Don't Miss!
- Sports
ನಿಷೇಧಿತ ವಸ್ತುವಿನ ಬಳಕೆ: ಒಲಿಂಪಿಯನ್ ಜಿಮ್ನಾಸ್ಟ್ ದೀಪಾ ಕರ್ಮಾಕರ್ಗೆ 21 ತಿಂಗಳು ಅಮಾನತು
- Automobiles
ಬ್ಯಾಟರಿ ಇಲ್ಲದೆ 2000 ಕಿ.ಮೀ ಓಡುವ ಎಲೆಕ್ಟ್ರಿಕ್ ಕಾರು... ತಂತ್ರಜ್ಞಾನ ಕಂಡು ಬೆರಗಾದ ಇವಿ ತಯಾರಕರು!
- News
ಬೆಂಗಳೂರಿನ ಮಾರತ್ತಹಳ್ಳಿ ಬಳಿಯ ಮುನ್ನೆಕೊಲ್ಲಾಲ ರೈಲ್ವೆ ಮೇಲ್ಸೇತುವೆ ಅಂಡರ್ಪಾಸ್ ಸಿದ್ಧ- ಯಾರಿಗೆ ಅನುಕೂಲ? ವರದಿ ಇಲ್ಲಿದೆ
- Finance
Milk Price: ಅಮುಲ್ ಬಳಿಕ ಈ ಬ್ರ್ಯಾಂಡ್ ಹಾಲಿನ ದರ 3 ರೂಪಾಯಿ ಏರಿಕೆ!
- Lifestyle
ನಿಮ್ಮ ಕೂದಲು ಉದುರುವುದಕ್ಕೂ ಮೊಬೈಲ್ಗೂ ಸಂಬಂಧವಿದೆ ಗೊತ್ತೆ?
- Technology
ನಿಮ್ಮ ಮೊಬೈಲ್ನಲ್ಲಿ ಹೀಗೆ ಮಾಡಿ, ಸುಲಭವಾಗಿ ತಿಂಗಳ ಆದಾಯ ಗಳಿಸಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಕೆಜಿಎಫ್ 2' ನಲ್ಲಿ ಮರೆಯಾಗಿವೆ ಮುಖ್ಯವಾದ ನಾಲ್ಕು ಪಾತ್ರಗಳು: ಏಕೆ?
'ಕೆಜಿಎಫ್ 2' ಸಿನಿಮಾ ದೊಡ್ಡ ಹಿಟ್ ಆಗಿದೆ. 'ಕೆಜಿಎಫ್; ಚಾಪ್ಟರ್ 1' ಸಿನಿಮಾಕ್ಕಿಂತಲೂ ಬಹಳ ದೊಡ್ಡ ಹಿಟ್ ಆಗಿದೆ. ಸಿನಿಮಾದ ಕತೆ, ಮೇಕಿಂಗ್, ಪಾತ್ರಗಳ ಗಟ್ಟಿತನ, ನಟರ ನಟನೆ ಎಲ್ಲದರ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗಿದೆ.
'ಕೆಜಿಎಫ್; ಚಾಪ್ಟರ್ 1' ಸಿನಿಮಾದಲ್ಲಿ ಭಿನ್ನ-ಭಿನ್ನ ಪಾತ್ರಗಳನ್ನು ನಿರ್ದೇಶಕ ಪ್ರಶಾಂತ್ ನೀಲ್ ಸೃಷ್ಟಿ ಮಾಡಿದ್ದರು. ನರಾಚಿಯೆಂಬ ನರಕದಲ್ಲಿಯೇ ಒಂದಕ್ಕಿಂತ ಒಂದು ಭಿನ್ನವಾದ ಪಾತ್ರಗಳ ಸೃಷ್ಟಿಯಾಗಿತ್ತು, ಅವುಗಳಲ್ಲಿ ಹಲವು ಪಾತ್ರಗಳು 'ಕೆಜಿಎಫ್ 2' ಸಿನಿಮಾದಲ್ಲಿ ಉಳಿದುಕೊಂಡಿವೆ. ಕೆಲವು ಪಾತ್ರಗಳನ್ನು ಕೈಬಿಡಲಾಗಿದೆ.
