Friendship Day 2023: ವಿಷ್ಣುದಾದಾ-ಅಂಬಿ ಬಿಟ್ಟು ಸ್ಯಾಂಡಲ್‌ವುಡ್‌ನ ಜೀವದ ಗೆಳೆಯರು ಯಾರು?

By ಫಿಲ್ಮಿಬೀಟ್ ಡೆಸ್ಕ್

ವಿಶ್ವದ ಯಾವುದೇ ಮೂಲೆಗೆ ಹೋದರೂ ಸ್ನೇಹಕ್ಕೆ ಬೆಲೆ ಕೊಡುವ ಜೀವಗಳು ಇದ್ದೇ ಇರುತ್ತವೆ. ಅದೆಷ್ಟೇ ಶ್ರೀಮಂತರಾಗಿದ್ದರೂ, ಅದೆಷ್ಟೇ ಹೆಸರು ಮಾಡಿದ್ದರೂ ಸ್ನೇಹಿತರ ನಡುವೆ ಇದ್ಯಾವುದೂ ಬರೋದಿಲ್ಲ. ಹಾಗೇ ಸ್ಯಾಂಡಲ್‌ವುಡ್‌ನಲ್ಲೂ ಜೀವಕ್ಕೆ ಜೀವ ಕೊಡುವ ಕುಚಿಕು ಗೆಳೆಯರಿದ್ದಾರೆ.

ಇಬ್ಬರು ಸೂಪರ್‌ಸ್ಟಾರ್‌ಗಳ ನಡುವೆ ಸ್ನೇಹ ಇರೋದಿಲ್ಲ. ಅಹಂ, ಪೈಪೋಟಿನೇ ಹೆಚ್ಚಿರುತ್ತೆ. ಅಂತಹದರಲ್ಲಿ ಕೆಲವು ಸ್ಟಾರ್‌ಗಳು ಅದೆಲ್ಲವನ್ನೂ ಪಕ್ಕಕ್ಕಿಟ್ಟು ಸ್ನೇಹಕ್ಕೆ ಬೆಲೆ ಕೊಟ್ಟಿದ್ದಾರೆ. ಹಾಗಂತ ಇಬ್ಬರು ಸ್ನೇಹಿತರ ನಡುವೆ ಅಹಂ ಬಂದಿದೇ ಇಲ್ಲ ಅಂತಲ್ಲ. ಇಂತಹ ಕುಚಿಕುಗಳು ಬೇರೆಯಾಗಿದ್ದೂ ಇದೆ.

ಡಾ.ರಾಜ್‌ಕುಮಾರ್- ನರಸಿಂಹರಾಜು, ಡಾ.ವಿಷ್ಣುವರ್ಧನ್-ಡಾ.ಅಂಬರೀಶ್ ಹೀಗೆ ದಿಗ್ಗಜರಲ್ಲಿ ಸ್ನೇಹವಿತ್ತು. ಹಾಗೇ ಇಂದಿನ ಪೀಳಿಯ ನಟರೂ ಸ್ನೇಹಕ್ಕೆ ಬೆಲೆ ಕೊಡುತ್ತಾರೆ. ಒಬ್ಬರು ಮತ್ತೊಬ್ಬರಿಗೆ ಸಪೋರ್ಟ್ ಮಾಡುತ್ತಾರೆ. ಅಂತಹ ಸ್ಯಾಂಡಲ್‌ವುಡ್‌ನ ಸ್ನೇಹಲೋಕ ಇಲ್ಲಿದೆ.

Friendship Day 2023: Sandalwood most talked celebrity friendship

ರಕ್ಷಿತ್-ರಿಷಬ್-ರಾಜ್ ಬಿ ಶೆಟ್ಟಿ

ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ಈ ಮೂವರ ಸ್ನೇಹದ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಸ್ಯಾಂಡಲ್‌ವುಡ್‌ನ ಶೆಟ್ಟರ ಗ್ಯಾಂಗ್ ಅಂತಲೇ ಫೇಮಸ್. ಈ ಮೂವರು ಒಬ್ಬರ ಸಹಾಯಕ್ಕೆ ಒಬ್ಬರು ನಿಲ್ಲುತ್ತಾರೆ. ರಕ್ಷಿತ್ ಶೆಟ್ಟಿ ಸಿನಿಮಾಗೆ ರಿಷಬ್ ಶೆಟ್ಟಿ ಹಾಗೂ ರಾಜ್‌ ಬಿ ಶೆಟ್ಟಿ ಬೆಂಬಲಕ್ಕೆ ನಿಂತರೆ. ರಾಜ್ ಬಿ ಶೆಟ್ಟಿ, ರಿಷಬ್ ಸಿನಿಮಾಗಳಿಗೆ ರಕ್ಷಿತ್ ಬೆಂಬಲವಾಗಿ ನಿಲ್ಲುತ್ತಾರೆ. ಹಾಗಂತ ಈ ಸ್ನೇಹ ಸಿನಿಮಾಗಷ್ಟೇ ಸೀಮಿತವಾಗಿಲ್ಲ. ತಮ್ಮ ಕಷ್ಟ ಸುಖಗಳನ್ನೂ ಒಟ್ಟೊಟ್ಟಿಗೆ ಹಂಚಿಕೊಳ್ಳುತ್ತಾರೆ.

