twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರಕಥೆಗೆ ಮನಸೋತು ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ಮಾಜಿ ಸಿಎಂ ಯಡಿಯೂರಪ್ಪ!

    |

    ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಸಿಎಂ ಸ್ಥಾನದಿಂದ ಇಳಿದ ನಂತರ ಸಧ್ಯ ತಮ್ಮ ಕುಟುಂಬ, ಆರೋಗ್ಯದ ಬಗ್ಗೆ ಹೆಚ್ಚು ಗಮನವನ್ನು ಹರಿಸಿದ್ದಾರೆ. ರಾಜ್ಯದ ಸಿಎಂ ಆಗಿ ಕಾರ್ಯ ನಿರ್ವಹಿಸುವಾಗ ಅತ್ಯಂತ ಶಿಸ್ತಿನಿಂದ, ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದ್ದರು ಯಡಿಯೂರಪ್ಪ.

    ಸಾಕಷ್ಟು ಜನಪರ ಯೋಜನೆಗಳನ್ನು ತನ್ನ ಅಧಿಕಾರದ ಅವಧಿಯಲ್ಲಿ ಹೊರತಂದಿದ್ದಾರೆ. ಬಿಜೆಪಿ ಪಕ್ಷದಲ್ಲಿ ಒಳ್ಳೆಯ ಹೆಸರು ಮತ್ತು ಸ್ಥಾನ ಗಳಿಸಿದ್ದ ಯಡಿಯೂರಪ್ಪ ಸಾಕಷ್ಟು ಕೆಲಸ ಕಾರ್ಯಗಳಲ್ಲಿ ಬ್ಯುಸಿ ಆಗಿ ಇರುತ್ತಿದ್ದರೂ.

    ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನವರ ನೆಚ್ಚಿನ ಸೀರಿಯಲ್‌ಗಳು ಇವು! ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನವರ ನೆಚ್ಚಿನ ಸೀರಿಯಲ್‌ಗಳು ಇವು!

    ಒಂದೊತ್ತಿನ ಪುರುಸೋತ್ತಿಲ್ಲದೇ ಕೆಲಸ ಮಾಡುತ್ತಿದ್ದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿನ ನಂತ ತಮಗೆ ತಾವು ಫ್ರೀ ಮಾಡಿಕೊಂಡಿದ್ದಾರೆ. ಅಲ್ಲದೇ ಒಂದು ಗುಡ್ ನ್ಯೂಸ್ ಕೂಡ ನೀಡಿದ್ದಾರೆ. ಅದೇನು ಅಂತ ಮುಂದೆ ಓದಿ...

    ಚಿತ್ರಮಂದಿರಗಳಿಗೆ ಶೀಘ್ರ ಸಿಹಿಸುದ್ದಿ: ಸಿಎಂ ಭರವಸೆ ಚಿತ್ರಮಂದಿರಗಳಿಗೆ ಶೀಘ್ರ ಸಿಹಿಸುದ್ದಿ: ಸಿಎಂ ಭರವಸೆ

