Don't Miss!
- Sports
ರಿಷಭ್ ಪಂತ್ ಆರೋಗ್ಯದಲ್ಲಿ ಭಾರೀ ಚೇತರಿಕೆ: ಈ ವಾರವೇ ಆಸ್ಪತ್ರೆಯಿಂದ ಡಿಶ್ಚಾರ್ಜ್ ಸಾಧ್ಯತೆ
- News
Mangaluru cooker blast: ಸುಟ್ಟಗಾಯಗಳಿಂದ ಚೇತರಿಸಿಕೊಂಡ ಆರೋಪಿಯನ್ನು ವಶಕ್ಕೆ ಪಡೆಯಲಿರುವ ಎನ್ಐಎ
- Finance
ಹೊಸ ಆಫರ್: ಗೃಹ ಸಾಲದ ಬಡ್ಡಿದರ ಇಳಿಸಿದ ಎಸ್ಬಿಐ!
- Lifestyle
Horoscope Today 30 Jan 2023: ಸೋಮವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಂಚಾರಿ ವಿಜಯ್‌ಗೆ ವಿಶೇಷ ಗೌರವ ನೀಡಿದ ಅಮೆರಿಕಾ ಚಿತ್ರಮಂದಿರ
ದಿವಂಗತ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರಿಗೆ ಅಮೆರಿಕಾದ ಫ್ರಾಂಕ್ಲಿನ್ ಚಿತ್ರಮಂದಿರ ವಿಶೇಷವಾಗಿ ಗೌರವಿಸಿದೆ.
Recommended Video
ಬೈಕ್ ಅಪಘಾತದಲ್ಲಿ ನಿಧನರಾಗಿದ್ದ ಕನ್ನಡ ಚಲನಚಿತ್ರ ನಟ ಸಂಚಾರಿ ವಿಜಯ್ ಸ್ಮರಣಾರ್ಥವಾಗಿ ಅಮೆರಿಕಾದ ಫ್ರಾಂಕ್ಲಿನ್ ಚಿತ್ರಮಂದಿರ ತನ್ನ ಥಿಯೇಟರ್ ಬೋರ್ಡ್ ಮೇಲೆ ವಿಜಯ್ ಕುರಿತಾದ ಸಂದೇಶವೊಂದನ್ನು ಪ್ರಕಟಿಸಿದೆ.
ಸಂಚಾರಿ
ವಿಜಯ್‌ರನ್ನು
ಆಸ್ಪತ್ರೆಗೆ
ಸೇರಿಸಿದ
ಸ್ನೇಹಿತ
ಬಿಚ್ಚಿಟ್ಟ
ಅಪಘಾತದ
ಅಸಲಿ
ಕಥೆ
24 ಗಂಟೆಗಳ ಕಾಲ ಈ ಸಂದೇಶವನ್ನು ಥಿಯೇಟರ್ ಬೋರ್ಡ್‌ನಲ್ಲಿ ಪ್ರದರ್ಶಿಸಲಾಗಿದೆ. ಈ ಬಗ್ಗೆ 'ನಾನು ಅವನಲ್ಲ ಅವಳು' ಸಿನಿಮಾದ ನಿರ್ದೇಶಕ ಲಿಂಗದೇವರು ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
''ಅಮೇರಿಕಾದ ಫ್ರಾಂಕ್ಲಿನ್ ಥಿಯೇಟರ್‌ನವರು ವಿಜಯ್ ನೆನಪಲ್ಲಿ ಇಂದು 'Always in our Heart , Sanchari Vijay, Gone Yet Not Forgotten' ಎಂಬ ಮೆಸೇಜ್ ಪ್ರದರ್ಶನ ಮಾಡುವ ಮೂಲಕ ಗೌರವ ಸೂಚಿಸಿದ್ದಾರೆ. ಅಗಲಿದ ಕನ್ನಡದ ಕಲಾವಿದನನ್ನು ಗುರುತಿಸಿದ ಫ್ರಾಂಕ್ಲಿನ್ ಥಿಯೇಟರ್ ಮತ್ತು ಕಾರಣಕರ್ತರಾದ ರವಿ ಕಶ್ಯಪ್ ರವರಿಗೆ ವಂದನೆಗಳು'' ಎಂದು ಲಿಂಗದೇವರು ಪೋಸ್ಟ್ ಹಾಕಿದ್ದಾರೆ.
ಜೂನ್ 15 ರಂದು ಸಂಚಾರಿ ನಿಧನ
ಸ್ನೇಹಿತನ ಜೊತೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ವಿಜಯ್ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಮೆದುಳಿನ ಬಲ ಭಾಗ ತೀವ್ರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯವಾಗಿ ಕೊನೆಯುಸಿರೆಳೆದರು.

ಸಾವಿನ ಬಳಿಕವೂ ಸಾರ್ಥಕತೆ ಮೆರೆದ ನಟ ತನ್ನ ದೇಹದ ಅಂಗಾಂಗಗಳನ್ನು ದಾನ ಮಾಡಿದರು. ಕಣ್ಣು, ಕಿಡ್ನಿ, ಲಿವರ್, ಹಾರ್ಟ್ ವ್ಯಾಲ್ಸ್ ದಾನ ಮಾಡುವ ಮೂಲಕ ಏಳು ಜನರ ಬದುಕಲ್ಲಿ ಬೆಳಕಾದರು.
ಸಂಚಾರಿ ವಿಜಯ್ 'ನಾನು ಅವನಲ್ಲ ಅವಳು' ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದರು. ಇದೇ ಸಿನಿಮಾಗೆ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿಯೂ ಲಭಿಸಿತ್ತು.