Friendship Day 2023: Sandalwood most talked celebrity friendship

ಧನಂಜಯ್-ನಾಗಭೂಷಣ್

ನಟರಾಕ್ಷಸ ಧನಂಜಯ್ ಹಾಗೂ ಹಾಸ್ಯ ನಟ ನಾಗಭೂಷಣ್ ಉತ್ತಮ ಗೆಳೆಯರು. ಹಾಗಂತ ಇವರು ಚಿತ್ರರಂಗಕ್ಕೆ ಬಂದ್ಮೇಲೆ ಸ್ನೇಹಿತರಾದವರಲ್ಲ. ಮೈಸೂರಿನಲ್ಲಿ ಓದುವಾಗಲೇ ಧನಂಜಯ್ ಹಾಗೂ ನಾಗಭೂಷಣ್ ಇಬ್ಬರೂ ಗೆಳೆಯರಾಗಿದ್ದರು. ಅಲ್ಲಿಂದ ಸಿನಿಮಾ ಕನಸನ್ನು ಹೊತ್ತುಕೊಂಡು ಚಿತ್ರರಂಗಕ್ಕೆ ಬಂದರು. ಇಲ್ಲೂ ಇಬ್ಬರೂ ಒಟ್ಟಿಗೆ ಕೆಲಸ ಮಾಡುವುದಷ್ಟೇ ಅಲ್ಲದೆ. ಸ್ನೇಹಿತರಾಗಿದ್ದಾರೆ.

Friendship Day 2023: Sandalwood most talked celebrity friendship

ಯೋಗಿ-ದಿಗಂತ್

ಲೂಸ್ ಮಾದ ಯೋಗಿ ಹಾಗೂ ದೂದ್‌ಪೇಡಾ ದಿಗಂತ್ ಇಬ್ಬರೂ ಹೆಚ್ಚು ಕಡಿಮೆ ಒಂದೇ ಸಮಯಕ್ಕೆ ಚಿತ್ರರಂಗಕ್ಕೆ ಬಂದವರು. ಆರಂಭದ ದಿನಗಳಿಂದಲೇ ಇವರಿಬ್ಬರು ಉತ್ತಮ ಗೆಳೆಯರಾಗಿದ್ದರು. ಕಾರ್ಯಕ್ರಮವೊಂದರಲ್ಲಿ ಯೋಗಿ ತಮ್ಮ ಸ್ನೇಹದ ಬಗ್ಗೆ ಹೇಳಿಕೊಂಡಿದ್ದರು. ಇತ್ತೀಚೆಗೆ ಯೋಗಿ ಹಾಗೂ ದಿಗಂತ್ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಆದರೆ, ಯೋಗಿ ಹಾಗೂ ದಿಗಂತ್ ಸ್ನೇಹದ ಬಗ್ಗೆ ಇಡಿ ಚಿತ್ರರಂಗವೇ ಮಾತಾಡಿಕೊಂಡಿತ್ತು.

Friendship Day 2023: Sandalwood most talked celebrity friendship

ಶಿವರಾಜ್‌ಕುಮಾರ್‌-ಉಪೇಂದ್ರ

ಸದ್ಯ ಸ್ಯಾಂಡಲ್‌ವುಡ್‌ನ ಓಲ್ಡ್ ಫ್ರೆಂಡ್ಸ್ ಅಂದರೆ, ಶಿವರಾಜ್‌ಕುಮಾರ್ ಹಾಗೂ ಉಪೇಂದ್ರ. 'ಓಂ' ಸಿನಿಮಾ ಬಳಿಕ ಶಿವಣ್ಣ ಹಾಗೂ ಉಪೇಂದ್ರ ಇಬ್ಬರೂ ಉತ್ತಮ ಗೆಳೆಯರಾಗಿಬಿಟ್ಟರು. ಇದೇ ಸ್ನೇಹದ ಮೇಲೆ ಉಪೇಂದ್ರ ಹಾಗೂ ಶಿವಣ್ಣ ಇಬ್ಬರೂ 'ಪ್ರೀತ್ಸೆ' ಅನ್ನೋ ಸಿನಿಮಾದಲ್ಲಿಯೂ ನಟಿಸಿದ್ದರು. ಇಲ್ಲಿಂದ ಇಬ್ಬರ ಫ್ರೆಂಡ್‌ಶಿಪ್ ಮತ್ತಷ್ಟು ಗಟ್ಟಿಯಾಗುತ್ತಾ ಹೋಯ್ತು.

More from Filmibeat

English summary
Friendship Day 2023: Sandalwood most talked celebrity friendship
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X