'ಕೆಜಿಎಫ್; ಚಾಪ್ಟರ್ 1' ಸಿನಿಮಾದಲ್ಲಿ ಆನಂದ್ ಇಂಗಳಗಿ ಪಾತ್ರದಲ್ಲಿ ನಟಿಸಿದ್ದ ಅನಂತ್ ನಾಗ್ 'ಕೆಜಿಎಫ್ 2' ಸಿನಿಮಾದಲ್ಲಿ ನಟಿಸಿಲ್ಲ. ಅನಂತ್‌ನಾಗ್ 'ಕೆಜಿಎಫ್ 2' ಸಿನಿಮಾದಲ್ಲಿ ನಟಿಸದೆ ಇರುವುದು ಬಹಳ ಸುದ್ದಿಯೂ ಆಗಿದೆ. ಆದರೆ 'ಕೆಜಿಎಫ್ 2' ಸಿನಿಮಾದಲ್ಲಿ ಅನಂತ್‌ನಾಗ್ ಮಾತ್ರವೇ ಅಲ್ಲ ಇನ್ನೂ ಹಲವು ಪಾತ್ರಗಳು ಮಿಸ್ ಆಗಿವೆ. ಪಾತ್ರಗಳ ಪಟ್ಟಿ ಇಲ್ಲಿದೆ.

ಅನಂತ್ ನಾಗ್ ಬದಲಿಗೆ ಪ್ರಕಾಶ್ ರೈ
'ಕೆಜಿಎಫ್; ಚಾಪ್ಟರ್ 1' ಸಿನಿಮಾದಲ್ಲಿ ಬಹಳ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಅನಂತ್‌ನಾಗ್ 'ಕೆಜಿಎಫ್ 2' ಸಿನಿಮಾದಲ್ಲಿ ನಟಿಸಿಲ್ಲ. ಅನಂತ್‌ನಾಗ್ ಪಾತ್ರದ ಬದಲಿಗೆ ಪ್ರಕಾಶ್ ರೈ ಅವರನ್ನು ಚಿತ್ರತಂಡ ಕರೆದಂತಿದೆ. ಪ್ರಕಾಶ್ ರೈ ಅವರನ್ನು ಅನಂತ್ ನಾಗ್ ಪಾತ್ರದ ಪುತ್ರನ ಪಾತ್ರದಲ್ಲಿ ಪರಿಚಯ ಮಾಡಲಾಗಿದೆ. 'ಕೆಜಿಎಫ್; ಚಾಪ್ಟರ್ 1' ಸಿನಿಮಾದ ಕತೆಯನ್ನು ಅನಂತ್‌ನಾಗ್ ನರೇಟ್ ಮಾಡಿದರೆ, 'ಕೆಜಿಎಫ್ 2' ಸಿನಿಮಾವನ್ನು ಪ್ರಕಾಶ್ ರೈ ನರೇಟ್ ಮಾಡಿದ್ದಾರೆ.
Recommended Video


ಬಿ ಸುರೇಶ್ ನಟಿಸಿಲ್ಲ ಏಕೆ?
'ಕೆಜಿಎಫ್; ಚಾಪ್ಟರ್ 1' ಸಿನಿಮಾದಲ್ಲಿ ಮುಖ್ಯ ಪೋಷಕ ಪಾತ್ರದಲ್ಲಿ ನಟಿಸಿದ್ದು ಬಿ.ಸುರೇಶ್. ನರಾಚಿಯ ನರಕದಲ್ಲಿಯೇ ಬಹಳ ವರ್ಷಗಳ ಕಾಲದಿಂದಲೂ ಇದ್ದು, ಅಲ್ಲಿನ ಜನರಿಗೆ ತಕ್ಕಮಟ್ಟಿಗೆ ಸಹಾಯ ಮಾಡುತ್ತಾ, ಆ ನತದೃಷ್ಟ ಜನಗಳ ಮುಂದಾಳತ್ವ ವಹಿಸಿರುವ ವಿಠಲ್ ಪಾತ್ರದಲ್ಲಿ ನಟಿಸಿದ್ದರು. ಆದರೆ 'ಕೆಜಿಎಫ್ 2' ಸಿನಿಮಾದಲ್ಲಿ ಬಿ ಸುರೇಶ್ ನಟಿಸಿಲ್ಲ. ಅವರ ಪಾತ್ರ ಏನಾಯಿತು ಎಂಬ ಕಾರಣವನ್ನೂ ಸಹ ನಿರ್ದೇಶಕರು ನೀಡಿಲ್ಲ. ಆದರೆ 'ಕೆಜಿಎಫ್; ಚಾಪ್ಟರ್ 1' ಸಿನಿಮಾದಲ್ಲಿ ಬಿ ಸುರೇಶ್ ಪಾತ್ರದ ಜೊತೆಗೆ ಇದ್ದ ಟಿಎನ್ ನರಸಿಂಹಮೂರ್ತಿ ಅವರ ಪಾತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಕುಲಕರ್ಣಿ ಪಾತ್ರವೂ ಇಲ್ಲ ಸಿನಿಮಾದಲ್ಲಿ
'ಕೆಜಿಎಫ್; ಚಾಪ್ಟರ್ 1' ಸಿನಿಮಾದಲ್ಲಿ ಕುಲಕರ್ಣಿ ಹೆಸರಿನ ಪಾತ್ರವೊಂದಿತ್ತು . ಗರುಡನ ಸಹಾಕನಾಗಿ ಕಾಣಿಸಿಕೊಂಡಿದ್ದ ಈ ಪಾತ್ರ ಗರುಡನ ಜೊತೆಯಾಗಿದ್ದುಕೊಂಡೆ ಅವನನ್ನು ಹೊಡೆಯಲು ಸ್ಕೆಚ್ ಹಾಕಿದ್ದ ತಂಡಕ್ಕೆ ಬೆಂಬಲ ನೀಡುತ್ತಿತ್ತು. ಕುಲಕರ್ಣಿ ಪಾತ್ರದಲ್ಲಿ ಅಶ್ವತ್ಥ್ ನೀನಾಸಂ ನಟಿಸಿದ್ದರು. ಆದರೆ ಈ ಪಾತ್ರ ಸಹ 'ಕೆಜಿಎಫ್ 2' ಸಿನಿಮಾದಲ್ಲಿ ಇಲ್ಲ. ಈ ಪಾತ್ರದ ಕತೆ ಏನಾಯ್ತು ಎಂಬ ಕಾರಣವೂ ಇಲ್ಲ. ಗರುಡನ ತಮ್ಮ ವಿರಾಟ್ ಪಾತ್ರವೂ ಇಲ್ಲ, ಆದರೆ ಅವನನ್ನು ರಾಕಿಭಾಯ್ ಮೊದಲೇ ಕೊಂದುಬಿಟ್ಟಿರುವುದಾಗಿ ನಿರ್ದೇಶಕರು ಕಾರಣ ನೀಡಿದ್ದಾರೆ.

ಕತೆ ಹೇಳುವ ಹುಚ್ಚನ ನಿಧನ
'ಕೆಜಿಎಫ್; ಚಾಪ್ಟರ್ 1' ಸಿನಿಮಾದಲ್ಲಿ ಕತೆ ಹೇಳುವ ಹುಚ್ಚನೊಬ್ಬನಿದ್ದ. ಹೆಣ್ಣು ಮಕ್ಕಳು ಹುಟ್ಟಿದರೆ ತೆಗೆದುಕೊಂಡು ಹೋಗಿ ಮಣ್ಣು ಮಾಡುವ ಕೆಲಸವೂ ಅವನದ್ದೇ. ಆ ಹುಚ್ಚ 'ಕೆಜಿಎಫ್ 2' ಸಿನಿಮಾದಲ್ಲಿಲ್ಲ. 'ಕೆಜಿಎಫ್; ಚಾಪ್ಟರ್ 1' ಸಿನಿಮಾದಲ್ಲಿ ಹುಚ್ಚನ ಪಾತ್ರದಲ್ಲಿ ನಟಿಸಿದ್ದ ವ್ಯಕ್ತಿ ನಿಧನ ಹೊಂದಿದ ಕಾರಣ ಅವನ ಪಾತ್ರವನ್ನು ಮುಂದುವರೆಸಲು ನಿರ್ದೇಶಕರಿಗೆ ಆಗಿಲ್ಲ. 'ಕೆಜಿಎಫ್; ಚಾಪ್ಟರ್ 1' ಸಿನಿಮಾ ಬಿಡುಗಡೆ ಆಗುವ ವೇಳೆಗೆ ಅನಾರೋಗ್ಯದಿಂದ ಆ ವ್ಯಕ್ತಿ ನಿಧನ ಹೊಂದಿದ್ದರು.