ಇಂದು ತೆರೆಗೆ ಬರಲಿರುವ ಕನ್ನಡ ಸಿನಿಮಾಗಳೆಷ್ಟು? ಪರಭಾಷೆ ಸಿನಿಮಾಗಳೆಷ್ಟು?

ಕಳೆದೆರಡು ವಾರಗಳಿಂದಲ ಕನ್ನಡದ 'ಕೆಜಿಎಫ್ 2' ಸಿನಿಮಾ ಹವಾ ಎಬ್ಬಿಸುತ್ತಲೇ ಇದೆ. ಕನ್ನಡದ ಹೆಮ್ಮೆಯ ಸಿನಿಮಾ 'ಕೆಜಿಎಫ್ 2'ನ ಆಸು ಪಾಸು ಕನ್ನಡದ ಸಿನಿಮಾಗಳು ಬಿಡುಗಡೆ ಆಗಲಿಲ್ಲ. ಇದೀಗ ಈ ಶುಕ್ರವಾರ (ಏಪ್ರಿಲ್ 29)ರಂದು ಒಟ್ಟಿಗೆ ನಾಲ್ಕು ಕನ್ನಡ ಸಿನಿಮಾಗಳು ತೆರೆಗೆ ಬರುತ್ತಿವೆ.

ಹೀರೋಯಿಸಂ, ಕಮರ್ಶಿಯಲ್ ಸರಕುಗಳನ್ನು ಹೊರತುಪಡಿಸಿ ಉತ್ತಮ ಕತೆಗಳನ್ನು ಹೊಂದಿರುವ ಕಂಟೆಂಟ್ ಆಧರಿತ ಸಿನಿಮಾಗಳು ಈ ಶುಕ್ರವಾರ ಬಿಡುಗಡೆ ಆಗುತ್ತಿವೆ.

ಕನ್ನಡದ ನಾಲ್ಕು ಸಿನಿಮಾಗಳು ಮಾತ್ರವೇ ಅಲ್ಲದೆ ತೆಲುಗಿನಲ್ಲಿಯೂ ಒಂದು, ತಮಿಳಿನ ಒಂದು ಹಿಂದಿಯಲ್ಲಿ ಎರಡು ದೊಡ್ಡ ಬಜೆಟ್‌ನ ಸಿನಿಮಾಗಳು ಬಿಡುಗಡೆ ಆಗುತ್ತಿದೆ. ಒಟ್ಟಾರೆ ಸಿನಿಮಾ ಪ್ರೇಮಿಗಳಿಗೆ ಈ ಶುಕ್ರವಾರ ಒಳ್ಳೆಯ ಶುಕ್ರವಾರ, ಹೀರೋಯಿಂಸ ಸಿನಿಮಾದ ಒತೆಗೆ ಕಂಟೆಂಟ್ ಆಧರಿತ ಸಿನಿಮಾ ಸಹ ನೋಡಲು ಸಿಗುತ್ತಿದೆ.

ಸಂಚಾರಿ ವಿಜಯ್ ನಟನೆ 'ಮೇಲೊಬ್ಬ ಮಾಯಾವಿ'

ಸಂಚಾರಿ ವಿಜಯ್ ನಟನೆ 'ಮೇಲೊಬ್ಬ ಮಾಯಾವಿ'

