twitter
    For Quick Alerts
    ALLOW NOTIFICATIONS  
    For Daily Alerts

    ಟ್ರಾಫಿಕ್ ಶುಲ್ಕ ಹೆಚ್ಚಳ ಮಾಡಿದ್ದು ಕೇಂದ್ರ ಸರ್ಕಾರ, ಶಾಪ ಹಾಕಿದ್ದು ಈ ಚಿತ್ರಕ್ಕೆ.!

    |

    Recommended Video

    ಕೇಂದ್ರ ಸರ್ಕಾರ ಟ್ರಾಫಿಕ್ ರೂಲ್ಸ್ ಚೇಂಜ್ ಮಾಡಿದ್ದು ಇದೇ ಕಾರಣಕ್ಕಾಗಿ..? | traffic ruls

    ಕುಡಿದು ವಾಹನ ಚಲಾಯಿಸಿದರೆ 10 ಸಾವಿರ, ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸಿದರೆ 5 ಸಾವಿರ, ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸಿದರೆ 5 ಸಾವಿರ, ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸಿದರೆ 1 ಸಾವಿರ....ಅಬ್ಬಾ ಇನ್ಮುಂದೆ ವಾಹನ ಸವಾರರು ರಸ್ತೆಗೆ ಬಂದರೆ ಜೇಬಲ್ಲಿ ಸಾವಿರಾರು ರೂಪಾಯಿ ಇಟ್ಕೊಂಡು ಹೋಗಬೇಕಾಗುತ್ತೆ.

    ಟ್ರಾಫಿಕ್ ನಿಯಮದಲ್ಲಿ ಕೇಂದ್ರ ಸರ್ಕಾರ ಜಾರಿ ಮಾಡಿರುವ ಈ ಕ್ರಮವನ್ನ ಅನೇಕರು ಸ್ವಾಗತಿಸಿದ್ದಾರೆ. ಅದೇ ರೀತಿ ಅನೇಕರು ವಿರೋಧಿಸಿದ್ದಾರೆ. ತಿಂಗಳ ಸಂಬಳಕ್ಕಿಂತ ಹೆಚ್ಚು ಫೈನ್ ಕಟ್ಟುವಂತ ಪರಿಸ್ಥಿತಿ ನಿರ್ಮಾಣವಾದರೆ ಜೀವನ ಹೇಗೆ ಮಾಡುವುದು ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಹೊಸ ಟ್ರಾಫಿಕ್ ರೂಲ್ಸ್ ಜಾರಿ: ಯಾವ ತಪ್ಪಿಗೆ ಎಷ್ಟು ದಂಡ?

    ಕೇಂದ್ರ ಸರ್ಕಾರದ ತೆಗೆದುಕೊಂಡ ಈ ನಿರ್ಧಾರಕ್ಕೆ ನೆಟ್ಟಿಗರು ಗುರಿ ಮಾಡುತ್ತಿರುವುದು ಮಾತ್ರ ಮಹೇಶ್ ಬಾಬು ಚಿತ್ರಕ್ಕೆ. ಹೌದು, ಹೊಸ ಟ್ರಾಫಿಕ್ ನಿಯಮ ಬಂದಿರುವುದಕ್ಕೆ ತೆಲುಗು ಚಿತ್ರ ಕಾರಣ ಎಂದು ಹಿರಿಯ ಪತ್ರಕರ್ತರೊಬ್ಬರು ವ್ಯಂಗ್ಯ ಮಾಡಿ ಟೀಕಿಸಿದ್ದಾರೆ. ಯಾರದು? ಯಾವ ಚಿತ್ರ? ಮುಂದೆ ಓದಿ.....

    ಮಹೇಶ್ ಚಿತ್ರದ ವಿರುದ್ಧ ಪತ್ರಕರ್ತ ಆರೋಪ

    ಮಹೇಶ್ ಚಿತ್ರದ ವಿರುದ್ಧ ಪತ್ರಕರ್ತ ಆರೋಪ

    ಬಿಹಾರ್ ಮೂಲದ ಮಾಜಿ ಪತ್ರಕರ್ತ, ಉದ್ಯಮಿ ರಾಹುಲ್ ಅವರು ಕೇಂದ್ರ ಸರ್ಕಾರ ಜಾರಿ ಮಾಡಿರುವ ಟ್ರಾಫಿಕ್ ಶುಲ್ಕ ನಿಯಮಕ್ಕೆ ತೆಲುಗು ಸಿನಿಮಾ ಕಾರಣ ಎಂದು ಟೀಕಿಸಿದ್ದಾರೆ. ಮಹೇಶ್ ಬಾಬು ಅಭಿನಯದ 'ಭರತ್ ಅನೇ ನೇನು' ಚಿತ್ರದ ಪ್ರೇರಣೆಯಿಂದಲೇ ಈ ರೀತಿ ನಿಯಮ ಬಂದಿದೆ ಎಂದು ಆರೋಪಿಸಿದ್ದಾರೆ.

