ಪಹಲ್ಗಾಮ್ ದಾಳಿಯಲ್ಲಿ ಮುಸ್ಲಿಮರೇ ಎಲ್ಲರನ್ನೂ ಕಾಪಾಡಿದ್ದು, ಕೆಟ್ಟವರು ಅನ್ನೋದು ಸರಿಯಲ್ಲ - ರಮ್ಯಾ..!

ಕನ್ನಡ ಚಿತ್ರರಂಗದಲ್ಲಿ ಮೋಹಕತಾರೆ ಎಂದು ಕರೆಯಿಸಿಕೊಂಡಾಗಲೇ ರಾಷ್ಟ್ರ ರಾಜಕಾರಣದಲ್ಲಿ ಕಳೆದು ಹೋದವರು ರಮ್ಯಾ. ಚಿತ್ರರಂಗದಿಂದ ದೂರ ಸರಿದು ಆ ನಂತರ ರಾಜಕೀಯದ ಚದುರಂಗವಾಡಲು ಹೋದ ರಮ್ಯಾ ಸಕಾರಾತ್ಮಕವಾಗಿ, ನಕಾರಾತ್ಮಕವಾಗಿ, ಕಾಲೆಳೆಸಿಕೊಂಡ, ಉಗಿಸಿಕೊಂಡ ಏಕೈಕ ಗಟ್ಟಿಗಿತ್ತಿ ಕೂಡ ಹೌದು.ಇಂಥಾ ರಮ್ಯಾ ಸದ್ಯ ಜಮ್ಮು ಕಾಶ್ಮೀರದ ಪ್ರಸಿದ್ಧ ಪ್ರವಾಸಿ ತಾಣವಾದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ಕುರಿತು ಮಾತನಾಡಿದ್ದಾರೆ.

ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಇದು ಕೇಂದ್ರ ಸರ್ಕಾರದ ವೈಫಲ್ಯ ಎಂದು ಹೇಳುತ್ತಲೇ ಮೋದಿ ಅವರ ಮೇಲೆ ಭರವಸೆ ಇದೆ ಎಂದು ಕೂಡ ರಮ್ಯಾ ಹೇಳಿದ್ದಾರೆ. ಈ ಕುರಿತು ಟಿವಿ 9 ಕನ್ನಡಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ರಮ್ಯಾ, ಟೆರರಿಸಂಗೆ ಧರ್ಮನೂ ಇರಲ್ಲ, ಮನುಷ್ಯತ್ವನೂ ಇರಲ್ಲ ಎಂದು ಹೇಳಿದ್ದಾರೆ.

Former MP and actress Ramya aka Divya Spandana condemns the Pahalgam attack Here s her reaction

ಈ ವಿಚಾರದ ಕುರಿತು ಮಾತನಾಡಿರುವ ರಮ್ಯಾ,ಭಯೋತ್ಪಾದನೆಗೆ ಧರ್ಮನೂ ಇರಲ್ಲ, ಮನುಷ್ಯತ್ವನೂ ಇರಲ್ಲ, ಉಗ್ರರ ದಾಳಿಯನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ. ಹಾಗೇ ನೋಡಲು ಹೋದರೆ ಅಲ್ಲಿ ಎಲ್ಲರಿಗೆ ಸಹಾಯ ಮಾಡಿರುವುದು ಮುಸಲ್ಮಾನರೇ ಅಲ್ವಾ ಎಂದು ಪ್ರಶ್ನೆ ಮಾಡಿರುವ ರಮ್ಯಾ ಎಲ್ಲಾ ಮುಸ್ಲಿಮ್‌ರನ್ನು ನಾವು ಕೆಟ್ಟವರು ಅಂತ ಹೇಳುವುದಕ್ಕೆ ಸಾಧ್ಯ ಇಲ್ಲ ಎಂದು ಹೇಳಿದ್ದಾರೆ.

