ಸ್ಟಾರ್‌ಗಳ ಕಥೆ ಬಿಟ್ಟಾಕಿ ಈ ವರ್ಷ ಬಿಡುಗಡೆಯಾಗಲಿವೆ ರುಕ್ಮಿಣಿ ವಸಂತ್ ಅಭಿನಯದ 04 ಸಿನಿಮಾಗಳು..!

ಪ್ರತಿಭಾ ಪಲಾಯನ ಅನ್ನುವುದು ಇಂದು ನಿನ್ನೆಯದಲ್ಲ. ಬಹಳ ಹಿಂದಿನಿಂದ್ಲೂ ಪ್ರತಿಭೆ ಇದ್ದೋರು ಒಂದ್ಕಡೆಯಿಂದ ಮತ್ತೊಂದ್ಕಡೆ ಹೋಗೋದು ನಡೀತಾನೆ ಇದೆ. ಇದಕ್ಕೆ ರುಕ್ಮಿಣಿ ವಸಂತ್ ಮತ್ತೊಂದು ಉದಾಹರಣೆ

ಹೌದು, ಬೀರ್‌ಬಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ರುಕ್ಮಿಣಿ ವಸಂತ್, ಸಪ್ತಸಾಗರದಾಚೆ ಎಲ್ಲೋ ಸೈಡ್ ಎ ಮತ್ತು ಸೈಡ್ ಬಿ ಚಿತ್ರಗಳ ಮೂಲಕ ಕರುನಾಡಿನೆಲ್ಲೆಡೆ ಮನೆ ಮಾತಾದರು. ಅಕ್ಕ-ಪಕ್ಕದ ರಾಜ್ಯದವರ ಕಣ್ಣಿಗೂ ಬಿದ್ದರು. ಇದಕ್ಕೆ ಕೈಗನ್ನಡಿ ಅನ್ನುವಂತೆ ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ ಅವರ ಜೊತೆ ತೆರೆ ಹಂಚಿಕೊಳ್ಳುವ ಸುವರ್ಣ ಅವಕಾಶ ರುಕ್ಮಿಣಿಗೆ ಸಿಕ್ತು. ಶಿವಕಾರ್ತಿಕೆಯನ್‌ಗೆ ನಾಯಕಿಯಾಗುವ ಅವಕಾಶವೂ ಸಿಕ್ತು. ಸದ್ಯದ ಸಮಾಚಾರ ಏನೆಂದರೆ ಇವೆರಡು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ.

Four movies starring Rukmini Vasanth are going to be released this year

ವಿಜಯ್ ಸೇತುಪತಿ ಜೊತೆ ರುಕ್ಮಿಣಿ ವಸಂತ್ ಅಭಿನಯಿಸಿರುವ ಏಸ್ ಸಿನಿಮಾದ ಫಸ್ಟ್ ಲುಕ್ ಮತ್ತು ಟೈಟಲ್ ಟೀಸರ್ ಈಗಾಗಲೇ ಬಿಡುಗಡೆಯಾಗಿದೆ. ಜೂಜು, ಬಂದೂಕು, ದರೋಡೆ ಮತ್ತು ಬೈಕ್ ಚೇಸಿಂಗ್ ಅಂಶ ಕುತೂಹಲವನ್ನೂ ಕೆರಳಿಸಿದೆ. ಇನ್ನೂ.. ಆರ್ಮುಗ ಕುಮಾರ್‌ ನಿರ್ದೇಶನದ ಈ ಚಿತ್ರವನ್ನ ಕ್ರೈಮ್ ಥ್ರಿಲ್ಲರ್ ಕಾಮಿಡಿ ಕಥಾಹಂದರ ಹೊಂದಿರುವ ಏಸ್ ಸಿನಿಮಾವನ್ನು, 7Cs ಎಂಟರ್‌ಟೈನ್‌ಮೆಂಟ್‌ ಬ್ಯಾನರ್ ನಡಿ ನಿರ್ಮಾಣ ಮಾಡಲಾಗಿದೆ.

