ಅತ್ತ ಜೈಲಿನಲ್ಲಿ ದರ್ಶನ್, ಇತ್ತ ಮನೆಯಲ್ಲಿ ಕಳ್ಳತನ. ವಿಜಯಲಕ್ಷ್ಮೀಗೆ ನಂಬಿಕೆ ದ್ರೋಹ ಮಾಡಿದ್ಯಾರು ?

ಕಳ್ಳತನ, ವಂಚನೆ ಪ್ರಕರಣಗಳು ಈಗೀಗ ಹೆಚ್ಚಾಗುತ್ತಲೇ ಇವೆ. ಶಾಕಿಂಗ್ ಸಮಾಚಾರ ಅಂದರೆ ದೊಡ್ಡ ದೊಡ್ಡವರ ಮನೆಗಳಿಗೆ ಕೂಡ ಕಳ್ಳಕಾಕರು ಯಾವ ಭಯ ಇಲ್ಲದೇ ನುಗ್ಗುತ್ತಿದ್ದಾರೆ. ಮನೆ ಕೆಲಸ ಮಾಡುವ ನೆಪದಲ್ಲಿ ಬಂದು ಭದ್ರತೆಯ ನಡುವೆಯೇ ಸೆಲೆಬ್ರಿಟಿಗಳ ಐಶಾರಾಮಿ ಮನೆಯಲ್ಲಿರುವ ಇರೋ ಬರೋ ವಸ್ತುಗಳನ್ನೆಲ್ಲ ದೋಚಿಕೊಂಡು ಪರಾರಿಯಾಗುತ್ತಿದ್ದಾರೆ. ನಂಬಿಸಿ ಸರಿಯಾದ ಸಮಯ ನೋಡಿಕೊಂಡು ಬೆನ್ನಿಗೆ ಚೂರಿ ಹಾಕುತ್ತಾರೆ. ಇದಕ್ಕೆ ವಿಜಯಲಕ್ಷ್ಮಿ ದರ್ಶನ್ ಮನೆಯಲ್ಲಿ ನಡೆದ ಕಳ್ಳತನ ಮತ್ತೊಂದು ಉದಾಹರಣೆ.

ಹೌದು, ಎಲ್ಲರಿಗೆ ಗೊತ್ತಿರುವಂತೆ ಸದ್ಯ ವಿಜಯಲಕ್ಷ್ಮಿ ನೋವಲ್ಲಿದ್ದಾರೆ. ಜೈಲು ಹಕ್ಕಿಯಾದ ತಮ್ಮ ಪತಿಯನ್ನು ಹೇಗಾದರೂ ಮಾಡಿ ಹೊರ ಕರೆತರಬೇಕೆಂದು ಪ್ರಯತ್ನ ಮಾಡುತ್ತಿದ್ದಾರೆ.

From Courtroom Drama to House Heist New Shocker for Darshan s Wife Vijayalakshmi Rs 3 Lakh Robbed

ಇನ್ನೂ ದರ್ಶನ್ ಅವರ ನಸೀಬು ಎಷ್ಟು ಖರಾಬಾಗಿದೆ ಅಂದರೆ ಮೊದಲ ಬಾರಿ ಬಂಧನಕ್ಕೊಳಗಾಗಿ ದರ್ಶನ್ ಪರಪ್ಪನ ಅಗ್ರಹಾರದಲ್ಲಿದ್ದಾಗ ವಿಜಯಲಕ್ಷ್ಮಿ ಆಗಲಿ ದಿನಕರ್ ಆಗಲಿ ಅವರನ್ನು ಭೇಟಿಯಾಗಲು ಬಂದಾಗ ಅವರ ಪೊಲೀಸ್ ಠಾಣೆಯವರೆಗೆ ಕಾರು ಯಾವ ಅಡೆ ತಡೆ ಇಲ್ಲದೇ ಹೋಗುತ್ತಿತ್ತು. ಸ್ಪೆಷಲ್ ಎಂಟ್ರಿ ಸಿಗುತ್ತಿತ್ತು. ಆದರೆ ಈ ಬಾರಿ ಹಾಗಿಲ್ಲ. ತಮ್ಮ ಪತಿಯ ದರ್ಶನಕ್ಕೆ ಕೂಡ ವಿಜಯಲಕ್ಷ್ಮಿ ಹರಸಾಹಸ ಪಡುವಂತಾಗಿದೆ.

ಹೀಗಿರುವಾಗ ವಿಜಯಲಕ್ಷ್ಮಿ ಅವರ ಹೊಸಕೆರೆಹಳ್ಳಿಯ ಪ್ರೆಸ್ಟೀಜ್ ಅಪಾರ್ಟ್​​ಮೆಂಟ್​ನ ಮನೆಯಲ್ಲಿ ಕಳ್ಳತನ ನಡೆದಿದ್ದು ಕಳ್ಳ ಮೂರು ಲಕ್ಷ ಕದ್ದು ಪರಾರಿಯಾಗಿದ್ದಾನೆ.ಇನ್ನು ಕಳ್ಳತನ ನಡೆದ ವಿಚಾರ ಅರಿವಿಗೆ ಬರುತ್ತಿದ್ದಂತೆಯೇ ವಿಜಯಲಕ್ಷ್ಮಿ ಸದ್ಯ ತಮ್ಮ ಮ್ಯಾನೇಜರ್ ನಾಗರಾಜ್ ಅವರ ಮೂಲಕ ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಗೆ ದೂರು ದಾಖಲಿಸಿದ್ದಾರೆ.

