ಯುವ ದಸರಾ ರಂಗೇರಿಸಿದ ಹರಿಪ್ರಿಯ, ಶುಭಾ ಪೂಂಜಾ, ಅನುರಾಧ ಭಟ್

By ಯಶಸ್ವಿನಿ ಎಂ.ಕೆ

ಮೈಸೂರು ಯುವ ದಸರಾ ಉತ್ಸವದಲ್ಲಿ ಸೋಮವಾರ 'ನೀರ್ ದೋಸೆ' ಚಿತ್ರದ ನಟಿ ಹರಿಪ್ರಿಯ, 'ಮೊಗ್ಗಿನ ಮನಸ್ಸು' ಚಿತ್ರದ ಶುಭಾ ಪೂಂಜ ಅವರ ಡ್ಯಾನ್ಸ್ ಹಾಗೂ ಕನ್ನಡದ ಹಿನ್ನೆಲೆ ಗಾಯಕರ ಗಾಯನ ಸೇರಿ ಯುವ ಸಮೂಹ ಕುಣಿದು ಕುಪ್ಪಳಿಸುವಂತೆ ಮಾಡಿತು.

ಮೈಸೂರು ದಸರಾ - ವಿಶೇಷ ಪುರವಣಿ

ಮತ್ತೊಂದೆಡೆ ನಾಗಿಣಿ ಖ್ಯಾತಿಯ ದೀಪಿಕಾ ದಾಸ್ ಅವರ ಡ್ಯಾನ್ಸ್ ಪಡ್ಡೆ ಹೈಕ್ಳಿಗೆ ಜೋಶ್ ನೀಡಿತು. ಜೊತೆಗೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಕೆ.ಆರ್.ಪೇಟೆ ಶಿವರಾಜ್ ಹಾಗೂ ನಯನ ಜೋಡಿ ಕಾರ್ಯಕ್ರಮದ ಮಧ್ಯೆ ತಮ್ಮ ಹಾಸ್ಯಗಳ ಮೂಲಕ ಎಲ್ಲರನ್ನೂ ನಕ್ಕು ನಲಿಸಿದರು.

ಯುವ ದಸರಾದಲ್ಲಿ ಅರ್ಮಾನ್ ಮಲ್ಲಿಕ್ ಹಾಡಿಗೆ ಹುಚ್ಚೆದ್ದು ಕುಣಿದ ಪಡ್ಡೆಹೈಕ್ಳು

ದಸರಾ ಮಹೋತ್ಸವ ಅಂಗವಾಗಿ ಮಹಾರಾಜ ಕಾಲೇಜು ಮೈದಾನದಲ್ಲಿ ಯಶಸ್ವಿಯಾಗಿ ಮುಂದುವರಿದಿರುವ ಯುವ ದಸರಾ ಸೋಮವಾರ ನಟ-ನಟಿಯರ ಆಗಮದಿಂದ ಮತ್ತಷ್ಟು ರಂಗೇರಿತು. ಸಿನಿತಾರೆಯರ ಕಾರ್ಯಕ್ರಮದಿಂದ ಯುವಕ, ಯುವತಿಯರು ಶಿಳ್ಳೆ, ಚಪ್ಪಾಳೆ, ಕೇಕೆ ಹಾಕಿ ಖುಷಿ ಪಟ್ಟರು. ಹೇಗಿತ್ತು ಯುವ ದಸರಾದ ಸಂಭ್ರಮ ಎಂಬುದನ್ನ ಚಿತ್ರಗಳಲ್ಲಿ ನೋಡಿ. ಮುಂದೆ ಓದಿ...

ಹರಿಪ್ರಿಯ ಕುಣಿತಕ್ಕೆ ಪ್ರೇಕ್ಷಕರು ಫಿದಾ

ಹರಿಪ್ರಿಯ ಕುಣಿತಕ್ಕೆ ಪ್ರೇಕ್ಷಕರು ಫಿದಾ

'ನೀರ್ ದೋಸೆ, ನೀರ್ ದೋಸೆ, ನೀರ್ ದೋಸೆ, ದೋಸೆ.. ಗೀತೆಗೆ ಹೆಜ್ಜೆ ಹಾಕಿದ ಹರಿಪ್ರಿಯ ಎಲ್ಲರ ಮನಗೆದ್ದರು. 'ಇಂತಿ ನಿನ್ನ ಪ್ರೀತಿಯ' ಖ್ಯಾತಿಯ ಸೋನುಗೌಡ 'ನಿಂತಲ್ಲಿ, ನಿಲ್ಲಲಾರೇ, ಕುಂತಲ್ಲಿ ಕೂರಲಾರೆ' ಹಾಡಿಗೆ ಕುಣಿದು ಪ್ರೇಕ್ಷಕರನ್ನ ರಂಜಿಸಿದರು.