    ಮೊದಲ ಬಾರಿಗೆ ಬಣ್ಣ ಹಚ್ಚಿರುವ ಯಡಿಯೂರಪ್ಪನವರು

    ಮೊದಲ ಬಾರಿಗೆ ಬಣ್ಣ ಹಚ್ಚಿರುವ ಯಡಿಯೂರಪ್ಪನವರು

    ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಇದೀಗ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಬಣ್ಣ ಹಚ್ಚಿರುವ ಯಡಿಯೂರಪ್ಪನವರು ಒಂದು ದಿನದ ಶೂಟಿಂಗ್ ಕೂಡ ಮಾಡಿ ಮುಗಿಸಿದ್ದಾರೆ. ತನುಜಾ ಅನ್ನುವ ನೈಜ ಘಟನೆ ಆಧಾರಿತ ಚಿತ್ರದಲ್ಲಿ ಬಿ.ಎಸ್ ಯಡಿಯೂರಪ್ಪನವರು ನಟಿಸಿ ಎಲ್ಲರಿಗೂ ಆಶ್ಚರ್ಯ ಮೂಡಿಸಿದ್ದಾರೆ. ಇಲ್ಲಿ ವರೆಗೂ ಒಂದೇ ಒಂದು ಸಿನಿಮಾದಲ್ಲೂ ಬಣ್ಣ ಹಚ್ಚಲು ಮನಸು ಮಾಡದ ಬಿ.ಎಸ್ ಯಡಿಯೂರಪ್ಪ ನವರು ಈ ಚಿತ್ರಕ್ಕೆ ಹೇಗೆ ಒಪ್ಪಿಕೊಂಡರು ಅನ್ನೋದು ಹಲವರ ಪ್ರಶ್ನೆ. ಇದಕ್ಕೆ ಒಂದು ಕಾರಣ ಕೂಡ ಇದೆ.

    ಬಾಲಕಿ ತನುಜಾ ನೀಟ್ ಪರೀಕ್ಷೆ ಬರೆದ ರೋಚಕ ಕಥೆ

    ಬಾಲಕಿ ತನುಜಾ ನೀಟ್ ಪರೀಕ್ಷೆ ಬರೆದ ರೋಚಕ ಕಥೆ

    ಈ ಹಿಂದೆ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ತನುಜಾ ಎಂಬ ಹೆಣ್ಣು ಮಗಳು ಕೋವಿಡ್ ಕಾರಣದಿಂದ ನೀಟ್ ಪರೀಕ್ಷೆ ಬರೆಯಲು ಸಾಧ್ಯವಾಗದೇ ತನ್ನ ಅಸಹಾಯಕತೆಯನ್ನು ತೋಡಿಕೊಂಡಿದ್ದ ಸಮಯದಲ್ಲಿ ಪತ್ರಕರ್ತರ ಸಹಕಾರದಿಂದ ಪರೀಕ್ಷೆ ಬರೆದು ನೀಟ್ ಪಾಸಾಗಿದ್ದು ಇಡೀ ದೇಶದ ಗಮನ ಸೆಳೆದಿದ್ದಳು ಬಾಲಕಿ. ತನುಜಾ ಪರೀಕ್ಷೆ ಬರೆಯಲು ಸುಮಾರು 350 ಕಿಮೀ ದೂರ ಪ್ರಯಾಣ ಮಾಡಿ ಬಂದು ಪರೀಕ್ಷೆ ಬರೆದಿದ್ದಳು. ಈ ಘಟನೆ ಎಲ್ಲರ ಕುತೂಹಲ ಕೆರಳಿಸಿತು. ಬಾಲಕಿ ಬಗ್ಗೆ ಸಾಕಷ್ಟು ಪ್ರಸಂಶೆ ಕೂಡ ಬಂತು. ಈ ಕಥೆಯನ್ನೆ ಒನ್‌ಲೈನ್ ಸ್ಟೋರಿ ಆಗಿಸಿಕೊಂಡು ಸಾಮಾಜಿಕ ಕಳಕಳಿಯುಳ್ಳ ರಾಜ್ಯಪ್ರಶಸ್ತಿ ವಿಜೇತ ಹರೀಶ್ ಎಂ.ಡಿ ಹಳ್ಳಿಯವರು ಚಿತ್ರ ನಿರ್ದೇಶಕ್ಕೆ ಕೈ ಹಾಕಿದ್ದಾರೆ.