    'ಭರತ್ ಅನೇ ನೇನು' ಚಿತ್ರದಲ್ಲಿ ಈ ನಿಯಮ

    'ಭರತ್ ಅನೇ ನೇನು' ಚಿತ್ರದಲ್ಲಿ ಈ ನಿಯಮ

    ಎಲ್ಲ ಇಂಡಸ್ಟ್ರಿಯ ಸಿನಿಮಾಗಳಲ್ಲು ಟ್ರಾಫಿಕ್ ಜಾಗೃತಿ ಮೂಡಿಸುವ ಬಗ್ಗೆ ಹಲವು ದೃಶ್ಯಗಳಿವೆ. ಆದರೆ 'ಭರತ್ ಅನೇ ನೇನು' ಚಿತ್ರದಲ್ಲಿದ್ದ ಈ ನಿರ್ದಿಷ್ಟವಾದ ದೃಶ್ಯ ಭಾರಿ ವೈರಲ್ ಆಗಿತ್ತು. ಜನಸಾಮಾನ್ಯರು ಮತ್ತು ಜನಪ್ರತಿನಿಧಿಗಳ ಗಮನ ಸೆಳೆದಿತ್ತು. 100, 200, 500 ರೂಪಾಯಿ ಫೈನ್ ಇದ್ದ ಟ್ರಾಫಿಕ್ ಶುಲ್ಕವನ್ನ 10, 20, 30 ಸಾವಿರ ನಿಗದಿ ಮಾಡಿ ಜನರಲ್ಲಿ ಭಯ ಮೂಡಿಸಿದ್ದರು. ಅದರಿಂದ ಜನರು ಕೂಡ ಟ್ರಾಫಿಕ್ ನಿಯಮ ಪಾಲಿಸಿದ್ದರು.

    ಸದನದಲ್ಲಿ ಚರ್ಚೆಯಾಗಿತ್ತು ಈ ವಿಷಯ

    ಸದನದಲ್ಲಿ ಚರ್ಚೆಯಾಗಿತ್ತು ಈ ವಿಷಯ

    ಕಳೆದ ವರ್ಷ ಸಂಸತ್ ನಲ್ಲಿ ಸದನ ನಡೆಯುತ್ತಿದ್ದ ವೇಳೆ ಟಿ.ಡಿ.ಪಿ ಎಂಪಿ ಗಲ್ಲ ಜೈದೇವ್, ಕೇಂದ್ರ ಸರ್ಕಾರಕ್ಕೆ 'ಭರತ್ ಅನೇ ನೇನು' ಸಿನಿಮಾವನ್ನ ನೋಡಿ ಎಂದು ಸಲಹೆ ನೀಡಿದ್ದರು. ಬಹುಶಃ, ಆ ಚಿತ್ರವನ್ನ ನೋಡಿ ಈ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಟ್ರೋಲ್ ಆಗ್ತಿದೆ.

    ಮುಖ್ಯಮಂತ್ರಿ ಪಾತ್ರದಲ್ಲಿ ಮಹೇಶ್

    ಮುಖ್ಯಮಂತ್ರಿ ಪಾತ್ರದಲ್ಲಿ ಮಹೇಶ್

    'ಭರತ್ ಅನೇ ನೇನು' ಈ ಚಿತ್ರದಲ್ಲಿ ಮಹೇಶ್ ಬಾಬು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಪಾತ್ರದಲ್ಲಿ ನಟಿಸಿದ್ದರು. ಜನ ಸಾಮಾನ್ಯರಿಗೆ ಅನುಕೂಲವಾಗುವಂತಹ ಸರ್ಕಾರ ಹೇಗಿರಬೇಕು ಎಂಬ ವಿಷಯಗಳನ್ನ ಕಥೆಯನ್ನಾಗಿಸಿ ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾ ಮಾಡಿದ್ದರು. ಈ ಚಿತ್ರಕ್ಕೆ ಭಾರಿ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಇದೀಗ, ಕಾಕತಾಳೀಯವೋ ಅಥವಾ ಗೊತ್ತಿಲ್ಲದೇಯೋ 'ಭರತ್ ಅನೇ ನೇನು' ಚಿತ್ರದಲ್ಲಿ ತೋರಿಸಿದಂತೆ ಟ್ರಾಫಿಕ್ ನಿಯಮ ತಂದು ಅಚ್ಚರಿ ನೀಡಿದೆ ಸರ್ಕಾರ.

    English summary
    Former Journalist Rahul Roushan blamed bharat aane nenu movie for high traffic fines.
    Thursday, September 5, 2019, 15:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X