For Quick Alerts
  ALLOW NOTIFICATIONS  
  For Daily Alerts

  ಹುಟ್ಟುಹಬ್ಬಕ್ಕೆ ಬರುವ ಯಶ್ ಅಭಿಮಾನಿಗಳಿಗೆ ಉಚಿತ ಬಸ್ ವ್ಯವಸ್ಥೆ

  |
  ಯಶ್ ನೋಡಲು ಬಂದ ಅಭಿಮಾನಿಗಳಿಗೆ ಬಿತ್ತು ಲಾಟಿ ಏಟು

  ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ಅದ್ದೂರಿಯಾಗಿ ತಮ್ಮ ಮೆಚ್ಚಿನ ನಟನ ಹುಟ್ಟುಹಬ್ಬ ಮಾಡಲು ಅಭಿಮಾನಿಗಳು ಸಕಲ ತಯಾರಿ ಮಾಡಿಕೊಂಡಿದ್ದಾರೆ.

  ಹುಟ್ಟುಹಬ್ಬಕ್ಕೆ ಬರುವ ಅಭಿಮಾನಿಗಳಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಮೆಜೆಸ್ಟಿಕ್ ಹಾಗೂ ಸ್ಯಾಟಲೈಟ್ ನಿಂದ ಬಸ್ ಲಭ್ಯವಿದೆ. ದೂರದ ಊರಿನಿಂದ ಬರುವ ಅಭಿಮಾನಿಗಳಿಗೆ ಸಹಾಯವಾಗುವ ದೃಷ್ಟಿಯಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 9 ರಿಂದ ಸಂಜೆ 6 ವರೆಗೆ ಬಸ್ ಇರಲಿದೆ. ಶಬರಿ ಎನ್ನುವ ಬಸ್ ಇದಾಗಿದ್ದು, ಅದರ ಯಶ್ ಬ್ಯಾನರ್ ಇರಲಿದೆ.

  ಸಿದ್ಧಗೊಳ್ಳುತ್ತಿದೆ ಯಶ್ ದಾಖಲೆಯ ಕಟೌಟ್: ರಾಕಿ ಭಾಯ್ ಹುಟ್ಟುಹಬ್ಬದ ತಯಾರಿ ಹೇಗಿದೆ ಗೊತ್ತಾ?ಸಿದ್ಧಗೊಳ್ಳುತ್ತಿದೆ ಯಶ್ ದಾಖಲೆಯ ಕಟೌಟ್: ರಾಕಿ ಭಾಯ್ ಹುಟ್ಟುಹಬ್ಬದ ತಯಾರಿ ಹೇಗಿದೆ ಗೊತ್ತಾ?

  ರಾಜ್ಯದ ಅನೇಕ ಜಿಲ್ಲೆಗಳಿಂದ ಪ್ರತಿ ವರ್ಷದಂತೆ ಅಭಿಮಾನಿಗಳು ಬರುತ್ತಾರೆ. ಈ ಬಾರಿ ಬೇರೆ ಬೇರೆ ರಾಜ್ಯದಿಂದಲೂ ಅಭಿಮಾನಿಗಳು ಬರುವ ನಿರೀಕ್ಷೆ ಇದೆ. ಬೇರೆ ಕಡೆಯಿಂದ ಬಂದ ಕೆಲವು ಅಭಿಮಾನಿಗಳು ಹುಟ್ಟುಹಬ್ಬದ ಸ್ಥಳಕ್ಕೆ ಹೋಗಲು ಒದ್ದಾಟ ನಡೆಸುತ್ತಾರೆ. ಹೀಗಾಗಿ ಯಶ್ ತಂಡ ಈ ವ್ಯವಸ್ಠೆ ಮಾಡಿದೆ.

  ಈ ಬಾರಿ ಯಶ್ ಹುಟ್ಟುಹಬ್ಬ ಬೆಂಗಳೂರಿನ ನಾಯಂಡಹಳ್ಳಿಯ ನಂದಿ ಲಿಂಕ್ ಗ್ರಾಂಡ್ ನಲ್ಲಿ ನಡೆಯಲಿದೆ. ಅತಿ ಎತ್ತರದ ಕಟ್ ಔಟ್ ಹಾಕಿ ದಾಖಲೆಯ ಮಾಡಲಾಗುತ್ತಿದೆ. 216 ಅಡಿ ಎತ್ತರದ ಯಶ್ ಕಟ್ ಔಟ್ ಸಿದ್ಧವಾಗಿದೆ.

  ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಹಸಿರು ಅಭಿಯಾನಕ್ಕೆ ಭರ್ಜರಿ ರೆಸ್ಪಾನ್ಸ್ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಹಸಿರು ಅಭಿಯಾನಕ್ಕೆ ಭರ್ಜರಿ ರೆಸ್ಪಾನ್ಸ್

  ರಾಕಿಂಗ್ ಸ್ಟಾರ್ ಅಭಿಮಾನಿಗಳು ಬರೋಬ್ಬರಿ 5 ಸಾವಿರ ಕೆಜಿಯ ಕೇಕ್ ಅನ್ನು ತಯಾರಿಸುತ್ತಿದ್ದಾರೆ. ಕೇಕ್ ವಿಚಾರದಲ್ಲಿಯೂ ರಾಕಿ ದಾಖಲೆ ಮಾಡಿದ್ದಾನೆ.

  English summary
  Free bus facility available for actor Yash Birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X