twitter
    For Quick Alerts
    ALLOW NOTIFICATIONS  
    For Daily Alerts

    ಉಪೇಂದ್ರ ವಿರುದ್ಧ ಕಿಡಿಕಾರಿದ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ: ಅಭಿಮಾನಿಗಳ ಆಕ್ರೋಶ

    |

    ಮಾಜಿ ಡಿವೈಎಸ್ಪಿ ಹಾಗೂ ಭಾರತೀಯ ಜನಶಕ್ತಿ ಕಾಂಗ್ರೇಸ್ ಪಕ್ಷದ ಅಧ್ಯಕ್ಷೆ ಅನುಪಮಾ ಶೆಣೈ, ನಟ ಮತ್ತು ನಿರ್ದೇಶಕ ಉಪೇಂದ್ರ ಅವರ ಪ್ರಜಾಕೀಯ ವಿರುದ್ಧ ಕಿಡಿಕಾರಿದ್ದಾರೆ. ಉಪೇಂದ್ರ ವಿರುದ್ಧ ಅನುಪಮಾ ಸರಣಿ ಟ್ವೀಟ್ ಗಳನ್ನು ಮಾಡಿರುವುದು, ಉಪೇಂದ್ರ ಅಭಿಮಾನಿಗಳ ಕಣ್ಣುಕೆಂಪಗಾಗಿಸಿದೆ.

    Recommended Video

    Susheel Kumar, ದುರಂತದ ಹಿಂದಿನ ಕಾರಣವೇನು | Filmibeat Kannada

    "ಅನುಪಮಾ ಇತ್ತೀಚಿಗೆ ಕೊರೊನಾ ಮತ್ತು ಪ್ರಜಾಕೀಯಗೆ ಹೋಲಿಸಿ ಟ್ವೀಟ್ ಮಾಡಿದ್ದರು. ಫೇಸ್ ಬುಕ್ ನಲ್ಲಿ ಈ ಚಿತ್ರ ನೋಡೋಕೆ ಸಿಕ್ಕಿತು. ಈ ರೀತಿಯಾಗಿ ಹರಡ್ತಾ ಇರೋದು ಕೊರೊನಾ, ಪ್ರಜಾಕೀಯ ಅಲ್ಲ" ವ್ಯಂಗ್ಯವಾಡಿದ್ದರು.

    ಸಿನಿಮಾದಲ್ಲಿಯೂ ನೈಜ ರೌಡಿಯಾಗಿ ಕಾಣಿಸಿಕೊಂಡಿದ್ದ ಕೊರಂಗು ಕೃಷ್ಣ ಸಾವುಸಿನಿಮಾದಲ್ಲಿಯೂ ನೈಜ ರೌಡಿಯಾಗಿ ಕಾಣಿಸಿಕೊಂಡಿದ್ದ ಕೊರಂಗು ಕೃಷ್ಣ ಸಾವು

    ಇದಕ್ಕೆ ಉಪ್ಪಿ ಅಭಿಮಾನಿಗಳು ಮತ್ತು ಪ್ರಜಾಕೀಯ ಬೆಂಬಲಿಗರು ಅನುಪಮಾ ವಿರುದ್ಧ ತಿರುಗಿಬಿದ್ದಾರೆ. ಮುಂದೆ ಓದಿ..

    ಅನುಪಮಾ ಸರಣಿ ಟ್ವೀಟ್

    ಅನುಪಮಾ ಸರಣಿ ಟ್ವೀಟ್

    ಪ್ರಜಾಕೀಯ ವಿರುದ್ಧ ಅನುಪಮಾ ಸಾಲು ಸಾಲು ಟ್ವೀಟ್ ಗಳನ್ನು ಮಾಡಿದ್ದಾರೆ. "ಕೊರೊನಾಗೂ ಪ್ರಜಾಕೀಯಕ್ಕೂ ಇರುವ ವ್ಯತ್ಯಾಸ. ಕೊರೊನಾ ಬರದಂತೆ ತಡೆಗಟ್ಟಲು ಮಾಸ್ಕ್ ಹಾಕಿಕೊಳ್ಳಬೇಕು. ಪ್ರಜಾಕೀಯ ಸಭ್ಯತೆ, ಒಳ್ಳೆಯತನದ ಮಾಸ್ಕ್ (ಮುಖವಾಡ) ಧರಿಸಿಕೊಂಡು ನಮ್ಮ ಹತ್ರ ಬರ್ತಾ ಇದೆ. ಎರಡೂ ಅಪಾಯಕಾರಿ. ಇಬ್ಬರ ಬಗ್ಗೆಯೂ ಎಚ್ಚರಿಕೆಯಿಂದಿರಿ." ಎಂದಿದ್ದಾರೆ.