ಈ ವಾರ ಬಿಡುಗಡೆ ಆಗುತ್ತಿರುವ ಕನ್ನಡದ ಮೂರು ಸಿನಿಮಾಗಳಲ್ಲಿ ಪ್ರಮುಖ ಆಕರ್ಷಣೆ, 'ಮೇಲೊಬ್ಬ ಮಾಯಾವಿ'. ಈ ಸಿನಿಮಾದಲ್ಲಿ ದಿವಂಗತ ನಟ ಸಂಚಾರಿ ವಿಜಯ್ ನಟಿಸಿದ್ದಾರೆ. ಸಿನಿಮಾದಲ್ಲಿ ಬಿಗ್‌ಬಾಸ್ ಖ್ಯಾತಿಯ ಚಕ್ರವರ್ತಿ ಚಂದ್ರಚೂಡ್ ಸಹ ನಟಿಸಿದ್ದಾರೆ. ಸಿನಿಮಾವು ಹರಳುಗಳು ಹಾಗೂ ಅದರ ಹಿಂದಿನ ರಹಸ್ಯ, ಮಾಫಿಯಾದ ಬಗ್ಗೆ ಇದೆ. ಸಿನಿಮಾದ ಟ್ರೇಲರ್ ಅನ್ನು ನಟ ಸುದೀಪ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಸಂಚಾರಿ ವಿಜಯ್ ನಟಿಸಿದ್ದ ಕೊನೆಯ ಸಿನಿಮಾಗಳಲ್ಲಿ ಇದು ಸಹ ಒಂದು. ಸಿನಿಮಾವನ್ನು ಬಿ ನವೀನ್ ಕೃಷ್ಣ ನಿರ್ದೇಶನ ಮಾಡಿದ್ದಾರೆ.

Recommended Video

KGF 2 Collection | KGF2 ಖಜಾನೆಗೆ ಶೀಘ್ರದಲ್ಲಿಯೇ 1000 ಕೋಟಿ | Yash | Prashanth Neel | Srinidhi Shetty
'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ'

'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ'

ಕನ್ನಡದ ಸಿನಿಮಾ 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಸಿನಿಮಾ ಸಹ ಇಂದು ಬಿಡುಗಡೆ ಆಗುತ್ತಿದೆ. ಮಲನಾಡಿನ ಸಾಮಾನ್ಯ ಕುಟುಂಬದ ಯುವಕನೊಬ್ಬ ಕಷ್ಟಪಟ್ಟು ದುಡಿದು ಉಳಿತಾಯ ಮಾಡಿದ್ದ ಹಣ ಒಮ್ಮೆಲೆ ಖಾತೆಯಿಂದ ನಾಪತ್ತೆಯಾದಾಗ ಅದನ್ನು ಹುಡುಕುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾದಲ್ಲಿ ನಾಯಕನ ಪಾತ್ರದಲ್ಲಿ ದಿಗಂತ್ ನಟಿಸಿದ್ದಾರೆ. ನಾಯಕಿಯಾಗಿ ರಂಜನಿ ರಾಘವನ್ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಐಂದ್ರಿತಾ ರೇ ಸಹ ಇದ್ದಾರೆ. ಸಿನಿಮಾದ ಟ್ರೇಲರ್ ಈಗಾಗಲೇ ಗಮನ ಸೆಳೆದಿದೆ. ಸಿನಿಮಾವನ್ನು ವಿನಾಐಕ ಕೋಡ್ಸರ ನಿರ್ದೇಶನ ಮಾಡಿದ್ದಾರೆ.

ಅಜಯ್ ರಾವ್ ನಟನೆಯ 'ಶೋಕಿವಾಲ'

ಅಜಯ್ ರಾವ್ ನಟನೆಯ 'ಶೋಕಿವಾಲ'

ನಟ ಅಜಯ್ ರಾವ್ ನಟಿಸಿರುವ 'ಶೋಕಿವಾಲ' ಸಿನಿಮಾ ಇಂದು ಬಿಡುಗಡೆ ಆಗುತ್ತಿದೆ. ಸಿನಿಮಾವು ಹಾಸ್ಯ ಹಾಗೂ ಆಕ್ಷನ್ ಇಂದ ಕೂಡಿದೆ ಎನ್ನಲಾಗುತ್ತಿದೆ. ಸಿನಿಮಾವನ್ನು ಕ್ರಿಸ್ಟಲ್ ಪಾರ್ಕ್ ಪ್ರೊಡಕ್ಷನ್ ಹೌಸ್ ವತಿಯಿಂದ ಚಂದ್ರಶೇಖರ್ ಹಾಗೂ ಕಿಶೋರ್ ನಿರ್ಮಾಣ ಮಾಡಿದ್ದಾರೆ. ನಿರ್ದೇಶನ ಮಾಡಿರುವುದು ಜಾಕಿ. ಸಿನಿಮಾದಲ್ಲಿ ನಾಯಕ ಅಜಯ್ ರಾವ್ ಜೊತೆಗೆ ಸಂಜನಾ ನಾಯಕಿ. ಹಳ್ಳಿ ಸೊಗಡಿನ ಈ ಸಿನಿಮಾದಲ್ಲಿ ಶರತ್ ಲೋಹಿತಾಶ್ವ, ಗಿರೀಶ್ ಶಿವಣ್ಣ, ತಬಲಾನಾಣಿ, ಮುನಿರಾಜ್, ಪ್ರಮೋದ್ ಶೆಟ್ಟಿ ಇನ್ನೂ ಹಲವರು ನಟಿಸಿದ್ದಾರೆ.

