For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಜೊತೆ ನಾವಿದ್ದೇವೆ: ಸಾಮಾಜಿಕ ಜಾಲತಾಣದಲ್ಲಿ ಡಿ ಬಾಸ್ ಪರ ಅಭಿಯಾನ

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹಲ್ಲೆ ಆರೋಪ ಮಾಡಿದ ಬೆನ್ನಲ್ಲೇ ಅನೇಕರು ದರ್ಶನ್ ಬೆಂಬಲಕ್ಕೆ ನಿಂತಿದ್ದಾರೆ. ಕಳೆದ ಕೆಲವು ದಿನಗಳಿಂದ ದರ್ಶನ್ ಪ್ರಕರಣ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

  25 ಕೋಟಿ ವಂಚನೆ ಯತ್ನ ಪ್ರಕರಣದಿಂದ ಪ್ರಾರಂಭವಾದ ದರ್ಶನ್ ವಿವಾದ ಬಳಿಕ ಸಾಕಷ್ಟು ಟ್ವಿಸ್ಟ್ ಅಂಡ್ ಟರ್ನ್ ಪಡೆದು ಇದೀಗ ಹಲ್ಲೆ ಆರೋಪ ವರೆಗೂ ಬಂದಿದೆ. ಹೋಟೆಲ್ ಸಪ್ಲೈಯರ್ ಮೇಲೆ ದರ್ಶನ್ ಹಲ್ಲೆ ಮಾಡಿದ್ದಾರೆ ಎಂದು ಇಂದ್ರಜಿತ್ ಆರೋಪ ಮಾಡಿದ ಬಳಿಕ ದರ್ಶನ್ ಕೂಡ ಖಡಕ್ ಆಗಿ ಪ್ರತಿಕ್ರಿಯೆ ನೀಡಿ, ಇಂದ್ರಜಿತ್ ವಿರುದ್ಧ ಕಿಡಿ ಕಾರಿದ್ದರು.

  ದರ್ಶನ್ ಬೆಂಬಲಕ್ಕೆ ಅವರ ಅಭಿಮಾನಿಗಳ ಜೊತೆಗೆ ಸ್ನೇಹಿತರು ಚಿತ್ರರಂಗದ ಗಣ್ಯರು ನಿಂತಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ, ನಟ ಆದಿತ್ಯ, ಧನ್ವೀರ್, ರಾಜ್ ವರ್ಧನ್, ನಟಿ ಅಮೂಲ್ಯ ಪತಿ ಜಗದೀಶ್, ಕುರುಕ್ಷೇತ್ರ ಸಿನಿಮಾದಲ್ಲಿ ನಟಿಸಿದ್ದ ಡ್ಯಾನಿಶ್ ಅಖ್ತಾರ್ ಸೇರಿದಂತೆ ಅನೇಕರು ಬೆಂಬಲ ವ್ಯಕ್ತಪಡಿಸಿ ನಾವು ದರ್ಶನ್ ಜೊತೆ ಇದ್ದೀವಿ #WestandwithDarshan ಎಂದು ಅಭಿಯಾನ ಪ್ರಾರಂಭಿಸಿದ್ದಾರೆ.

  ನಟ ಡ್ಯಾನಿಶ್ ಅಖ್ತರ್

  ನಟ ಡ್ಯಾನಿಶ್ ಅಖ್ತರ್

  ಕುರುಕ್ಷೇತ್ರ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟಿದ್ದ ಹಿಂದಿ ನಟ ಡ್ಯಾನಿಶ್ ಅಖ್ತಾರ್ ಟ್ವೀಟ್ ಮಾಡಿ ದರ್ಶನ್ ಗೆ ಬೆಂಬಲ ಸೂಚಿಸಿದ್ದಾರೆ. 'ನಾನು ಯಾವಾಗಲೂ ನನ್ನ ಬಾಸ್ ಪರ' ಎಂದು ಬರೆದು ಹಾರ್ಟ್ ಇಮೋಜಿ ಹಾಕಿದ್ದಾರೆ. ಲವ್ ಯು ಸರ್ ಎಂದು ಬರೆದು ದರ್ಶನ್ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

  ಪ್ರಜ್ವಲ್ ದೇವರಾಜ್ ಸಹೋದರರು

  ಪ್ರಜ್ವಲ್ ದೇವರಾಜ್ ಸಹೋದರರು

  ಪ್ರಣಮ್ ದೇವರಾಜ್ ಸಹ ಪ್ರತಿಕ್ರಿಯೆ ನೀಡಿ ಅಣ್ಣನ ಪರ ಎಂದು ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ್ದು, 'ನಾನು ಯಾವಾಗಲು ನಿಮ್ಮ ಪರ ಅಣ್ಣ' ಎಂದಿದ್ದಾರೆ. ದರ್ಶನ್ ಜೊತೆ ಇರುವ ಸುಂದರ ಫೋಟೋವನ್ನು ಹಂಚಿಕೊಂಡಿದ್ದಾರೆ.