    ಸಿನಿಮಾಗಳು ಅವರ ಬಂಡವಾಳ ತಿಳಿಸುತ್ತೆ

    ಸಿನಿಮಾಗಳು ಅವರ ಬಂಡವಾಳ ತಿಳಿಸುತ್ತೆ

    "ಉಪೇಂದ್ರರ ಸಿನೆಮಾಗಳೇ ಅವರ ಬಂಡವಾಳವನ್ನು ತಿಳಿಸುತ್ತದೆ. 'ಓಂ' ಅಂತ ಶಾಂತಿ ಮಂತ್ರದ ಹೆಸರಿಟ್ರು, ಚಿತ್ರದಲ್ಲಿದ್ದಿದ್ದು ಬರೀ ಹಿಂಸೆ! 'A' ಅಂತ ಹೆಸರಿಟ್ರು, ಪಡ್ಡೆ ಹುಡುಗರೆಲ್ಲ ಬ್ಲೂಫಿಲ್ಮ್ ಗೆ ಕಾದು ಕೊನೆಗೆ 'ಏನಿಲ್ಲ ಏನಿಲ್ಲ' ಅನ್ನುವಂತಾಯಿತು! ಅದೇ ರೀತಿ 'ಪ್ರಜಾಕೀಯ'. ಅದಕ್ಕಿಂತ ದೊಡ್ಡ ಮೋಸ ಮತ್ತೊಂದಿರೋದಿಲ್ಲ ಕಾದುನೋಡಿ" ಎಂದಿದ್ದಾರೆ.

    ಅಭಿಮಾನಿಗಳ ತಿರುಗೇಟು

    ಅಭಿಮಾನಿಗಳ ತಿರುಗೇಟು

    ಹೀಗೆ ಅನುಪಮಾ ಸಾಲು ಸಾಲು ಟ್ವೀಟ್ ಮಾಡುತ್ತಿದ್ದಂತೆ ಅಭಿಮಾನಿಗಳು ಮುಗಿಬಿದ್ದಾರೆ. ಅನುಪಮಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 'ಒಳ್ಳೆಯ ಜೋಕ್, ನಿಮ್ಮ ಪ್ರಕಾರ ಓಂ ಚಿತ್ರದಲ್ಲಿ ಬರಿ ಮಂತ್ರಗಳು ಇರ್ಬೇಕು, A ಚಿತ್ರದಲ್ಲಿ ಬ್ಲೂ ಪಿಲ್ಮ್ ಇರ್ಬೇಕಿತ್ತಾ. ಅದನ್ನೆಲ್ಲ ತೋರ್ಸಿ ಪಡ್ಡೆ ಹುಡುಗರನ್ನು ಹಾಳು ಮಾಡಬೇಕಿತ್ತು. ಹಾಗಾದರೆ ನಿಮ್ಮ ಉದ್ದೇಶ ಬರಿ ಹಾಳುಮಾಡುವುದಾ. ಪ್ರಜಾಕೀಯದಲ್ಲಿ ಮೋಸ ಅನ್ನೋದಾದರೆ. ನೀವು ಅದರ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ' ಎಂದಿದ್ದಾರೆ.

    ಅಭಿಮಾನಿಗಳಿಗೆ ಅನುಪಮಾ ಪ್ರತಿಕ್ರಿಯೆ

    ಅಭಿಮಾನಿಗಳಿಗೆ ಅನುಪಮಾ ಪ್ರತಿಕ್ರಿಯೆ

    'ಹರಡದಿದ್ರೆ ಪ್ರಜಾಕೀಯ ಅಂತ ನಿಮಗೆ ಹೇಗೆ ಗೊತ್ತಾಯಿತು. ನಿಮ್ಮವರಿಗೂ ಹರಡಿದೆ ಅಂತಾಯ್ತಲ್ಲಾ?' ಎಂದು ಅಭಿಮಾನಿಯೊಬ್ಬ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅನುಪಮ, "ಭಾರತಕ್ಕೆ ಹರಡುವ ಮೊದಲು ಕೊರೊನಾ ಇದೆ ಅಂತ ಹೇಗೆ ಗೊತ್ತಾಯಿತು ಅಂತ ಕೇಳಿದ ಹಾಗೆ ಇದೆ ನಿಮ್ಮ ಪ್ರಶ್ನೆ" ಎಂದಿದ್ದಾರೆ.

    ಪಬ್ ಜಿ ಮತ್ತು ಪ್ರಜಾಕೀಯ ಎರಡು ಒಂದೆ

    ಪಬ್ ಜಿ ಮತ್ತು ಪ್ರಜಾಕೀಯ ಎರಡು ಒಂದೆ

    "ಪಬ್ ಜಿ ಮತ್ತು ಪ್ರಜಾಕೀಯ ಎರಡೂ ಆಟಗಳು. ಎರಡರಿಂದಲೂ ಯುವಜನತೆಯ ಟೈಮ್ ವೇಸ್ಟ್. ಉಪೇಂದ್ರ ಸಾಮಾಜಿಕ ಜಾಲತಾಣದಲ್ಲಿ ಬುರುಡೆ ಬಿಡೋದನ್ನು ರಾಜಕೀಯವಾಗಿ ಕ್ರಾಂತಿ ಅಂತ ಭಾವಿಸೋದು ಪಬ್-ಜಿಯಲ್ಲಿ ಆಡಿದ್ದೆ ನಿಜವಾದ ಯುದ್ಧ ಅಂತ ಭಾವಿಸೋದು ಎರಡೂ ಒಂದೆ" ಪ್ರಜಾಕೀಯದ ವಿರುದ್ಧ ಕೆಂಡಕಾರಿದ್ದಾರೆ.

    English summary
    Former deputy superintendent of police Anupama Shenoy outrage against Upendra's Prajaakeeya.
    Wednesday, July 8, 2020, 17:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X