For Quick Alerts
  ALLOW NOTIFICATIONS  
  For Daily Alerts

  ನಟಿ ಪ್ರಣಿತಾ ಸುಭಾಷ್ ಹೆಸರಲ್ಲಿ ಲಕ್ಷ ಲಕ್ಷ ವಂಚನೆ: ದೂರು ದಾಖಲು

  By ಫಿಲ್ಮ್ ಡೆಸ್ಕ್
  |

  ಸ್ಯಾಂಡಲ್ ವುಡ್ ನಟಿ ಪ್ರಣಿತಾ ಸುಭಾಷ್ ಹೆಸರಲ್ಲಿ ಲಕ್ಷ ಲಕ್ಷ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಪ್ರಣಿತಾ ಹೆಸರು ಹೇಳಿ ಎಸ್ ವಿ ಗ್ರೂಪ್ ಬಿಲ್ಡರ್ಸ್ ಆಂಡ್ ಡೆವಲಪರ್ಸ್ ಕಂಪೆನಿಗೆ 13.5 ಲಕ್ಷ ಯಾಮಾರಿಸಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

  ಪ್ರಣಿತಾ ಹೆಸರು ಹೇಳಿ 13 ಲಕ್ಷ ಕೊಳ್ಳೆ ಹೊಡೆದ ಖದೀಮರು | Kannada

  ಎಸ್ ವಿ ಗ್ರೂಪ್ ಬಿಲ್ಡರ್ಸ್ ಆಂಡ್ ಡೆವಲಪರ್ಸ್ ಹೆಸರಿನ ಖಾಸಗಿ ಕಂಪನಿಗೆ ನಟಿ ಪ್ರಣಿತಾ ಅವರನ್ನು ಬ್ರಾಂಡ್ ಅಂಬಾಸಿಡರ್ ಮಾಡುತ್ತೇವೆಂದು ಹೇಳಿ ಮಹಮ್ಮದ್ ಜುನಾಯತ್ ವರ್ಷ ಎನ್ನುವವರು ಯಾಮಾರಿಸಿದ್ದಾರೆ. ಕಂಪೆನಿಯ ಮ್ಯಾನೇಜರ್ ರನ್ನು ಖಾಸಗಿ ಹೋಟೆಲ್ ಗೆ ಕರೆಸಿಕೊಂಡು ನಟಿ ಪ್ರಣಿತಾರನ್ನು ಬ್ರಾಂಡ್ ಅಂಬಾಸಿಡರ್ ಮಾಡೋದಾಗಿ ಹೇಳಿ ನಂಬಿಸಿದ್ದಾರೆ.

  ಫೋಟೋ ವೈರಲ್: ಅಟಲ್ ಸುರಂಗ ಮಾರ್ಗದಲ್ಲಿ ನಟಿ ಪ್ರಣೀತಾ ಪ್ರಯಾಣ

  ಹಣ ನೀಡಿದರೆ ಪ್ರಣಿತಾ ಒಪ್ಪಂದಕ್ಕೆ ಸಹಿ ಹಾಕುತ್ತಾರೆ ಎಂದು ನಂಬಿಸಿದ್ದಾರೆ. ಮಹಮ್ಮದ್ ಜುನಾಯತ್ ಮತ್ತು ವರ್ಷ ಮಾತು ನಂಬಿ ಮ್ಯಾನೇಜರ್ 13.5 ಲಕ್ಷ ನಗದು ನೀಡಿದ್ದಾರೆ. ನಂತರ ರೂಮ್ ಗೆ ಹೋಗಿ ಬರುವುದಾಗಿ ಹೇಳಿ ಹೊರಟು ಹೋಗಿದ್ದಾರೆ. ಒಂದು ಗಂಟೆ ಕಳೆದರು ಬರಲಿಲ್ಲ. ಬಳಿಕ ಮ್ಯಾನೇಜರ್ ರೂಮ್ ಗೆ ನೋಡಿದ್ದಾರೆ. ಅಲ್ಲಿಂದ ಆರೋಪಿಗಳಿಬ್ಬರು ಪರಾರಿಯಾಗಿರುವುದು ಗೊತ್ತಾಗಿದೆ. ಫೋನ್ ಮಾಡಿದರೆ ಆರೋಪಿಗಳ ಫೋನ್ ಸ್ವಿಚ್ ಆಫ್ ಆಗಿದೆ.

  ಈ ಸಂಬಂಧ ಕೆ. ಅಮರ್ ರೆಡ್ಡಿ ಎನ್ನುವವರು ಆರೋಪಿಗಳಾದ ಮಹಮ್ಮದ್ ಜುನಾಯತ್ ಮತ್ತು ವರ್ಷ ವಿರುದ್ಧ ಹೈ ಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಎಫ್ ಐ ಆರ್ ದಾಖಲಿಸಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

  ನಟಿ ಪ್ರಣಿತಾ ಸದ್ಯ ಬಾಲಿವುಡ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಲಾಕ್ ಡೌನ್ ಬಳಿಕ ಚಿತ್ರೀಕರಣಕ್ಕೆ ತೆರೆಳಿರುವ ಪ್ರಣಿತಾ ಮನಾಲಿಯಲ್ಲಿದ್ದಾರೆ. ಇತ್ತೀಚಿಗಷ್ಟೆ ಅಟಲ್ ಟನಲ್ ಬಳಿ ಕ್ಲಿಕ್ಕಿಸಿಕೊಂಡಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಪ್ರಣಿತಾ ನಟಿಸುತ್ತಿರುವ ಬಾಲಿವುಡ್ ಸಿನಿಮಾದಲ್ಲಿ ಶಿಲ್ಪ ಶೆಟ್ಟಿ, ಪರೇಶ್ ರಾವಲ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ.

  English summary
  Fraud in the name of Sandalwood Actress Pranita subhash.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X