ಟೆರರಿಸಂಗೆ ಯಾವ ಧರ್ಮನೂ ಬರಲ್ಲ, ಮನುಷ್ಯತ್ವನೂ ಇರಲ್ಲ ಎಂದಿರುವ ರಮ್ಯಾ ಉಗ್ರರ ದಾಳಿಯನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ. ಭದ್ರತಾ ವೈಫಲ್ಯನ ನಾವು ಪ್ರಶ್ನೆ ಮಾಡಬೇಕಾಗುತ್ತೆ ಎಂದು ಹೇಳಿರುವ ರಮ್ಯಾ ಮೋದಿ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಮುಂದುವರೆದು ಭಯೋತ್ಪಾದನೆ ವಿರುದ್ಧ ನಮ್ಮ ದೇಶ ಯಾವಾಗಲೂ ಕಠಿಣ ಕ್ರಮ ಕೈಗೊಳ್ಳಲೇಬೇಕ ಎಂದಿರುವ ರಮ್ಯಾ ಮತ್ತೆ ಇಂತಹ ಪೈಶಾಚಿಕ ಕೃತ್ಯಗಳು ಮರುಕಳಿಸಬಾರದು ಎಂದು ಹೇಳಿದ್ದಾರೆ. ಗಡಿಭಾಗಗಳಲ್ಲಿ ಇನ್ನಷ್ಟು ಸೆಕ್ಯೂರಿಟಿ ಹೆಚ್ಚಾಗಬೇಕು ಎನ್ನುವ ಅಭಿಪ್ರಾಯವನ್ನು ಕೂಡ ರಮ್ಯಾ ವ್ಯಕ್ತಪಡಿಸಿದ್ದಾರೆ.

ಇನ್ನು ಪಹಲ್ಗಾಮ್‌ನಲ್ಲಿ ದಾಳಿ ನಡೆದಾಗ ಭದ್ರತಾ ವ್ಯವಸ್ಥೆ ಯಾಕೆ ಇರಲಿಲ್ಲ ಎನ್ನುವ ಪ್ರಶ್ನೆಯನ್ನು ಹಲವರು ಕೇಳುತ್ತಿದ್ದಾರೆ. ಮೋದಿ ಸರ್ಕಾರದ ವಿರುದ್ಧ ಕಿಡಿಯನ್ನು ಕೂಡ ಕಾರುತ್ತಿದ್ದಾರೆ. ಈ ವಿಚಾರಕ್ಕೆ ಕೂಡ ಪ್ರತಿಕ್ರಿಯೆಯನ್ನು ನೀಡಿರುವ ರಮ್ಯಾ ಕೇಂದ್ರ ಸರ್ಕಾರದ ವೈಫಲ್ಯನಾ ಎನ್ನುವ ಪ್ರಶ್ನೆಗೆ ಇದು ಯಾರ ಕೈಯಲ್ಲಿ ಕೂಡ ಇರುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಇದೇ ಸಮಯದಲ್ಲಿ ಇದು ಇಂಟೆಲಿಜೆನ್ಸ್ ಫೇಲ್ಯೂರ್ ಹೌದು ಎಂದು ಒಪ್ಪಿಕೊಂಡಿರುವ ರಮ್ಯಾ ಸೆಕ್ಯೂರಿಟಿ ಲ್ಯಾಪ್ಸ್ ಆಗಬಾರದು ಆದರೆ ಯಾರೂ 100 % ಕಂಟ್ರೋಲ್ ಮಾಡಲು ಸಾಧ್ಯ ಇಲ್ಲ ಎಂದು ಹೇಳಿದ್ದಾರೆ.

ಎಲ್ಲ ದೇಶಗಳಲ್ಲಿಯೂ ಈ ತರಹದ ಘಟನೆಗಳು ನಡೆಯುತ್ತವೆ ಆದರೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದಿರುವ ರಮ್ಯಾ ಈ ತರಹದ ಘಟನೆಗಳಲ್ಲಿ ಅಮಾಯಕರು ಬಲಿಯಾಗುತ್ತಿದ್ದಾರೆ ಎಂದು ತಮ್ಮ ಮನದ ನೋವು ಹಂಚಿಕೊಂಡಿದ್ದಾರೆ.

More from Filmibeat

English summary
Ramya, the celebrated Kannada actress and former MP known for her fearless voice, has spoken out against the Pahalgam terror attack. With compassion and conviction, she denounced the violence and called on citizens and leaders alike to stand for peace. Her reaction resonates with many.
Read more about: ramya filmibeat news politics
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X