ಅಂಬಿ ಪುತ್ರ ಅಭಿಷೇಕ್ ಗೆ ಸಿಕ್ಕ ನಾಲ್ಕು ಸರ್ಪ್ರೈಸ್ ವಿಶ್ ಗಳಿವು.!

Recommended Video

ಅಭಿಷೇಕ್ ಅಂಬರೀಷ್ ಅಮರ್ ಸಿನೆಮಾಗೆ ಸಿಕ್ಕ ನಾಲ್ಕು ಅಚ್ಚರಿಯ ವಿಶ್ ಗಳಿವು | FILMIBEAT KANNADA

ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಮರ್ ಸಿನಿಮಾದ ಮೂಲಕ ಅಧಿಕೃತವಾಗಿ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದಾರೆ. ಅಭಿಷೇಕ್ ಅಭಿನಯದ ಚೊಚ್ಚಲ ಸಿನಿಮಾ ಇಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಂಡಿದೆ.

ಅಭಿಷೇಕ್ ಅವರ ಚೊಚ್ಚಲ ಚಿತ್ರಕ್ಕೆ ದರ್ಶನ್, ಸುದೀಪ್, ಶ್ರೀಮುರಳಿ, ಉಪೇಂದ್ರ, ಪ್ರಿಯಾಂಕಾ ಉಪೇಂದ್ರ, ನಿಖಿಲ್ ಕುಮಾರ್, ರಕ್ಷಿತ್ ಶೆಟ್ಟಿ, ಮೇಘನಾ ರಾಜ್ ಸೇರಿದಂತೆ ಹಲವರು ವಿಶ್ ಮಾಡಿದ್ದಾರೆ. ಅಂಬಿ ಪುತ್ರನ ಆಗಮನಕ್ಕೆ ನಮ್ಮ ಇಂಡಸ್ಟ್ರಿಯವರು ಶುಭ ಕೋರುವುದು ಸಹಜ.

ಇವರುಗಳ ಮಧ್ಯೆ ನಾಲ್ಕು ಜನರ ಶುಭಾಶಯ ತುಂಬಾ ಸ್ಪೆಷಲ್ ಎನಿಸುತ್ತೆ. ಅಂಬಿ ಮೇಲಿನ ಅಭಿಮಾನ ಮರೆಯದ ಈ ಕಲಾವಿದರು ಅವರ ಪುತ್ರನಿಗೂ ಸರ್ಪ್ರೈಸ್ ವೆಲ್ ಕಮ್ ಮಾಡಿದ್ದಾರೆ. ಅಷ್ಟಕ್ಕೂ ಯಾರದು?

ಯುವ ನಟ ನಾನಿ

ತೆಲುಗು ಇಂಡಸ್ಟ್ರಿಯ ಯುವ ನಟ ನಾನಿ ಅಂಬರೀಶ್ ಮತ್ತು ಸುಮಲತಾ ಅವರ ಮಗ ಅಭಿಷೇಕ್ ಮೊದಲ ಸಿನಿಮಾಗೆ ವಿಡಿಯೋ ಮೂಲಕ ಶುಭಾಶಯ ಕೋರಿದ್ದಾರೆ. '' ಅಮರ್ ಸಿನಿಮಾ ನಿಮಗೆ ದೊಡ್ಡ ಹೆಸರು ತಂದುಕೊಡಲಿ'' ನಿಮ್ಮ ತಂಡಕ್ಕೂ ದೊಡ್ಡ ಸಕ್ಸಸ್ ಸಿಗಲಿ' ಎಂದು ನಾನಿ ವಿಶ್ ಮಾಡಿದ್ದಾರೆ.

ಕೆ ಎಲ್ ರಾಹುಲ್

ಭಾರತ ಕ್ರಿಕೆಟ್ ತಂಡದ ಯುವ ಆಟಗಾರ ಹಾಗೂ ಅಭಿಷೇಕ್ ಅವರ ಸ್ನೇಹಿತ ಕೆಎಲ್ ರಾಹುಲ್ ಅಮರ್ ಚಿತ್ರಕ್ಕೆ ವಿಶ್ ಮಾಡಿದ್ದಾರೆ. ಸದ್ಯ ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಭಾಗಿಯಾಗಿರುವ ಕೆಎಲ್ ರಾಹುಲ್, ಸ್ನೇಹಿತನ ಬಗ್ಗೆ ನೆನಪಿನಲ್ಲಿಟ್ಟುಕೊಂಡು ಅಲ್ಲಿಂದಲೇ ಶುಭ ಕೋರಿದ್ದಾರೆ. ಇದು ನಿಜಕ್ಕೂ ಸರ್ಪ್ರೈಸ್.

ಮೆಗಾಸ್ಟಾರ್ ಚಿರು

ಅಂಬರೀಶ್ ಅವರ ಆಪ್ತಮಿತ್ರರಲ್ಲಿ ಒಬ್ಬರಾದ ಮೆಗಾಸ್ಟಾರ್ ಚಿರಂಜೀವಿ ಅಭಿಷೇಕ್ ಚಿತ್ರಕ್ಕೆ ಹೃದಯಪೂರ್ವಕವಾಗಿ ಶುಭ ಕೋರಿದ್ದಾರೆ. ''ಅಂಬ ಮತ್ತು ಸುಮಲತಾ ದಂಪತಿಯ ಮುದ್ದಿನ ಮಗ ಅಭಿಷೇಕ್ ಮೊದಲ ಸಿನಿಮಾಗೆ ಒಳ್ಳೆಯದಾಗಲಿ, ಅವರ ಪೋಷಕರಿಗೆ ಅಭಿ ಹೆಮ್ಮೆ ತರಲಿ' ಎಂದು ಚಿರು ವಿಶ್ ಮಾಡಿದ್ದಾರೆ.

ತಮಿಳು ಸೂಪರ್ ಸ್ಟಾರ್

ಅಂಬರೀಶ್ ಮತ್ತು ಸುಮಲತಾ ಅವರ ಆಪ್ತ ಸ್ನೇಹಿತ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಅಭಿಷೇಕ್ ಮೊದಲ ಚಿತ್ರಕ್ಕೆ ವಿಶ್ ಮಾಡಿದ್ದಾರೆ. 'ಕನ್ನಡಿಗರ ಹೃದಯಲ್ಲಿ ಅಂಬರೀಶ್ ಹೇಗೆ ಜಾಗ ಪಡೆದುಕೊಂಡು ವಿಜೃಂಬಿಸಿದ್ದರೋ ಅದೇ ರೀತಿ ಅಭಿಷೇಕ್ ಕೂಡ ಚಿತ್ರರಂಗ ಹಾಗೂ ಕನ್ನಡಿಗರ ಹೃದಯದಲ್ಲಿ ಸ್ಥಾನ ಪಡೆದು ವಿಜೃಂಭಿಸಲಿ' ಎಂದು ಶುಭಕೋರಿದ್ದಾರೆ.

More from Filmibeat

English summary
Superstar rajinikanth, megastar chiranjeevi, telugu actor nani, and indian cricketer kl rahul send surprise wishes to abhishek ambarish for his first movie. amar movie released today (may 31st).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X