ನಮ್ಮ ಬದುಕನ್ನು ಪುನರ್ ನಿರ್ಮಿಸಿಕೊಳ್ಳುತ್ತಿದ್ದೇವೆ, ಅಜಯ್ ರಾವ್ ಪತ್ನಿ ಸ್ವಪ್ನಾ ಭಾವನಾತ್ಮಕ ಪ್ರತಿಕ್ರಿಯೆ
ದಾಂಪತ್ಯದಲ್ಲಿ ಚಿಕ್ಕ-ಚಿಕ್ಕ ವಿರಸಗಳು ಸಾಂಗತ್ಯದ ಅರ್ಥವನ್ನು ಗಟ್ಟಿ ಮಾಡುತ್ತವೆ. ಇಬ್ಬರ ನಡುವಿನ ಹೊಂದಾಣಿಕೆಯನ್ನು ಹೆಚ್ಚಿಸುತ್ತವೆ.ಇಬ್ಬರ ನಡುವೆ ಇರುವ ತಪ್ಪು ಅಭಿಪ್ರಾಯಗಳನ್ನು-ಗ್ರಹಿಕೆಗಳನ್ನು ಸರಿಪಡಿಸಿಕೊಂಡು ಹೋಗುವುದರಲ್ಲಿಯೇ ದಾಂಪತ್ಯದ ಅರ್ಥ ಅಡಗಿದೆ ಎನ್ನುವುದು ಅನೇಕರ ಅಭಿಪ್ರಾಯ.ಆದರೆ ಕೆಲ ಒಮ್ಮೆ ಈ ದಾಂಪತ್ಯದಲ್ಲಿ ಮೂಡುವ ಬಿರುಕನ್ನು ಆರಂಭದಲ್ಲಿಯೇ ಸರಿಪಡಿಸಿಕೊಳ್ಳದಿದ್ದರೆ ಅದು ಹಾದಿ ತಪ್ಪಿ ಎಲ್ಲಿಗೋ ಹೋಗಿ ತಲುಪುವ ಅಪಾಯ ಇದ್ದೇ ಇರುತ್ತೆ.
ಈ ಅಪಾಯವನ್ನು ಅರಿತು ಈಗ ಹಳಿ ತಪ್ಪಿರುವ ಸಂಸಾರವನ್ನು ಸರಿ ದಾರಿಗೆ ತರಲು ಅಜಯ್ ರಾವ್ ಮತ್ತು ಅವರ ಪತ್ನಿ ಸ್ವಪ್ನಾ ಮುಂದಾಗಿದ್ದಾರೆ. ಹೌದು, ನಿನ್ನೆ ಕೃಷ್ಣಜನ್ಮಾಷ್ಟಮಿಯಂದೇ ಸ್ಯಾಂಡಲ್‌ವುಡ್ ನಲ್ಲಿ ಕೃಷ್ಣ ಅಜಯ್ ರಾವ್ ಅವರ ವಿಚ್ಛೇದನದ ಸುದ್ದಿ ಸದ್ದು ಮಾಡಿತ್ತು.

ಮಾಧ್ಯಮಗಳಲ್ಲಿ ಅಜಯ್ ರಾವ್ ಡಿವೋರ್ಸ್ ಕುರಿತ ಸುದ್ದಿ ಪ್ರಸಾರವಾಗುತ್ತಿದ್ದರು ಕೂಡ ತಮ್ಮ ವಿಚ್ಚೇದನದ ವಿಚಾರ ಖುದ್ದು ಅಜಯ್ ರಾವ್ ಅವರಿಗೆ ಕೂಡ ಗೊತ್ತಿರಲಿಲ್ಲ.ಹೀಗಾಗಿ ನನ್ನ ಹೆಂಡ್ತಿ ಕೋರ್ಟ್‌ಗೆ ಹೋಗಿದ್ದಾಳಾ ? ನನಗೆ ಈ ವಿಚಾರ ಗೊತ್ತಿಲ್ಲವಲ್ಲಾ ? ಕೇಳಿ ಹೇಳ್ತಿನಿ ಇರಿ ಎಂದು ಹೇಳಿದ್ದರು.
ಗೊತ್ತಾದ ನಂತರ ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆಯನ್ನು ನೀಡಿದ್ದ ಅಜಯ್ ರಾವ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗ ಪತ್ರವನ್ನು ಹಂಚಿಕೊಂಡಿದ್ದರು. "ಎಲ್ಲಾ ಅಭಿಮಾನಿಗಳಿಗೆ, ಮಾಧ್ಯಮಗಳಿಗೆ, ಸ್ನೇಹಿತರಿಗೆ ಮತ್ತು ಹಿತೈಷಿಗಳಿಗೆ, ಈ ಸೂಕ್ಷ್ಮ ಸಮಯದಲ್ಲಿ ನಮ್ಮ ಕುಟುಂಬದ ಖಾಸಗಿತನವನ್ನು ಗೌರವಿಸುವಂತೆ ಹಾಗೂ ವ್ಯಯಕ್ತಿಕ ವಿಷಯಗಳಿಗೆ ಸಂಬಂಧಿಸಿದ ಯಾವುದೇ ಸುದ್ದಿಯನ್ನು ಹಂಚಿಕೊಳ್ಳುವುದನ್ನು ಅಥವಾ ಹರಡುವುದನ್ನು ದೂರವಿಡುವಂತೆ ತಮ್ಮನ್ನು ವಿನಮ್ರವಾಗಿ ವಿನಂತಿಸುತ್ತೇನೆ" ಎಂದು ಪತ್ರದ ಮೂಲಕ ಮನವಿಯನ್ನು ಮಾಡಿಕೊಂಡಿದ್ದರು.
ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅಜಯ್ ರಾವ್ ಅವರ ಪತ್ನಿ ಸ್ವಪ್ನಾ ಕೂಡ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಬದುಕನ್ನು ಪುನರ್ ನಿರ್ಮಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.
ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಸ್ವಪ್ನಾ''ತಾಯಿಯಾಗಿ ನನ್ನ ಮೊದಲ ಜವಾಬ್ದಾರಿ ನನ್ನ ಮಗಳ ಸುರಕ್ಷತೆ, ಗೌರವ ಮತ್ತು ಅವಳ ಭವಿಷ್ಯಕ್ಕಾಗಿ ನಾನು ಪ್ರತಿ ದಿನ ಧೈರ್ಯವನ್ನು ಕೂಡಿಸಿ,ನನಗೆ ತೀವ್ರವಾಗಿ ಪರೀಕ್ಷಿಸುತ್ತಿರುವ ಸವಾಲುಗಳನ್ನು ಎದುರಿಸುತ್ತಿದ್ದೇನೆ'' ಎಂದು ಹೇಳಿದ್ದಾರೆ.