ಅದರನ್ವಯ ಸೆಪ್ಟೆಂಬರ್ 4ರಂದು ಕೆಲಸದ ನಿಮಿತ್ ವಿಜಯಲಕ್ಷ್ಮೀ ದರ್ಶನ್ ಮೈಸೂರಿಗೆ ತೆರಳಿದ್ದರು. ಮೈಸೂರಿಗೆ ತೆರಳುವ ಮುನ್ನ ಮನೆಯ ವಾಡ್ರೂಬ್ ಕಾಟನ್ ಬಾಕ್ಸ್ ನಲ್ಲಿ ಹಣ ತೆಗೆದುಕೊಡಲು ಮ್ಯಾನೇಜರ್‌ಗೆ ಹೇಳಿದ್ದರು. ಅದರಲ್ಲಿನ ಸ್ವಲ್ಪ ಹಣ ತೆಗೆದು ಉಳಿದ ಹಣವನ್ನು ವಾಡ್ರೂಬ್ ಕಾಟನ್ ಬಾಕ್ಸ್ ನಲ್ಲಿಯೇ ಇರಿಸಿದ್ದ ಮ್ಯಾನೇಜರ್ ನಾಗರಾಜ್ ಆ ನಂತರ ಮನೆ ಬೀಗವನ್ನು ಮರಳಿಸಿದ್ದರು. ಬಳಿಕ ವಿಜಯಲಕ್ಷ್ಮೀ ಹಾಗೂ ನಾಗರಾಜ್ ಹೊರಗಡೆ ಹೋಗಿದ್ದರು.

ಸೆಪ್ಟೆಂಬರ್ 7 ರಂದು ಬೆಂಗಳೂರಿಗೆ ಮರಳಿ ಬಂದ ವಿಜಯಲಕ್ಷ್ಮಿ, ಸೆಪ್ಟೆಂಬರ್ 8ರಂದು ತಮ್ಮ ವಾಡ್ರೂಬ್‌ನಲ್ಲಿನ ಕಾಟನ್ ಬಾಕ್ಸ್‌ನ ತೆರೆದು ನೋಡಿದ್ದಾರೆ. ಆಗ ಹಣ ಸಿಗದಿದ್ದಾಗ ವಿಜಯಲಕ್ಷ್ಮಿ ಹಾಗೂ ಮ್ಯಾನೇಜರ್ ನಾಗರಾಜ್ ಮನೆಯಲ್ಲಿ ಹುಡುಕಾಟ ನಡೆಸಿದ್ದು, ಹಣ ಸಿಗದಿದ್ದಾಗ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

from-courtroom-drama-to-house-heist-new-shocker-for-darshans-wife-vijayalakshmi-rs-3-lakh-robbed

ಸದ್ಯ ವಿಜಯಲಕ್ಷ್ಮೀ ದರ್ಶನ್ ಅವರು ತಮ್ಮ ಮನೆ ಕೆಲಸದವರ ಮೇಲೆ ಅನುಮಾನವನ್ನು ವ್ಯಕ್ತಪಡಿಸಿದ್ದುಯ, ಮನೆ ಕೆಲಸದವರ ವಿರುದ್ದ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಮೂರು ಲಕ್ಷ ಹಣ ಕಳ್ಳತನವಾಗಿದೆ ಎಂದು ಉಲ್ಲೇಖಿಸಲಾಗಿದೆ. ಸದ್ಯ ವಿಜಯಲಕ್ಷ್ಮಿ ಅವರು ನೀಡಿದ ದೂರಿನ ಅನ್ವಯ ಪೊಲೀಸರು ಎಫ್​ಐಆರ್ ದಾಖಲು ಮಾಡಿಕೊಂಡಿದ್ದಾರೆ. ತನಿಖೆಯನ್ನು ಮಾಡುತ್ತಿದ್ದಾರೆ.

ಇನ್ನುಳಿದಂತೆ ಸದ್ಯ ದರ್ಶನ್ ಪರಪ್ಪನ ಅಗ್ರಹಾರದಲ್ಲಿದ್ದು ಮೂಲಭೂತ ಸವಲತ್ತುಗಳನ್ನು ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಹಾಸಿಗೆ, ತಲೆದಿಂಬು, ಹೊದಿಕೆ ಸೇರಿದಂತೆ ಕನಿಷ್ಠ ಸೌಲಭ್ಯ ನೀಡುವಂತೆ ಹೇಳಿದೆ. ಇಷ್ಟೇ ಅಲ್ಲದೇ ಮಾಧ್ಯಮಗಳಲ್ಲಿ ವರದಿಯಾದಂತೆ ದರ್ಶನ್‌ ಅವರಿಗೆ ಬೆಳಿಗ್ಗೆ ಮತ್ತು ಸಂಜೆ 40 ನಿಮಿಷ ನಡೆದಾಡಲು ಅವಕಾಶವನ್ನು ಕೂಡ ಕಲ್ಪಿಸಲಾಗಿದೆ.

More from Filmibeat

English summary
A new shocker for Darshan's family: A robbery at the home of his wife, Vijayalakshmi, adds to their turmoil. Get the full story on the Rs 3 lakh heist.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X