For Quick Alerts
  ALLOW NOTIFICATIONS  
  For Daily Alerts

  ಪವನ್ ನಿರ್ದೇಶನದಲ್ಲೇ 'ಲೂಸಿಯಾ' ಹಿಂದಿ ರಿಮೇಕ್

  By ಜೇಮ್ಸ್ ಮಾರ್ಟಿನ್
  |

  ನಿರ್ದೇಶಕ ಪವನ್ ಕುಮಾರ್ ಅವರ ಲೂಸಿಯಾ ಚಿತ್ರ ಭಾರತದ ಚಿತ್ರರಂಗವನ್ನು ಸೂಜಿಗಲ್ಲಿನಂತೆ ಸೆಳೆದಿದ್ದಷ್ಟೇ ಅಲ್ಲದೇ, ಬಾಲಿವುಡ್ ಮಂದಿ ಹೀಗೂ ಚಿತ್ರ ಮಾಡಬಹುದಾ? ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದು ಸುಳ್ಳಲ್ಲ. ಪ್ರೇಕ್ಷಕರೇ ಪ್ರಭುಗಳು ಎಂಬ ಕಾಲದಲ್ಲಿ ಸಾರ್ವಜನಿಕರೇ ಬಂಡವಾಳ ಹೂಡಿಕೆ ಮಾಡುವ ಮೂಲಕ ಹುಟ್ಟಿಕೊಂಡ ಲೂಸಿಯಾ ಎಂಬ ಕನಸು ಈಗ ತಮಿಳು, ತೆಲುಗು ಚಿತ್ರಗಳಲ್ಲೂ ನನಸಾಗುವ ಸುದ್ದಿ ಜತೆಗೆ ಹಿಂದಿಗೂ ರಿಮೇಕ್ ಆಗುತ್ತಿದೆ.

  ಫಾಕ್ಸ್ ಸ್ಟಾರ್ ಸ್ಟುಡಿಯೋ, ಇಂಡಿಯಾ ಸಂಸ್ಥೆ ಲೂಸಿಯಾ ಚಿತ್ರದ ಹಿಂದಿ ರಿಮೇಕ್ ಹಕ್ಕನ್ನು ಖರೀದಿಸಿದೆ. ಇನ್ನೊಂದು ಖುಷಿ ವಿಷಯವೆಂದರೆ, ಪವನ್ ಕುಮಾರ್ ಅವರೇ ಹಿಂದಿ ಅವತರಣಿಕೆಯ ನಿರ್ದೇಶಕರಾಗಿರುತ್ತಾರೆ. ಗೋವಾದಲ್ಲಿ ನಡೆದ ರಾಷ್ಟ್ರೀಯ ಫಿಲಂ ಡೆವಲಪ್ಮೆಂಟ್ ಕಾರ್ಪೋರೇಷನ್ ನಲ್ಲಿ ಈ ಡೀಲ್ ಕುದುರಿದೆ.

  ಮೂಲಗಳ ಪ್ರಕಾರ ಸುಮಾರು 60 ಲಕ್ಷ ರು ಗಳಿಗೆ ರಿಮೇಕ್ ಹಕ್ಕು ಮಾರಾಟವಾಗಿದೆಯಂತೆ. ಲಾಸ್ ಏಂಜಲೀಸ್ ಮೂಲದ 21st ಸೆಂಚುರಿ ಫಾಕ್ಸ್ ಹಾಗೂ ಸ್ಟಾರ್ ಟೆಲಿವಿಷನ್ -20th ಸೆಂಚುರಿ ಫಾಕ್ಸ್ ನ ಅಂಗವಾದ ಫಾಕ್ಸ್ ಸ್ಟಾರ್ ಸ್ಟುಡಿಯೋ ಕೈಗೆ ಲೂಸಿಯಾ ರಿಮೇಕ್ ಹಕ್ಕು ಸೇರಿದೆ.