'ರಾಜಿ' ಕನ್ನಡ ಸಿನಿಮಾ ತೆರೆಗೆ

'ರಾಜಿ' ಕನ್ನಡ ಸಿನಿಮಾ ತೆರೆಗೆ

ರಾಘವೇಂದ್ರ ರಾಜ್‌ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿರುವ 'ರಾಜಿ' ಕನ್ನಡ ಸಿನಿಮಾ ಇಂದು ತೆರೆಗೆ ಬಂದಿದೆ. ಸಿನಿಮಾವನ್ನು ಪ್ರೀತಿ ಎಸ್ ಬಾಬು ನಿರ್ದೇಶನ ಮಾಡಿದ್ದಾರೆ. ಜೊತೆಗೆ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಸಹ. ಸಿನಿಮಾವನ್ನು ಮೈಸೂರು ಬಸವರಾಜು ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ಏಳು ಹಾಡುಗಳಿದ್ದು ಎಲ್ಲವನ್ನೂ ಎಚ್‌ಎಸ್ ವೆಂಕಟೇಶಮೂರ್ತಿ ರಚಿಸಿದ್ದಾರೆ. ಹಲವು ವರ್ಷಗಳಿಂದ ಪೋಷಕ ಪಾತ್ರದಲ್ಲಿ ನಟಿಸುತ್ತಾ ಬಂದಿರುವ ಪ್ರೀತಿ ಎಸ್ ಬಾಬು ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ.

ಚಿರಂಜೀವಿ ನಟನೆಯ 'ಆಚಾರ್ಯ' ಇಂದೇ ಬಿಡುಗಡೆ

ಚಿರಂಜೀವಿ ನಟನೆಯ 'ಆಚಾರ್ಯ' ಇಂದೇ ಬಿಡುಗಡೆ

ಇನ್ನು ತೆಲುಗಿನ ಬಿಗ್‌ ಬಜೆಟ್, ಬಿಗ್ ಸ್ಟಾರ್ ಸಿನಿಮಾ 'ಆಚಾರ್ಯ' ಇಂದೇ ಬಿಡುಗಡೆ ಆಗಿದೆ. ಸಿನಿಮಾದಲ್ಲಿ ನಟ ಚಿರಂಜೀವಿ ಹಾಗೂ ರಾಮ್ ಚರಣ್ ತೇಜ ಒಟ್ಟಿಗೆ ನಟಿಸಿದ್ದಾರೆ. ಕೊರಟಾಲ ಶಿವ ನಿರ್ದೇಶನದ ಈ ಸಿನಿಮಾದಲ್ಲಿ ನಟಿ ಪೂಜಾ ಹೆಗ್ಡೆ ನಾಯಕಿ. ಧರ್ಮಸ್ಥಲಿ ಹೆಸರಿನ ದೇವಸ್ಥಾನದ ಊರು ದುಷ್ಟರಿಂದ ಸಮಸ್ಯೆಗೆ ಒಳಗಾದ ನಾಯಕ ನಟ ಆ ಊರನ್ನು, ಅಲ್ಲಿನ ಜನಗಳನ್ನು ಹೇಗೆ ಕಾಪಾಡುತ್ತಾನೆ ಎಂಬುದು ಸಿನಿಮಾದ ಕತೆ. ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಯನ್ನು ನಟ ಚಿರಂಜೀವಿ ಇರಿಸಿಕೊಂಡಿದ್ದಾರೆ.

