ಚಿರಂಜೀವಿ ಸರ್ಜಾ ಕೈಯಲ್ಲಿದ್ದ ನಾಲ್ಕು ಸಿನಿಮಾಗಳು ಇವು
ಚಿರಂಜೀವಿ ಸರ್ಜಾ ಅವರು ವಿಧಿವಶರಾಗಿದ್ದಾರೆ. ಕನ್ನಡ ಸಿನಿಮಾರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು ಸೃಷ್ಟಿಸಿಕೊಂಡಿದ್ದ ಚಿರಂಜೀವಿ ತಮ್ಮ ಪಾಡಿಗೆ ತಾವು ಹೆಚ್ಚು ಅಬ್ಬರವಿಲ್ಲದೆ ಸಿನಿಮಾಗಳನ್ನು ಮಾಡುತ್ತಾ ಸಾಗುತ್ತಿದ್ದರು.
Recommended Video
ಈ ವರೆಗೆ 22 ಸಿನಿಮಾಗಳಲ್ಲಿ ನಟಿಸಿದ್ದ ಚಿರಂಜೀವಿ ಸರ್ಜಾ ಅವರು, ಕನ್ನಡದ ಬ್ಯುಸಿ ನಟರಲ್ಲಿ ಒಬ್ಬರು. ಚಿರಂಜೀವಿ ಸರ್ಜಾ ಅವರ ಸಿನಿಮಾಗಳು ಪೈಸಾ ವಸೂಲ್ ಮಾಡಿಕೊಡುತ್ತವೆ ಎಂಬ ನಂಬಿಕೆ ಚಿತ್ರರಂಗದಲ್ಲಿತ್ತು.
ನಾಯಕನಾಗಿ ಹೆಚ್ಚು-ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತ ಸಮಯದಲ್ಲಿಯೇ ಚಿರಂಜೀವಿ ಸರ್ಜಾ ಸಾವನ್ನಪ್ಪಿದ್ದಾರೆ. ಸರ್ಜಾ ಅವರು ಕಣ್ಣುಮುಚ್ಚುವ ಮುನ್ನಾ ನಾಲ್ಕು ಸಿನಿಮಾಗಳಿಗೆ ಸಹಿ ಹಾಕಿದ್ದರು. ಅದನ್ನು ಬಿಟ್ಟು ಇನ್ನೂ ಕೆಲವು ಸಿನಿಮಾಗಳನ್ನು ಮಾಡುವ ಇಚ್ಛೆಯನ್ನೂ ವ್ಯಕ್ತಪಡಿಸಿದ್ದರು.

ನಾಲ್ಕು ಸಿನಿಮಾಗಳಲ್ಲಿ ನಟಿಸಬೇಕಿತ್ತು
ರಣಂ, ಏಪ್ರಿಲ್, ಜುಗಾರಿ ಕ್ರಾಸ್ ಮತ್ತು ಕ್ಷತ್ರೀಯ ಸಿನಿಮಾಗಳಲ್ಲಿ ಚಿರಂಜಿವಿ ಸರ್ಜಾ ನಟಿಸಬೇಕಿತ್ತು. ಈ ಸಿನಿಮಾಗಳಿಗೆ ಸಹಿ ಹಾಕಿದ್ದ ಚಿರಂಜೀವಿ ಸರ್ಜಾ ಕೆಲವು ಸಿನಿಮಾಗಳ ಚಿತ್ರೀಕರಣ ಸಹ ಪ್ರಾರಂಭಿಸಿದ್ದರು. ಆದರೆ ಚಿತ್ರೀಕರಣ ಪೂರ್ಣಗೊಳ್ಳುವ ಮುನ್ನವೇ ಹೊರಟುಬಿಟ್ಟರು

ಕೋಟ್ಯಂತರ ಹಣ ಹೂಡಿಕೆ ಆಗಿದೆ
ನಾಲ್ಕು ಸಿನಿಮಾದ ನಿರ್ಮಾಪಕರು ಸುಮಾರು ಐದು-ಆರು ಕೋಟಿ ಹಣವನ್ನು ಸಿನಿಮಾಗಳ ಮೇಲೆ ಹೂಡಿಕೆ ಮಾಡಿದ್ದರು. ಅವರೂ ಸಹ ಈಗ ಆಕಾಶದತ್ತ ಮುಖ ಮಾಡಿದ್ದಾರೆ.

ಹಲವು ಕನಸುಗಳಿದ್ದವು ಚಿರು ಸರ್ಜಾ ಗೆ
ಈ ನಾಲ್ಕು ಸಿನಿಮಾಗಳು ಮಾತ್ರವಲ್ಲದೆ, ಚಿರು ಸರ್ಜಾ ಅವರಿಗೆ ಹಲವು ಕನಸುಗಳು ಇದ್ದವು. ತಮ್ಮ ಧ್ರುವ ಸರ್ಜಾ ಜೊತೆ ಸಿನಿಮಾ ಮಾಡಬೇಕೆಂಬ ಹಂಬಲ ಅವರಿಗಿತ್ತು. ಜೊತೆಗೆ ಮಾವ ಅರ್ಜುನ್ ಸರ್ಜಾ ಜೊತೆ ಸಹ ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು ಚಿರು ಸರ್ಜಾ ಗೆ.

ಒಂದು ದಿನ ಮುಂಚೆ ಸಿನಿಮಾ ಬಿಡುಗಡೆ
ಕೊರೊನಾ ಕಾರಣದಿಂದ ಚಿತ್ರಮಂದಿರಗಳು ಬಂದ್ ಆಗುವ ಒಂದು ದಿನದ ಹಿಂದೆಯಷ್ಟೆ ಚಿರಂಜೀವಿ ಸರ್ಜಾ ಅವರು 'ಶಿವಾರ್ಜುನ' ಸಿನಿಮಾ ಬಿಡುಗಡೆ ಆಗಿತ್ತು. ಚಿತ್ರಮಂದಿರ ಪುನಃ ತೆರೆದ ಬಳಿಕ ಅದನ್ನು ಮರುಬಿಡುಗಡೆ ಮಾಡುವ ಬಗ್ಗೆ ಅವರು ನಿರ್ಮಾಪಕರೊಂದಿಗೆ ಮಾತನಾಡಿದ್ದರು.


Click it and Unblock the Notifications