ಮುಂದುವರೆದು ''ಪ್ರಿಯ ಸ್ನೇಹಿತರೆ, ಸಹೋದರರೆ, ನಾನು ಮತ್ತು ನನ್ನ ಮಗಳು ನಮ್ಮ ಬದುಕನ್ನ ಪುನರ್ ನಿರ್ಮಿಸಿಕೊಳ್ಳಲು ಮತ್ತು ನಮ್ಮ ದಾಂಪತ್ಯ ಜೀವನವನ್ನು ಪುನಃ ನಿರ್ಮಿಸಿಕೊಳ್ಳಲು ನಿಮ್ಮ ಹಾರೈಕೆಗಳು ಮತ್ತು ಪ್ರಾರ್ಥನೆಗಳನ್ನು ನಿಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ. ಮತ್ತು ನಾನು ಅತ್ಯಂತ ಗೌರವದಿಂದ ತಿಳಿಸಲು ಬಯಸುವುದೇನೆಂದರೆ ಈ ವಿಷಯ ನಮ್ಮ ವೈಯಕ್ತಿಕ, ಅಳವಾದ ಭಾವನತ್ಮಕ ಮತ್ತು ದಾಂಪತ್ಯ ಜೀವನಕ್ಕೆ ಮಾತ್ರ ಸಂಬಂದಿಸಿದ್ದು ಹೊರತು ಬೇರೆ ಯಾವುದೇ ರೀತಿಯಲ್ಲಿ ಸಂಬಂಧಿಸಿಲ್ಲ ಎಂದು ತಿಳಿಸುತ್ತೇನೆ' ಎಂದು ಹೇಳಿದ್ದಾರೆ ಸ್ವಪ್ನಾ.
ಸದ್ಯ ಸ್ವಪ್ನಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಅಜಯ್ ರಾವ್ ಜೊತೆ ಇರುವ ಎಲ್ಲಾ ಫೋಟೊಗಳನ್ನು ಡಿಲೀಟ್ ಮಾಡಿದ್ದಾರೆ. ಅಥವಾ ಹೈಡ್ ಮಾಡಿದ್ದಾರೆ. ಪರಸ್ಪರ ಇನ್‌ಸ್ಟಾಗ್ರಾಮ್‌ನಲ್ಲಿ ಇಬ್ಬರು ಅನ್‌ಫಾಲೋ ಕೂಡ ಮಾಡಿಕೊಂಡಿದ್ದು ಸ್ವಪ್ನಾ ತಮ್ಮ ಹೆಸರಿನ ಮುಂದೆ ಇದ್ದ ಅಜಯ್ ರಾವ್ ಹೆಸರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ತೆಗೆದಿದ್ದಾರೆ. ಆದರೆ. ಈ ಗ ಹಂಚಿಕೊಂಡಿರುವ ಪತ್ರದಲ್ಲಿ ತಮ್ಮ ಹೆಸರನ್ನು ಸಪ್ನಾ ಅಜಯ್ ರಾವ್ ಎಂದು ನಮೂದಿಸಿದ್ದಾರೆ. ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸಪ್ನಾ ಅಜಯ್ ರಾವ್ ತಮ್ಮ ಈ ಪೋಸ್ಟ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.


Click it and Unblock the Notifications