ತಮಿಳಿನ ಸಿನಿಮಾ ಬಿಡುಗಡೆ

ತಮಿಳಿನ ಸಿನಿಮಾ ಬಿಡುಗಡೆ

ವಿಜಯ್ ಸೇತುಪತಿ, ನಯನತಾರಾ ಹಾಗೂ ಸಮಂತಾ ಮೂವರು ಒಟ್ಟಿಗೆ ನಟಿಸಿರುವ 'ಕಾತು ವಾಕುಲ ರೆಂಡು ಕಾದಲ್' ಸಿನಿಮಾ ಸಹ ಇಂದೇ ಬಿಡುಗಡೆ ಆಗುತ್ತಿದೆ. ಸಿನಿಮಾವನ್ನು ನಯನತಾರಾ ಬಾಯ್‌ಫ್ರೆಂಡ್ ವಿಘ್ನೇಷ್ ಶಿವನ್ ನಿರ್ದೇಶನ ಮಾಡಿದ್ದಾರೆ. ನಯನತಾರಾ ಹಾಗೂ ವಿಘ್ನೇಷ್ ಜಂಟಿಯಾಗಿ ನಿರ್ಮಾಣವೂ ಮಾಡಿದ್ದಾರೆ. ಇಬ್ಬರು ಆತ್ಮೀಯ ಗೆಳತಿಯರು ಒಬ್ಬನನ್ನೇ ಪ್ರೀತಿಸುವ ಕತೆಯನ್ನು ಈ ಸಿನಿಮಾ ಹೊಂದಿದೆ. ಹಾಸ್ಯ ಹಾಗೂ ಭಾವುಕತೆಯ ಅಂಶಗಳನ್ನು ಸಿನಿಮಾ ಹೊಂದಿದೆ.

ಹಿಂದಿಯ ಎರಡು ಸಿನಿಮಾ ಬಿಡುಗಡೆ

ಹಿಂದಿಯ ಎರಡು ಸಿನಿಮಾ ಬಿಡುಗಡೆ

ಹಿಂದಿ ರಾಷ್ಟ್ರಭಾಷೆ ಎಂದು ಸುದೀಪ್‌ಗೆ ಟ್ವೀಟ್‌ ಮಾಡಿ ತಪರಾಕಿ ಹಾಕಿಸಿಕೊಳ್ಳುತ್ತಿರುವ ನಟ ಅಜಯ್ ದೇವಗನ್ ನಟಿಸಿ, ನಿರ್ದೇಶನ ಮಾಡಿರುವ 'ರನ್‌ವೇ 34' ಇಂದು ಬಿಡುಗಡೆ ಆಗಿದೆ. ಸಿನಿಮಾದಲ್ಲಿ ಅಜಯ್ ಜೊತೆಗೆ ಅಮಿತಾಬ್ ಬಚ್ಚನ್, ರಾಕುಲ್ ಪ್ರೀತ್ ಸಿಂಗ್ ಸಹ ನಟಿಸಿದ್ದಾರೆ. ಇದರ ಜೊತೆಗೆ ಟೈಗರ್ ಶ್ರಾಫ್ ಹಾಗೂ ನವಾಜುದ್ದೀನ್ ಸಿದ್ಧಕಿ ನಟಿಸಿರುವ 'ಹೀರೋಪಂತಿ 2' ಸಿನಿಮಾ ಸಹ ಇಂದು ಬಿಡುಗಡೆ ಆಗುತ್ತಿದೆ. ಎರಡೂ ಸಿನಿಮಾಗಳು ದೊಡ್ಡ ಸ್ಟಾರ್‌ಗಳನ್ನು ಒಳಗೊಂಡಿದೆ.

More from Filmibeat

English summary
Four Kannada movies releasing in theaters on April 29. Melobba Maayavi, Shokiwala, Kshamisi Nimma Katheyalli Hanavilla.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X