ಪುನೀತ್ ರಾಜ್‌ಕುಮಾರ್ ಹಾಡಿದ ಹೊಸ ಹಾಡು ಕೇಳಲು ಮಜವೋ ಮಜ
ಪುನೀತ್ ರಾಜ್‌ಕುಮಾರ್ ಅವರು ನಟನೆಗೆ ಮಾತ್ರವಲ್ಲ ತಮ್ಮ ಡಾನ್ಸ್ ಜೊತೆಗೆ ಹಾಡಿಗೂ ಖ್ಯಾತರು. ಹಲವು ಸಿನಿಮಾಗಳಿಗೆ ಪುನೀತ್ ತಮ್ಮ ಧ್ವನಿ ನೀಡಿದ್ದಾರೆ.
Recommended Video
ಪುನೀತ್ ರಾಜ್‌ಕುಮಾರ್ ಅವರು ಇನ್ನೂ ಬಿಡುಗಡೆ ಆಗದ 'ಫ್ರೆಂಚ್ ಬಿರಿಯಾನಿ' ಸಿನಿಮಾಕ್ಕೆ ಹಾಡೊಂದನ್ನು ಹಾಡಿದ್ದು, ಹಾಡು ಸಖತ್ ಮಜವಾಗಿದೆ.
ಫ್ರೆಂಚ್ ಬಿರಿಯಾನಿ ಅವರದ್ದೇ ಪ್ರೊಡಕ್ಷನ್ ಹೌಸ್ ಆದ ಪಿಆರ್‌ಕೆ ಪ್ರೊಡಕ್ಷನ್ಸ್‌ನಿಂದ ಹೊರಬರುತ್ತಿರುವ ಸಿನಿಮಾ. ಸಿನಿಮಾದ ನಿರ್ಮಾಪಕರು ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್‌ರಾಜ್‌ಕುಮಾರ್.

ರಾಜರತ್ನಂ ಸಾಲಿನಿಂದ ಪ್ರಾರಂಭ
ನರ್ಕಕ್ಕಿಳ್ಸಿ ನಾಲ್ಗೆ ಹೊಲ್ಸಿದ್ರೂವೆ ಎಂಬ ರಾಜರತ್ನಂ ಸಾಲನ್ನು ಇಟ್ಟುಕೊಂಡು ಹಾಡು ಕಟ್ಟಿದ್ದಾರೆ ವಾಸುಕಿ ವೈಭವ್ ಮತ್ತು ಅವಿನಾಶ್ ಬೆಲಕೇಲ. ಹಾಡಿಗೆ ಧ್ವನಿ ಮೂಲಕ ಜೋಶ್ ತುಂಬಿದ್ದಾರೆ ಪುನೀತ್ ರಾಜ್‌ಕುಮಾರ್.

ಕನ್ನಡ ಪ್ರೇಮ, ಕುಡುಕರ ವೇದಾಂತ
ಬಾರಿನಲ್ಲಿ ನಡೆಯುವ ಒಟ್ಟಾಗಿ ಕುಡಿವ ಕುಡುಕರ ಹಾಡು ಇದಾಗಿದ್ದು, ಕನ್ನಡ ಪ್ರೀತಿಯ ಜೊತೆಗೆ, ಕುಡುಕರ ವೇದಾಂತ. ಕುಡುಕರ ಪಾಡು, ಬೆಂಗಳೂರಿನ ರೋಡು ಎಲ್ಲದರ ಬಗ್ಗೆಯೂ ಹಾಸ್ಯಮಿಶ್ರಿತ ಉಲ್ಲೇಖ ಹಾಡಿನಲ್ಲಿದೆ.

ಸಖತ್ ಸ್ಟೆಪ್ಸ್ ಹಾಕಿರುವ ಪನ್ನಗಾಭರಣ
ಹಾಡಿನ ವಿಶೇಷವೆಂದರೆ ಹಾಡಿಗೆ ಡಾನ್ಸ್ ಮಾಡಿರುವುದು ನಿರ್ದೇಶಕ ಪನ್ನಗಾಭರಣ. ಫ್ರೆಂಚ್ ಬಿರಿಯಾನಿ ನಿರ್ದೇಶಕರೂ ಅವರೇ ಆಗಿದ್ದು, ಹಾಡಿನಲ್ಲಿ ಸಖತ್ ಆಗಿ ಡಾನ್ಸ್ ಮಾಡಿದ್ದಾರೆ. ಖುಷಿ-ಖುಷಿಯಿಂದ ಸ್ಟೆಪ್ ಹಾಕಿದ್ದಾರೆ ಪನ್ನಗಾಭರಣ.

ಜುಲೈ 24 ಕ್ಕೆ ಫ್ರೆಂಚ್ ಬಿರಿಯಾನಿ ಸಿನಿಮಾ ಬಿಡುಗಡೆ
ಫ್ರೆಂಚ್ ಬಿರಿಯಾನಿ ಸಿನಿಮಾ ಜುಲೈ 24 ರಂದು ಅಮೆಜಾನ್ ಪ್ರೈಂ ನಲ್ಲಿ ಬಿಡುಗಡೆ ಆಗುತ್ತಿದ್ದು, ಸಿನಿಮಾದ ನಾಯಕ ದಾನಿಶ್ ಸೇಠ್, ಸಲ್ ಯೂಸಫ್, ರಂಗಾಯಣ ರಘು, ದಿಶಾ ಮದನ್, ಮಹಾಂತೇಶ್ ಹಿರೇಮಠ ಇನ್ನೂ ಹಲವರು ನಟಿಸಿದ್ದಾರೆ.


Click it and Unblock the Notifications