  ಲೂಸಿಯಾ ಚಿತ್ರ ಮಾರ್ಕೆಟಿಂಗ್ ಮೊತ್ತವೂ ಸುಮಾರು 70 ಲಕ್ಷ ರು ಬಂಡವಾಳದಿಂದ ಲೂಸಿಯಾ ಚಿತ್ರ ಹುಟ್ಟಿಕೊಂಡಿತ್ತು. 51 ಲಕ್ಷ ಪ್ರೊಡೆಕ್ಷನ್ ಗೆ ಖರ್ಚಾಗಿದೆ. ಲೂಸಿಯಾ ಸುಮಾರು 5 ಕೋಟಿ ರು ಗಳಿಸಿದೆ ಎಂಬ ಸುದ್ದಿಯೂ ಇದೆ.

  ಲೂಸಿಯಾ ಪರಭಾಷೆ ಚಿತ್ರರಂಗಕ್ಕೆ ಕಾಲಿಡುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ಪವನ್ ಕುಮಾರ್, ತಮಿಳು ಭಾಷೆ ಮೇಲೆ ಹಿಡಿತವಿರುವ ಅಲ್ಲಿನ ನಿರ್ದೇಶಕರೊಬ್ಬರ ಕೈಗೆ ಕನ್ನಡದ ಲೂಸಿಯಾವನ್ನು ನೀಡಲಾಗುತ್ತದೆ. ಚಿತ್ರದಲ್ಲಿ ಹೊಸಮುಖಗಳನ್ನು ಹಾಕಿಕೊಳ್ಳಲಾಗುತ್ತದೆ. ಬಾಬ್ಬಿ ಸಿಂಹ ನಟಿಸಿದರೆ ಚೆನ್ನಾಗಿರುತ್ತದೆ. ನಾನು ಪ್ರೀ ಪ್ರೊಡೆಕ್ಷನ್ ಕಾರ್ಯದಲ್ಲಿ ಮಾತ್ರ ಪಾಲ್ಗೊಳ್ಳುತ್ತೇನೆ. ತಮಿಳಿನಲ್ಲಿ ಪಿಜ್ಜಾ(ಕನ್ನಡದ ವಿಶಲ್) ಸೂಧು ಕವ್ವಂ ನಂಥ ವಿಭಿನ್ನ ಚಿತ್ರಗಳನ್ನು ನಿರ್ಮಿಸಿದ್ದ ಸಿವಿ ಕುಮಾರ್ ಅವರ ಮೇಲೆ ನಂಬಿಕೆ ಇದೆ ಎಂದಿದ್ದಾರೆ

  ಆದರೆ, ಹಿಂದಿಯಲ್ಲಿ ಇದು ಬಿಗ್ ಬಜೆಟ್ ಚಿತ್ರವಾಗಲಿದೆ. ಅಲ್ಲಿನ ನೆಟಿವಿಟಿಗೆ ತಕ್ಕಂತೆ ಕಥೆಯಲ್ಲಿ ಬದಲಾವಣೆ ಅನಿವಾರ್ಯವಾಗಿದೆ ಎಂದಿದ್ದಾರೆ ಪವನ್. ಸಿವಿ ಕುಮಾರ್ ಅವರ ತಿರುಕುಮಾರನ್ ಎಂಟರ್ಟೈನ್ಮೆಂಟ್ ಗೆ 60 ಲಕ್ಷ ರಿಮೇಕ್ ಹಕ್ಕು ಹಾಗೂ ಸನ್ ನೆಟ್ವರ್ಕ್ ನ ಉದಯ ಟಿವಿಗೆ 90 ಲಕ್ಷಕ್ಕೆ ಲೂಸಿಯಾ ತಂಡ ಹಕ್ಕುಗಳನ್ನು ನೀಡಿದೆ.

  English summary
  Fox Star Studios India has acquired the Hindi-language remake rights to Pawan Kumar’s Kannada-language hit “Lucia”. Kumar will again direct.Tamil and Telugu language rights were sold to producer C.V. Kumar’s Thirukumaran Entertainment for approximately $95,000 and broadcast rights to Udaya TV, part of the Sun Network, for $143,000

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X