ್ನಡದ ಕೆಲವು ರಿಯಾಲಿಟಿ ಶೋಗಳ ಮೂಲಕ ಹೆಸರು ಮಾಡಿದ್ದ ಸುನಾಮಿ ಕಿಟ್ಟಿ ಮಾರ್ಚ್ ತಿಂಗಳಲ್ಲಿ ಜೈಲು ಪಾಲಾಗಿದ್ದರು. ತನ್ನ ಸ್ನೇಹಿತ ಸುನಿಲ್ ಪತ್ನಿಯ ಪ್ರಿಯಕರ ತೌಶೀಕ್ ನನ್ನ ಕಿಡ್ನಾಪ್ ಮಾಡಿ, ಹಲ್ಲೆ ಮಾಡಿರುವ ಆರೋಪದಡಿ ಬಂಧನವಾಗಿದ್ದರು.

  ನ್ಯಾಯಾಂಗ ಬಂಧನದಲ್ಲಿದ್ದ ಸುನಾಮಿ ಕಿಟ್ಟಿ ನ್ಯಾಯಾಲಯದಲ್ಲಿ ಜಾಮೀನು ಸರ್ಜಿಯನ್ನ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯನ್ನ ನ್ಯಾಯಮೂರ್ತಿ ಜಾನ್‌ ಮೈಕೆಲ್ ಕುನ್ಹ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿದೆ.

  1 ಲಕ್ಷ ಮೊತ್ತದ ಬಾಂಡ್, ಒಬ್ಬರ ಭದ್ರತೆ ನೀಡಬೇಕು, ಸಾಕ್ಷ್ಯ ನಾಶಪಡಿಸಬಾರದು, ತನಿಖೆಗೆ ಸಹಕರಿಸಬೇಕು, ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಅನುಮತಿ ಇಲ್ಲದೆ ವ್ಯಾಪ್ತಿ ಪ್ರದೇಶ ಬಿಟ್ಟು ಹೊರಗೆ ಹೋಗುವಂತಿಲ್ಲ ಎಂದು ಷರತ್ತು ವಿಧಿಸಿ ಜಾಮೀನು ನೀಡಿದೆ.

  ಸುನಾಮಿ ಕಿಟ್ಟಿ ಕಿಡ್ನಾಪ್ ಪ್ರಕರಣ : ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಸುನಿಲ್ ಪತ್ನಿಸುನಾಮಿ ಕಿಟ್ಟಿ ಕಿಡ್ನಾಪ್ ಪ್ರಕರಣ : ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಸುನಿಲ್ ಪತ್ನಿ

  ತನ್ನ ಸ್ನೇಹಿತ ಸುನಿಲ್ ಪತ್ನಿಯ ಪ್ರಿಯಕರ ತೌಶೀಕ್ ನನ್ನ ಕಿಡ್ನಾಪ್ ಮಾಡಿ ಹೊರಮಾವು ಬಳಿಯ ತೋಟದ ಮನೆಗೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿ ಚಾಕುವಿನಿಂದ ತೌಶೀಕ್ ಎದೆ ಮತ್ತು ತೊಡೆ ಭಾಗಕ್ಕೆ ಸುನಾಮಿ ಕಿಟ್ಟಿ ಮತ್ತು ಸುನೀಲ್ ಟೀಮ್ ಇರಿದಿದ್ದರು. ಬಳಿಕ ಜ್ಞಾನ ಭಾರತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸುನಾಮಿ ಕಿಟ್ಟಿ ಯೋಗೇಂದ್ರ ಮತ್ತು ಅರ್ಜುನ್ ನನ್ನು ಬಂದಿಸಿದ್ದರು.

  ಕಿಡ್ನಾಪ್ ಕೇಸ್ ನಲ್ಲಿ 'ಬಿಗ್ ಬಾಸ್' ಸ್ಪರ್ಧಿ ಸುನಾಮಿ ಕಿಟ್ಟಿ ಅರೆಸ್ಟ್ !ಕಿಡ್ನಾಪ್ ಕೇಸ್ ನಲ್ಲಿ 'ಬಿಗ್ ಬಾಸ್' ಸ್ಪರ್ಧಿ ಸುನಾಮಿ ಕಿಟ್ಟಿ ಅರೆಸ್ಟ್ !

  ಘಟನೆ ನಡೆದದ್ದು 2018ನೇ ಫೆಬ್ರುವರಿ 25ರಂದು. ಆದರೆ, ಪೊಲೀಸ್ ಠಾಣೆಯಲ್ಲಿ 2018ರ ಮಾರ್ಚ್‌ 2 ರಂದು ದೂರು ದಾಖಲಿಸಲಾಗಿತ್ತು.

  English summary
  Former Bigg Boss contestant and winner of reality shows Indian and Thaka Dhimi Tha Dancing Star, Tsunami Kitty, who is also known as Pradeep has been released on bail.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X