ಇನ್ನೂ ಶಿವಕಾರ್ತಿಕೆಯನ್ ಅಭಿನಯದ ತಮಿಳು ಚಿತ್ರದ ಚಿತ್ರೀಕರಣ ಕೂಡ ಮುಕ್ತಾಯದ ಹಂತದಲ್ಲಿದೆ. ವಿಶೇಷ ಅಂದರೆ ಈ ಚಿತ್ರವನ್ನ ಎ.ಆರ್.ಮುರಗದಾಸ್ ನಿರ್ದೇಶನ ಮಾಡುತ್ತಿದ್ದಾರೆ. ನಿರ್ದೇಶಕ ಎ ಆರ್ ಮುರುಗದಾಸ್‌ ಸಲ್ಮಾನ್ ಖಾನ್ ಅವರ 'ಸಿಕಂದರ್‌' ಸಿನಿಮಾದಲ್ಲೂ ತಮ್ಮನ್ನ ತೋಡಗಿಸಿಕೊಂಡಿರುವ ಕಾರಣ ಚಿತ್ರದ ಚಿತ್ರೀಕರಣ ತಡವಾಗುತ್ತಿದೆಯಾದರೂ, ಈ ಚಿತ್ರ ಈ ವರ್ಷ ಬರುವುದು ಕನ್ಫರ್ಮ್

Four movies starring Rukmini Vasanth are going to be released this year

ಇವೆರಡು ತಮಿಳು ಸಿನಿಮಾ ಹೊರತು ಪಡಿಸಿದರೆ ರುಕ್ಮಿಣಿ ವಸಂತ್ ಕೈಯಲ್ಲಿ ಇನ್ನೆರಡು ಸಿನಿಮಾಗಳಿವೆ. ಆ ಎರಡು ಸಿನಿಮಾಗಳು ಕನ್ನಡ ಸಿನಿಮಾಗಳು ಅನ್ನುವುದು ಸಮಾಧಾನದ ಸಂಗತಿ.

ಹೌದು, ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಘೀರ ಚಿತ್ರದಲ್ಲಿ ರುಕ್ಮಿಣಿ ವಸಂತ್ ಕಾಣಿಸಿಕೊಳ್ಳಲಿದ್ದಾರೆ. ಡಾಕ್ಟರ್ ಪಾತ್ರವನ್ನ ನಿರ್ವಹಿಸಿದ್ದಾರೆ. ವಿಶೇಷ ಅಂದರೆ ರುಕ್ಮಿಣಿ ವಸಂತ್ ಅಭಿನಯದ ಸನ್ನಿವೇಶಗಳ ಚಿತ್ರೀಕರಣ ಈಗಾಗಲೇ ಮುಕ್ತಾಯವೂ ಆಗಿದೆ. ಇನ್ನೂ ಬಘೀರ ಹೊರತು ಪಡಿಸಿದರೆ ಡಾ.ಶಿವರಾಜ್ ಕುಮಾರ್ ಅಭಿನಯದ ಭೈರತಿ ರಣಗಲ್ ಚಿತ್ರದಲ್ಲಿಯೂ ಕೂಡ ನೀವು ರುಕ್ಮಿಣಿ ವಸಂತ್ ಅವರನ್ನ ನೋಡಬಹುದು

Four movies starring Rukmini Vasanth are going to be released this year

ಹೀಗೆ ಒಂದಾದ ಮೇಲೊಂದು ಸಿನಿಮಾ ಮೂಲಕ ರುಕ್ಮಿಣಿ ವಸಂತ್ ಈ ವರ್ಷ ಬೆಳ್ಳಿತೆರೆಯಲ್ಲಿ ನಾಲ್ಕು ಬಾರಿ ದರ್ಶನವನ್ನ ನೀಡಲಿದ್ದಾರೆ. ಚಿತ್ರರಂಗದ ಅಳಿವು ಉಳಿವಿಗಾಗಿ ಸ್ಟಾರ್ ಗಳು ವರ್ಷಕ್ಕೆ ನಾಲ್ಕು ಸಿನಿಮಾಗಳು ಮಾಡಬೇಕು ಅನ್ನುವ ಕೂಗಿನ ನಡುವೆ ಈ ವರ್ಷ ಸ್ಟಾರ್ ಹೀರೋಯಿನ್ ಆಗಿ ಹೊರ ಹೊಮ್ಮುತ್ತಿರುವ ರುಕ್ಮಿಣಿ ವಸಂತ್ ಅಭಿನಯದ ನಾಲ್ಕು ಸಿನಿಮಾಗಳು ಬಿಡುಗಡೆಯಾಗಲಿವೆ.

More from Filmibeat

English summary
Ace, Bhairathi Rangal, Bhageera, This year, four movies featuring Rukmini Vasanth are set to be released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X