  ನಟಿ ಅಮೂಲ್ಯ ಪತಿ ಜಗದೀಶ್

  ನಟಿ ಅಮೂಲ್ಯ ಪತಿ ಜಗದೀಶ್

  "ಉತ್ತಮ ಕಲಾವಿದರಾಗಿ, ರಾಜರಾಜೇಶ್ವರಿ ನಗರದ ನಿವಾಸಿಯಾಗಿ, ಕುಟುಂಬದ ಆತ್ಮೀಯರಾಗಿ ದರ್ಶನ್ ಅವರು ಚಿರಪರಿಚಿತರು. ಸಮಾಜದ ಕಷ್ಟಗಳಿಗೆ, ವನ್ಯಜೀವಿಗಳ ರಕ್ಷಣೆಗೆ ಸ್ಪಂದಿಸುವ ಉತ್ತಮ ಸ್ವಭಾವವುಳ್ಳವರು. ಯಾವುದೋ ವಿಚಾರವನ್ನು ಅನಗತ್ಯವಾಗಿ ಎಳೆದು, ದಾರಿ ತಪ್ಪಿಸಿ, ಅಪಪ್ರಚಾರ ನಡೆಸುವ ಪ್ರಯತ್ನ ನಡೆಯುತ್ತಿರುವುದು ವಿಪರ್ಯಾಸ" ಎಂದು ಟ್ವೀಟ್ ಮಾಡಿದ್ದಾರೆ.

  ನಟ ರಾಜ್ ವರ್ಧನ್

  ನಟ ರಾಜ್ ವರ್ಧನ್

  ನಾನು ನಿಮ್ಮ ಪಯಣವನ್ನು ನೋಡಿದ್ದೇನೆ. ನೀವು ಇವತ್ತು ಏನು ಸಾಧನೆ ಮಾಡಿದ್ದೀರೋ ಅದರ ಹಿಂದೆ ಅದ್ಭುತ ಗುಣ, ಪಾಸಿಟಿವ್ ಎನರ್ಜಿ, ಸ್ಫೂರ್ತಿದಾಯಕ ವ್ಯಕ್ತಿತ್ವವಿದೆ. ನಿಮ್ಮ ಬಗ್ಗೆ ಏನೆ ಆರೋಪ ಕೇಳಿಬಂದರು ಅದು ಮುಖ್ಯವಲ್ಲ. ನೀವು ಯಾವಾಗಲು ನಿಮ್ಮದೆ ಶೈಲಿಯಲ್ಲಿ ಹೊಳೆಯುತ್ತಿರುತ್ತೀರಿ. ನಾನು ನಿಮ್ಮ ಪರ ನಿಲ್ಲುತ್ತೇನೆ ಅಣ್ಣ" ಎಂದು ಬರೆದುಕೊಂಡಿದ್ದಾರೆ.

  ನಟ ಆದಿತ್ಯ

  ನಟ ಆದಿತ್ಯ

  ಈ ಕಠಿಣ ಸಮಯದಲ್ಲಿ ಯಾರು ನಿಮ್ಮೊಂದಿಗೆ ನಿಲ್ಲುತ್ತಾರೋ ಇಲ್ವೋ ಆದರೆ ನಾನು ಯಾವಾಗಲೂ ನಿಮ್ಮ ಪಕ್ಕದಲ್ಲಿಯೇ ಇರುತ್ತೇನೆ. ಸೆಲೆಬ್ರಿಟಿಗಳಿಗೆ ನಿಮ್ಮ ಬೆಂಬಲವನ್ನು ನೆನಪಿಸಿಕೊಳ್ಳುತ್ತೇನೆ. ನಾವು ನಿಮ್ಮನ್ನು ಪ್ರೀತಿಸುತ್ತೇವೆ. ನಾವು ನಿಮ್ಮನ್ನು ಬೆಂಬಲಿಸುತ್ತೇವೆ. ಯಾವಾಗಲು ನಿಮ್ಮೊಂದಿಗೆ ನಿಲ್ಲುತ್ತೇವೆ" ಎಂದು ಟ್ವೀಟ್ ಮಾಡಿದ್ದಾರೆ.

  ಇಂದ್ರಜಿತ್ ಮೀಟರ್ ನ ಮೆಚ್ಚಲೇ ಬೇಕು
  ನಟ ಧನ್ವೀರ್

  ನಟ ಧನ್ವೀರ್

  "ನನ್ನ ಪ್ರೀತಿ, ನಂಬಿಕೆ, ಸ್ಫೂರ್ತಿಗೆ ಇನ್ನೊಂದು ಹೆಸರು ಡಿ ಬಾಸ್. ನಾನು ಚಿತ್ರೋದ್ಯಮಕ್ಕೆ ಬರುವ ಮೊದಲಿನಿಂದಲೂ ಡಿ ಬಾಸ್ ಅಭಿಮಾನಿ. ಅಭಿಮಾನ ಎನ್ನುವುದು ಚಿತ್ರ ನೋಡಿದಾಗ ಮಾತ್ರ ಬರುವುದಿಲ್ಲ. ಚಿತ್ರರಂಗಕ್ಕೆ ಬರುವ ಮೊದಲು ಅವರು ಪಟ್ಟಿರುವ ಕಷ್ಟ, ಚಿತ್ರರಂಗದಲ್ಲಿ ನಡೆದು ಬಂದ ಹಾದಿಯಿಂದ ಬರುವಂತದ್ದು. ಜೊತೆಗೆ ಯಾರಿಗೂ ಗೊತ್ತಾಗದಂತೆ ಮಾಡುವ ನಿಸ್ವಾರ್ಥ ಸಹಾಯ. ಇಂತಹ ನೂರಾರು ಗುಣಗಳಿರುವ ನನ್ನಂತ ಅಭಿಮಾನಿಗಳಿಗೆ ಸ್ಫೂರ್ತಿಯಾಗಿ ನಿಂತಿರುವ ಬೃಹತ್ ಶಿಖರ ಡಿ ಬಾಸ್'' ಎಂದು ನಟ ಧನ್ವೀರ್ ಪೋಸ್ಟ್ ಹಾಕಿದ್ದಾರೆ.

  English summary
  friends and celebrities campaign for actor Darshan with #WestandwithDarshan hashtag on Social Media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X