'ರಾಬರ್ಟ್' ಥೀಮ್ ಪೋಸ್ಟರ್ನ ಅಸಲಿ ಸತ್ಯ ಬಿಚ್ಚಿಟ್ಟ ಈ ನಾಲ್ಕು ಅಂಶಗಳು
Recommended Video
ಡಿ-ಬಾಸ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾದ ಥೀಮ್ ಪೋಸ್ಟರ್ ರಂಜಾನ್ ಹಬ್ಬದ ಪ್ರಯುಕ್ತ ಜೂನ್ 6 ರಂದು ರಿಲೀಸ್ ಆಗಿದೆ. ಈ ಹಿಂದೆ ರಾಬರ್ಟ್ ಚಿತ್ರದ ಎರಡು ಪೋಸ್ಟರ್ ಬಂದಿತ್ತು. ಆದರೆ ಆ ಎರಡು ಪೋಸ್ಟರ್ ನಲ್ಲಿ ದರ್ಶನ್ ಅವರ ಗೆಟಪ್ ಆಗಲಿ ಅಥವಾ ಅವರ ಲುಕ್ ಆಗಲಿ ಯಾವುದರ ಬಗ್ಗೆಯೂ ಸಣ್ಣ ಸುಳಿವು ಬಿಟ್ಟುಕೊಟ್ಟಿರಲಿಲ್ಲ.
ಬಟ್, ರಾಬರ್ಟ್ ಥೀಮ್ ಪೋಸ್ಟರ್ ಬರ್ತಿದೆ ಅಂದಾಗ ಖಂಡಿತಾ ಈ ಸಲ ಡಿ ಬಾಸ್ ಗೆಟಪ್ ರಿವೀಲ್ ಆಗುತ್ತೆ ಎಂಬ ನಿರೀಕ್ಷೆಯಿಂದ ಕಾಯುತ್ತಿದ್ದರು ಅಭಿಮಾನಿಗಳು. ಅಭಿಮಾನಿಗಳ ನಿರೀಕ್ಷೆಯನ್ನ ಹುಸಿ ಮಾಡದ ನಿರ್ದೇಶಕ ತರುಣ್ ಸುಧೀರ್ ದಾಸನ ಗೆಟಪ್ ಬಹಿರಂಗಪಡಿಸಿದ್ದಾರೆ.
ಮೊದಲೇ ಥೀಮ್ ಪೋಸ್ಟರ್ ಎಂದು ಹೇಳಲಾಗುತ್ತಿದ್ದ ಈ ಪೋಸ್ಟರ್ ನಲ್ಲಿ ಹಲವು ವಿಶೇಷತೆಗಳಿವೆ. ಈ ವಿಶೇಷತೆಯನ್ನ ಸ್ವಲ್ಪ ಆಳವಾಗಿ ಗಮನಿಸಿದರೆ ರಾಬರ್ಟ್ ಚಿತ್ರದ ಕಥೆ ಮತ್ತು ದರ್ಶನ್ ಅವರ ಪಾತ್ರದ ಬಗ್ಗೆ ಒಂದು ಐಡಿಯಾ ಸಿಗಬಹುದು. ಹಾಗಿದ್ರೆ, ರಾಬರ್ಟ್ ಪೋಸ್ಟರ್ ನಲ್ಲಿರುವ ಆ ವಿಶೇಷತೆಗಳೇನು? ಮುಂದಿದೆ ಓದಿ...

ಡಿ-ಬಾಸ್ ನಂಬರ್ ಪ್ಲೇಟ್
ಸ್ಟೈಲಿಶ್ ಬೈಕ್ ನಲ್ಲಿ ಬೆನ್ನು ತೋರಿಸಿ ಕೂತಿರುವ ದರ್ಶನ್. ಕಪ್ಪು ಬಣ್ಣದ ರೇಸ್ ಜಾಕೆಟ್, ಉದ್ದನೆಯ ಕೂದಲು. ಎದುರುಗಡೆ ಕಾದು ನಿಂತಿರುವ ಖಳನಾಯಕರ ಪಡೆ. ಆ ಬೈಕ್ ಅದರ ಮೇಲೆ ದರ್ಶನ್ ಅವರ ಲುಕ್ ಮತ್ತು ಆ ಕಾಸ್ಟ್ಯೂಮ್ ಹಲವು ಯೋಚನೆಗಳು ಕಣ್ಣ ಮುಂದೆ ಬರುತ್ತೆ. ಇದೆಲ್ಲದ ಮಧ್ಯೆ ಗಮನ ಸೆಳೆಯುತ್ತಿರುವುದು 'ಡಿ ಬಾಸ್' (D 8055) ಹೆಸರಿನ ನಂಬರ್ ಪ್ಲೇಟ್. ಇದನ್ನ ಗಮನಿಸಿದ್ರೆ 'ಬಾಸ್' ಪಟ್ಟದ ಮೇಲೆ ದರ್ಶನ್ ಕಣ್ಣಿಟ್ಟಿದ್ದಾರೆ ಅನಿಸುತ್ತೆ. ಆದರೆ ಯಾವ ಫೀಲ್ಡ್ ಎನ್ನುವುದು ಕುತೂಹಲ.