    ಒಂದು ದಿನದ ಶೂಟಿಂಗ್ ಮುಗಿಸಿರುವ ಮಾಜಿ ಸಿ.ಎಂ

    ಒಂದು ದಿನದ ಶೂಟಿಂಗ್ ಮುಗಿಸಿರುವ ಮಾಜಿ ಸಿ.ಎಂ

    ಇದೇ ಕಾರಣದಿಂದಾಗಿ ಚಿತ್ರತಂಡ ಯಡಿಯೂರಪ್ಪ ಅವರನ್ನು ಚಿತ್ರದಲ್ಲಿ ಅಭಿನಯಿಸಲು ಕೇಳಿಕೊಂಡಾಗ, ಚಿತ್ರ ಸಾಮಾಜಿಕ ಕಳಕಳಿ ಇರುವ ಸಿನಿಮಾ ಆಗಿರೋದರಿಂದ ಮಾಜಿ ಸಿಎಂ ಯಡಿಯೂರಪ್ಪ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಬಿ.ಎಸ್ ಯಡಿಯೂರಪ್ಪ ಆಗಮನದಿಂದ ಚಿತ್ರತಂಡಕ್ಕೆ ದೊಡ್ಡ ಗೆಲುವಾಗಿದ್ದು ಖುದ್ದು ಅಂದಿನ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪನವರು ಇಂದು ಅವರ ಪಾತ್ರಕ್ಕೆ ಬಣ್ಣಹಚ್ಚಿದ್ದು ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಮೂಡಿಸುತ್ತಿದೆ. ಮೊದಲ ದಿನದ ಶೂಟಿಂಗ್ ಕೂಡ ಮುಗಿಸಿರುವ ಬಿ.ಎಸ್ ಯಡಿಯೂರಪ್ಪ ಫುಲ್ ಖುಷ್ ಆಗಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ. ಹಾಗೂ ಬಹಳ ಅದ್ಭುತವಾಗಿ ಅಭಿನಯಿಸಿದ್ದಾರೆ ಎಂದು ಹೇಳಿಕೊಂಡಿದೆ.

    ಇದೇ ವರ್ಷ ಬಿಡುಗಡೆಯಾಗಲಿದೆ ತನುಜಾ ಸಿನಿಮಾ

    ಇದೇ ವರ್ಷ ಬಿಡುಗಡೆಯಾಗಲಿದೆ ತನುಜಾ ಸಿನಿಮಾ

    ತನುಜಾ ಚಿತ್ರ ನೈಜ ಘಟನೆಯಾಧಾರಿತ ವಾಗಿದ್ದು ಶಿವಮೊಗ್ಗದ ಹಾಗೂ ಬೆಂಗಳೂರಿನ ಹಲವೆಡೆ ಚಿತ್ರೀಕರಣಗೊಂಡಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದಲ್ಲಿ ಅಭಿನಯಿಸಿದ್ದ ಸಪ್ತ ಪಾವೂರು ತನುಜಾ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನುಳಿದಂತೆ ತಾರಾಗಣದಲ್ಲಿ ಬಿ.ಎಸ್ ಯಡಿಯೂರಪ್ಪ ಜೊತೆಗೆ ವಿಶ್ವೇಶ್ವರ ಭಟ್, ಡಾ.ಕೆ ಸುಧಾಕರ್, ರಾಜೇಶ್ ನಟರಂಗ, ಕೈಲಾಶ್, ಸಂಧ್ಯಾ ಅರಕೆರೆ, ಬೇಬಿ ಶ್ರೀ, ಅಭಿನಯಿಸುತ್ತಿದ್ದು, ಪ್ರದ್ಯೋತನ ಸಂಗೀತ ನಿರ್ದೇಶನ ಹಾಗೂ ರವೀಂದ್ರನಾಥ್ ಅವರ ಛಾಯಾಗ್ರಹಣ, ಉಮೇಶ್ ಆರ್.ಬಿ ಸಂಕಲನವಿದ್ದು ಆರ್ ಚಂದ್ರಶೇಖರ್ ಪ್ರಸಾದ್ ಹಾಗೂ ಜೆ.ಎಂ ಪ್ರಹ್ಲಾದ್ ಸಂಭಾಷಣೆ ಬರೆದಿದ್ದು ನಿರ್ದೇಶಕ ಹರೀಶ್ ಎಂ.ಡಿ ಹಳ್ಳಿ ನಿರ್ದೇಶನದ ಮಾಡುತ್ತಿದ್ದಾರೆ.

    English summary
    Former cm B.S.Yediyurappa first time acting in Tanuja film. here is more details about the film and B.S.Yediyurappa role.
    Monday, February 21, 2022, 9:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X