ಮೈಸೂರು ದಸರಾ: ವಿಜಯ್ ಪ್ರಕಾಶ್ ಹಾಡು, ಸ್ವರ್ಗ ಧರೆಗಿಳಿಸಿದ ರಾಗಿಣಿ

ಪಡ್ಡೆ ಹುಡುಗರ ಹೃದಯ ಕದ್ದ ಶುಭಾಪೂಂಜ

ಪಡ್ಡೆ ಹುಡುಗರ ಹೃದಯ ಕದ್ದ ಶುಭಾಪೂಂಜ

ನಟಿ ಶುಭಾಪೂಂಜ 'ಯಾಕಿಂಗ್ ಆಡ್ತಾರೋ ಈ ಹುಡುಗರು, ಯಾಕಿಂಗ್ ಕಾಡ್ತಾರೋ ಈ ಹುಡುಗರು' ಎಂದು ಕುಣಿಯುತ್ತಾ ಪಡ್ಡೆ ಹುಡುಗರು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಜೊತೆಗೆ ಹಿನ್ನೆಲೆ ಗಾಯಕಿ ಸಿಂಚನಾ 'ರಸಿಕಾ ಬಲು ಮೆಲ್ಲನೆ ಮಾತಾಡು..', 'ಇನ್ನು ಯಾಕ ಬರಲಿಲ್ಲವಾ ಹುಬ್ಬಳ್ಳಿಯವಾ..', ಯಾಕ ಹುಡುಗ ಮೈಯಾಂಗ ಹೆಂಗ್ ಐತಿ', 'ಕೋಡಗನ ಕೋಳಿ ನುಂಗಿತ್ತಾ..' ಮೊದಲಾದ ಹಾಡುಗಳನ್ನು ತಮ್ಮದೇ ಧಾಟಿಯಲ್ಲಿ ಹಾಡಿ ನೆರೆದಿದ್ದವರು ಕುಳಿತಲ್ಲೇ ಕುಣಿಯುವಂತೆ ಮಾಡಿದರು.

ನಾಗಿಣಿ ಡ್ಯಾನ್ಸ್ ಹವಾ

ನಾಗಿಣಿ ಡ್ಯಾನ್ಸ್ ಹವಾ

ಕಿರುತೆರೆಯ ನಾಗಿಣಿ ಧಾರಾವಾಹಿಯ ದೀಪಿಕಾ ದಾಸ್ 'ಚುಮು ಚುಮು ಅಂತೈತಿ' ಎಂಬ ಗೀತೆಗೆ ಕುಣಿದು ಚಪ್ಪಾಳೆ, ಶಿಳ್ಳೆಗಳ ಪ್ರೋತ್ಸಾಹ ಪಡೆದುಕೊಂಡರು.

ಅನುರಾಧ ಗಾನ

ಅನುರಾಧ ಗಾನ

ಗಾಯಕಿ ಅನುರಾಧ ಭಟ್ 'ನಂದ ನಂದನಾ ನೀನು ಶ್ರೀಕೃಷ್ಣ', ಜುಮ್ ಜುಮ್ ಮಾಯ, ಜುಮ್ ಜುಮ್ ಮಾಯ..' ಗಾಯನ, ಗಾಯಕ ಸಂಜಿತ್ ಹೆಗಡೆ ಗಾಯಕ ಸಂತೋಷ್ 'ಐರಾವತಾ' ಗಾಯನ ಹಾಗೂ ಚಿನ್ಮಯ್ ಅವರು ಶಂಕರ್ ನಾಗ್ ಅವರ 'ಹಾಡು ಸಂತೋಷಕ್ಕೆ' ಗೀತೆ ಹಾಡಿ ಪ್ರೇಕ್ಷಕರನ್ನು ರಂಜಿಸಿದರು.

ಕಾಮಿಡಿ ಕಿಲಾಡಿಗಳ ಹಾಸ್ಯ ಝಲಕ್

ಕಾಮಿಡಿ ಕಿಲಾಡಿಗಳ ಹಾಸ್ಯ ಝಲಕ್

ಯುವ ಸಂಭ್ರಮದಿಂದ ಯುವ ದಸರೆಗೆ ಆಯ್ಕೆಯಾದ ಕರುಣಾಮಯಿ ವಿಶೇಷ ಮಕ್ಕಳ ಶಾಲೆ, ಜ್ಞಾನದೀಪ ಪ್ರಥಮ ದರ್ಜೆ ಕಾಲೇಜು, ನೃತ್ಯ ವಿಹಾರ್ ಪ್ಯಾಷನ್ ತಂಡ ತಮ್ಮ ಪ್ರತಿಭೆ ಪ್ರದರ್ಶಿಸಿದವು. ಕಿರುತರೆ ನಟಿ ಶಾಲಿನಿ ತಮ್ಮ ಹಾಸ್ಯದ ಮೂಲಕವೇ ಕಾರ್ಯಕ್ರಮ ನಿರೂಪಿಸಿದ್ದು, ವಿಶೇಷ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಕೆ.ಆರ್.ಪೇಟೆ ಶಿವರಾಜ್ ಹಾಗೂ ನಯನ ಜೋಡಿ ಕಾರ್ಯಕ್ರಮದ ಮಧ್ಯೆ ತಮ್ಮ ಹಾಸ್ಯಗಳ ಮೂಲಕ ಎಲ್ಲರನ್ನೂ ನಕ್ಕು ನಲಿಸಿದರು.

More from Filmibeat

English summary
Fourth day highlights of Yuva Dasara 2018: Kannada actress Haripriya, shubha poonja, deepika das dance and Anuradha Bhat song.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X