ಮಂಗಳೂರು ನೊಂದಣಿ
'ಕೆ.ಎ 19' ಯಾವ ಆರ್.ಟಿ.ಓ ಅಡಿಯಲ್ಲಿ ಬರುತ್ತೆ ಎಂದು ನೋಡುವುದಾರೇ ಮಂಗಳೂರು ಆರ್.ಟಿ.ಓ ವಿಭಾಗದ್ದು. ಅಲ್ಲಿಗೆ ಸಿನಿಮಾ ಕಥೆ ಮಂಗಳೂರಿನಲ್ಲಿ ನಡೆಯುತ್ತಾ ಎಂಬ ಕುತೂಹಲ. ಅಂಡರ್ ವರ್ಲ್ಡ್ ಕಥೆ ಹೊಂದಿರಬಹುದಾ ಎಂಬ ಅನುಮಾನ. ಯಾಕಂದ್ರೆ, ದರ್ಶನ್ ಮುಂದೆ ಕಾರು, ಬೈಕಿನಲ್ಲಿ ಅನೇಕ ಎದುರಾಳಿಗಳು ನಿಂತಿದ್ದಾರೆ.

ಗಜ ಈಸ್ ಬ್ಯಾಕ್
ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಗಜ ಹೆಸರಿಗೆ ಪರ್ಯಾಯ ಪದ ದರ್ಶನ್. ದರ್ಶನ್ ಅಭಿನಯದ ಗಜ ಸೂಪರ್ ಹಿಟ್. ಒಡೆಯ ಚಿತ್ರದಲ್ಲಿ ದರ್ಶನ್ ಹೆಸರು ಗಜೇಂದ್ರ. ಈಗ ರಾಬರ್ಟ್ ಪೋಸ್ಟರ್ ನಲ್ಲಿ ದರ್ಶನ್ ತೊಟ್ಟಿರುವ ಜಾಕೆಟ್ ಹಿಂದೆ ಆನೆ ಇದೆ. ಒಂಟಿ ಸಲಗ ಎಂಬ ಸುಳಿವು ಕೊಡ್ತಿದೆ. ಅಂದ್ರೆ ಯಾರಿಗೂ ಭಯ ಪಡದ, ಕೇರ್ ಮಾಡದ ವ್ಯಕ್ತಿತ್ವ ಎಂಬುದು ಇದರರ್ಥ ಇರಬಹುದು.

ಚಾಲೆಂಜಿಂಗ್ ಸ್ಟಾರ್
ಅದೇ ಜಾಕೆಟ್ ನಲ್ಲಿ ಸ್ಟಾರ್ ಗಳು ಕೂಡ ಇದೆ. ಆನೆಯ ಅಕ್ಕ ಪಕ್ಕ ಚಾಲೆಂಜ್ ಎಂದು ತೋರಿಸುವ ಚಿಹ್ನೆಗೆ ಹೋಲುವಂತೆ ಡಿಸೈನ್ ಮಾಡಲಾಗಿದೆ. ಅಂದ್ರೆ, ದರ್ಶನ್ ಪಾತ್ರ ತುಂಬಾ ಚಾಲೆಂಜಿಂಗ್ ಆಗಿರುತ್ತೆ. ಸವಾಲುಗಳನ್ನ ಹಾಕಿ ತನ್ನ ಗುರಿ ಮುಟ್ಟುವಂತಹ ವ್ಯಕ್ತಿಯಾಗಿರಬಹುದು.

ರಾಬರ್ಟ್ ಪೋಸ್ಟರ್ ಏನು ಹೇಳ್ತಿದೆ?
ಒಟ್ಟಾರೆ ನೋಡುವುದಾರೇ ರಾಬರ್ಟ್ ಥೀಮ್ ಪೋಸ್ಟರ್ ನಲ್ಲಿ ದರ್ಶನ್ ಕ್ಯಾರೆಕ್ಟರ್ ಬಗ್ಗೆ ಸುಳಿವು ನೀಡಲಾಗಿದೆ. ಆನೆಯಂತ ನಡಿಗೆ, ಸವಾಲಿನ ವ್ಯಕ್ತಿತ್ವ, ಯಾರಿಗೂ ಬಗ್ಗದ ಬಾಸ್ ಎನ್ನಬಹುದು. ಬಟ್, ಇದಕ್ಕೂ ಮುಂಚೆ ರಿಲೀಸ್ ಆಗಿದ್ದ ಎರಡು ಪೋಸ್ಟರ್ ಗಳು ಇದಕ್ಕಿಂತ ವಿಭಿನ್ನವಾಗಿದೆ. ಕೊನೆಯದಾಗಿ ಹೇಳುವುದೇನಂದರೆ ಇದು ನಮ್ಮ ಕಲ್ಪನೆ ಅಷ್ಟೇ. ಇದನ್ನ ಮೀರಿ ಕತೆ ಇರಬಹುದು. ಅದನ್ನ ಸಿನಿಮಾದಲ್ಲೇ ನೋಡಬೇಕು.


Click it and Unblock the Notifications











